Fishing Problems: ಹವಾಮಾನ ವೈಪರೀತ್ಯಕ್ಕೆ ನಲುಗಿದ ಮೀನುಗಾರಿಕೆ, ಕಡಲ ಮಕ್ಕಳಿಗೆ ತಪ್ಪದ ಸಂಕಷ್ಟ

ಕಾರವಾರ ಬಂದರಿನಲ್ಲೇ ಪ್ರತಿ ದಿನ ಎರಡರಿಂದ ಮೂರು ಕೋಟಿ ವಹಿವಾಟು ನಡೆಯುತಿತ್ತು. ಆದರೇ ಇದೀಗ ಎಲ್ಲವೂ ನಷ್ಟವಾಗಿದ್ದು ಇಡೀ ಜಿಲ್ಲೆಯಲ್ಲಿ ಪ್ರತಿ ದಿನ 10 ಕೋಟಿಯಷ್ಟು ನಷ್ಟವಾಗುತಿದ್ದು, ಲಕ್ಷಗಟ್ಟಲೇ ಸಾಲಮಾಡಿ ಮೀನುಗಾರಿಕೆ ನಡೆಸುವ ಮೀನುಗಾರರು  ಬೀದಿಗೆ ಬೀಳುವಂತಾಗಿದೆ.

ಲಂಗರು ಹಾಕಿದ ಬೋಟ್‌ಗಳು

ಲಂಗರು ಹಾಕಿದ ಬೋಟ್‌ಗಳು

  • Share this:
ಕಾರವಾರ, ಉತ್ತರ ಕನ್ನಡ: ಅಬ್ಬರದ ಮಳೆಯಿಂದಾಗಿ (Heavy Rain) ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ (Coastal) ಭಾಗದಲ್ಲಿ ಮೀನುಗಾರಿಕೆ (Fishing) ಸಂಪೂರ್ಣ ಬಂದ್ ಆಗಿದ್ದು ಮೀನುಗಾರರಿಗೆ (Fishers) ಕೋಟಿ ಕೋಟಿ ನಷ್ಟ ತಂದೊಡ್ಡಿದೆ. ಇತ್ತ ಹವಾಮಾನ ವೈಪರಿತ್ಯದಿಂದ (Climate change) ರಾಜ್ಯ ಹೊರ ರಾಜ್ಯದ ಮೀನುಗಾರಿಕಾ ಬೋಟುಗಳು ಕಾರವಾರ  (Karwar) ಬಂದರಿನಲ್ಲಿ ಲಂಗುರು ಹಾಕಿ ರಕ್ಷಣೆ ಪಡೆಯುತ್ತಿವೆ. ಮೀನುಗಾರಿಕೆ ಆರಂಭದಲ್ಲೆ ಹವಾಮಾನ ವೈಪರೀತ್ಯ ಮೀನುಗಾರರಿಗೆ ಶಾಪವಾಗಿ ಕಾಡುತ್ತಿದ್ದು ಬೆನ್ನು ಬಿಡದೆ ನಷ್ಟದ ದಾರಿ ತೋರಿಸುತ್ತಿದೆ. ದಿನ ನಿತ್ಯವೂ ಒಂದೇ ಗೋಳು ಎನ್ನುವಂತೆ ಮೀನುಗಾರರು ನಷ್ಟದ ಬದುಕಲ್ಲೇ ಜೀವನ ದೂಡುತ್ತಿದ್ದಾರೆ.

ಮೀನುಗಾರಿಕೆಗೆ ಸಾಕಷ್ಟು ತೊಂದರೆ

ಮೀನುಗಾರಿಕೆ ಆರಂಭವಾಗಿ ಎರಡು ತಿಂಗಳು ಸಮೀಪಿಸಿದ್ರು ಸರಿಯಾಗಿ ನಾಲ್ಕು ದಿನ ಸಮುದ್ರಕ್ಕಿಳಿಯಲು ಸಾಧ್ಯವಾಗಿಲ್ಲ. ಹವಾಮಾನ ವೈಪರಿತ್ಯದಿಂದ ಉತ್ತರ ಕನ್ನಡ ಜಿಲ್ಲೆಯ ಕರಾವಳಿ  ಭಾಗದಲ್ಲಿ ಇದೀಗ ಮೀನುಗಾರಿಗೆ ಮತ್ತೆ ಸ್ತಬ್ಧವಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ದವಾಗಿರುವುದರಿಂದ ಇನ್ನೂ ಒಂದು ವಾರಗಳ ಕಾಲ ಮೀನುಗಾರಿಕೆಗೆ ತೆರಳದಂತೆ ಮೀನುಗಾರಿಕಾ ಇಲಾಖೆ ಸೂಚನೆ ನೀಡಿದ್ದರಿಂದ ಜಿಲ್ಲೆಯ ಕರಾವಳಿ ಭಾಗದಲ್ಲಿ ಮಿನುಗಾರಿಕೆ ಸಂಪೂರ್ಣ ಸ್ತಬ್ದವಾಗಿದೆ.

ಮೀನುಗಾರಿಕೆ ಬೋಟ್‌ಗಳು


ಬೋಟ್‌ನಲ್ಲೇ ಇರುವ ಮೀನುಗಾರರು

ಇನ್ನು ಕಾರವಾರದ ಬೈತಕೋಲ್ ಬಂದರಿನಲ್ಲಿ ಐನೂರಕ್ಕೂ ಹೆಚ್ಚು ರಾಜ್ಯದ ಮಂಗಳೂರು ಮಲ್ಪೆ ಸೇರಿ ಹೊರರಾಜ್ಯದ ಬೋಟುಗಳು ಕೂಡಾ ಲಂಗುರು ಹಾಕಿದ್ದು ಮೀನುಗಾರರು ಬೋಟಿನಲ್ಲೇ ದಿನ ಕಳೆಯುವಂತಾಗಿದೆ... ಆಳ ಸಮುದ್ರ ಮೀನುಗಾರಿಕೆ ನಂಬಿ‌ ಮೀನುಗಾರಿಕೆಗೆ ತೆರಳಿದ ಮೀನುಗಾರರು ಮನೆ ಮಠ ಬಿಟ್ಟು ಕಾರವಾರದಲ್ಲಿ ರಕ್ಷಣೆ ಪಡೆದುಕೊಳ್ಳುವ ಸ್ಥಿತಿ ಬಂದೊದಗಿದೆ..

ಇದನ್ನೂ ಓದಿ: Pregnant Lady Problem: ಈ ಊರಲ್ಲಿ ಪೌಷ್ಠಿಕ ಆಹಾರಕ್ಕಾಗಿ 7 ಕಿಮೀ ನಡೆಯಬೇಕು! ಗರ್ಭಿಣಿ ಗೋಳು ಕೇಳೋರಿಲ್ಲ

ಮೀನುಗಾರರ ಆರ್ಥಿಕ ಸ್ಥಿತಿ ಗಂಭೀರ

ಇನ್ನು ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರ ಸ್ಥಿತಿ ಹೇಳೋದಾದ್ರೆ ಕಳೆದ ಹದಿನೈದು ದಿನಗಳಿಂದ ಬೋಟ್ ಗಳು ಬಂದರಿನಲ್ಲೆ ಲಂಗರು ಹಾಕಿವೆ.. ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎನ್ನುತ್ತಿದ್ದಾರೆ ಮೀನುಗಾರರು...ಹೊರ ರಾಜ್ಯದ ಮೀನುಗಾರ ಕಾರ್ಮಿಕರನ್ನ ಸಂಬಳ ನೀಡಿ ಇಲ್ಲಿ ಉಳಿಸಿಕೊಳ್ಳುವುದೆ ದೊಡ್ಡ ಸವಾಲಾಗಿದೆ ಎನ್ನುತ್ತಿದ್ದಾರೆ...

ಸಾಲಾಗಿ ನಿಂತಿರುವ ಬೋಟ್


ಆಗಸ್ಟ್ ನಿಂದ ಮೀನುಗಾರಿಕೆ ಆರಂಭವಾದ್ರೂ  ಇಲ್ಲ ಪ್ರಯೋಜನ

ಇನ್ನು ಜಿಲ್ಲೆಯಲ್ಲಿ ಆಗಸ್ಟ್ ಒಂದರಿಂದಲೇ ಮೀನುಗಾರಿಕೆ ಪ್ರಾರಂಭವಾಗಿತ್ತು. ಆದರೇ ವರುಣನ ಆರ್ಭಟಕ್ಕೆ ಹತ್ತು ದಿನಗಳ ಕಾಲ ಮೀನುಗಾರಿಕೆ ಬಂದ್ ಮಾಡಿದ್ದರು. ಆದರೇ ಇನ್ನೇನು ಸಮುದ್ರಕ್ಕಿಳಿಯಬಹುದು ಎಂಬ ನಿರೀಕ್ಷೆಯಲ್ಲಿದ್ದ ಮೀನುಗಾರರಿಗೆ ಮತ್ತೆ ಹವಾಮಾನ ವೈಪರಿತ್ಯ ಅಡ್ಡಿಯಾಗಿದ್ದು ಇದೀಗ ಮತ್ತೆ ಮೀನುಗಾರಿಕೆ ಬಂದ್ ಆಗಿದೆ. ಒಂದು ತಿಂಗಳಲ್ಲಿ ನಾಲ್ಕು ಬಾರಿ ಹವಾಮಾನ ವೈಪರಿತ್ಯ ಉಂಟಾಗಿದೆ...

ಮೀನುಗಾರಿಕೆ ಇಲ್ಲದೇ ಕೋಟಿ ಕೋಟಿ ನಷ್ಟ


ಪ್ರತಿ ದಿನ 10 ಕೋಟಿಯಷ್ಟು ನಷ್ಟ

ಕಾರವಾರ ಬಂದರಿನಲ್ಲೇ ಪ್ರತಿ ದಿನ ಎರಡರಿಂದ ಮೂರು ಕೋಟಿ ವಹಿವಾಟು ನಡೆಯುತಿತ್ತು. ಆದರೇ ಇದೀಗ ಎಲ್ಲವೂ ನಷ್ಟವಾಗಿದ್ದು ಇಡೀ ಜಿಲ್ಲೆಯಲ್ಲಿ ಪ್ರತಿ ದಿನ 10 ಕೋಟಿಯಷ್ಟು ನಷ್ಟವಾಗುತಿದ್ದು, ಲಕ್ಷಗಟ್ಟಲೇ ಸಾಲಮಾಡಿ ಮೀನುಗಾರಿಕೆ ನಡೆಸುವ ಮೀನುಗಾರರು  ಬೀದಿಗೆ ಬೀಳುವಂತಾಗಿದೆ. ಹೀಗಾಗಿ ಕೃಷಿ ನಷ್ಟಕ್ಕೆ ನೀಡುವ ಮಾದರಿಯಲ್ಲೇ ಮೀನುಗಾರರಿಗೆ ಸರ್ಕಾರ ಆದ ನಷ್ಟಕ್ಕೆ ಪರಿಹಾರ ನೀಡುವಂತೆ ಮೀನುಗಾರರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: Bank Fraud: ಬ್ಯಾಂಕ್‌ನ 2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್! ವಂಚಕ ಅಸಿಸ್ಟೆಂಟ್ ಮ್ಯಾನೇಜರ್ ಎಸ್ಕೇಪ್

ಇನ್ನು ಐದು ದಿನಗಳಕಾಲ ಮಳೆ

ಸದ್ಯ ಜಿಲ್ಲೆಯಲ್ಲಿ ಇನ್ನೂ ಐದು ದಿನಗಳ ಕಾಲ ಆರೆಂಜ್ ಅಲರ್ಟ ಘೋಷಿಸಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ. ಇದರ ನಡುವೆ ಅರಬ್ಬಿ ಸಮುದ್ರದಲ್ಲಿ ಹವಮಾನ ಬದಲಾವಣೆ ದಿನಕ್ಕೊಂದು ರೀತಿಯಂತೆ ಬದಲಾಗುತಿದ್ದು ಮೀನುಗಾರರನ್ನು ಮತ್ತಷ್ಟು ಹೈರಾಣಾಗಿಸಿದೆ..
Published by:Annappa Achari
First published: