Udupi: ನಾವು ಮಾತಾಡಲ್ಲ ನಮ್ಮ ಕೆಲಸ ಮಾತಾಡುತ್ತೆ, ವಿಪಕ್ಷಗಳಿಂದ ಏನೂ ಕಲಿಯಬೇಕಿಲ್ಲ- ಸಿಎಂ ಬೊಮ್ಮಾಯಿ ಕಿಡಿ

ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳನ್ನು ಒದಗಿಸಲಾಗುವುದು. ರಾಜೀವ್ ಗಾಂದಿ ವಸತಿ ಯೋಜನೆಯಡಿ ಮೀನುಗಾರರಿಗೆ 5000 ಮನೆಗಳನ್ನು ನಿರ್ಮಿಸಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

  • Share this:
ಉಡುಪಿ (ಏ.11) : ಈ ವರ್ಷ ನೇಕಾರರ (Nekara) ಹಾಗೂ ಮೀನುಗಾರರ (Fisherman) ಮಕ್ಕಳಿಗೂ ರೈತ ವಿದ್ಯಾನಿಧಿ ಯೋಜನೆಯನ್ನು (Vidyanidhi Scheme) ವಿಸ್ತರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Bbasavaraj Bommai ) ಅವರು ತಿಳಿಸಿದರು. ಅವರು ಇಂದು ಶ್ರೀ ಕ್ಷೇತ್ರ ಉಚ್ಚಿಲ ಇವರ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.  ಮೀನುಗಾರ ವೃತ್ತಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಗ್ರಾಮಪಂಚಾಯತಿ ಕೆರೆಗಳಲ್ಲಿ ಮೀನುಗಾರರಿಗೆ ಕೆರೆಗಳನ್ನು ಮೀಸಲಿಟ್ಟು, ಮೀನಿನ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.  

ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ

ರಾಜ್ಯದ ಪ್ರಸಕ್ತ ಬೆಳವಣಿಗೆಗಳ ವಿಚಾರದ ಬಗ್ಗೆ ಮಾತಾಡಿದ ಬೊಮ್ಮಾಯಿ ಸಿದ್ದರಾಮಯ್ಯ, ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ಮೌನಿ ನಾಲಗೆ ಕಳೆದುಕೊಂಡಿದ್ದಾರೆ  ಎಂಬ ಕೇಳಿಗೆ ಪ್ರತಿಕ್ರಿಯಿಸಿದ ಅವ್ರು ನಾವು ಮಾತನಾಡುವುದಿಲ್ಲ ನಮ್ಮ ಆಕ್ಷನ್ ಮಾತನಾಡುತ್ತದೆ ಎಂದ್ರು. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು, ನಮಗೆ ವಿಪಕ್ಷಗಳಿಂದ ಕಲಿಯಬೇಕಾದ್ದು ಏನು ಇಲ್ಲ. ಯಾವ ಸಂದರ್ಭದಲ್ಲಿ ಏನು ನಿರ್ಧಾರ ಏನು ಕ್ರಮ ಕೈಗೊಳ್ಳಬೇಕು ನಮಗೆ ಗೊತ್ತಿದೆ ಎಂದ್ರು.

ಮೀನುಗಾರರಿಗೆ 5000 ಮನೆಗಳ ನಿರ್ಮಾಣ

ಮೀನುಗಾರಿಕೆಯನ್ನು ಲಾಭದಾಯಕವನ್ನಾಗಿಸಲು ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸಂಯೋಜಿಸಿ 100 ಆಳ ಸಮುದ್ರ ಮೀನುಗಾರಿಕಾ ದೋಣಿಗಳನ್ನು ಒದಗಿಸಲಾಗುವುದು. ರಾಜೀವ್ ಗಾಂದಿ ವಸತಿ ಯೋಜನೆಯಡಿ ಮೀನುಗಾರರಿಗೆ 5000 ಮನೆಗಳನ್ನು ನಿರ್ಮಿಸಲಾಗುವುದು. ಮೀನುಗಾರರ 8 ಬಂದರುಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ಮಾಡಲಾಗುವುದು. ಮೀನುಗಾರ ವೃತ್ತಿಗೆ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ. ಪ್ರತಿ ಗ್ರಾಮಪಂಚಾಯತಿ ಕೆರೆಗಳಲ್ಲಿ ಮೀನುಗಾರರಿಗೆ ಕೆರೆಗಳನ್ನು ಮೀಸಲಿಟ್ಟು, ಮೀನಿನ ಕೃಷಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.

ಮಹಿಳಾ ಸಬಲೀಕರಣ!

ಸ್ತ್ರೀಶಕ್ತಿ ಸಂಘಗಳ ಸಾಲಗಳ ಮರುಪಾವತಿ ಶೇ.95 ರಷ್ಟಿದೆ. ಇದು ಮಹಿಳೆಯರ ಪರಿಶ್ರಮ ಹಾಗೂ ಪ್ರಮಾಣಿಕತೆಯನ್ನು ತೋರಿಸುತ್ತದೆ. ರಾಜ್ಯದ ಆರ್ಥಿಕತೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. 500 ಕೋಟಿ ರೂ. ವೆಚ್ಚದಲ್ಲಿ ಆ್ಯಂಕರ್ ಬ್ಯಾಂಕ್ ಜೋಡಿಸಿ ಸ್ತ್ರೀ ಶಕ್ತಿ ಸಂಘಗಳಿಗೆ 1.5 ಲಕ್ಷ ರೂ.ಗಳಷ್ಟು ಸಾಲ ಸೌಲಭ್ಯ ನೀಡಲಾಗುವುದು. ಇದರಿಂದ ಸುಮಾರು 4 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ. ಕೇವಲ ಜೀವನೋಪಾಯಕ್ಕಾಗಿ ಅಲ್ಲ, ಆರ್ಥಿಕ ಅಭಿವೃದ್ಧಿ ಸಾಧಿಸುವ ಮೂಲಕ ಮಹಿಳಾ ಸಬಲೀಕರಣದ ಧ್ಯೇಯವನ್ನು ಸರ್ಕಾರ ಹೊಂದಿದೆ.

ಮೀನುಗಾರರಿಗೆ 10 ತಿಂಗಳ ಡೀಸೆಲ್ ಸಬ್ಸಿಡಿ..!

100 ಡಾ. ಬಿ.ಆರ್.ಅಂಬೇಡ್ಕರ್ ವಿದ್ಯಾರ್ಥಿ ನಿಲಯಗಳನ್ನು ನಿರ್ಮಿಸಲಾಗುವುದು. ರಾಜ್ಯದ ಆಯ್ದ ಜಿಲ್ಲೆಗಳಲ್ಲಿ 1000 ಹಾಸ್ಟೆಲ್‍ಗಳ ಕ್ಲಸ್ಟರ್ ನಿರ್ಮಿಸಲಾಗುವುದು. ಮೊಗವೀರ ಸಮುದಾಯದ ಮಕ್ಕಳಿಗೆ ವಸತಿ ನಿಲಯ ಸೌಲಭ್ಯವನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಪೂರೈಸಲಾಗುವುದು. ಮೀನುಗಾರರಿಗೆ 10 ತಿಂಗಳಿಗೆ ಬೇಕಾಗುವ ಡೀಸೆಲ್ ವೆಚ್ಚವನ್ನು ಸಂಪೂರ್ಣವಾಗಿ ಸಬ್ಸಿಡಿ ನೀಡಲಾಗುವುದು.

ಇದನ್ನೂ ಓದಿ: Congress Protest: ‘ದೇಶ ಉಳಿಸಲು ಕಾಂಗ್ರೆಸ್​ನನ್ನು ಕಿತ್ತು ಒಗೆಯಬೇಕು’; ಸಿದ್ದರಾಮಯ್ಯ ಎಡವಟ್ಟಿನ ಮಾತಿಗೆ ಕಾರ್ಯಕರ್ತರೇ ಫುಲ್ ಶಾಕ್

ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ 5 ಕೋಟಿ

ಮೊಗವೀರರ ಮಹಾಸಂಘ ಕೋರಿರುವಂತೆ ಶ್ರೀ ಮಹಾಲಕ್ಷ್ಮಿ ದೇವಸ್ಥಾನಕ್ಕೆ 5 ಕೋಟಿ ರೂ.ಗಳನ್ನು ಮುಜರಾಯಿ ಇಲಾಖೆ ಮೂಲಕ ನೀಡಲಾಗುವುದು. ಮೀನುಗಾರರ ದುಡಿಮೆ, ಸಾಹಸಗಳನ್ನು ಪ್ರೋತ್ಸಾಹಿಸಿ ಅವರ ಒಳಿತಿಗಾಗಿ ಸರ್ಕಾರ ಸದಾ ಸ್ಪಂದಿಸುತ್ತದೆ ಎಂದರು.

ಸಮಸ್ಯೆಗೆ ಪರಿಹಾರ ಒದಗಿಸುವ ಚಿಂತನೆ ನಾಯಕನಿಗಿರಬೇಕು. ಕೋವಿಡ್ ಸೇರಿದಂತೆ ಯಾವುದೇ ಸಂಕಷ್ಟದ ಸಮಯದಲ್ಲಿನ ಸ್ಪಂದನೆಯಿಂದ ಸರ್ಕಾರದ ಜೀವಂತಿಕೆ ನಿರೂಪಿತವಾಗುತ್ತದೆ. ಕೋವಿಡ್ ಅಲೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆರ್ಥಿಕತೆಯ ಅಭಿವೃದ್ಧಿಗಾಗಿ ಶ್ರಮವಹಿಸಿ ಸುಮಾರು 15 ಸಾವಿರ ಕೋಟಿಗೂ ಮೀರಿದ ಆರ್ಥಿಕತೆಯನ್ನು ಸರ್ಕಾರ ತಲುಪಿದೆ. ರೈತರಿಗೆ ಡೀಸೆಲ್ ವೆಚ್ಚ,. ಕೋವಿಡ್ ಪ್ರಾಣಕಳೆದುಕೊಂಡವರಿಗೆ ಪರಿಹಾರ, ಪ್ರವಾಹದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪರಿಹಾರಗಳನ್ನು ನೀಡಲಾಗಿದೆ ಎಂದರು.

ಇದನ್ನೂ ಓದಿ: National Herald Scam: 2 ಗಂಟೆಗಳ ಕಾಲ ED ಅಧಿಕಾರಿಗಳಿಂದ ‘ಕೈ‘​ ನಾಯಕ ಮಲ್ಲಿಕಾರ್ಜುನ ಖರ್ಗೆ ವಿಚಾರಣೆ

2 ದಿನಗಳ ಕಾಲ ಸಿಎಂ ಮಂಗಳೂರು ಪ್ರವಾಸ

ಎರಡು ದಿನಗಳ ಕಾಲ ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಹೀಗಿದೆ. ನಾಳೆ ಮಂಗಳೂರಿನಲ್ಲಿ ಪಕ್ಷದ ಪ್ರಮುಖರ ಜೊತೆ ಸಿಎಂ ಚಿಂತನ-ಮಂಥನ,  ಮಧ್ಯಾಹ್ನ 12 ಗಂಟೆಗೆ ಖಾಸಗಿ ಹೋಟೆಲ್ ನಲ್ಲಿ ಉಡುಪಿ ಬಿಜೆಪಿ ಪ್ರಮುಖರ ಜೊತೆ ಸಭೆ,  ಬಳಿಕ 2.30ಕ್ಕೆ ಕೊಡಗು ಬಿಜೆಪಿ ಪ್ರಮುಖರ ಜೊತೆ ಸಿಎಂ ಸಭೆ,  ಕೊನೆಗೆ ಉಡುಪಿ, ಕೊಡಗು ಮತ್ತು‌ ದ.ಕ ಜಿಲ್ಲಾ ‌ಬಿಜೆಪಿ ಕೋರ್ ಸಮಿತಿ ಸಭೆ,  ಎಲ್ಲಾ ಸಭೆಯ ಬಳಿಕ ಮಂಗಳೂರಿನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ವಾಸ್ತವ್ಯ ಹೂಡಲಿದ್ದಾರೆ.  ಏ.13 ರಂದು ಬೆ.9 ಗಂಟೆಗೆ ಬಂಟ್ವಾಳದಲ್ಲಿ ದ.ಕ ಬಿಜೆಪಿ ಪ್ರಮುಖರ ಸಭೆ ಬಳಿಕ ಬೆ.10 ಗಂಟೆಗೆ ಕಾರ್ಯಕರ್ತರ ಸಭೆಯಲ್ಲಿ ‌ಮಾತನಾಡಲಿದ್ದಾರೆ.
Published by:Pavana HS
First published: