Crime News: ಫೋನ್​ ಕದ್ದಿದ್ದಾನೆ ಅಂತ ಉಲ್ಟಾ ನೇತು ಹಾಕಿ ಹಲ್ಲೆ: ಯಪ್ಪಾ.. ಮಂಗಳೂರಿನಲ್ಲಿ ಮೀನುಗಾರನಿಗೆ ಚಿತ್ರಹಿಂಸೆ!

ಆಂಧ್ರಪ್ರದೇಶ ಮೂಲದ ವೈಲಾ ಸೀನು ಎಂಬುವವನು ಮೊಬೈಲ್ ಕದ್ದಿದ್ದಾನೆ ಅಂತ ಮೀನುಗಾರರು ಉಲ್ಟಾ ನೇತುಹಾಕಿ ಥಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸೆಕ್ಷನ್ 143, 147, 148, 323, 324, 307, 364, 342, 506, 149ರಡಿ ಕೇಸ್ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ಭೂಮಿ (Earth) ಮೇಲೆ ನಿಜಕ್ಕೂ ಮನುಷ್ಯತ್ವನೇ ಸತ್ತು ಹೋಗಿದೆ. ಪ್ರಾಣಿಗಳಿ (Animals) ಗಿಂತ ಕೀಳಾಗಿ ಮನುಷ್ಯ ನಡೆದುಕೊಳ್ಳುತ್ತಿದ್ದಾನೆ. ಮನುಷ್ಯ, ಮನುಷ್ಯನ ಮೇಲೆ ದ್ವೇಷಕ್ಕಾಗಿ ಕೀಳು ಮಟ್ಟದ ದುರ್ವತನೆ ತೋರುತ್ತಿದ್ದಾನೆ. ಕಣ್ಣಾರೆ ಕಂಡು ಪ್ರಮಾಣಿಸಿ ನೋಡು ಎಂದು ಹಿರಿಯರು ಹೇಳಿದ್ದಾರೆ. ಆದರೆ, ಇಲ್ಲಿ ಇವರು ಮಾಡಿರುವ ಕೆಲಸ ನೋಡಿದರೆ, ನಿಮಗೂ ಬೇಸರ ಮೂಡಿಸಿತ್ತು. ಸಣ್ಣ ವಿಷಯಕ್ಕೆ ಹೀಗಾ ಮಾಡುವುದು ಎಂದು ನೀವು ಹೇಳುತ್ತೀರಾ. ಮಂಗಳೂರು (Mangalore) ನಗರದ ಬಂದರ್​ನಲ್ಲಿ ಮೀನುಗಾರನೊಬ್ಬನನ್ನು ಬೋಟ್(Boat)​ ನಲ್ಲಿಯೇ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ಮಾಡಿರುವ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರ  ಪ್ರದೇಶದ ಸೀನು ಎಂದು ಗುರುತಿಸಲಾಗಿದೆ. ಕೇವಲ ಸಣ್ಣ ವಿಚಾರಕ್ಕೆ ಈ ರೀತಿ ಹಲ್ಲೆ ಮಾಡಿರುವುದಕ್ಕೆ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡುವ ವಿಡಿಯೋ ಸಖತ್​ ವೈರಲ್​ ಆಗಿದೆ. ಮೀನುಗಾರಿಕಾ ಬೋಟ್​​ನಲ್ಲಿ ಮೊಬೈಲ್​(Mobile) ಕದ್ದ ಆರೋಪ ಹೊರಿಸಿ ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ. ಈತನಿಂದ ಸತ್ಯ ಬಾಯಿ ಬಿಡಿಸಲು ಉಲ್ಟಾ ನೇತು ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬೋಟ್​ನ ಹುಕ್ಸ್ (Hooks)​ಗೆ ಸೀನು ಕಾಲು ಕಟ್ಟಿ ತಲೆಕೆಳಗಾಗಿ ನೇತು ಹಾಕಿ ಟಾರ್ಚರ್​ ನೀಡಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಒಟ್ಟು 6 ಜನರನ್ನು ಬಂಧಿಸಿದ್ದಾರೆ. 

ಹಲ್ಲೆ ನಡೆಸಿದ್ದ 6 ಜನರ ಬಂಧನ

ಆಂಧ್ರಪ್ರದೇಶ (Andra pradesh) ಮೂಲದ ವೈಲಾ ಸೀನು ಎಂಬುವವನು ಮೊಬೈಲ್ ಕದ್ದಿದ್ದಾನೆ ಅಂತ ಮೀನುಗಾರರು ಉಲ್ಟಾ ನೇತುಹಾಕಿ ಥಳಿಸಿದ್ದಾರೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಸೆಕ್ಷನ್ 143, 147, 148, 323, 324, 307, 364, 342, 506, 149ರಡಿ ಕೇಸ್ ದಾಖಲಾಗಿದೆ. ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು, ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ. ಇವರೆಲ್ಲರೂ ಆಂಧ್ರಪ್ರದೇಶದವರು ಎಂದು ತಿಳಿದು ಬಂದಿದೆ. ಕೊಂಡೂರು ಪೋಲಯ್ಯ(23), ಅವುಲ ರಾಜ್ ಕುಮಾರ್(26), ಕಾಟಂಗರಿ‌ ಮನೋಹರ್(21), ವೊಟುಕೋರಿ ಜಾಲಯ್ಯ(30), ಕಲಪಿಂಗಾರ ರವಿ(23) ಮತ್ತು ಪ್ರಲಯ ಕಾವೇರಿ ಗೋವಿಂದಯ್ಯ(47) ಎಂಬುವವರನ್ನು ಬಂಧಿಸಿದ್ದಾರೆ.



ಇದನ್ನು ಓದಿ : ಹೆಂಡತಿ ಬೇಡ, ಮಗು ಮಾತ್ರ ನನಗೇ ಬೇಕು ಎಂದ ವ್ಯಕ್ತಿಗೆ ಕೋರ್ಟ್ ಛೀಮಾರಿ: ಮಗುವಿನ ಮೇಲೆ ತಾಯಿಗೆ ಹಕ್ಕು, ತಂದೆಗೆ 50 ಸಾವಿರ ರೂ ದಂಡ

ಡಿಸೆಂಬರ್​ 14ರಂದು ನಡೆದಿದ್ದ ಘಟನೆ!

ಡಿ.14ರಂದು ಮಂಗಳೂರು ಬಂದರಿನಲ್ಲಿ ಸೀನು ಎಂಬಾತನ ಮೇಲೆ ಮೀನುಗಾರು ಹಲ್ಲೆ ನಡೆಸಿದ್ದರು. ಮೊಬೈಲ್ ಕಳವು ಮಾಡಿದ್ದೀಯಾ ಅಂತ ಆರೋಪಿಸಿ ಹಲ್ಲೆ ಮಾಡಿದ್ದರು. ಆದರೆ ಈ ವಿಡಿಯೋ ವೈರಲ್​ ಆದ ಬಳಿಕವಷ್ಟೇ ಈ ಪ್ರಕರಣ ಬೆಳಕಿಗೆ ಬಂದಿತ್ತು. ಕೇವಲ ಮೊಬೈಲ್ ವಿಚಾರಕ್ಕೆ ಹೀಗಾ ಮಾಡುವುದು ಎಂದು ಸಾಮಾಜಿಕ ಜಾಲತಾಣದಲ್ಲಿ  ನೆಟ್ಟಿಗರು ಪ್ರಶ್ನೆ ಮಾಡಿದ್ದರು. ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕೂಡಲೇ ಕೇಸ್​ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನು ಓದಿ: ಹೆಂಡತಿಯನ್ನು ಕಳೆದುಕೊಂಡವನ ಜೊತೆ 16ರ ಹುಡುಗಿಯ ಪ್ರೇಮ್ ಕಹಾನಿ ಬೆಟ್ಟಗಳ ಮಧ್ಯೆ ಕೊನೆ!

ಸಾಮಾಜಿಕ  ಜಾಲತಾಣದಲ್ಲಿ ವ್ಯಾಪಕ ಆಕ್ರೋಶ!

ಇನ್ನೂ ಬಂಧಿತ ಆರೋಪಿಗಳಿಗೂ ತಕ್ಕ ಶಿಕ್ಷೆ ಕೊಡಬೇಕು. ಹೇಗೆ ಆತನನ್ನು ಉಲ್ಟಾ ನೇತು ಹಾಕಿ ಹಿಂಸೆ ನೀಡಿದ್ದಾರೋ, ಪೊಲೀಸರು ಅವರಿಗೆ ಹಾಗೇ ನೇತು ಹಾಕಿ ಶಿಕ್ಷೆ ನೀಡಿ. ಇನ್ನು ಮುಂದೆ ಇವರು ಈ ರೀತಿಯ ಕೃತ್ಯದಲ್ಲಿ ಭಾಗಿಯಾಗುವುದಿರಲಿ, ಅತ್ತ ತಿರುಗಿಯೂ ನೋಡಬಾರದು ಹಾಗೇ ಪಾಠ ಕಲಿಸಿ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.
Published by:Vasudeva M
First published: