• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Covid Effect: ಮೀನುಗಾರರ ಬದುಕಿಗೂ ಪೆಟ್ಟು ಕೊಟ್ಟ ಕೋವಿಡ್​; ಅವಧಿಗೂ ಮುನ್ನವೇ ಮೀನುಗಾರಿಕೆ ಸ್ಥಗಿತ

Covid Effect: ಮೀನುಗಾರರ ಬದುಕಿಗೂ ಪೆಟ್ಟು ಕೊಟ್ಟ ಕೋವಿಡ್​; ಅವಧಿಗೂ ಮುನ್ನವೇ ಮೀನುಗಾರಿಕೆ ಸ್ಥಗಿತ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ವರ್ಷ ಲಾಕ್ ಡೌನ್ ನಿಂದ ಮೀನುಗಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿತ್ತು.ಈ ವರ್ಷ ಕೂಡ ಅದೇ ಸ್ಥಿತಿ ಬಂದೊದಗಿದ್ದು ಪರಿಸ್ಥಿತಿ ಭಿನ್ನವಾಗುತ್ತಿಲ್ಲ

  • Share this:

ಕಾರವಾರ (ಏ. 24): ಕೊರೋನಾ ಮಹಾಮಾರಿ ಕಡಲ ಮಕ್ಕಳಾದ ಮೀನುಗಾರರ ಬದುಕನ್ನು ದುಸ್ಥಕ್ಕೆ ತಳ್ಳಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಮೀನುಗಾರರು ಕೊರೋನಾ ವಿರುದ್ದ ಹೋರಾಡಲು ಹರಸಾಹಸವೇ ಪಡುತ್ತಿದ್ದಾರೆ. ಮಹಾಮಾರಿ ಅಟ್ಟಹಾಸಕ್ಕೆ ಮೀನುಗಾರ ನಲುಗಿ ಹೋಗಿದ್ದು, ಅವಧಿಗೂ ಮುಂಚಿತವೇ ಮೀನುಗಾರಿಕೆ ಬಂದ್ ಮಾಡುವ ಸ್ಥಿತಿ ಮತ್ತೊಮ್ಮೆ ಬಂದೊದಗಿದೆ. ಆಳ ಸಮುದ್ರ ಮೀನುಗಾರಿಕೆ ಹಂಗಾಮು ಮುಕ್ತಾಯಕ್ಕೆ ಇನ್ನು ಒಂದು ತಿಂಗಳ ಸಮಯವಿರುವಂತೆಯೇ ಮೀನುಗಾರಿಕೆ ಸ್ಥಗಿತ ಮಾಡಲು ಮೀನುಗಾರರು ಮುಂದಾಗಿದ್ದಾರೆ. ಕೊರೋನಾಗೆ ಹೆದರಿ ಹೊರ ರಾಜ್ಯದ ಮೀನುಗಾರಿಕಾ ಕಾರ್ಮಿಕರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಇದರಿಂದ ಮೀನುಗಾರಿಕೆ ಮಾಡೋದು ಕಷ್ಟ ವಾಗಿದೆ. ಇನ್ನು ಒಂದು ತಿಂಗಳುಗಳ ಕಾಲ ಮೀನುಗಾರಿಕೆ ಸರ್ಕಾರದ ಆದೇಶ ಇದೆ. ಆದರೆ ಈ ಮಧ್ಯೆ ಕರ್ಪ್ಯೂ ದಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಈ ಎಲ್ಲ ಸಮಸ್ಯೆ ಯಿಂದ ಕಳೆದ ಫೆಬ್ರವರಿ ತಿಂಗಳಲ್ಲೆ ಮೀನುಗಾರಿಕಾ ಹಂಗಾಮು ಮುಗಿಸಿದ್ದು, ಕೇವಲ ಎರಡೊ ಮೂರೊ ಮೀನುಗಾರಿಕಾ ಬೋಟ್ ಆಳ ಸಮುದ್ರ ಮೀನುಗಾರಿಕೆ ಮಾಡುತ್ತಿವೆ ಎನ್ನುತ್ತಾರೆ ಮೀನುಗಾರರು.


ಕಳೆದ ವರ್ಷ ಲಾಕ್ ಡೌನ್ ನಿಂದ ಮೀನುಗಾರಿಕೆ ಉದ್ಯಮ ಸಂಪೂರ್ಣ ನೆಲಕಚ್ಚಿತ್ತು.ಈ ವರ್ಷ ಕೂಡ ಅದೇ ಸ್ಥಿತಿ ಬಂದೊದಗಿದ್ದು ಪರಿಸ್ಥಿತಿ ಭಿನ್ನವಾಗುತ್ತಿಲ್ಲ. ಈ ನಡುವೆ ಡೀಸೆಲ್ ದರ ಕೂಡಾ ಗಗನಕ್ಕೇರಿದ್ದು ಸಾಕಷ್ಟು ಸಮಸ್ಯೆ ಆಗುತ್ತಿದೆ.


ಸತತ ಎರಡು ವರ್ಷದಿಂದ ಇದೇ ಸ್ಥಿತಿ; ಈಗ ವಿಕೇಂಡ್ ಕರ್ಪ್ಯೂ ತಂದ ಸಮಸ್ಯೆ


ಕಳೆದ ವರ್ಷ ಕೊರೋನಾ ನಿಯಂತ್ರಣಕ್ಕೆ ಏಕಾಏಕಿ ಹೇರಿದ ಲಾಕ್ ಡೌನ್ ಮತ್ಸ್ಯೋದ್ಯಮವನ್ನೆ ನುಂಗಿತ್ತು. ಲಾಕ್ ಡೌನ್ ತೆರವಾದ ಬಳಿಕ ಕೊಂಚ‌ ಚೇತರಿಕೆ ಕಂಡ ಮೀನುಗಾರಿಕೆ ಉದ್ಯಮಕ್ಕೆ ಭಾರೀ ಹೊಡೆತ ನೀಡಿದ್ದು ಪ್ರಕೃತಿ ವಿಕೋಪ. ಈ ಎಲ್ಲಾ ಸಮಸ್ಯೆಗಳಿಂದ ಚೇತರಿಕೆ ಕಾಣುವಾಗಲೇ ಈಗ ಕೊರೋನಾ ಎರಡನೇ ಅಲೆಯ ಹೊಡೆತ ಗಾಯದ ಮೇಲೆ ಬರೆ ಎಳೆದಿದೆ. ಹೀಗೆ, ನಿರಂತರ ಸಮಸ್ಯೆ ತಂದಿರಿಸಿದೆ. ಎಲ್ಲವೂ ಮುಗೀತು ಎನ್ನುವಾಗಲೇ ಕೊರೋನಾ ಎರಡನೇ ಅಲೆ ಮೀನುಗಾರಿಕೆ ಮೇಲೆ ಕರಿನೆರಳು ಚಾಚಿದೆ. ಜತೆಗೆ ನಿರಂತರವಾಗಿ ಏರುತ್ತಿರುವ ಡಿಸೇಲ್ ದರ ಮೀನುಗಾರಿಕೆ ಮಾಡದ ಸ್ಥಿತಿಗೆ ತಂದಿರಿಸಿದೆ.


ಇದನ್ನು ಓದಿ: ಬೆಡ್​ ಸಿಗದೇ ಬೆಂಗಳೂರಿನ ಸ್ವಾಬ್​ ಕಲೆಕ್ಟರ್​ ದಾರುಣ ಸಾವು


ಮೀನುಗಾರರ ಬಾಳಲ್ಲಿ ಚೆಲ್ಲಾಟ ಆಡಿದ ಪ್ರಕೃತಿ


ಕಳೆದ ವರ್ಷ ಲಾಕ್ ಡೌನ್ ತೆರವಾದ ಬಳಿಕ ಆಳ ಸಮುದ್ರ ಮೀನುಗಾರಿಕೆ ಆರಂಭವಾಗಿತ್ತು. ಈ ಸಂದರ್ಭದಲ್ಲಿ ಹೊಸ ‌ಆಸೆ ಭರವಸೆ ಯೊಂದಿಗೆ ಸಮುದ್ರಗಿಳಿದ ಮೀನುಗಾರರರ ಮೇಲೆ ಪ್ರಕೃತಿ ಮುನಿಸಿಕೊಂಡು ಆರಂಭದಲ್ಲೆ ಒಂದು ತಿಂಗಳಕಾಲ ಮೀನುಗಾರಿಕೆ ಸ್ಥಗಿತವಾಯಿತು. ಬಳಿಕ ಮತ್ತೆ ಮೀನುಗಾರಿಕೆ ಆರಂಭಿಸಿದಾಗ ಅಕಾಲಿಕ ಮಳೆ ಸಮಸ್ಯೆ ತಂದೊಡ್ಡಿತ್ತು. ‌ ಹೀಗೆ  ಪ್ರಕೃತಿ ಒಂದಲ್ಲ ಒಂದು ದಾರಿಯಲ್ಲಿ ಮೀನುಗಾರರಿಗೆ ಬೆಳಕಾಗುವ ಬದಲು ಕತ್ತಲು ಕಾಣಿಸಿತು.

Published by:Seema R
First published: