HOME » NEWS » State » FIRST TIME WRESTLING CHAMPIONSHIP IN HALIYAL NEW LOOK TO RURAL SPORT HK

ಹಳಿಯಾಳದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ; 3 ದಿನ ಸೆಣಸಾಡಿದ ಪೈಲ್ವಾನ್​ಗಳು

ಹಳಿಯಾಳ ಶಾಸಕ, ಮಾಜಿ ಸಚಿವ ಆರ್.ವಿ ದೇಶಪಾಂಡೆ ಯವರ ತಂದೆ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಆಶ್ರಯದ ಅಡಿಯಲ್ಲಿ ಹಳಿಯಾಳ ತಾಲೂಕಿನಲ್ಲಿ 3 ದಿನಗಳ ಕಾಲ ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡೆ  ಮುಕ್ತಾಯಗೊಂಡಿದೆ

G Hareeshkumar | news18-kannada
Updated:January 28, 2020, 5:06 PM IST
ಹಳಿಯಾಳದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ; 3 ದಿನ ಸೆಣಸಾಡಿದ ಪೈಲ್ವಾನ್​ಗಳು
ಕುಸ್ತಿ ಪಂದ್ಯಾವಳಿ
  • Share this:
ಕಾರವಾರ(ಜ. 28): ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊಟ್ಟ ಮೊದಲು ಕುಸ್ತಿ ಕ್ರೀಡೆಯನ್ನು ಹುಟ್ಟು ಹಾಕಿದ ಹಳಿಯಾಳ ತಾಲೂಕಿನಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಿತು. ಇತ್ತೀಚೆಗೆ ಶ್ರೀಮಂತ ಗ್ರಾಮೀಣ ಕ್ರೀಡೆ ಕುಸ್ತಿ ಮರೆ ಮಾಚುತ್ತಿರುವ ಹಿನ್ನೆಲೆಯಲ್ಲಿ ಹಳಿಯಾಳದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ಖದರ್ ಜೋರಾಗಿತ್ತು.

ಹಳಿಯಾಳದಲ್ಲಿ ಸೆಣಸಾಡಿದ ದೇಶದ ವಿವಿಧ ರಾಜ್ಯದ ಪೈಲ್ವಾನ್​ಗಳು

ಹಳಿಯಾಳ ಶಾಸಕ, ಮಾಜಿ ಸಚಿವ ಆರ್.ವಿ ದೇಶಪಾಂಡೆ ಯವರ ತಂದೆ ವಿ.ಆರ್.ದೇಶಪಾಂಡೆ ಮೆಮೋರಿಯಲ್ ಟ್ರಸ್ಟ್ ಆಶ್ರಯದ ಅಡಿಯಲ್ಲಿ ಹಳಿಯಾಳ ತಾಲೂಕಿನಲ್ಲಿ 3 ದಿನಗಳ ಕಾಲ ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡೆ ಮುಕ್ತಾಯಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲೆ ಮೊಟ್ಟ ಮೊದಲು ಈ ಕುಸ್ತಿ ಕ್ರೀಡೆಯನ್ನು ಪ್ರಾರಂಭಿಸಲಾಗಿತ್ತು, ಆದರೆ, ಹಳಿಯಾಳದಲ್ಲಿ ವಿವಿಧ ಕ್ರೀಡೆಯ ಮಧ್ಯೆ ಕುಸ್ತಿ ಕ್ರೀಡೆ ತನ್ನ ಸತ್ವ ಕಳೆದುಕೊಳ್ಳಹೊರಟಿದ್ದು ಈ ಹಿನ್ನೆಲೆಯಲ್ಲಿ ಮತ್ತೆ ಕುಸ್ತಿ ಕ್ರೀಡೆಗೆ ಜೀವಕಳೆ ತುಂಬುವ ನಿಟ್ಟಿನಲ್ಲಿ ರಾಷ್ಟ್ರ ಮಟ್ಟದ ಕುಸ್ತಿ ಕ್ರೀಡೆಯನ್ನ ಹಮ್ಮಿಕೊಳ್ಳಲಾಗಿತ್ತು.

ಕಳೆದ ಮೂವತ್ತು ವರ್ಷದಿಂದ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ

ಇನ್ನು, ಈ ಹಳಿಯಾಳ ತಾಲೂಕಿನಲ್ಲಿ ಕಳೆದ ದಶಕಗಳಿಂದಲೂ ಇಲ್ಲಿನ ಪೈಲ್ವಾನರು ಕುಸ್ತಿ ಕ್ರೀಡೆಯನ್ನು ಆಡಿ ರಾಜ್ಯ ರಾಷ್ಟ್ರ ಮಟ್ಟದಲ್ಲೂ ಮಿಂಚಿದ್ದಾರೆ. ತದ ನಂತರದ ದಿನಗಳಲ್ಲಿ ಕೆಲ ಮೂಲ ಸೌಕರ್ಯ ಹಾಗು ತರಬೇತಿಯ ಕೊರತೆಯಿಂದ ಹಳಿಯಾಳ ತಾಲೂಕಿನಲ್ಲಿ ಕುಸ್ತಿ ಪಟುಗಳ ಸಂಖ್ಯೆ ಕ್ಷೀಣಿಸುತ್ತಾ ಹೋಯಿತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಶ್ರೀಮಂತ ಕ್ರೀಡೆಯನ್ನ ಉಳಿಸುವ ನಿಟ್ಟಿನಲ್ಲಿ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ನಿಂದ ನಡೆಯುತ್ತಿರುವ ರಾಷ್ಟ್ರಮಟ್ಟದ ಕುಸ್ತಿ ನೋಡಿ ಹಳೆಯ ಪೈಲ್ವಾನ್ ಗಳು ಸಖತ್ ಖುಷಿ ಪಡುತ್ತಿದ್ದಾರೆ.

haliyal
ಚಾಲನೆ ನೀಡಿದ ಮಾಜಿ ಸಚಿವ ಆರ್​ ವಿ ದೇಶಪಾಂಡೆ


ದೇಶದ ಶ್ರೀಮಂತ ಗ್ರಾಮೀಣ ಕುಸ್ತಿ ಕ್ರೀಡೆಗೆ ಹೆಚ್ಚಿನ ಉತ್ತೇಜನ‌ ನೀಡುವ ನಿಟ್ಟಿನಲ್ಲಿ ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ ವತಿಯಿಂದ ಕಳೆದ ಮೂವತ್ತು ವರ್ಷಗಳಿಂದ ಕುಸ್ತಿ ನಡೆಸಿಕೊಂಡು ಬರಲಾಗುತ್ತಿದೆ.. ವರ್ಷಕ್ಕಿಂತ ವರ್ಷ ದೊಡ್ಡಮಟ್ಟದಲ್ಲೆ ಕುಸ್ತಿ ಪಂದ್ಯವನ್ನ ನಡೆಸಲಾಗುತ್ತಿದೆ. ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯದಲ್ಲಿ ದೇಶದ ವಿವಿಧ ರಾಜ್ಯ ಗಳಿಂದ ಜಟ್ಟಿ ಗಳು ಆಗಮಿಸಿ ಕುಸ್ತಿ ಆಡಿದರು.ಇದನ್ನೂ ಓದಿ : ಮಂತ್ರಿ ಸ್ಥಾನವೋ, ನಿಗಮ ಮಂಡಳಿಯೋ: ಕೊಟ್ಟ ಮಾತು ಉಳಿಸಿಕೊಳ್ಳಿ; ಮಹೇಶ್​ ಕುಮಟಳ್ಳಿ

ಹಳಿಯಾಳದಲ್ಲಿ ಇದುವರೆಗೂ ಈ ಶ್ರೀಮಂತ ಕ್ರೀಡೆಗೆ ಯಾರು ಪ್ರೋತ್ಸಾಹ ನೀಡಿಲ್ಲ. ಆದರೆ, ಕುಸ್ತಿ ಹಳಿಯಾಳದಲ್ಲಿ ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ದೇಶಪಾಂಡೆಯವರು ಕುಸ್ತಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಮೂರು ದಿನಗಳ ಕಾಲ ನಡೆದ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯದಿಂದ ಕುಸ್ತಿ ಸ್ಪರ್ಧಾಳುಗಳು ಆಗಮಿಸಿ ಸ್ಪರ್ಧಿಸಿದರು. ವಿವಿದ ವಿಬಾಗದಲ್ಲಿ ನಡೆದ ಈ ಕುಸ್ತಿ ಪಂದ್ಯಾವಳಿಯನ್ನು ಹಳಿಯಾಳದ ಜಟ್ಟಿಗಳು ಕಣ್ಣು ಮಿಟುಕಿಸದೆ ವೀಕ್ಷಿಸಿದ್ದು ವಿಶೇಷವಾಗಿತ್ತು.

 
First published: January 28, 2020, 4:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories