ಗ್ರಾಮದಲ್ಲಿ ಮೊದಲ ಬಾರಿ ಮತಕೇಂದ್ರ ಸ್ಥಾಪನೆ; ಮತಗಟ್ಟೆಯನ್ನು ಮದುವೆ ಹೆಣ್ಣಿನಂತೆ ಸಿಂಗರಿಸಿದ ಮಾದಯ್ಯನಹುಂಡಿ ಗ್ರಾಮಸ್ಥರು!

ವರುಣಾ ವಿಧಾನ ಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಮಾದಯ್ಯನ ಹುಂಡಿ ಗ್ರಾಮದಲ್ಲಿ ಇದೇ ಮೊದಲ ಬಾರಿ ಮತಗಟ್ಟೆ ಸ್ಥಾಪನೆಯಾಗಿದೆ. ತಮ್ಮ ಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆಗೊಂಡಿರುವುದರಿಂದ ಇಲ್ಲಿನ ಗ್ರಾಮಸ್ಥರಲ್ಲಿ ಸಂತೋಷ ಇಮ್ಮಡಿಗೊಂಡಿದೆ.

Seema.R | news18
Updated:April 18, 2019, 3:24 PM IST
ಗ್ರಾಮದಲ್ಲಿ ಮೊದಲ ಬಾರಿ ಮತಕೇಂದ್ರ ಸ್ಥಾಪನೆ; ಮತಗಟ್ಟೆಯನ್ನು ಮದುವೆ ಹೆಣ್ಣಿನಂತೆ ಸಿಂಗರಿಸಿದ ಮಾದಯ್ಯನಹುಂಡಿ ಗ್ರಾಮಸ್ಥರು!
ಮಾದಯ್ಯನ ಹುಂಡಿ ಗ್ರಾಮದ ಮತಗಟ್ಟೆ
Seema.R | news18
Updated: April 18, 2019, 3:24 PM IST
ಮೈಸೂರು (ಏ.18): ಹಲವು ಗ್ರಾಮಗಳಲ್ಲಿ ಜನರು ತಮ್ಮ ಮತದಾನದ ಹಕ್ಕು ಚಲಾಯಿಸಲು ಕಿ.ಮೀಗಟ್ಟಲೇ ಸಾಗಬೇಕಾದ ಅನಿವಾರ್ಯತೆ ಈಗಲೂ ಕೆಲವು ಕಡೆ ಇದೆ. ಇದೇ ಪರಿಸ್ಥಿತಿ ಕೂಡ ಈ ಗ್ರಾಮಸ್ಥರಿಗೆ ಹಲವು ವರ್ಷಗಳಿಂದ ಎದುರಾಗಿತ್ತು. ಆದರೆ, ಈ ಬಾರಿ ಈ ಗ್ರಾಮಸ್ಥರಲ್ಲಿ ಸಂತೋಷ ಮನೆ ಮಾಡಿದೆ. ಕಾರಣ ಇದೇ ಮೊದಲ ಬಾರಿ ಈ ಗ್ರಾಮದಲ್ಲಿ ಮತಗಟ್ಟೆ ಸ್ಥಾಪಿಸಿರುವುದು.

ಯತೀಂದ್ರ ಸಿದ್ದರಾಮಯ್ಯ ಅವರ ಕ್ಷೇತ್ರವಾದ ವರುಣಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಂಜನಗೂಡು ತಾಲೂಕಿನ ಮಾದಯ್ಯನ ಹುಂಡಿ ಗ್ರಾಮದಲ್ಲಿ ಇದೇ ಮೊದಲ ಬಾರಿ ಮತಗಟ್ಟೆ ಸ್ಥಾಪನೆಯಾಗಿದೆ. ತಮ್ಮ ಗ್ರಾಮದಲ್ಲಿ ಮತಗಟ್ಟೆ ಸ್ಥಾಪನೆಗೊಂಡಿರುವುದರಿಂದ ಇಲ್ಲಿನ ಗ್ರಾಮಸ್ಥರಲ್ಲಿ ಸಂತೋಷ ಇಮ್ಮಡಿಗೊಂಡಿದೆ.



ಈ ಹಿನ್ನೆಲೆಯಲ್ಲಿ ಮತಗಟ್ಟೆಯನ್ನು ಮದುವೆ ಮನೆಯಂತೆ ಶಾಮಿಯಾನ ಹಾಕಿ ಸಿಂಗಾರ ಮಾಡಿದ್ದಾರೆ. ಅಲ್ಲದೇ ಮತದಾನ ಮಾಡುವವೆರಿಗೆ ರೆಡ್​ ಕಾರ್ಪೆಟ್​ ಹಾಕಿ ಸ್ವಾಗತಿಸಿ ಸಿಹಿ ಹಂಚಿ ಗ್ರಾಮಸ್ಥರು ಸಂಭ್ರಮಿಸಿದ್ದಾರೆ.

ಇದನ್ನು ಓದಿ: ಚುನಾವಣಾ ಸಿಬ್ಬಂದಿಗೆ ಹೃದಯಾಘಾತ, ಆಸ್ಪತ್ರೆಗೆ ದಾಖಲು; ಹಲವೆಡೆ ಬೇರೆಯವರ ಹೆಸರಿನಲ್ಲಿ ಕಿಡಿಗೇಡಿಗಳಿಂದ ಮತದಾನ

ಈ ಹಿಂದೆಯೆಲ್ಲಾ ಮಾದಯ್ಯನ ಹುಂಡಿ ಗ್ರಾಮಸ್ಥರು ಮತ ಚಲಾಯಿಸಲು ನೆರೆಯ ಗ್ರಾಮದ ಮತಗಟ್ಟೆಗೆ ಹೋಗಿ ಮತ ಚಲಾಯಿಸಬೇಕಿತ್ತು. ಇದರಿಂದಾಗಿ ಸಾಕಷ್ಟು ತೊಂದರೆಯಾಗುತ್ತಿತ್ತು. ಅಲ್ಲದೆ ಮತದಾನದಲ್ಲೂ ಇಳಿಕೆಯಾಗಿತ್ತು. ಆದರೆ, ಈ ಬಾರಿ ನಮ್ಮ ಗ್ರಾಮದಲ್ಲಿಯೇ ಮತಗಟ್ಟೆ ಸ್ಥಾಪಿಸಿರುವುದು ಸಂತಸ ಮೂಡಿಸಿದೆ. ಇದರಿಂದಾಗಿ ಗ್ರಾಮಸ್ಥರು ಕೂಡ ಮತ ಚಲಾಯಿಸಲು ಉತ್ಸುಕರಾಗಿದ್ದಾರೆ ಎಂದು ಹಳ್ಳಿಯ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
Loading...

First published:April 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626