KSRTC: ಖಾಸಗೀಕರಣದ ಮೊದಲ ಹೆಜ್ಜೆ: ಚಾಲಕರನ್ನು ಪೂರೈಸಲು ಖಾಸಗಿ ಏಜೆನ್ಸಿಗಳನ್ನು ನೇಮಿಸಿಕೊಂಡ ಕೆಎಸ್ಆರ್‌ಟಿಸಿ

ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್‌ಟಿಸಿ) ಸಹ ತನ್ನ ಬಹು ವರ್ಷಗಳ ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ ನೋಡಿ. ಹೌದು.. ತನಗೆ ಬೇಕಾದ 350 ಚಾಲಕರನ್ನು ಒಟ್ಟು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪೂರೈಸಲು ಒಂದು ಖಾಸಗಿ ಸಂಸ್ಥೆಯನ್ನು ನೇಮಿಸುವ ಮೂಲಕ ಚಾಲಕರ ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಈಗಂತೂ ಅನೇಕ ದೊಡ್ಡ ದೊಡ್ಡ ಖಾಸಗಿ ಕಂಪನಿಗಳು (Private company) ತಮಗೆ ಬೇಕಾಗುವ ಸಿಬ್ಬಂದಿಗಳನ್ನು ತಾವೇ ಸ್ವತಃ ಹುಡುಕುವ ಬದಲು, ಬೇರೆ ಒಂದು ಸಂಸ್ಥೆಗೆ ಉದ್ಯೋಗಿಗಳನ್ನು (Employees) ನೇಮಕ ಮಾಡಿಕೊಡುವಂತೆ ಹೇಳಿ ಹೊರ ಗುತ್ತಿಗೆಯನ್ನು ನೀಡುವುದನ್ನು ನಾವೆಲ್ಲಾ ನೋಡಿರುತ್ತೇವೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್‌ಟಿಸಿ) (KSRTC) ಸಹ ತನ್ನ ಬಹು ವರ್ಷಗಳ ನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿದೆ ನೋಡಿ. ಹೌದು.. ತನಗೆ ಬೇಕಾದ 350 ಚಾಲಕರನ್ನು ಒಟ್ಟು 10 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಪೂರೈಸಲು ಒಂದು ಖಾಸಗಿ ಸಂಸ್ಥೆಯನ್ನು ನೇಮಿಸುವ ಮೂಲಕ ಚಾಲಕರ (Drivers) ಉದ್ಯೋಗಗಳನ್ನು ಹೊರಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಸಿಬ್ಬಂದಿ ಕೊರತೆಯ ಜೊತೆಗೆ, ಕೆಎಸ್ಆರ್‌ಟಿಸಿ ಮಂಗಳೂರು, ಪುತ್ತೂರು ಮತ್ತು ಚಾಮರಾಜನಗರ ವಿಭಾಗಗಳಂತಹ ಕರ್ತವ್ಯನಿರತ ನಿಲ್ದಾಣಗಳಿಂದ ಬೇರೆ ನಿಲ್ದಾಣಗಳಿಗೆ ವರ್ಗಾವಣೆ ಮಾಡಿಸಿಕೊಳ್ಳಲು ಹೆಚ್ಚಿನ ಆದ್ಯತೆ ನೀಡುವಲ್ಲಿ ನೌಕರರ ಸಮಸ್ಯೆಯನ್ನು ಎದುರಿಸುತ್ತಿದೆ.

ಸಿಬ್ಬಂದಿಯ ಕೊರತೆಯನ್ನು ಸರಿಪಡಿಸಲು ಈ ಯೋಜನೆ
ಸಿಬ್ಬಂದಿಯ ಕೊರತೆಯನ್ನು ಎದುರಿಸುತ್ತಿರುವ ವಿಭಾಗಗಳಲ್ಲಿನ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಈ ವ್ಯವಸ್ಥೆ ಹೊಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಯಶಸ್ವಿ ಬಿಡ್ಡರ್ ಮಂಗಳೂರಿಗೆ 150, ಪುತ್ತೂರಿಗೆ 100, ರಾಮನಗರ ಮತ್ತು ಚಾಮರಾಜನಗರ ವಿಭಾಗಗಳಿಗೆ ತಲಾ 50 ಚಾಲಕರನ್ನು ಒದಗಿಸಲಿದೆ.

ಇದನ್ನೂ ಓದಿ: Cow Dung: ಬಣ್ಣ ಅಲ್ಲ, ಸಗಣಿ ಎರಚಿ ಇಲ್ಲಿ ಓಕುಳಿ ಆಡ್ತಾರೆ ಜನ! ನಾಗರ ಪಂಚಮಿ ಮರುದಿನ ವಿಶಿಷ್ಟ ಆಚರಣೆ

ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಏನು ಹೇಳಿದ್ದಾರೆ ನೋಡಿ 
"ನಮ್ಮ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ, ಚಾಲಕರನ್ನು ನೇಮಿಸಿಕೊಳ್ಳಲು ನಮಗೆ ಸರ್ಕಾರದಿಂದ ಅನುಮತಿ ಸಿಗುವುದಿಲ್ಲ. ಈಗಿರುವ ನೌಕರರು ಮಂಗಳೂರು ಮತ್ತು ಪುತ್ತೂರಿನಂತಹ ಸ್ಥಳಗಳಲ್ಲಿ ಕೆಲಸ ಮಾಡಲು ಬಯಸುವುದಿಲ್ಲ. ಮತ್ತೊಂದೆಡೆ, ಪ್ರಯಾಣದ ಬೇಡಿಕೆಗೆ ಅನುಗುಣವಾಗಿ ಸಾರಿಗೆ ಸೇವೆಗಳನ್ನು ಒದಗಿಸಲು ನಮಗೆ ಕನಿಷ್ಠ 1,000 ಹೆಚ್ಚುವರಿ ಚಾಲಕರ ಅಗತ್ಯವಿದೆ. ಈ ಟೆಂಡರ್ ಮೂಲಕ, ಚಾಲಕರನ್ನು ಗುತ್ತಿಗೆಗೆ ಪಡೆಯುವ ಕಾರ್ಯ ಸಾಧ್ಯತೆಯನ್ನು ನಾವು ಪರೀಕ್ಷಿಸುತ್ತೇವೆ" ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು. ಈ ಕ್ರಮದೊಂದಿಗೆ, ಕೆಎಸ್ಆರ್‌ಟಿಸಿ ವೇತನ ವೆಚ್ಚವನ್ನು ಕಡಿತಗೊಳಿಸುವ ಭರವಸೆ ಹೊಂದಿದೆ. ನಿಗಮವು ತಿಂಗಳಿಗೆ ಕನಿಷ್ಠ 25 ದಿನಗಳ ಹಾಜರಾತಿಗಾಗಿ ಪ್ರತಿ ಚಾಲಕನಿಗೆ 23,000 ರೂಪಾಯಿ ಸಂಭಾವನೆಯಾಗಿ ಪಾವತಿಸುತ್ತದೆ.

ಈ ಚಾಲಕರ ಸುರಕ್ಷತೆ ಹೇಗಿರುತ್ತದೆ
ಚಾಲಕರ ಸೇವೆಯನ್ನು 25 ದಿನಗಳವರೆಗೆ ಬಳಸದಿದ್ದರೆ, ವೇತನವನ್ನು ಪ್ರತಿ ಗಂಟೆಗೆ 100 ರೂಪಾಯಿಗಳಂತೆ ನಿಗದಿಪಡಿಸಲಾಗುತ್ತದೆ. ಚಾಲಕರಿಗೆ ಖಾಯಂ ಉದ್ಯೋಗಿಗಳಿಗೆ ನೀಡುವಂತಹ ಯಾವುದೇ ಭತ್ಯೆಯನ್ನು ನೀಡಲಾಗುವುದಿಲ್ಲ. ಸುರಕ್ಷತೆಯ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮತ್ತೊಬ್ಬ ಅಧಿಕಾರಿ, ಅಂತಹ ಚಾಲಕರು ತಮ್ಮ ಅತ್ಯುತ್ತಮ ನಡವಳಿಕೆಯಲ್ಲಿ ಕೆಲಸವನ್ನು ನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ದಂಡ ಸೇರಿದಂತೆ ಅಗತ್ಯ ಷರತ್ತುಗಳನ್ನು ವಿಧಿಸಲಾಗುವುದು ಎಂದು ಹೇಳಿದರು. ಕಳ್ಳತನ ಅಥವಾ ವಂಚನೆಯಂತಹ ಚಾಲಕರ ದುರ್ನಡತೆಗೆ ಖಾಸಗಿ ಸಂಸ್ಥೆಯನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ:  Husband-Wife Death: ಗಂಡನ ಮೃತದೇಹ ನೋಡಿ ಉಸಿರು ನಿಲ್ಲಿಸಿದ ಹೆಂಡತಿ! ಸಾವಿನಲ್ಲೂ ಒಂದಾದ ದಂಪತಿ

ಟೆಂಡರ್ ಷರತ್ತುಗಳ ಪ್ರಕಾರ, ಕಡಿಮೆ ಪ್ರಮಾಣದ ಕಮಿಷನ್ ಅನ್ನು ಉಲ್ಲೇಖಿಸುವ ಖಾಸಗಿ ಸಂಸ್ಥೆಗೆ ಈ ಗುತ್ತಿಗೆಯನ್ನು ನೀಡಲಾಗುವುದು. ಜನಸಂದಣಿ ಇಲ್ಲದ ಬಸ್ ಗಳಿಂದ ಕಂಡಕ್ಟರ್ ಗಳನ್ನು ತೆಗೆದು ಹಾಕಲು ಮತ್ತು ಸಿಬ್ಬಂದಿಗಳ ಕೊರತೆಯನ್ನು ಸರಿದೂಗಿಸಲು ಸೇವೆಗಳನ್ನು ಒದಗಿಸಲು ಅವರನ್ನು ಮರು ನಿಯೋಜನೆ ಮಾಡಲು ಬಿಎಂಟಿಸಿ ಮಾರ್ಗಗಳ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಲು ಪ್ರಾರಂಭಿಸಿದ ಕೆಲವು ದಿನಗಳ ನಂತರ ಕೆಎಸ್ಆರ್‌ಟಿಸಿ ಈ ಹೊಸ ಕ್ರಮವನ್ನು ಜಾರಿಗೆ ತಂದಿದೆ.

ಖಾಸಗೀಕರಣದ ಮೊದಲ ಹೆಜ್ಜೆ
ಈ ಕ್ರಮವು ಖಾಸಗೀಕರಣದ ಮೊದಲ ಹೆಜ್ಜೆಯಾಗಿದೆ ಎಂದು ಕೆಎಸ್ಆರ್‌ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ನ ಎಚ್.ವಿ.ಅನಂತ ಸುಬ್ಬರಾವ್ ಹೇಳಿದರು. "ಇದು ಖಾಸಗೀಕರಣದ ಕಡೆಗೆ ಸ್ಪಷ್ಟ ಹೆಜ್ಜೆಯಾಗಿದೆ ಮತ್ತು ಸಾರ್ವಜನಿಕ ಸಾರಿಗೆಯ ಕಲ್ಪನೆಗೆ ದೊಡ್ಡ ಹೊಡೆತವಾಗಿದೆ. ಚಾಲಕನ ಕೆಲಸವು ಹೆಚ್ಚು ಕೌಶಲ್ಯಯುತವಾಗಿದೆ ಮತ್ತು ಸಾಕಷ್ಟು ಅಪಾಯಗಳನ್ನು ಒಳಗೊಂಡಿರುತ್ತದೆ. ಅವರು ಕೇವಲ 25,000 ರೂಪಾಯಿಗಳಿಗೆ ಕೆಲಸ ಮಾಡುತ್ತಾರೆ ಎಂದು ನಾವು ಹೇಗೆ ನಿರೀಕ್ಷಿಸಬಹುದು. ಇದಲ್ಲದೆ, ಕೆಎಸ್ಆರ್‌ಟಿಸಿ ಉದ್ಯೋಗಿಯಂತೆ ಖಾಸಗಿ ಕೆಲಸಗಾರನು ಎಂದಿಗೂ ಬದ್ಧನಾಗಿರುವುದಿಲ್ಲ" ಎಂದು ಅವರು ಹೇಳಿದರು.
Published by:Ashwini Prabhu
First published: