ಬೆಂಗಳೂರಿನಲ್ಲೂ ಆರಂಭವಾಯ್ತು ರೋಬೋಟ್ ಕೆಫೆ; ಎಲ್ಲಿದೆ, ಏನಿದರ ವಿಶೇಷತೆ?

ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್​ ಒಂದು ಆರಂಭಗೊಂಡಿದ್ದು, ಇಲ್ಲಿ ಸಪ್ಲೈರ್​ಗಳಾಗಿ ಮನುಷ್ಯರ ಬದಲು ರೋಬೋಟ್​ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

Rajesh Duggumane | news18
Updated:August 21, 2019, 3:25 PM IST
ಬೆಂಗಳೂರಿನಲ್ಲೂ ಆರಂಭವಾಯ್ತು ರೋಬೋಟ್ ಕೆಫೆ; ಎಲ್ಲಿದೆ, ಏನಿದರ ವಿಶೇಷತೆ?
ರೋಬೋಟ್​ ರೆಸ್ಟೋರೆಂಟ್​ (ಕೃಪೆ: ಎಕನಾಮಿಕ್ಸ್​ ಟೈಮ್ಸ್​
  • News18
  • Last Updated: August 21, 2019, 3:25 PM IST
  • Share this:
ಬೆಂಗಳೂರು (ಆ.21): ಚೀನಾ, ಜಪಾನ್​ ಸೇರಿ ಸಾಕಷ್ಟು ದೇಶಗಳಲ್ಲಿ ಮೆಡಿಕಲ್​ ಶಾಪ್​, ಹೋಟೆಲ್​ ಹೀಗೆ ಅನೇಕ ಕಡೆಗಳಲ್ಲಿ ರೋಬೋಟ್​ ಬಳಕೆ ಆರಂಭವಾಗಿದೆ. ಚೀನಾ ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಸುದ್ದಿ ಓದಲು ರೋಬೋಟ್​ ಆ್ಯಂಕರ್​ ಬಳಕೆ ಮಾಡಿಕೊಂಡಿತ್ತು! ಈಗ ಭಾರತದಲ್ಲೂ ನಿಧಾನವಾಗಿ ಇದರ ಬಳಕೆ ಆರಂಭಗೊಂಡಿದೆ. ಬೆಂಗಳೂರಿನಲ್ಲೂ ಅನೇಕ ಕಡೆಗಳಲ್ಲಿ ರೋಬೋಟ್​ ಬಳಕೆ ಆರಂಭಗೊಂಡಿದೆ.

ಬೆಂಗಳೂರು ಐಟಿ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆ. ದೇಶದ ನಾನಾ ಭಾಗದ ಜನರು ಇಲ್ಲಿ ಅಧ್ಯಯನ ಹಾಗೂ ಕೆಲಸಕ್ಕಾಗಿ ಆಗಮಿಸುತ್ತಾರೆ. ಅವರನ್ನು ಸೆಳೆಯಲು ಹೋಟೆಲ್​ನವರು, ಮಾಲ್​ಗಳು ಹೊಸ ಹೊಸ ಅನ್ವೇಷಣೆ ಮಾಡುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ ಹೊಸ ರೆಸ್ಟೋರೆಂಟ್​ ಒಂದು ಆರಂಭಗೊಂಡಿದ್ದು, ಇಲ್ಲಿ ಸಪ್ಲೈರ್​ಗಳಾಗಿ ಮನುಷ್ಯರ ಬದಲು ರೋಬೋಟ್​ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.

ಇಂದಿರಾ ನಗರದಲ್ಲಿ ಈ ಹೋಟೆಲ್​ ಇದ್ದು, ಇದಕ್ಕೆ ರೋಬೋಟ್​ ರೆಸ್ಟೋರೆಂಟ್​ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿ ನಿಮ್ಮ ಆರ್ಡರ್​ ತೆಗೆದುಕೊಳ್ಳಲು ಇರುವವರು ರೋಬೋಟ್​ಗಳು. ಅವರೇ ನಿಮಗೆ ಆಹಾರವನ್ನೂ ಪೂರೈಸುತ್ತಾರೆ. ಒಟ್ಟು ಐದು ರೋಬೋಟ್​ ಸಪ್ಲೈರ್​ಗಳು ಇಲ್ಲಿವೆ.

ವೆಂಕಟೇಶ್​ ರಾಜೇಂದ್ರ ಈ ರೆಸ್ಟೋರೆಂಟ್​ ಆರಂಭಿಸಿದವರು. ಮೊದಲು ಚೆನ್ನೈ, ನಂತರ ಕೊಯಮತ್ತೂರ್​ನಲ್ಲಿ ಇವರು ರೋಬೋಟ್​ ರೆಸ್ಟೋರೆಂಟ್​ ಆರಂಭಿಸಿದ್ದರು. ಅಲ್ಲಿ ಒಳ್ಳೆಯ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಈಗ ಇವರು ಬೆಂಗಳೂರಿನಲ್ಲೂ ಆರಂಭಿಸಿದ್ದಾರೆ. ಒಂದು ಭಿನ್ನ ಅನುಭವ ಪಡೆದುಕೊಳ್ಳಲು ನೀವು ಈ ರೆಸ್ಟೋರೆಂಟ್​ಗೆ ಭೇಟಿ ನೀಡಬಹುದು!

First published:August 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ