ಮಂಡ್ಯದಲ್ಲಿ ಅಶೋಕ್ ನೇತೃತ್ವದಲ್ಲಿ ಕೆಡಿಪಿ ಸಭೆ; ಸಕ್ಕರೆ ಕಾರ್ಖಾನೆ, ಅಕ್ರಮ ಗಣಿಗಾರಿಕೆ, ಎನ್​ಆರ್​ಸಿ ಬಗ್ಗೆ ಚರ್ಚೆ

ಪೌರತ್ವ ಕಾಯ್ದೆಗೆ ಮಂಡ್ಯದಲ್ಲೂ ಮುಸ್ಲಿಮರ ವಿರೋಧ ಹಿನ್ನಲೆಯಲ್ಲಿ ಪ್ರವಾಸಿ ಮಂದಿರದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ ಉಸ್ತುವಾರಿ ಸಚಿವ ಆರ್. ಅಶೋಕ್, ಪೌರತ್ವ ಮತ್ತು NRC ಕಾಯ್ದೆಯ ಬಗ್ಗೆ ಅರಿವು ಮೂಡಿಸಲು ಪ್ರಯತ್ನಿಸಿದ್ಧಾರೆ.

news18
Updated:December 23, 2019, 6:09 PM IST
ಮಂಡ್ಯದಲ್ಲಿ ಅಶೋಕ್ ನೇತೃತ್ವದಲ್ಲಿ ಕೆಡಿಪಿ ಸಭೆ; ಸಕ್ಕರೆ ಕಾರ್ಖಾನೆ, ಅಕ್ರಮ ಗಣಿಗಾರಿಕೆ, ಎನ್​ಆರ್​ಸಿ ಬಗ್ಗೆ ಚರ್ಚೆ
ಮಂಡ್ಯ ಉಸ್ತುವಾರಿ ಸಚಿವ ಆರ್. ಅಶೋಕ್
  • News18
  • Last Updated: December 23, 2019, 6:09 PM IST
  • Share this:
ಮಂಡ್ಯ(ಡಿ. 23): ರಾಜ್ಯದಲ್ಲಿ ಮೈತ್ರಿ‌ ಸರ್ಕಾರ ಪತನದ ಬಳಿಕ ಸಕ್ಕರೆನಾಡು ಮಂಡ್ಯದಲ್ಲಿ  ನೂತನ ಬಿಜೆಪಿ ಸರ್ಕಾರದಿಂದ ಮಂಡ್ಯ ಜಿ.ಪಂ.‌ನ ಮೊದಲ ಕೆಡಿಪಿ ಸಭೆ ನಡೆಯಿತು. ಜಿಲ್ಲಾ ಉಸ್ತುವಾರಿ ಆರ್. ಅಶೋಕ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲೆಯ ಸಮಸ್ಯೆಗಳ ಕುರಿತು ಮತ್ತು ಅಭಿವೃದ್ದಿ ಕಾರ್ಯಗಳ ಬಗ್ಗೆ ಚರ್ಚೆಯಾಯಿತು. ಸಭೆಯಲ್ಲಿ ಜಿಲ್ಲೆಯ ಎಲ್ಲಾ ಶಾಸಕರು ಸೇರಿದಂತೆ ಪರಿಷತ್ ಸದಸ್ಯರು ಭಾಗಿಯಾಗಿ ಜಿಲ್ಲೆಯ ಸಮಸ್ಯೆಗಳ ಬಗೆ ಗಮನ ಸೆಳೆದರು.

ಸಭೆಯಲ್ಲಿ ಮೊದಲಗೆ ಕೃಷಿಯಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಬಳಿಕ ಜಿಲ್ಲೆಯ ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ರು. ಅದರಲ್ಲಿ ಮುಖ್ಯವಾಗಿ ಜಿಲ್ಲೆಯ ರೈತರ  ಕಬ್ಬು ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ಜಿಲ್ಲೆಯ ಎರಡು ಪ್ರಮುಖ ಸಕ್ಕರೆ ಕಾರ್ಖಾನೆಗಳ ಮುಚ್ಚಿರುವುದರಿಂದ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಸಮಾಲೋಚನೆಯಾಯಿತು. ಜಿಲ್ಲೆಯ ರೈತರ ಸಮಸ್ಯೆ ಮನಗಂಡಿರುವ ಸರ್ಕಾರ ಈ ಎರಡು ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸಿ ಆರಂಭಿಸುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್. ಅಶೋಕ್ ಮಾತನಾಡಿದರು.

ಇದನ್ನೂ ಓದಿ: ನೀವು ಶಿಕ್ಷಣ, ಉದ್ಯೋಗ ನೀಡಿದ್ದರೆ ಅವರು ಯಾಕೆ ಪಂಕ್ಚರ್​ ಹಾಕ್ತಾರೆ; ತೇಜಸ್ವಿ ಸೂರ್ಯಗೆ ಡಿಕೆಶಿ ಚಾಟಿ

ಇನ್ನು, ಸಭೆಯಲ್ಲಿ ಜಿಲ್ಲೆಯಲ್ಲಿ  ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ನಾಗಮಂಗಲ ಶಾಸಕ ಸುರೇಶ್ ಗೌಡ  ಮಾತನಾಡಿ ಗಮನ ಸೆಳೆದರು. ಅಲ್ಲದೇ, ಅಕ್ರಮ ಗಣಿಗಾರಿಕೆ ನಿಷೇಧಕ್ಕೆ ಒತ್ತಾಯಿಸಿದರು. ಇದಕ್ಕೆ‌ ಜಿಲ್ಲಾ ಉಸ್ತುವಾರಿ ಸಚಿವರೂ ಧ್ವನಿಗೂಡಿಸಿದರು.

ಬೇಬಿ ಬೆಟ್ಟದ ಅಕ್ರಮ ಗಣಿಗಾರಿಕೆ  ನನ್ನ ಗಮನಕ್ಕೂ ಬಂದಿದೆ. ಸರ್ಕಾರಕ್ಕೂ ಅಲ್ಲಿನ ಸ್ಥಳೀಯ ರೈತರು ದೂರು ನೀಡಿದ್ದಾರೆ. ಈ ಬಗ್ಗೆ ಸೂಕ್ತ ವರದಿ ಕೊಡಿ ಎಂದು ಗಣಿ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸರ್ಕಾರ ಕೆ.ಆರ್.ಎಸ್. ಹಿತ ದೃಷ್ಟಿಯಿಂದ ಅಲ್ಲಿ ಗಣಿಗಾರಿಕೆ ನಿಷೇಧಿಸಲು ಬದ್ದವಾಗಿದೆ. ವರದಿ ನೋಡಿ ಕ್ರಮ ಕೈಗೊಳ್ಳುವ ಭರವಸೆಯನ್ನೂ ಅಶೋಕ್ ನೀಡಿದರು.

ಇದನ್ನೂ ಓದಿ: ದೇಶದ ಪರ ಹೋರಾಟ ನಡೆಯುವಾಗ ಬಿಜೆಪಿಯವರು ಹುಟ್ಟೇ ಇರಲಿಲ್ಲ; ಮಾಜಿ ಸ್ಪೀಕರ್​ ರಮೇಶ್​ ಕುಮಾರ್​​ ವ್ಯಂಗ್ಯಪೌರತ್ವ ಕಾಯ್ದೆಗೆ ಮಂಡ್ಯದಲ್ಲೂ ಮುಸ್ಲಿಮರ ವಿರೋಧ ಹಿನ್ನಲೆಯಲ್ಲಿ  ಪ್ರವಾಸಿ ಮಂದಿರದಲ್ಲಿ ಮುಸ್ಲಿಂ ಮುಖಂಡರೊಂದಿಗೆ ಸಭೆ ನಡೆಸಿದ ಅವರು ಪೌರತ್ವ ಮತ್ತು NRC ಕಾಯ್ದೆಯ ಬಗ್ಗೆ ಅರಿವು ಮೂಡಿಸಿದರು. ಈ ಕಾಯ್ದೆಗೆ ಕಾಂಗ್ರೆಸ್ ವಿರೋಧ ಮಾಡ್ತಿರೋದು ಕುತಂತ್ರ ರಾಜಕೀಯಕ್ಕಾಗಿ. ಪೌರತ್ವ ಕಾಯ್ದೆಯಿಂದ ಇಲ್ಲಿರುವ ಯಾವುದೇ ಮುಸ್ಲಿಮರಿಗೆ ತೊಂದರೆಯಾಗಲ್ಲ. ನಿಮ್ಮೊಂದಿಗೆ ನಾವಿದ್ದೇವೆಂದು ಭರವಸೆ ನೀಡಿದ ಅವರು, ಕೆಲ ಅಕ್ರಮ ವಲಸಿಗರಿಗಾಗಿ ಈ ಕಾಯ್ದೆ ಬದಲಾಯಿಸಲ್ಲ‌ ಎಂದೂ ಸ್ಪಷ್ಟಪಡಿಸಿದರು.

ಒಟ್ಟಿನಲ್ಲಿ, ನೂತನ ಬಿಜೆಪಿ ಸರ್ಕಾರ ಬಂದ ನಂತರ ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಸಂಬಂಧಿಸಿದ್ದಂತೆ  ಮೊದಲ ಬಾರಿಗೆ ಜಿಲ್ಲಾ ಪಂಚಾಯತ್​ನ ಕೆಡಿಪಿ ಸಭೆ ನಡೆದಿದೆ. ಮಂಡ್ಯ ಜಿಲ್ಲೆಯ ಅಭಿವೃದ್ದಿಗೆ ಹೊಸ ಹೊಸ ಅಭಿವೃದ್ದಿ ಕಾರ್ಯಕ್ರಮಗಳು ಜಾರಿ ಮಾಡಲು ಸರ್ಕಾರ ಬದ್ದವಾಗಿದೆ ಎಂಬ ಸಂದೇಶವನ್ನು ಜಿಲ್ಲೆ ಜನರಿಗೆ ಉಸ್ತುವಾರಿ ಸಚಿವರು ರವಾನಿಸಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ