Helipad: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮೂರು ಹೆಲಿಪ್ಯಾಡ್ ನಿರ್ಮಾಣಕ್ಕೆ ಪ್ರಸ್ತಾವನೆ

ಯಾವುದೇ ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಬೇಕಾದರೆ ಹೆಲಿಕಾಪ್ಟರ್ ಗಳನ್ನು ಬಳಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಬೆಂಗಳೂರು-ಮೈಸೂರು ಹೆದ್ದಾರಿಯ ಹಲವು ಪಟ್ಟಣಗಳಲ್ಲಿ ಹೆಲಿಪ್ಯಾಡ್‌ ವ್ಯವಸ್ಥೆ ಇರಲಿಲ್ಲ. ಆದ್ದರಿಂದ, ಈ ಹೆಲಿಪ್ಯಾಡ್ ನಿರ್ಣಾಯಕ ಪರಿಸ್ಥಿತಿಗಳಲ್ಲಿ ಸಹಾಯಕವಾಗಬಹುದು ಎನ್ನಲಾಗಿದೆ.

ಬೆಂಗಳೂರು- ಮೈಸೂರು ಹೆದ್ದಾರಿ

ಬೆಂಗಳೂರು- ಮೈಸೂರು ಹೆದ್ದಾರಿ

  • Share this:


ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ (Bengaluru-Mysuru Highway) ಈಗಾಗಲೇ ದಶ ಪಥಗಳ ಹೊಸ ರಸ್ತೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಇನ್ಮೇಲೆ ಬೆಂಗಳೂರು - ಮೈಸೂರು ಪ್ರಯಾಣಕ್ಕೆ ಕೇವಲ 75 ನಿಮಿಷಗಳು ತಗುಲುತ್ತದೆ ಎಂಬ ವರದಿಗಳನ್ನು ಓದಿರುತ್ತೀರಲ್ಲ. ಈಗ, ಅದರೊಂದಿಗೆ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಹೆಲಿಪ್ಯಾಡ್‌ ಅನ್ನೂ ನಿರ್ಮಾಣ ಮಾಡಲಾಗುತ್ತದೆಯಂತೆ. ಹೌದು, ರಾಮನಗರದ (Ramanagara) ಬಳಿ ಹೆಲಿಪ್ಯಾಡ್ (Helipad) ನಿರ್ಮಾಣವಾಗಲಿದ್ದು, ತುರ್ತು ಸೇವೆಗಳಿಗೆ (Emergency Service) ಮತ್ತು ವಿಐಪಿಗಳಿಗೆ (VIP) ಬಳಸಲಾಗುವುದು ಎಂದು ತಿಳಿದು ಬಂದಿದೆ. ರಾಷ್ಟ್ರೀಯ ಹೆದ್ದಾರಿಯ ಸುತ್ತಮುತ್ತಲು ಒಟ್ಟು ಮೂರು ಹೆಲಿಪ್ಯಾಡ್ ನಿರ್ಮಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ.

3 ಹೆಲಿಪ್ಯಾಡ್‌ ನಿರ್ಮಿಸಲು ಪ್ರಸ್ತಾವನೆ..!

ಈ ಹೆಲಿಪ್ಯಾಡ್‌ ಮೂಲಕ ಬೆಂಗಳೂರು ನಗರದ ಸುತ್ತಮುತ್ತ ಹೆದ್ದಾರಿಯಲ್ಲಿ ನಿರ್ಮಾಣವಾಗುತ್ತಿರುವ ಮೊದಲ ಹೆಲಿಪ್ಯಾಡ್‌ ಇದಾಗಲಿದೆ. ನಗರದಾದ್ಯಂತ ಕೆಲವು ಹೆದ್ದಾರಿಗಳಲ್ಲಿ ಯುದ್ಧವಿಮಾನಗಳು ಇಳಿಯುವ ಅಥವಾ ಅಲ್ಲಿಂದ ಟೇಕ್ ಆಫ್ ಮಾಡುವ ರೀತಿಯಲ್ಲಿ ಅಭಿವೃದ್ಧಿಪಡಿಸಲು ಪ್ಲ್ಯಾನ್‌ ಮಾಡಲಾಗಿದ್ದು, ಮೂರು ಹೆಲಿಪ್ಯಾಡ್ಗಳನ್ನು ನಿರ್ಮಿಸಲು ಕೇಂದ್ರ ಸಚಿವಾಲಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಇತ್ತೀಚೆಗೆ ಖಚಿತಪಡಿಸಿದ್ದಾರೆ. ಆದರೆ, ಈ ಪೈಕಿ ಸದ್ಯ ರಾಮನಗರದ ಬಳಿ ಮಾತ್ರ ಹೆಲಿಪ್ಯಾಡ್‌ಗೆ ಅನುಮತಿ ನೀಡಲಾಗಿದೆ.

ತುರ್ತು ಸಂದರ್ಭದಲ್ಲಿ ಬಳಕೆ

ಯಾವುದೇ ಅಪಘಾತ ಅಥವಾ ತುರ್ತು ಸಂದರ್ಭದಲ್ಲಿ ರೋಗಿಗಳನ್ನು ಕರೆದೊಯ್ಯಬೇಕಾದರೆ ಹೆಲಿಕಾಪ್ಟರ್ ಗಳನ್ನು ಬಳಸಬಹುದು ಎಂದು ಮೂಲಗಳು ತಿಳಿಸಿವೆ. ಆದರೆ, ಬೆಂಗಳೂರು-ಮೈಸೂರು ಹೆದ್ದಾರಿಯ ಹಲವು ಪಟ್ಟಣಗಳಲ್ಲಿ ಹೆಲಿಪ್ಯಾಡ್‌ ವ್ಯವಸ್ಥೆ ಇರಲಿಲ್ಲ. ಆದ್ದರಿಂದ, ಈ ಹೆಲಿಪ್ಯಾಡ್ ನಿರ್ಣಾಯಕ ಪರಿಸ್ಥಿತಿಗಳಲ್ಲಿ ಸಹಾಯಕವಾಗಬಹುದು ಎನ್ನಲಾಗಿದೆ.

ಇದನ್ನೂ ಓದಿ:  ಪ್ರಯಾಣಿಕರಿಗೆ Good News: ದಸರಾ ವೇಳೆಗೆ ಬೆಂಗಳೂರು-ಮೈಸೂರು Expressway ಸಂಚಾರಕ್ಕೆ ಮುಕ್ತ

ವಿಐಪಿಗಳಿಗೆ ಬಳಕೆ..!

ಎರಡನೆಯದಾಗಿ, ವಿಐಪಿ ಸಂಚಾರದ ಸಮಯದಲ್ಲಿ ಹೆದ್ದಾರಿಗಳನ್ನು ನಿರ್ಬಂಧಿಸಲಾಗುತ್ತದೆ. ಅಂತಹ ಸಂದರ್ಭಗಳಲ್ಲಿ, ವಿಐಪಿಗಳು ಚಾಪರ್‌ಗಳ ಮೂಲಕ ಪ್ರಯಾಣ ಮಾಡಬಹುದು. ಇದು ಪ್ರವೇಶ ನಿಯಂತ್ರಿತ ಹೆದ್ದಾರಿಯಾಗಿರುವುದರಿಂದ ಹೆದ್ದಾರಿಯು 16 ಸ್ಥಳಗಳಲ್ಲಿ ಪ್ರವೇಶ ಮತ್ತು ನಿರ್ಗಮನ ಬಿಂದುಗಳನ್ನು ಹೊಂದಿರುತ್ತದೆ ಎಂದು ಸಂಸದ ಪ್ರತಾಪ್‌ ಸಿಂಹ ಮಾಹಿತಿ ನೀಡಿದ್ದಾರೆ.

ಹೆದ್ದಾರಿ ಸೆಪ್ಟೆಂಬರ್‌ ವೇಳೆಗೆ ಪೂರ್ಣ..!

ಇನ್ನು, ಬೆಂಗಳೂರು - ಮೈಸೂರು ನಡುವೆ ನಿರ್ಮಾಣವಾಗುತ್ತಿರುವ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ವರ್ಷದ ದಸರಾ ವೇಳೆಗೆ ಇದನ್ನು ಪೂರ್ಣಗೊಳಿಸಲಾಗುವುದು, ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಈ ಹಿಂದೆ ಹಲವು ಬಾರಿ ಮೈಸೂರು - ಕೊಡಗು ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

ಈ ಪೈಕಿ, ಮೊದಲ ಹಂತದ ಕಾಮಗಾರಿಯು ನೈಸ್ ರಸ್ತೆ ಜಂಕ್ಷನ್ ನಿಂದ (ಕೆಂಗೇರಿ ಬಳಿ) ನಿಡಘಟ್ಟದವರೆಗೆ 6 ಪಥಗಳ ರಸ್ತೆಯನ್ನು ಒಳಗೊಂಡಿರುತ್ತದೆ ಮತ್ತು 90 ರಷ್ಟು ಪೂರ್ಣಗೊಂಡಿದೆ. ಅಲ್ಲದೆ, ಮೇ ವೇಳೆಗೆ ಈ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ವಿಶ್ವಾಸವನ್ನು ಎನ್‌ಎಚ್‌ಎಐ ಹೊಂದಿದೆ.

ಇನ್ನೊಂದೆಡೆ, ನಿಡಘಟ್ಟದಿಂದ ಮೈಸೂರು ರಿಂಗ್ ರೋಡ್ ವರೆಗಿನ ಎರಡನೇ ಹಂತದ ಕಾಮಗಾರಿ ಶೇ. 85ರಷ್ಟು ಪೂರ್ಣಗೊಂಡಿದ್ದು, ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಪೈಕಿ ಮೊದಲ ಹಂತದ ಕಾಮಗಾರಿಗೆ 3,501 ಕೋಟಿ ರೂ. ವೆಚ್ಚವಾಗಲಿದ್ದು, ಎರಡನೇ ಹಂತಕ್ಕೆ 2,920 ಕೋಟಿ ರೂ ವೆಚ್ಚವಾಗಲಿದೆ ಎಂದು ತಿಳಿದುಬಂದಿದೆ. ಹಾಗೂ, ಹೆದ್ದಾರಿಯುದ್ದಕ್ಕೂ ಪಟ್ಟಣಗಳಲ್ಲಿ ಸಂಚಾರ ದಟ್ಟಣೆಯನ್ನು ತಪ್ಪಿಸಲು ಈ ಯೋಜನೆಯು ಐದು ಬೈಪಾಸ್‌ಗಳನ್ನು ಸಹ ಹೊಂದಿರುತ್ತದೆ.

ಐದು ಬೈಪಾಸ್, 44 ಸಣ್ಣ ಸೇತುವೆ

ಬಿಡದಿ ಬೈಪಾಸ್ 6.9-ಕಿಮೀ , ರಾಮನಗರದಿಂದ ಚನ್ನಪಟ್ಟಣ 22.35 ಕಿಮೀ, ಮದ್ದೂರು 4.5 ಕಿಮೀ, ಮಂಡ್ಯ 10 ಕಿಮೀ ಮತ್ತು ಶ್ರೀರಂಗಪಟ್ಟಣ ಎಂಟು ಕಿ.ಮೀ. - ಹೀಗೆ ಐದು ಬೈಪಾಸ್‌ಗಳು ನಿರ್ಮಾಣವಾಗಲಿದೆ. ಇದಲ್ಲದೆ, ಎಂಟು ಕಿಮೀ ಉದ್ದದ ಕಾರಿಡಾರ್ ಜೊತೆಗೆ 9 ಪ್ರಮುಖ ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ನಾಲ್ಕು ರೈಲ್ವೆ ಓವರ್ ಪಾಸ್‌ಗಳು ಸಹ ಇರುತ್ತವೆ ಎಂದೂ ವರದಿಯಾಗಿದೆ.

ಇದನ್ನೂ ಓದಿ:  Kannada: ಬಿಜೆಪಿ ನಾಯಕರೇ, ಅಮಿತ್ ಶಾ ಅವರ ಗುಲಾಮರಾಗಬೇಡಿ, ಕನ್ನಡ ತಾಯಿಯ‌ ಸ್ವಾಭಿಮಾನಿ ಮಕ್ಕಳಾಗಿ: ಸಿದ್ದರಾಮಯ್ಯ

ಬೆಂಗಳೂರು - ಮೈಸೂರು ನೂತನ ರಸ್ತೆ ಹೆದ್ದಾರಿ ನಿರ್ಮಾಣ ಕಾರ್ಯ ಪೂರ್ಣಗೊಂಡ ನಂತರ, ಇದು 75 ನಿಮಿಷಗಳ ಡ್ರೈವ್ ಆಗಲಿದೆ ಎಂದು NHAI ಅಧಿಕಾರಿಗಳು ಹೇಳಿದ್ದಾರೆ. ಇನ್ನು, ರಾಮನಗರ ಬೈಪಾಸ್‌ ರಸ್ತೆಯಲ್ಲಿ ಸೌಕರ್ಯಗಳನ್ನೊಳಗೊಂಡ ಹೊಸ ಲೇ-ಬೈ ರಚಿಸಲಾಗುವುದು. ಅಲ್ಲದೆ, ಈ ಹೆದ್ದಾರಿಯಲ್ಲಿ ಕುಂಬಳಗೋಡು ಮತ್ತು ಶ್ರೀರಂಗಪಟ್ಟಣದಲ್ಲಿ ಟೋಲ್ ಬೂತ್‌ಗಳು ಬರಲಿವೆ ಎಂದು ತಿಳಿದುಬಂದಿದೆ.

Published by:Mahmadrafik K
First published: