ಬೆಂಗಳೂರು(ಆ.04): ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಾಗೂ 8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆಯ (National Handloom Day) ಅಂಗವಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯು ಆಗಸ್ಟ್ 5 ರಿಂದ 7 ರವರೆಗೆ (ಶುಕ್ರವಾರದಿಂದ ಭಾನುವಾರದವರೆಗೆ)ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿದ್ದು, ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ನಡೆಯುತ್ತಿರುವ ಕೈಮಗ್ಗ ಮೇಳವಾಗಿದೆ.
ಇದನ್ನೂ ಓದಿ: National Handloom day: ಕೈಮಗ್ಗ ಉತ್ಪನ್ನಗಳ ಬಗ್ಗೆ ನಿಮಗೆಷ್ಟು ಗೊತ್ತು?
ಕೋವಿಡ್ ನಲ್ಲಿ ನೇಕಾರರ ಜೀವನ ತತ್ತರಿಸಿ ಹೋಗಿದ್ದ ಕಾರಣ ನೇಕಾರರನ್ನ ಬೆಂಬಲಿಸಿ ರಾಜ್ಯ ಕೈಮಗ್ಗ-ಜವಳಿ ಇಲಾಖೆ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿತ್ತು. ಈಗ ಕರ್ನಾಟಕ ಸರ್ಕಾರ ಕೋವಿಡ್ ನಂತರ ರಾಜ್ಯದಲ್ಲಿ ಪ್ರಪ್ರಥಮವಾಗಿ ಆಯೋಜನೆ ಮಾಡುತ್ತಿರುವ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆ.5ರಂದು ಬೆಳಗ್ಗೆ 11.30ಕ್ಕೆ ಮಾನ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟನೆ ಮಾಡಲಿದ್ದಾರೆ.
8ನೇ ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಹಾಗೂ ನೇಕಾರರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.7ರಂದು ಬೆಳಗ್ಗೆ 11.30ಕ್ಕೆ ಮಾನ್ಯ ಕೈಮಗ್ಗ ಮತ್ತು ಜವಳಿ, ಸಕ್ಕರೆ ಸಚಿವ ಶಂಕರ್ ಬಿ. ಪಾಟೀಲ್ ಮುನೇನಕೊಪ್ಪ ಅವರು ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ: Guledagudda Khana Notebooks: ಗುಳೇದಗುಡ್ಡ ಖಣದಿಂದ ನೋಟ್ಬುಕ್! ಏನಿದರ ವಿಶೇಷ? ಎಲ್ಲಿ ಸಿಗುತ್ತೆ?
ಮೇಳದಲ್ಲಿ 26 ಸ್ಟಾಲ್ ಗಳಿರಲಿದ್ದು, ಕೈಮಗ್ಗದಲ್ಲಿ ತಯಾರು ಮಾಡುವ ಕರ್ನಾಟಕದ ವಿವಿಧ ಜಿಲ್ಲೆಗಳ ವಿಶಿಷ್ಟ ಕೈಮಗ್ಗ ಉತ್ಪನ್ನಗಳಾದ ರೇಷ್ಮೆ ಸೀರೆಗಳು, ಹತ್ತಿಯ ವಸ್ತ್ರಗಳು, ರಗ್ಗು, ಕಂಬಳಿ, ಬೆಡ್ ಶೀಟ್, ಕುರ್ತಾ ಟಾಪ್, ಶರ್ಟ್,ಲುಂಗಿ ಸೇರಿದಂತೆ ಹಲವು ಬಟ್ಟೆಗಳು ಪ್ರದರ್ಶನದಲ್ಲಿರಲಿವೆ ಹಾಗೂ ರಿಯಾಯಿತಿ ದರದಲ್ಲಿ ಲಭ್ಯ.
ಕೈಮಗ್ಗ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನವು ಬೆಳಗ್ಗೆ 11ರಿಂದ ಸಂಜೆ 7.30ರವರೆಗೆ ನಡೆಯಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ