ಮೊದಲು ಅರ್ಜುನನಾಗಿ ಬಂದಿದ್ದೆ - ಈಗ ಶ್ರೀಕೃಷ್ಣನಂತೆ ಸಾರಥಿಯಾಗಿ ಬಂದಿದ್ದೇನೆ ; ಆರ್.ಶಂಕರ್

ನಾನು  ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕಾಗಿ ತ್ಯಾಗ ಮಾಡಿದ್ದೆನೆ. ಸಿಎಂ ಯಡಿಯೂರಪ್ಪನವರು ನನ್ನನ್ನ ಎಂ ಎಲ್ ಸಿ ಮಾಡುವ ಭರವಸೆ ನೀಡಿದ್ದಾರೆ. ಮುಂದೆ ನಾನು ಅರುಣಕುಮಾರ್ ಪೂಜಾರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದರು.

G Hareeshkumar | news18-kannada
Updated:November 18, 2019, 3:49 PM IST
ಮೊದಲು ಅರ್ಜುನನಾಗಿ ಬಂದಿದ್ದೆ - ಈಗ ಶ್ರೀಕೃಷ್ಣನಂತೆ ಸಾರಥಿಯಾಗಿ ಬಂದಿದ್ದೇನೆ ; ಆರ್.ಶಂಕರ್
ಆರ್​ ಶಂಕರ್​
  • Share this:
ಹಾವೇರಿ(ನ.18): ರಾಣೆಬೆನ್ನೂರು ಕ್ಷೇತ್ರಕ್ಕೆ ಈ ಮೊದಲು ಅರ್ಜುನನಾಗಿ ಬಂದಿದ್ದೆ ಆದರೆ ಈಗ ಸಾರಥಿಯಾಗಿ ಕೃಷ್ಣನ ಪಾತ್ರವನ್ನ ಹೊಂದಿದ್ದೆನೆ. ಆ ಮೂಲಕ ಈ ಯುದ್ಧದ ಸಾರಥ್ಯವನ್ನು ನಾನೇ ವಹಿಸಿದ್ದೆನೆ ಎಂದು ಅನರ್ಹ ಶಾಸಕ ಆರ್​ ಶಂಕರ್​ ಹೇಳಿದ್ದಾರೆ.

ರಾಣೆಬೆನ್ನೂರಿನಲ್ಲಿ ಮಾತನಾಡಿದ ಅವರು, ನಾನು  ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷಕ್ಕಾಗಿ ತ್ಯಾಗ ಮಾಡಿದ್ದೆನೆ. ಸಿಎಂ ಯಡಿಯೂರಪ್ಪನವರು ನನ್ನನ್ನ ಎಂ ಎಲ್ ಸಿ ಮಾಡುವ ಭರವಸೆ ನೀಡಿದ್ದಾರೆ. ಮುಂದೆ ನಾನು ಅರುಣಕುಮಾರ್ ಪೂಜಾರ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಕೈಜೋಡಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್ ಕುಮಾರ್ ಪೂಜಾರ್ ಮಾತನಾಡಿ, ನನ್ನ ಮೇಲಿನ ಆರೋಪ ಸತ್ಯಕ್ಕೆ ದೂರವಾದದ್ದು. ಕೋಳಿವಾಡ ಅವರಿಗೆ ವಯಸ್ಸಾಗಿದೆ, ಇದೇ ಕೊನೆ ಚುನಾವಣೆ ಎಂದಿದ್ದಾರೆ. ಆದರೆ ಯುವಕರು ಸಾಕಷ್ಟು ಉತ್ಸಾಹಕತೆಯಿಂದ ಬೆಂಬಲ ನೀಡುತ್ತಿದ್ದಾರೆ. ಪಕ್ಷ ನನ್ನ ಮೇಲೆ ನಂಬಿಕೆ ಇಟ್ಟು ಟಿಕೆಟ್ ಕೊಟ್ಟಿದೆ, ನಂಬಿಕೆ ಉಳಿಸಿಕೊಳ್ಳುತ್ತೇನೆ. ಕೆ.ಬಿ.ಕೋಳಿವಾಡ ವಿರುದ್ಧ ನಾನು ಗೆಲ್ಲುತ್ತೇನೆ ಗೆಲ್ಲಲು ಯಾವುದೇ ತೊಂದರೆ ಇಲ್ಲ ಸಿಎಂ ಯಡಿಯೂರಪ್ಪನವರ ಸ್ಥಿರ ಸರಕಾರದಲ್ಲಿ ಈ ಕ್ಷೇತ್ರದಿಂದ ಒಬ್ಬ ಶಾಸಕನಿರಲಿ ಅಂತಾ‌ ಜನ ಬಯಸಿದ್ದಾರೆ ಎಂದರು.

ಜೆಡಿಎಸ್ ಅಭ್ಯರ್ಥಿಯಾಗಿ ಶಿವಾಚಾರ್ಯ ಶಿವಲಿಂಗ ಸ್ವಾಮೀಜಿ

ಬಿಜೆಪಿಯಿಂದ ಬೆಸೆತ್ತು ಜೆಡಿಎಸ್ ಅಭ್ಯರ್ಥಿಯಾಗಿ ಬಿ ಫಾರ್ಮ್​​​ ಪಡೆದಿರುವ  ಸ್ವಾಮೀಜಿ ನಡೆಯಿಂದ ಬಿಜೆಪಿ ನಾಯಕರು ಬೇಸರ ವ್ಯಕ್ತಪಡಿಸಿದ್ದು, ಸಂಸದ ಬಿ ವೈ ರಾಘವೇಂದ್ರ ಹಾಗೂ ಯು ಬಿ ಬಣಕಾರ ಅವರ ಮಾತಿಗೆ ಸ್ವಾಮೀಜಿ ಬಗ್ಗಲಿಲ್ಲ. ಮನವಲಿಸಲು ಹರಸಾಹಸ ಮಾಡಿದರು ಸಂಧಾನ ವಿಫಲವಾಯಿತು.

ಇದನ್ನೂ ಓದಿ :  ವಿಶ್ವನಾಥ್ ತ್ಯಾಗದಿಂದ ಸಿಎಂ ಆದ ಸಿದ್ದರಾಮಯ್ಯ, ಅವರನ್ನೇ ತುಳಿಯಲು ಯತ್ನಿಸಿದರು; ಶ್ರೀರಾಮುಲು ವಾಗ್ದಾಳಿ

ಮಠಕ್ಕೆ ಬಿ ವೈ ರಾಘವೇಂದ್ರ ಮತ್ತು ಯು ಬಿ ಬಣಕಾರ ಬಂದಿದ್ದು ನಿಜ ಅವರು ನಾಮಪತ್ರ ಸಲ್ಲಿಸಬೇಡಿ ಚುನಾವಣೆಗೆ ನಿಲ್ಲಬೇಡಿ ಎಂದು ಮನವಿ ಮಾಡಿದರು. ನಾನು ಮಾತು ಕೊಟ್ಟಾಗಿದೆ ಹೀಗಾಗಿ ಸ್ಪರ್ಧೆಯಿಂದ ಹಿಂದೆ ಸರಿಯೊಲ್ಲಾ ಇದರಲ್ಲಿ ಯಾರ ಒತ್ತಡ ಆಮಿಷ ಇಲ್ಲಾ ಎಂದು ಶಿವಾಚಾರ್ಯ ಶಿವಲಿಂಗ ಸ್ವಾಮೀಜಿ ಹೇಳಿದ್ದಾರೆ.
First published: November 18, 2019, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading