ಹಾಸನದಲ್ಲಿ ಗುಂಡಿನ ದಾಳಿಗೆ (Firing) ಮತ್ತೊಂದು ಬಲಿಯಾಗಿದೆ. ತಿಂಗಳ ಅಂತರದಲ್ಲಿಯೇ ಗುಂಡಿನ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ. ಸೋಮವಾರ ಸಂಜೆ ಅಪರಿಚಿತರಿಂದ ನಡೆದ ಗುಂಡಿನ ದಾಳಿಯಲ್ಲಿ ಯುವಕ ನವೀನ್(39) ಸ್ಥಳದಲ್ಲೇ ಸಾವನ್ನಪ್ಪಿದ್ದು ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹಾಸನ ಜಿಲ್ಲೆ ಸಕಲೇಶಪುರ (Sakaleshapur, Hassan) ತಾಲೂಕಿನ ತಂಬಲಗೇರಿ (Tambalageri) ಗ್ರಾಮದ ಹೊರವಲಯದಲ್ಲಿ ಗುಂಡಿನ ದಾಳಿ ನಡೆದಿದೆ. ನವೀನ್ ಸೇರಿದಂತೆ ನಾಲ್ವರು ಮೀನು ಹಿಡಿಯಲು ತೆರಳಿದ್ದ ವೇಳೆ ಅಪರಿಚಿತರಿಂದ ಗುಂಡಿನ ದಾಳಿ ನಡೆದಿದೆ. ನವೀನ್ ಜೊತೆಯಲ್ಲಿ ಅವರ ಗೆಳೆಯರಾದ ದಯಾನಂದ್, ಪದ್ಮನಾಭ್, ರಾಜಾಚಾರಿ ಇದ್ದರು. ಈ ದಾಳಿಯಲ್ಲಿ ದಯಾನಂದ್ ಮತ್ತು ಪದ್ಮಾನಾಭ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ (Private Hospital) ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೃತ ನವೀನ್ ಬಿಜೆಪಿ ಸಂಘ ಪರಿವಾರದ ಸಕ್ರಿಯ ಕಾರ್ಯಕರ್ತನಾಗಿದ್ದರಿಂದ ಹಲವು ಅನುಮಾನಗಳು ಮೂಡಿವೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರಿಂದ ತನಿಖೆ ತೀವ್ರ
ಬೇಟೆಗೆ ತೆರಳಿದ್ದವರು ಸಿಡಿಸಿದ ಗುಂಡಿನ ದಾಳಿಯೋ ಅಥವಾ ಹತ್ಯೆ ಮಾಡಲೆಂದು ನಡೆಸಿದ ಗುಂಡಿನ ದಾಳಿಯೊ ಎಂಬ ಬಗ್ಗೆ ಪೊಲೀಸರು ತನಿಖೆಯನ್ನ ನಡೆಸುತ್ತಿದ್ದಾರೆ.
ಸ್ಧಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು
ಬೆಳಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಕೊಲೆ ನಡೆದ ಸ್ಥಳದಲ್ಲಿ ರಾತ್ರಿಯೆಲ್ಲಾ ಪೊಲೀಸರನ್ನು ನಿಯೋಜಿಸಲಾಗಿತ್ತು. ಈ ಸಂಬಂಧ ಯಸಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಾಣಿಗಳ ಬೇಟೆಗೆ ಬಂದ ತಂಡದಿಂದಲೇ ಈ ಗುಂಡಿನ ದಾಳಿ ನಡೆದಿದೆ ಎಂದು ಶಂಕೆ ವ್ಯಕ್ತವಾಗಿವೆ. ಆದ್ರೆ ಈ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಭಜರಂಗದಳ ಕಾರ್ಯಕರ್ತನ ಹತ್ಯೆಗೆ ಸ್ಕೆಚ್
ಶಿವಮೊಗ್ಗದ ಜಿಲ್ಲೆಯಲ್ಲಿ ಹರ್ಷ ಹತ್ಯೆ ಘಟನೆ ಮಾಸುವ ಮುನ್ನವೇ ಮತ್ತೊಂದು ದಾಳಿ ನಡೆದಿದೆ. ಈ ಬಾರಿಯೂ ಭಜರಂಗದಳ ಕಾರ್ಯಕರ್ತನ ಮೇಲೆ ಸಮೀರ್ ಎಂಬ ಮುಸ್ಲಿಂ ಯುವಕ ಮಚ್ಚಿನಿಂದ ಹಲ್ಲೆ ಮಾಡಿ ಕೊಲ್ಲಲು ಯತ್ನಿಸಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಸಾಗರದ ಬಿ.ಎಚ್ ರಸ್ತೆಯಲ್ಲಿ ಭಾನುವಾರ ಶೌರ್ಯ ಸಂಚಲನ ಕಾರ್ಯಕ್ರಮ ನಡೆದಿತ್ತು. ಆಗ ಸುನಿಲ್ಗಾಗಿ ಕಾದು ಕುಳಿತ್ತಿದ್ದ ಸಮೀರ್, ಪ್ರವೀಣ್ ನೆಟ್ಟಾರು ಹತ್ಯೆ ರೀತಿಯಲ್ಲೇ ಕೊಲೆ ಮಾಡಲು ಸ್ಕೆಚ್ ಹಾಕಿದ್ದ.
ಪ್ರಾಣಾಪಾಯದಿಂದ ಪಾರಾದ ಸುನಿಲ್
ಅದೃಷ್ಟವಶಾತ್ ಸುನಿಲ್ ಪ್ರಾಣಾಪಾಯದಿಂದ ಪಾರಾಗಿದ್ದು, ಸಮೀರ್ಗಾಗಿ ಪೊಲೀಸರು ಹುಡುಕಾಡ್ತಿದ್ದಾರೆ. ಇನ್ನು ಆರೋಪಿ ಸಮೀರ್ನನ್ನು ಬಂಧಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿವೆ.
ಶಿವಮೊಗ್ಗದಲ್ಲಿ ಬೃಹತ್ ಶೌರ್ಯ
ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತರಿಂದ ಬೃಹತ್ ಶೌರ್ಯ ಯಾತ್ರೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ VHP ಸಂಘಟನಾ ಕಾರ್ಯದರ್ಶಿ ಬಸವರಾಜ್, ಮುಸಲ್ಮಾನರು ಈ ದೇಶವನ್ನು ಮಾತ್ರ ಲೂಟಿ ಮಾಡಲಿಲ್ಲ. ಬಾಬರ್ನಂತವರು ದೇಶದ ಶ್ರದ್ಧಾ ಕೇಂದ್ರಗಳು, ಸಂಸ್ಕೃತಿ ನಾಶ ಮಾಡುವ ಕೆಲಸ ಮಾಡಿದ್ರು.
ಇದನ್ನೂ ಓದಿ: PM Modi: ಬಿಜೆಪಿಯ ಲಕ್ಕಿ ಗ್ರೌಂಡ್ನಲ್ಲಿ ಮೋದಿ ಕಾರ್ಯಕ್ರಮ; ವಾಜಪೇಯಿ ಪಿಎಂ ಆಗಿದ್ದಾಗಲೂ ಇಲ್ಲಿಗೆ ಬಂದಿದ್ರು!
ದೇಶ, ಮಂದಿರ, ಸಂಸ್ಕೃತಿ ರಕ್ಷಣೆಗೆ ಸಾವಿರಾರು ಜನರು ಪ್ರಾಣ ತೆತ್ತಿದ್ದಾರೆ. ಮತಾಂತರ ತಡೆ, ಗೋ ರಕ್ಷಣೆ, ಸಂಸ್ಕೃತಿ ರಕ್ಷಣೆಗೆ ಭಜರಂಗದಳದ ಕಾರ್ಯಕರ್ತರು ನಿರಂತರವಾಗಿ ಕೆಲಸ ಮಾಡ್ತಿದ್ದಾರೆ ಅಂತ ಹೇಳಿದ್ದಾರೆ.
ಗುಂಡಿಗೆ ಬಿದ್ದು ಬಾಲಕರು ಸಾವು
ಚರಂಡಿಗಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ಇಬ್ಬರು ಬಾಲಕರು ಸಾವನ್ನಪ್ಪಿದ ಘಟನೆ ರಾಯಚೂರಲ್ಲಿ ನಡೆದಿದೆ. ಬ್ಯಾಗವಾಟ್ ಗ್ರಾಮದ 8 ವರ್ಷದ ಅಜಯ್, 6 ವರ್ಷದ ಸುರೇಶ್ ಶಾಲೆ ಬಳಿ ಆಟವಾಡ್ತಿದ್ದರು. ಆಗ ಚರಂಡಿ ಕಾಮಗಾರಿ ಮಾಡಲು ತೋಡಲಾಗಿದ್ದ ಗುಂಡಿಯೊಳಗೆ ಬಾಲಕರು ಬಿದ್ದು ಮೃತಪಟ್ಟಿದ್ದಾರೆ.
ಎರಡ್ಮೂರು ತಿಂಗಳು ಹಿಂದೆಯೇ ಚರಂಡಿ ಕಾಮಗಾರಿಗೆಂದು ಗುಂಡಿ ತೋಡಲಾಗಿತ್ತು. ಗುಂಡಿ ಮುಚ್ಚದ ಕಾರಣ ನೀರು ನಿಂತಿತ್ತು. ಬಾಲಕರ ಸಾವಿಗೆ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ