ಬೆಂಗಳೂರು (ಮಾ. 12): ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೇ ಆನೆಗೆ ಗುಂಡು ಹಾರಿಸಿ, ಅದನ್ನು ವಿಡಿಯೋ ಮಾಡಿ ವಿಕೃತಿ ಮೆರೆದಿದ್ದಾರೆ. ತಮಾಷೆಗಾಗಿ ಆನೆಯ ಮೇಲೆ ಗುಂಡು ಹಾರಿಸಿ, ಅದನ್ನು ಹೆದರಿಸಿ, ಓಡಿಸಿದ ಸಿಬ್ಬಂದಿಯ ಅಮಾನವೀಯ ವರ್ತನೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಅಧಿಕಾರಿಗಳು ಆ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ಬಂಡೀಪುರ ಅಭಯಾರಣ್ಯದ ಯಡಿಯಾಲ ವಲಯದಲ್ಲಿ ಈ ಘಟನೆ ನಡೆದಿತ್ತು. ಜೀಪಿನಲ್ಲಿ ಗಸ್ತು ತಿರುಗುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ರಹೀ ಎಂಬಾತ ಈ ಕೃತ್ಯ ಎಸಗಿದ್ದ. ಅರಣ್ಯ ಇಲಾಖೆ ಅಳವಡಿಸಿದ್ದ ರೈಲ್ವೆ ಬ್ಯಾರಿಕೇಡ್ ಒಳಗಿದ್ದ ಒಂಟಿ ಆನೆ ಓಡಿಬರುತ್ತಿದ್ದಾಗ ಅದಕ್ಕೆ ಫೈರಿಂಗ್ ಮಾಡಿದ್ದ ರಹೀಂ ಜೋರಾಗೆ ಕೇಕೆ ಹಾಕಿ ನಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಗುಂಡಿನ ಸದ್ದಿಗೆ ಹೆದರಿದ್ದ ಆನೆ ಘೀಳಿಡುತ್ತಾ ಕಾಡಿನೊಳಗೆ ಓಡಿಹೋಗಿತ್ತು. ಅದನ್ನು ಇನ್ನೋರ್ವ ಸಿಬ್ಬಂದಿ ವಿಡಿಯೋ ಮಾಡಿಕೊಂಡಿದ್ದ.
ಇದನ್ನೂ ಓದಿ: ತುಮಕೂರಿನಂತೆಯೇ ಚಿಕ್ಕಮಗಳೂರಿನಲ್ಲೂ ಅಮಾನವೀಯ ಘಟನೆ; 4 ಎಕರೆ ಜಾಗದಲ್ಲಿ ಹೂ ಬಿಟ್ಟ ಕಾಫಿ ಗಿಡಗಳು ನೆಲಸಮ
ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಲ್ಲದೆ, ಅರಣ್ಯ ಇಲಾಖೆಯ ಸಿಬ್ಬಂದಿಯ ವರ್ತನೆ ಭಾರೀ ಚರ್ಚೆಗೆ ಒಳಗಾಗಿತ್ತು. ಬ್ಯಾರಿಕೇಡ್ನ ಹೊರಗೆ ರಸ್ತೆಯಲ್ಲಿ ಸಾಗುತ್ತಿದ್ದ ಜೀಪಿನೊಳಗಿದ್ದ ಸಿಬ್ಬಂದಿ ಆನೆಗೆ ಗುರಿ ಇಟ್ಟು ಶೂಟ್ ಮಾಡುವ ದೃಶ್ಯ ವೈರಲ್ ಆಗಿತ್ತು. ಮಾರ್ಚ್ 7ರಂದು ಈ ಘಟನೆ ನಡೆದಿತ್ತು.
How’s this even possible? Is this really someone’s idea of fun ?? Karnataka FD , please look into the matter urgently. The culprits need to nabbed and punished immediately @aranya_kfd @moefcc @CentralIfs pic.twitter.com/phDKCxhn0L
— Randeep Hooda (@RandeepHooda) March 11, 2020
Umesh, who shared the video on social media, was engaged in filming the incident.
"We have removed Rahim, a temporary staff. We will take action against Umesh, a regular employee of the department, after an internal enquiry," said Bandipur field director T Balchandra.
— Randeep Hooda (@RandeepHooda) March 11, 2020
ಬಂಡೀಪುರದಲ್ಲಿ ಆನೆಯ ಮೇಲೆ ಗುಂಡು ಹಾರಿಸುತ್ತಿರುವ ವಿಡಿಯೋವನ್ನು ಬಾಲಿವುಡ್ ನಟ ರಣದೀಪ್ ಹೂಡಾ ಕೂಡ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡಿದ್ದರು. ಕರ್ನಾಟಕ ಅರಣ್ಯ ಇಲಾಖೆಗೆ ಟ್ವಿಟ್ಟರ್ನಲ್ಲಿ ಟ್ಯಾಗ್ ಮಾಡಿದ್ದ ಅವರು, ಆ ಸಿಬ್ಬಂದಿಗೆ ಕೂಡಲೇ ಶಿಕ್ಷೆ ನೀಡಿ, ಪ್ರಾಣಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಮನವಿ ಮಾಡಿದ್ದರು.
The method adopted reeks of immaturity. One is they dont need to shoot towards the direction of the elephant.Secondly, the thrill they derive of the act is clearly evident.If the act was correct in the eyes of the forest,they wouldnt have made this comment to a bangalore scribe
— Randeep Hooda (@RandeepHooda) March 11, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ