Firing: ಶಿಗ್ಗಾಂವಿಯಲ್ಲಿ ಮತ್ತೆ ಗುಂಡಿನ ಸದ್ದು, ಕರೆಂಟ್ ಹೋದ ಟೈಮ್​ನಲ್ಲಿ ಮಹಿಳೆ ಮೇಲೆ ಫೈರಿಂಗ್

ಮುಸುಕುಧಾರಿಗಳು ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಮನೆಯಲ್ಲಿದ್ದ 14 ಜನರು ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಬೆಚ್ಚಿಬಿದ್ದ ಗ್ರಾಮಸ್ಥರು ಸಲ್ಮಾಳ ಮನೆ ಬಳಿ ಜಮಾಯಿಸಿದ್ರು.

ಮಹಿಳೆ ಮೇಲೆ ಫೈರಿಂಗ್​

ಮಹಿಳೆ ಮೇಲೆ ಫೈರಿಂಗ್​

  • Share this:
ಹಾವೇರಿ (ಮೇ 26): ರಾಜ್ಯದಲ್ಲಿ ಮಹಿಳೆ ಮೇಲೆ ಗುಂಡಿನ ದಾಳಿ ​(Firing) ನಡೆದಿದ್ದು ರಾಜ್ಯವನ್ನೇ ಬೆಚ್ಚಿ ಬೀಳಿಸುವಂತೆ ಮಾಡಿದೆ. ಕೂದಲೆಳೆ ಅಂತರದಲ್ಲಿ ಮಹಿಳೆ (Women) ಬಚಾವ್​ ಆಗಿದ್ದಾಳೆ. ಹಾವೇರಿ (Haveri) ಜಿಲ್ಲೆ ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದಲ್ಲಿ ಫೈರಿಂಗ್ ನಡೆದಿದೆ. ಗ್ರಾಮದ ಮಹಿಳೆ ಸಲ್ಮಾ (Salma) ಮನೆಯ ಕಟ್ಟೆ ಮೇಲೆ ಕುಳಿತಿದ್ದ ವೇಳೆ ಬೈಕ್ ಮೇಲೆ ಬಂದಿದ್ದ ಮುಸುಕುಧಾರಿಗಳು ಗುಂಡು ಹಾರಿಸಿದ್ದಾರೆ. ಅದೇ ವೇಳೆ ಮನೆಯಲ್ಲಿ ಕರೆಂಟ್ (Current) ಹೋಗಿತ್ತು, ಕತ್ತಲಿನಲ್ಲಿ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಮಹಿಳೆ ಮನೆಯೊಳಗೆ ಓಡಿ ಹೋಗಿದ್ದಾಳೆ. ಇದರಿಂದಾಗಿ ಮನೆಯ ಗೋಡೆಗೆ ಒಳಗೆ ಗುಂಡು ಹೊಕ್ಕಿದೆ.

ಗುಂಡಿನ ದಾಳಿಯಿಂದ ಮನೆ ಮಂದಿ ಬಚಾವ್​

ಮುಸುಕುಧಾರಿಗಳು ರಾತ್ರಿ ನಡೆಸಿದ ಗುಂಡಿನ ದಾಳಿಯಲ್ಲಿ ಮಹಿಳೆ ಹಾಗೂ ಮನೆಯಲ್ಲಿದ್ದ 14 ಜನರು ಪಾರಾಗಿದ್ದಾರೆ. ಗುಂಡಿನ ಸದ್ದು ಕೇಳುತ್ತಿದ್ದಂತೆ ಬೆಚ್ಚಿಬಿದ್ದ ಗ್ರಾಮಸ್ಥರು ಸಲ್ಮಾಳ ಮನೆ ಬಳಿ ಜಮಾಯಿಸಿದ್ರು. ಅಷ್ಟರಲ್ಲಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಪತಿ ಬಿಟ್ಟು ತವರು ಮನೆಯಲ್ಲಿರೋ ಸಲ್ಮಾ

ಸಲ್ಮಾಳಿಗೆ ಕೆಲವು ವರ್ಷಗಳ ಹಿಂದೆ ಮದುವೆ ಆಗಿತ್ತು. ಮೂವರು ಮಕ್ಕಳಿದ್ದಾರೆ. ಪತಿ  ಜೊತೆ ಜಗಳ ಮಾಡಿಕೊಂಡಿದ್ದ ಸಲ್ಮಾ ಎರಡು ವರ್ಷಗಳಿಂದ ತವರು ಮನೆ ಹುಲಗೂರು ಗ್ರಾಮದಲ್ಲಿ ವಾಸವಾಗಿದ್ದಾರೆ. ಆದರೆ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಇದ್ದಕ್ಕಿದ್ದಂತೆ ಮುಸುಕುಧಾರಿಗಳು ಬಂದೂಕಿನಿಂದ ಫೈರಿಂಗ್ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಸಲ್ಮಾ, ಆಕೆಯ ಮಕ್ಕಳು, ತಂದೆ ಮತ್ತು ಅಣ್ಣ ತಮ್ಮಂದಿರು ಸೇರಿದಂತೆ ಒಟ್ಟು 14 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: Hijab Controversy: ಮಂಗಳೂರು ವಿವಿಯಲ್ಲಿ ಮತ್ತೆ ಹಿಜಾಬ್ ವಿವಾದ, ವಿದ್ಯಾರ್ಥಿಗಳಿಂದ ಪ್ರತಿಭಟನೆ

ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ

ಘಟನೆಯಲ್ಲಿ ದುಷ್ಕರ್ಮಿಗಳ ಬಂದೂಕಿನಿಂದ ಒಂದು ಸುತ್ತು ಗುಂಡು ಹಾರಿದೆ. ವಿಷಯ ತಿಳಿಯುತ್ತಿದ್ದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಎಸ್‍ಪಿ ವಿಜಯ್‍ಕುಮಾರ್ ಸೇರಿದಂತೆ ಶಿಗ್ಗಾಂವಿ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಶಿಗ್ಗಾಂವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಶಿಗ್ಗಾವಿಯಲ್ಲಿ ಎರಡನೇ ಶೂಟೌಟ್​ ಪ್ರಕರಣ

ಕಳೆದ ಒಂದು ತಿಂಗಳ ಹಿಂದಷ್ಟೇ ಶಿಗ್ಗಾವಿ ಪಟ್ಟಣದ ರಾಜಶ್ರೀ ಥಿಯೇಟರ್ ನಲ್ಲಿ ಶೂಟೌಟ್ ನಡೆದಿತ್ತು. ಕೆ.ಜೆ.ಎಫ್ ಫಿಲಂ ನೋಡುವಾಗಲೇ ಕ್ಷುಲ್ಲಕ ಕಾರಣಕ್ಕಾಗಿ ವಸಂತ್ ಅನ್ನುವ ಯುವಕನ ಮೇಲೆ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್ ಎನ್ನುವ ವ್ಯಕ್ತಿ ಪಿಸ್ತೂಲ್ ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದ.

ಸಾವು‌ಬದುಕಿನ ನಡುವೆ ಹೋರಾಡಿ ವಸಂತ್ ಸಾವು ಗೆದ್ದಿದ್ದಾರೆ. ಇತ್ತ ಗುಂಡು ಹಾರಿಸಿದ್ದ ಆರೋಪಿಯನ್ನು ಪೊಲೀಸರು ಕೆಲ ದಿನಗಳ ಹಿಂದಷ್ಟೆ ಬಂಧಿಸಿದ್ದರು. ಈಗ ಈ ಪ್ರಕರಣ ಮಾಸುವ ಬೆನ್ನಲ್ಲೇ ಶಿಗ್ಗಾವಿ ತಾಲೂಕಿನ ಪುಟ್ಟ ಗ್ರಾಮ ಹುಲಗೂರಿ‌ನಲ್ಲಿ ಫೈರಿಂಗ್ ನಡೆದಿರೋದು‌ ಜನರನ್ನು ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: H.D Devegowda: ಬೆಂಗಳೂರಲ್ಲಿ ಕೆಸಿಆರ್-ಹೆಚ್​ಡಿಡಿ ಭೇಟಿ, ತೃತೀಯ ರಂಗ ಬಲಪಡಿಸುವ ಕುರಿತು ಮಾತುಕತೆ

ಗುಂಡಿನ ಸದ್ದಿಗೆ ಬೆಚ್ಚಿಬಿದ್ದ ಜನ

ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಯುವಕ ವಸಂತ್ ಮೇಲೆ ಗುಂಡು ಹಾರಿಸಿ ಮಂಜುನಾಥ್ ಅಲಿಯಾಸ್ ಮಲೀಕ್ ಪಾಟೀಲ್ ಪರಾರಿಯಾಗಿದ್ದ. ಆರೋಪಿ ಕೈಗೆ ಪಿಸ್ತೂಲು ಹೇಗೆ ಸಿಕ್ತು ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಬಹಳ ಜೋರಾಗೇ ನಡೆದಿತ್ತು. ಈಗ ಹುಲಗೂರು ಗ್ರಾಮದಲ್ಲಿ ಮಹಿಳೆ ಮೇಲೆ ಬಂದೂಕಿನಿಂದ ಗುಂಡು ಹಾರಿದೆ. ಹಾಗಾದರೆ ಮುಸುಕು ದಾರಿಗಳಿಗೆ ಬಂದೂಕು ಸಿಕ್ಕಿದ್ದಾದರೂ ಹೇಗೆ? ಅದು ಪರವಾನಿಗೆ ಪಡೆದ ಬಂದೂಕಾ? ಅಥವಾ ಅನದೀಕೃತವಾಗಿ ಸಿಕ್ಕಿತ್ತಾ? ಪದೇ ಪದೇ ಇಂಥ ಘಟನೆಗಳು ನಡೆಯುತ್ತಿರೋದ್ಯಾಕೆ? ಅನ್ನೋ ಪ್ರಶ್ನೆ ಜನರಲ್ಲಿ ಕಾಡುತ್ತಿದೆ.
Published by:Pavana HS
First published: