ಬೆಂಗಳೂರು; ಅವರಿಬ್ಬರು ನಟೋರಿಯಸ್ ರೌಡಿಗಳು. ಇಬ್ಬರು ಆರೋಪಿಗಳ ಮೇಲೆ ಸಾಲು ಸಾಲು ಕೇಸ್ ದಾಖಲಾಗಿದ್ದವು. ಅವರಿಗಾಗಿ ಪೊಲೀಸರು ಇನ್ನಿಲ್ಲದೆ ಹುಡುಕಾಟ ನಡೆಸಿದ್ದರು. ಅದೇಗೊ ಏನೋ ಇಬ್ಬರೂ ಸಹ ಅಪಾರ್ಟ್‌ಮೆಂಟ್ ಇರೋ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದರು. ಆದರೆ ಈ ವೇಳೆ ಸಿನಿಮಾ ಸ್ಟೈಲ್ ನಲ್ಲಿ ಇಬ್ಬರ ಮಧ್ಯೆ ವಾರ್ ಆಗಿದ್ದು ಗುಂಡಿನ ಮೊರೆತ ಕೇಳಿ ಬಂದಿದೆ.
ಹತ್ತಾರು ಪ್ರಕರಣಗಳಲ್ಲಿ ಭಾಗಿಯಾಗಿ ಸಾಲು ಸಾಲು ಕೇಸ್ ಗಳಲ್ಲಿ ಬೇಕಾಗಿರೋ ಅಸಾಮಿಗಳ ಪತ್ತೆಗಾಗಿ ಖಾಕಿ ಪಡೆ ವಿಶೇಷ ತಂಡವೊಂದನ್ನು ರಚಿಸಿಕೊಂಡು ನಗರದಾದ್ಯಂತ ಹುಡುಕಾಟ ಸಹ ನಡೆಸಿತ್ತು. ಆದರೆ ಪೊಲೀಸರ ಕಣ್ತಪ್ಪಿಸಿ ಪರಾರಿ ಆಗ್ತಿದ್ದ ಅಸಾಮಿಗಳು ಇರುವ ಸ್ಥಳದ ಮಾಹಿತಿ ಸಿಕ್ಕಿತ್ತು. ಅದರಂತೆ ದಾಳಿ ನಡೆಸಿದ ಪೊಲೀಸರು ಮತ್ತು ರೌಡಿಗಳ ನಡುವೆ ಫೈರಿಂಗ್ ನಡೆದಿದೆ. ಆಗ ಪೊಲೀಸರು ರೌಡಿಗಳಿಗೆ ಗುಂಡು ಹಾರಿಸಿ, ಬಂಧಿಸಿದ್ದಾರೆ.
ಗುಂಡೇಟು ತಿಂದ ನಟೋರಿಯಸ್ ರೌಡಿಗಳ ಹೆಸರು ಮೆಹರಾಜ್ ಮತ್ತು ಅಬ್ರಾರ್. ಈ ಇಬ್ಬರು ಆರೋಪಿಗಳು ಡಿಸೆಂಬರ್ 30 ರಂದು ಕೆ ಜಿ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸುಲ್ತಾನ್ ಎಂಬಾತನನ್ನು ಕೊಲೆ ಮಾಡಿದ್ರಂತೆ. ಕೊಲೆ ಬಳಿಕ ಇಬ್ಬರು ಸಹ ತಲೆಮರೆಸಿಕೊಂಡು ನಗರದ ಹಲವೆಡೆ ಸುತ್ತಾಡಿದ್ದರು. ಇಬ್ಬರು ಆರೋಪಿಗಳ ಮೇಲೆ 35 ಕೇಸ್ ಗಳು ಇದ್ದಿದ್ರಿಂದ ಇವರನ್ನ ಬಂಧಿಸಲು ಕೆ ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ವಿಶೇಷ ತಂಡ ರಚನೆ ಮಾಡಿ ನಗರದಾದ್ಯಂತ ಕಳೆದ 15 ದಿನಗಳಿಂದ ನಿರಂತರವಾಗಿ ಎಲ್ಲಾ ಕಡೆ ಶೋಧ ನಡೆಸಿದರು. ಆದರೆ ಆರೋಪಿಗಳ ಸುಳಿವು ಮಾತ್ರ ಪತ್ತೆಯಾಗಿರಲಿಲ್ಲ. ಇಂದು ಆಚನಾಕ್ ಆಗಿ ಮೆಹರಾಜ್ ಮತ್ತು ಅಬ್ರಾರ್ ಇಬ್ಬರು ಸಹ ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಮಂಜುನಾಥನಗರದಲ್ಲಿ ಇರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ಕೂಡಲೇ ಪೊಲೀಸರ ಒಂದು ತಂಡ ಪುಟ್ಟೇನಹಳ್ಳಿಗೆ ದೌಡಾಯಿಸಿ ಆರೋಪಿಗಳಿದ್ದ ಮನೆಯನ್ನ ರೌಂಡಪ್ ಮಾಡಿ ಒಳ ನುಗ್ಗಿದ್ದಾರೆ.
ಇದನ್ನು ಓದಿ: ಮಮತಾ ಬ್ಯಾನರ್ಜಿ ಅರ್ಧ ಲಕ್ಷಕ್ಕೂ ಅಧಿಕ ಮತಗಳಿಂದ ಸೋಲುತ್ತಾರೆ, ಇಲ್ಲವಾದಲ್ಲಿ ರಾಜಕೀಯ ತೊರೆಯುತ್ತೇನೆ; ಸುವೇಂದು ಅಧಿಕಾರಿ
ಕೆ ಜಿ ಹಳ್ಳಿ ಠಾಣೆಯ ಪೊಲೀಸರು ಬಾಗಿಲು ತೆಗೆದು ಮನೆಯೊಳಗೆ ನುಗ್ಗುತ್ತಿದ್ದಂತೆ ಆರೋಪಿ ಮೆಹರಾಜ್ ತನ್ನ ಬಳಿಯಿದ್ದ ಕಂಟ್ರಿ ಮೇಡ್ ಪಿಸ್ತೂಲ್ ನಿಂದ ಎಎಸ್ಐ ದಿನೇಶ್ ಶೆಟ್ಟಿ ಮೇಲೆ ಒಂದು ಸುತ್ತು ಗುಂಡು ಹಾರಿಸಿದ್ದಾನೆ. ಈ ವೇಳೆ ಕೂದಲೆಳೆಯಲ್ಲಿ ಎಎಸ್ಐ ದಿನೇಶ್ ಪಾರಾಗಿದ್ದು, ಕೂಡಲೇ ತನ್ನ ಬಳಿಯಿದ್ದ ರಿವಾಲ್ವರ್ ನಿಂದ ಆರೋಪಿ ಮೆಹರಾಜ್ ತಲೆ ಭಾಗಕ್ಕೆ ಗುಂಡು ಹಾರಿಸಿದ್ದಾರೆ. ಈ ವೇಳೆ ಗುಂಡು ಮೆಹರಾಜ್ ಕಿವಿಗೆ ತಾಗಿ ಹೊರ ಹೋಗಿದ್ದು ಆರೋಪಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ