Elephant Balarama: ದಸರಾ ಆನೆ ಬಲರಾಮನಿಗೆ ಗುಂಡೇಟು ಹೊಡೆದವನ ಬಂಧನ

ಆರೋಪಿಯ ಬಂಧನ

ಆರೋಪಿಯ ಬಂಧನ

ಗುರುವಾರ ಆನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಬಲರಾಮ 14 ಬಾರಿ ಅಂಬಾರಿಯನ್ನು ಹೊತ್ತಿದ್ದನು.

  • Share this:

ದಸರಾ ಆನೆ (Dasara Elephant) ಬಲರಾಮನಿಗೆ ಗುಂಡು ಹೊಡೆದಿದ್ದ ವ್ಯಕ್ತಿಯನ್ನು ಅರಣ್ಯ ಅಧಿಕಾರಿಗಳು (Forest Officers) ಬಂಧಿಸಿದ್ದಾರೆ. ಜಮೀನಿನ ಮಾಲೀಕ ಸುರೇಶ್ ಎಂಬಾತ ಆನೆ ಮೇಲೆ ಗುಂಡು ಹೊಡೆದಿದ್ದನು. ವನ್ಯ ಜೀವಿ ಕಾಯ್ದೆ ಉಲ್ಲಂಘನೆ (Violation of Wildlife Act) ಆರೋಪದಲ್ಲಿ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧನ ಮಾಡಿದ್ದಾರೆ. ಬಂಧಿತನಿಂದ ಸಿಂಗಲ್ ಬ್ಯಾರಲ್ ಬಂದೂಕು, ಕಾರ್ಟ್ರಿಜ್ ವಶಕ್ಕೆ ಪಡೆಯಲಿದೆ. ಸದ್ಯ ಆರೋಪಿಗೆ ನ್ಯಾಯಾಲಯ 14 ನ್ಯಾಯಾಂಗ ಬಂಧನ (Judicial Custody) ನೀಡಿದೆ. ಗುರುವಾರ ಆನೆ ಮೇಲೆ ಗುಂಡಿನ ದಾಳಿ ನಡೆದಿತ್ತು. ಶುಕ್ರವಾರ ಆರೋಪಿಯನ್ನು ಬಂಧಿಸಲಾಗಿದೆ. ಬಲರಾಮ 14 ಬಾರಿ ಅಂಬಾರಿಯನ್ನು ಹೊತ್ತಿದ್ದನು.


ಪಿರಿಯಾಪಟ್ಟಣ ತಾಲ್ಲೂಕಿನ ಭೀಮನಕಟ್ಟೆ ಸಾಕಾನೆ ಶಿಬಿರದ ಬಲರಾಮನನ್ನು ಇರಿಸಲಾಗಿತ್ತು. ಶಿಬಿರದ ಸಮೀಪದಲ್ಲಿರುವ ಸುರೇಶ್​ ಮಾಲೀಕತ್ವದ ಜಮೀನಿಗೆ ಬಲರಾಮ ಹೋಗಿದ್ದ. ಈ ವೇಳೆ ಸಿಟ್ಟಿಗೆದ್ದ ಮಾಲೀಕ ಸುರೇಶ್ ಗುಂಡು ಹಾರಿಸಿದ್ದನು.


ಬಲರಾಮನ ಆರೋಗ್ಯದಲ್ಲಿ ಚೇತರಿಕೆ


ಆನೆಯ ತೊಡೆ ಬಳಿ ಗುಂಡು ಹೊಕ್ಕಿತ್ತು. ಸದ್ಯ ಬಲರಾಮನಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಪಶುವೈದ್ಯಾಧಿಕಾರಿ ಡಾ.ರಮೇಶ್‌ರಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಸದ್ಯ ಬಲರಾಮ ಚೇತರಿಸಿಕೊಂಡಿದ್ದಾನೆ ಎಂದು ಡಾ.ರಮೇಶ್ ಮಾಹಿತಿ ನೀಡಿದ್ದಾರೆ.

Published by:Mahmadrafik K
First published: