Fire at Air show: ಏರ್​ ಶೋ ಪಾರ್ಕಿಂಗ್​ ಬಳಿ ಬೆಂಕಿ, 100 ಕ್ಕೂ ಹೆಚ್ಚು ಕಾರುಗಳು ಭಸ್ಮ; ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತ

Fire in Bangalore Air Show: 200ಕ್ಕೂ ಹೆಚ್ಚು ಕಾರು ಹಾಗೂ ಎರಡು ಬೈಕ್​​ಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. 

Latha CG | news18
Updated:February 23, 2019, 3:09 PM IST
Fire at Air show: ಏರ್​ ಶೋ ಪಾರ್ಕಿಂಗ್​ ಬಳಿ ಬೆಂಕಿ, 100 ಕ್ಕೂ ಹೆಚ್ಚು ಕಾರುಗಳು ಭಸ್ಮ; ತಾತ್ಕಾಲಿಕವಾಗಿ ವಿಮಾನ ಹಾರಾಟ ಸ್ಥಗಿತ
ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿಯುತ್ತಿರುವ ಕಾರುಗಳು
Latha CG | news18
Updated: February 23, 2019, 3:09 PM IST
ಬೆಂಗಳೂರು,(ಫೆ.23): ಏರ್​ ಶೋ ಪಾರ್ಕಿಂಗ್​ ಬಳಿ ಅಗ್ನಿ ಅವಘಡ ಸಂಭವಿಸಿದೆ. ಗೇಟ್​ ನಂಬರ್​  05 ರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 100 ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ.  ಹೀಗಾಗಿ ತಾತ್ಕಾಲಿಕವಾಗಿ ಏರ್​ ಶೋ ಸ್ಥಗಿತಗೊಳಿಸಲಾಗಿದೆ.

ಹುಲ್ಲಿಗೆ ಬೆಂಕಿ ಬಿದ್ದಿದ್ದು, ಅದು ವ್ಯಾಪಿಸಿ ಪಾರ್ಕಿಂಗ್ ನಲ್ಲಿ ನಿಂತಿದ್ದ ಕಾರುಗಳಿಗೆ  ತಗುಲಿದೆ. ಅದೃಷ್ಟವಶಾತ್​ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ಧಾರೆ.

ಸುಮಾರು 100 ಕ್ಕೂ ಹೆಚ್ಚು ಕಾರುಗಳು ಹಾಗೂ ಎರಡು ಬೈಕ್​​ಗಳಿಗೆ ಬೆಂಕಿ ತಗುಲಿದೆ ಎನ್ನಲಾಗಿದೆ. ಸ್ಥಳಕ್ಕೆ ಪೋಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ.   ದಟ್ಟ ಹೊಗೆ ಆವರಿಸಿದ್ದ ಹಿನ್ನಲೆ ಏರ್ ಶೋ ಪ್ರೇಕ್ಷಕರು ಆತಂಕಗೊಂಡಿದ್ದಾರೆ.

ಬೆಂಕಿ ಅವಘಡ ಹಿನ್ನೆಲೆ ಡಿಜಿಪಿ ಎಂ.ಎನ್​. ರೆಡ್ಡಿ ಟ್ವೀಟ್​ ಮಾಡಿದ್ದಾರೆ. ಏರ್​ ಶೋ ಪಾರ್ಕಿಂಗ್​ ಬಳಿ ಬೆಂಕಿ ಅವಘಡ ಸಂಭವಿಸಿದೆ. ಸುಮಾರು 20 ಕ್ಕೂ ಹೆಚ್ಚು ಕಾರುಗಳೂ ಸುಟ್ಟು ಭಸ್ಮವಾಗಿವೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ಧಾರೆ ಎಂದು ಹೇಳಿದ್ಧಾರೆ.

Loading...ಏರ್ ಶೋ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಅನಾಹುತದಲ್ಲಿ ಒಟ್ಟು 100ಕ್ಕೂ ಹೆಚ್ಚು ಕಾರುಗಳು ಸುಟ್ಟುಹೋಗಿವೆ. ನಡುವೆ ಕೆಲವು ಕಾರುಗಳನ್ನು ತೆಗೆಯುವ ಮೂಲಕ ಬೆಂಕಿಯನ್ನು ಹತೋಟಿಗೆ ತರಲಾಗಿದೆ. ಒಣಗಿದ ಹುಲ್ಲು ಮತ್ತು ಜೋರಾಗಿ ಬೀಸಿದ ಗಾಳಿಯಿಂದಾಗಿ ಈ ಅನಾಹುತ ನಡೆದಿದೆ ಎಂದು ರಕ್ಷಣಾ ಇಲಾಖೆ  ಮಾಹಿತಿ ನೀಡಿದೆ.

First published:February 23, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...