ಗದಗದಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಮಾರುಕಟ್ಟೆ; 40ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿ

ಮಾರುಕಟ್ಟೆಯಲ್ಲಿರುವ ಕಿರಾಣಿ ಶಾಪ್, ಬೇಕರಿ, ಹಣ್ಣಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳಿಗೆ ಬೆಂಕಿ ಬಿದ್ದಿದೆ. ಅಂಗಡಿಯಲ್ಲಿರುವ ಹಣ ಕೂಡ ಬೆಂಕಿಗೆ ಆಹುತಿಯಾಗಿದೆ. ಸುಮಾರು 40ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ.

sconetwork18 | news18-kannada
Updated:February 4, 2020, 9:53 AM IST
ಗದಗದಲ್ಲಿ ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಮಾರುಕಟ್ಟೆ; 40ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿ
ಸಾಂದರ್ಭಿಕ ಚಿತ್ರ
  • Share this:
ಗದಗ (ಫೆ. 4): ಗದಗದ ಮಾರುಕಟ್ಟೆಯಲ್ಲಿ ಇಂದು ಮುಂಜಾನೆ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಬೆಳ್ಳಂಬೆಳಗ್ಗೆ ಹೊತ್ತಿ ಉರಿದ ಮಾರುಕಟ್ಟೆಯಲ್ಲಿನ ಅಂಗಡಿಗಳ ಮಾಲೀಕರು ಹಾಗೂ ಸ್ಥಳೀಯರು ಬೆಂಕಿ ಆರಿಸಲು ಪ್ರಯತ್ನ ಪಟ್ಟಿದ್ದಾರೆ. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ.

ಬೆಂಕಿ ಆರಿಸುವ ಕಾರ್ಯ ಮುಂದುವರೆದಿದ್ದು, 6 ಅಗ್ನಿಶಾಮಕದಳದ ವಾಹನಗಳು ಕಾರ್ಯಾಚರಣೆ ನಡೆಸಿವೆ. ಗದಗದ ಗ್ರೇನ್ ಮಾರುಕಟ್ಟೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಇನ್ನೂ ಬೆಂಕಿಯನ್ನು ಆರಿಸುವ ಕಾರ್ಯ ಮುಂದುವರೆದಿದೆ. 6 ಅಗ್ನಿ ಶಾಮಕ ವಾಹನದಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ವಿದ್ಯುತ್​ ಶಾರ್ಟ್​ ಸರ್ಕ್ಯೂಟ್​ನಿಂದ ದುರಂತ ಸಂಭವಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಕೊರೋನಾ ಭೀತಿ; ಚೀನಾದಿಂದ ವಾಪಾಸಾದ ಟೆಕ್ಕಿ ಸಂದೀಪ್​ಗೆ ಚಿಕಿತ್ಸೆ ಮುಂದುವರಿಕೆ

ಕಿರಾಣಿ ಶಾಪ್, ಬೇಕರಿ, ಹಣ್ಣಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳಿಗೆ ಬೆಂಕಿ ಬಿದ್ದಿದೆ. ಅಂಗಡಿಯಲ್ಲಿರುವ ಹಣ ಕೂಡ ಬೆಂಕಿಗೆ ಆಹುತಿಯಾಗಿದೆ. ಸುಮಾರು 40ಕ್ಕೂ ಹೆಚ್ಚು ಅಂಗಡಿಗಳು ಸುಟ್ಟು ಭಸ್ಮವಾಗಿವೆ. ಕೋಟ್ಯಂತರ ರೂ. ನಷ್ಟವಾಗಿರುವ ಅನುಮಾನ ವ್ಯಕ್ತವಾಗಿದೆ. ಡಿವೈಎಸ್ಪಿ ಪ್ರಲ್ಹಾದ, ಜಿಲ್ಲಾ ಪಂಚಾಯತ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ್ ಸ್ಥಳದಲ್ಲಿ ಮುಕ್ಕಾಂ ಹೊಡಿದ್ದಾರೆ.

(ವರದಿ: ಸಂತೋಷ್ ಕೊಣ್ಣೂರ)
First published: February 4, 2020, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading