ಶಾರ್ಟ್​ ಸರ್ಕ್ಯೂಟ್​ನಿಂದ ಸುಟ್ಟು ಕರಕಲಾದ ಮದುವೆ ಮನೆ; ಕಣ್ಣೀರಲ್ಲಿ ಕುಟುಂಬ

ಮಾಬುಸಾಬ ಪೆಂಡಾರಿ ಎಂಬುವವರು ತಮ್ಮ ತಂಗಿ ಮಗಳ ಮದುವೆಗೆಂದು ಮನೆಯಲ್ಲಿ ಸಾಲಮಾಡಿ ತಂದ ಮದುವೆ ಸಾಮಾಗ್ರಿ, ಮಧುವಿನ ಬಟ್ಟೆ ಹಾಗೂ ಮನೆಯಲ್ಲಿದ್ದ 35 ಸಾವಿರರೂ ಸುಟ್ಟು ಕರಕಲಾಗಿದೆ.

Seema.R | news18
Updated:March 7, 2019, 3:15 PM IST
ಶಾರ್ಟ್​ ಸರ್ಕ್ಯೂಟ್​ನಿಂದ ಸುಟ್ಟು ಕರಕಲಾದ ಮದುವೆ ಮನೆ; ಕಣ್ಣೀರಲ್ಲಿ ಕುಟುಂಬ
ಸುಟ್ಟು ಕರಕಲಾದ ವಸ್ತುಗಳು
Seema.R | news18
Updated: March 7, 2019, 3:15 PM IST
ಸಂತೋಷ್​ ಕಣ್ಣೂರು

ಗದಗ (ಮಾ.7): ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಮದುವೆ ಮನೆ ಬೆಂಕಿ ಅನಾಹುತಕ್ಕೆ ತುತ್ತಾಗಿದ್ದು, ಮನೆಯಲ್ಲಿಟ್ಟಿದ್ದ ವಸ್ತುಗಳೆಲ್ಲಾ ಸುಟ್ಟುಕರಕಲಾದ ಪರಿಣಾಮ ಕುಟುಂಬ ಕಂಗಾಗಲಾಗುರುವ ಘಟನೆ  ತಾಲೂಕಿನ ಕಳಸಾಪೂರ ಗ್ರಾಮದಲ್ಲಿ ನಡೆದಿದೆ.

ಮಾಬುಸಾಬ ಪೆಂಡಾರಿ ಎಂಬುವವರು ತಮ್ಮ ತಂಗಿ ಮಗಳ ಮದುವೆಗೆಂದು ಮನೆಯಲ್ಲಿ ಸಾಲಮಾಡಿ ತಂದ ಮದುವೆ ಸಾಮಾಗ್ರಿ, ಮಧುವಿನ ಬಟ್ಟೆ ಹಾಗೂ ಮನೆಯಲ್ಲಿದ್ದ 35 ಸಾವಿರರೂ ಸುಟ್ಟು ಕರಕಲಾಗಿದೆ.

ಮಾಬುಸಾಬ ಪೆಂಡಾರಿ ತಂಗಿ ಮಗಳ ಮದುವೆ ಇದೇ ಮಾ.10ರಂದು ನಡೆಯಬೇಕಿದ್ದು, ಇದಕ್ಕಾಗಿ ಮನೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಮನೆಯಲ್ಲಿ ಸಂಭ್ರಮ ಏರ್ಪಟ್ಟಿತ್ತು. ಆದರೆ, ಬುಧವಾರ ರಾತ್ರಿ ಸಂಭವಿಸಿದ ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಈಗ ಮನೆಯಲ್ಲಿ ಕಂಗಾಲಾಗಿದ್ದಾರೆ.

ಬುಧವಾರ ರಾತ್ರಿ ಸಮಯದಲ್ಲಿ ಪೆಂಡಾರಿ ಮನೆಯವರೆಲ್ಲಾ ಹೊರಗೆ ಹರಟುತ್ತಿದ್ದಾಗ ಈ ಅವಘಡ ನಡೆದಿದೆ. ಈ ವೇಳೆ ಮನೆಯಲ್ಲಿ ಫಾತಿಮಾ ಎಂಬುವವರು​ ಮನೆಯಲ್ಲಿಯೇ ಮಲಗಿದ್ದರು. ಯಾವಾಗ ಈ ಘಟನೆ ನಡೆಯಿತೊ ಅವರು ಕೂಡ ಬೆಂಕಿಯ ಕೆನ್ನಾಲಿಗೆ ಸಿಲುಕಿಕೊಂಡರು. ಅದೃಷ್ಟವಶಾತ್ ಅವರನ್ನು ಮನೆಯವರು ಪಾರು ಮಾಡಿದ್ದಾರೆ. ಫಾತಿಮಾ ಕಾಲಿಗೆ ಸುಟ್ಟು ಗಾಯಗಳಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನು ಓದಿ:  LokSabha Election 2019: ಅಭ್ಯರ್ಥಿ ಆಯ್ಕೆ ಚರ್ಚೆ ನಾಳೆ ದೆಹಲಿಗೆ ಯಡಿಯೂರಪ್ಪ; ಶೀಘ್ರದಲ್ಲೇ ಟಿಕೆಟ್​ ಘೋಷಣೆ
Loading...

ಮದುವೆಗೆ ಎಂದು ಸಾಲ ಮಾಡಿ ತಂದಿದ್ದ ವಧುವಿನ ಹೊಸ ಸೀರೆ, ಲಗ್ನ ಪತ್ರಿಕೆ, ಬಟ್ಟೆ ಸೇರಿದಂತೆ ದುಡ್ಡು ಎಲ್ಲ ಸುಟ್ಟು ಹೋಗಿದೆ. ಅಲ್ಲದೇ ಮದುವೆ ಮನೆಯಲ್ಲಿ  ಈಗ ದುಃಖ ಮಡುಗಟ್ಟಿದೆ.

First published:March 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

Vote responsibly as each vote
counts and makes a difference

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626