• Home
  • »
  • News
  • »
  • state
  • »
  • Shivamogga: ಹಿಂದೂ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು

Shivamogga: ಹಿಂದೂ ಕಾರ್ಯಕರ್ತ ಹರ್ಷ ಸೋದರಿ ಅಶ್ವಿನಿ ವಿರುದ್ಧ FIR ದಾಖಲು

ಹರ್ಷ ಸೋದರಿ ಅಶ್ವಿನಿ

ಹರ್ಷ ಸೋದರಿ ಅಶ್ವಿನಿ

ಈ ಸಂಬಂಧ ಸೈಯದ್ ಫರ್ವೇಜ್ ನೀಡಿದ ದೂರಿನ ಆಧಾರದ ಮೇಲೆ 15 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಹರ್ಷ ಸೋದರಿ ಸಹ ಭಾಗಿಯಾಗಿದ್ದರು.

  • Share this:

ಮೃತ ಹಿಂದೂ ಕಾರ್ಯಕರ್ತ ಹರ್ಷ  (Hindu Activist Harsha) ಸೋದರಿ ಅಶ್ವಿನಿ ಸೇರಿದಂತೆ 15 ಜನರ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ (Doddapet, Shivamogga) ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ (FIR) ದಾಖಲಾಗಿದೆ. ಅಕ್ಟೋಬರ್ 22ರಂದು ಶಿವಮೊಗ್ಗ ನಗರದಲ್ಲಿ ವೀರ ಸಾವರ್ಕರ್ ಸಾಮ್ರಾಜ್ಯ (Veer Savarkar Program) ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ವೀರ ಸಾವರ್ಕರ್ ಮೊಮ್ಮಗ ಸಾತ್ಯಕಿ (Veer Savarkar Grand Son Sathyaki) ಆಗಮಿಸಿದ್ದರು. ಕಾರ್ಯಕ್ರಮ ಹಿನ್ನೆಲೆ ನಗರದಲ್ಲಿ ಬೈಕ್ ಜಾಥಾ (Bike Rally) ಸಹ ಆಯೋಜಿಸಲಾಗಿತ್ತು.  ಬೈಕ್ ಜಾಥಾ ವೇಳೆ ಸೈಯದ್ ಫರ್ವೇಜ್ ಎಂಬವರ ಕಾರ್​ ಗೆ ಹಾನಿಯುಂಟ ಮಾಡಲಾಗಿದೆಯಂತೆ. ಈ ಸಂಬಂಧ ಸೈಯದ್ ಫರ್ವೇಜ್ ನೀಡಿದ ದೂರಿನ ಆಧಾರದ ಮೇಲೆ 15 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಈ ಕಾರ್ಯಕ್ರಮದಲ್ಲಿ ಹರ್ಷ ಸೋದರಿ ಸಹ ಭಾಗಿಯಾಗಿದ್ದರು.


ಸೈಯದ್ ಫರ್ವೇಜ್ ಅವರು ತಮ್ಮ ಇನ್ನೋವಾ ಕಾರ್​ ಮನೆ ಮುಂದೆ ಪಾರ್ಕ್ ಮಾಡಿದ್ದರು. ಬೈಕ್ ಜಾಥಾ ವೇಳೆ ಕಾರಿನ ಎಡಭಾದ ಹೆಡ್​ ಲೈಟ್​, ಸೈಡ್​ ಡೋರ್, ಬ್ಯಾಕ್​ ಸೈಡ್ ಮಡ್​ ಗಾರ್ಡ್​ ಜಖಂಗೊಳಿಸಲಾಗಿದೆ ಎಂದು ಸೈಯದ್ ಫರ್ವೇಜ್ ಆರೋಪಿಸಿದ್ದಾರೆ.


ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ


1944ರಲ್ಲಿ ಸಾವರ್ಕರ್ ಶಿವಮೊಗ್ಗಕ್ಕೆ ಭೇಟಿ ನೀಡಿದ್ರು. ಇದರ ನೆನಪಿಗಾಗಿ 'ಸಾವರ್ಕರ್ ಸಾಮ್ರಾಜ್ಯ' ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ವೀರ ಸಾವರ್ಕರ್, ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರು ಆಗಮಿಸಿದ್ದರು.


ಕಾರ್ಯಕ್ರಮಕ್ಕೂ ಮುನ್ನ ನಗರದ ಬಸ್ ನಿಲ್ದಾಣದಿಂದ ಸೈನ್ಸ್ ಮೈದಾನದ ವರೆಗೆ ಕಾರು, ಬೈಕ್​​  ಮೆರವಣಿಗೆ ಮಾಡಲಾಯ್ತು. ಈ ವೇಳೆ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಸಾವರ್ಕರ್ ಫ್ಲೆಕ್ಸ್ ಹರಿದ PFI ಅನ್ನು ಬ್ಯಾನ್ ಮಾಡಲಾಗಿದೆ. ನಮ್ಮ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಅಂತ ಗುಡುಗಿದ್ರು.


ಇನ್ನು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಮಾತನಾಡಿದ್ದು, ಹಿಂದೂಗಳು ಒಗ್ಗಟ್ಟಾಗಿರಬೇಕೆಂಬುದು ಸಾವರ್ಕರ್ ಅವರ ಕನಸಾಗಿತ್ತು. ಅವರ ಹಿಂದುತ್ವವೇ ನಮಗೇ ಪ್ರೇರಣೆ ಅಂತ ಹೇಳಿದರು.


ಇದನ್ನೂ ಓದಿ:  Boy Missing: ಕಣ್ಣಾಮುಚ್ಚಾಲೆ ಆಟವಾಡುತ್ತಾ ಬಸ್ ಹತ್ತಿದ ಬಾಲಕ; ಕಂಡಕ್ಟರ್ ಕೇಳಿದಾಗ 5 ರೂಪಾಯಿ ಕೊಟ್ಟ


ಸಾತ್ಯಕಿ ಯಾರು ಅವರು, ಯಾರು ಆ ಮನುಷ್ಯ?


ಒಂದು ದೇಶ, ಒಂದೇ ಭಾಷೆ ಹಿಂದಿ ಆಗಿರಬೇಕು. ಹಿಂದೂ ರಾಷ್ಟ್ರವಾಗಿರಬೇಕು ಎಂದು ಸಾತ್ಯಕಿ ಸಾವರ್ಕರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ (Former CM HD Kumaraswamy), ಸಾವರ್ಕರ್ ಮೊಮ್ಮಗನ ಕಟ್ಟಿಕೊಂಡು ನನಗೆ ಏನಾಗಬೇಕು. ನನ್ನ ಜನ ಹೊಟ್ಟೆಗೆ ಹಿಟ್ಟಿಲ್ಲದೆ ಸಾಯುತ್ತಿದ್ದಾರೆ. ಸಾತ್ಯಕಿ ಯಾರು ಅವರು, ಯಾರು ಆ ಮನುಷ್ಯ? ಅವರಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು.


ಮೊದಲು ಜನರ ಬದುಕನ್ನು ಕಟ್ಟಲು ನೋಡಿ. ಕೊಡಗಿನಲ್ಲಿ ಮೂರು ವರ್ಷದಿಂದ ಭೂಕುಸಿತದಿಂದ ಮನೆ, ಬೆಳೆ ಹಾಳಾಗಿದೆ. ಅವರಿಗೆ ಏನು ಕೊಟ್ಟಿದ್ದೀರಿ ಮೊದಲು ಹೇಳಿ ಎಂದು ಕೇಳಿದರು.

ಇದನ್ನೂ ಓದಿ:  CM Basavaraj Bommai: ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್; ಯಾರಿಗೆ ಸಿಗಲಿದೆ ಸಚಿವ ಸ್ಥಾನ!?


ಶಿವಮೊಗ್ಗ ಮತ್ತೆ ಉದ್ವಿಘ್ನ


ಮಲೆನಾಡು ಶಿವಮೊಗ್ಗ ಮತ್ತೆ ಉದ್ವಿಘ್ನಗೊಂಡಿದೆ. ಸಿಗೇಹಟ್ಟಿಯಲ್ಲಿ ದುಷ್ಕರ್ಮಿಗಳಿಂದ ಕಲ್ಲು ತೂರಾಟ (Stone Pelting) ನಡೆದು, ಓರ್ವ ವ್ಯಕ್ತಿಗೆ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪ್ರಕಾಶ್ ಎಂಬುವರಿಗೆ ಗಂಭೀರ ಗಾಯವಾಗಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಎಸ್​ಪಿ ವಿಥುನ್ ಕುಮಾರ್ (SP Mithun Kumar) ಆಗಮಿಸಿ ಪರಿಸ್ಥಿತಿ ಅವಲೋಕಿಸಿದ್ರು. ಶಿವಮೊಗ್ಗದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕಲ್ಲು ತೂರಾಟ ಮಾಡಿದವರಿಗಾಗಿ ಬಲೆ ಬೀಸಿದ್ದಾರೆ.

Published by:Mahmadrafik K
First published: