ವಾಸುದೇವ ಮಯ್ಯ ಆತ್ಮಹತ್ಯೆ ಬೆನ್ನಲ್ಲೀಗ ಮತ್ತೊಂದು ಬಹುಕೋಟಿ ವಂಚನೆ ಆರೋಪ: 14 ಮಂದಿ ವಿರುದ್ಧ ಎಫ್​ಐಆರ್​​

ಇತ್ತೀಚೆಗೆ ಸೋಮವಾರ(ಜು.6) ರಾತ್ರಿ ವಾಸುದೇವ ಮಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೆ ಮುನ್ನ ಮರಣ ಪತ್ರದಲ್ಲಿ ತನ್ನಿಂದ ಹಣ ಪಡೆದ ಮತ್ತು ವಂಚನೆಗೀಡಾದವರ ಹೆಸರು ಉಲ್ಲೇಖಿಸಿದ್ದರು. ಈ ಅವ್ಯವಹಾರದ ಪ್ರಕರಣ ಸಿಐಡಿಗೆ ವಹಿಸಲಾಗಿದೆ.

news18-kannada
Updated:July 12, 2020, 9:01 AM IST
ವಾಸುದೇವ ಮಯ್ಯ ಆತ್ಮಹತ್ಯೆ ಬೆನ್ನಲ್ಲೀಗ ಮತ್ತೊಂದು ಬಹುಕೋಟಿ ವಂಚನೆ ಆರೋಪ: 14 ಮಂದಿ ವಿರುದ್ಧ ಎಫ್​ಐಆರ್​​
M Vasudeva Maiya
  • Share this:
ಬೆಂಗಳೂರು(ಜು.12): ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್​​​​ನ ಮಾಜಿ ಸಿಇಒ ವಾಸುದೇವ ಮಯ್ಯ ಆತ್ಮಹತ್ಯೆ ಬೆನ್ನಲ್ಲೀಗ ಮತ್ತೊಂದು ಬಹುಕೋಟಿ ವಂಚನೆ ಬೆಳಕಿಗೆ ಬಂದಿದೆ. ಈ ಸಂಬಂಧ 233 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿದ ಆರೋಪದಡಿ ಇದೇ ಬ್ಯಾಂಕ್​​ನ ಪ್ರಮುಖರ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಕೇಸ್​​​ ದಾಖಲಾಗಿದೆ ಎಂದು ಬ್ಯಾಂಕ್ ವಿಶೇಷ ಅಧಿಕಾರಿ ಸಂಜಯ್ ಕಲಾಸ್ಕರ್ ಖುದ್ದು ಮಾಹಿತಿ ನೀಡಿದ್ದಾರೆ.

ಶಂಕರಪುರದ ಗುರು ಸೌರ್ವಭೌಮ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್‍ನಲ್ಲಿ ಠೇವಣಿ ಇಡಲಾಗಿದ್ದ 233 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಬ್ಯಾಂಕ್​​​ನ ಅಧ್ಯಕ್ಷ ರಾಮಕೃಷ್ಣ, ಉಪಾಧ್ಯಕ್ಷ ಸತ್ಯ ನಾರಾಯಣ, ವಾಸುದೇವ ಮಯ್ಯ ಸೇರಿದಂತೆ ಆಡಳಿತ ಮಂಡಳಿಯ 14 ಸದಸ್ಯರ ವಿರುದ್ಧ ಎಫ್​ಐಆರ್​​ ​ದಾಖಲಾಗಿದೆ ಎನ್ನಲಾಗುತ್ತಿದೆ.

ಇತ್ತೀಚೆಗೆ ಸೋಮವಾರ(ಜು.6) ರಾತ್ರಿ ವಾಸುದೇವ ಮಯ್ಯ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿಗೆ ಮುನ್ನ ಮರಣ ಪತ್ರದಲ್ಲಿ ತನ್ನಿಂದ ಹಣ ಪಡೆದ ಮತ್ತು ವಂಚನೆಗೀಡಾದವರ ಹೆಸರು ಉಲ್ಲೇಖಿಸಿದ್ದರು. ಈ ಅವ್ಯವಹಾರದ ಪ್ರಕರಣ ಸಿಐಡಿಗೆ ವಹಿಸಲಾಗಿದೆ.

ಇನ್ನು, ಅವ್ಯವಹಾರದ ಪ್ರಕರಣ ಸಿಐಡಿ ತನಿಖೆ ನಡೆಸುತ್ತಿದೆ. ಹೀಗಾಗಿ ಇವರ ಆತ್ಮಹತ್ಯೆ ಪ್ರಕರಣ ಕೂಡ ಸಿಐಡಿಗೆ ವಹಿಸುವಂತೆ ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್‌ ಸೆಪಟ್‌ ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರಿಗೆ ಪತ್ರ ಬರೆದಿದ್ದರು. ಪೊಲೀಸ್‌ ಆಯುಕ್ತರ ಮೂಲಕ ಈ ಪತ್ರವನ್ನು ಬರೆದಿದ್ದರು. ಈ ಕಾರಣದಿಂದಾಗಿ ಈಗ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ.

ಇದನ್ನೂ ಓದಿ: Sunday Lockdown: ಇಂದು ಸಂಪೂರ್ಣ ಲಾಕ್​ಡೌನ್​; ಇಡೀ ದಿನ ಕರ್ಫ್ಯೂ; ಏನಿರುತ್ತೆ? ಏನಿರಲ್ಲ?

ಇನ್ನೊಂದೆಡೆ, ನನ್ನ ತಂದೆಯ ಅಮಾಯಕ. ಇದನ್ನೇ ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ರೂ. ಅಕ್ರಮ ನಡೆಸಲು ಬ್ಯಾಂಕ್‌ನ ಆಡಳಿತ ಮಂಡಳಿಯ 11 ಮಂದಿ ಯತ್ನಿಸಿದ್ಧಾರೆ. ಇದಕ್ಕೆ ಇವರೇ ನೇರ ಹೊಣೆ ಎಂದು ಮಯ್ಯ ಮಗಳು ರಶ್ಮಿ ಸುಬ್ರಮಣ್ಯಪುರ ಪೊಲೀಸ್‌ ಠಾಣೆಗೆ ಈಗಾಗಲೇ ದೂರು ನೀಡಿದ್ದಾರೆ.ವಾಸುದೇವ ಮಯ್ಯ ಡೆತ್​​ ನೋನ್​​ನಲ್ಲಿ 11 ಜನರ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೀಗಾಗಿ ವಾಸುದೇವ ಅವರ ಮಗಳು ಈ 11 ಜನರ ಮೇಲೆ ದೂರು ದಾಖಲು ನೀಡಿದ್ಧಾರೆ. ಇನ್ನು ಕೋ ಆಪರೇಟಿವ್ ಸೊಸೈಟಿಯ ಅವ್ಯವಹಾರ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆಯೇ ಬ್ಯಾಂಕ್​​ನಿಂದ ಕೋಟಿಗಟ್ಟಲೆ ಸಾಲ ಪಡೆದಿದ್ದವರ ಮೇಲೆ ಸಿಐಡಿ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು. ಇದೀಗ ಡೆತ್ ನೋಟ್ ನಲ್ಲಿ ಇರುವ ಹೆಸರುಗಳು ಹಾಗೂ ಸಿಐಡಿ ತನಿಖೆ ವೇಳೆ ಪತ್ತೆಯಾದ ವ್ಯಕ್ತಿಗಳಿಗೆ ಸಾಮ್ಯತೆ ಇದ್ದು, ಎರಡು ಪ್ರಕರಣದ ತನಿಖೆ ಸಿಐಡಿ ಹೆಗಲಿಗೆ ವಹಿಸಲಾಗಿದೆ.
Published by: Ganesh Nachikethu
First published: July 12, 2020, 8:58 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading