ನೀತಿ ಸಂಹಿತೆ ಉಲ್ಲಂಘನೆ ಸಿಎಂ ಯಡಿಯೂರಪ್ಪ ಮೇಲೆ ದೂರು​ ದಾಖಲು; ಚುನಾವಣಾಧಿಕಾರಿ ಸಂಜೀವ್​ ಕುಮಾರ್​​

ಚುನಾವಣಾ ಪ್ರಚಾರದ ವೇಳೆ ಲಿಂಗಾಯತ ಮತ ಬಿಜೆಪಿಗೆ ಬರಬೇಕು ಎಂದು ಮತದಾರರಲ್ಲಿ ವಿನಂತಿ ಮಾಡಿದ್ದರು. ಈ ರೀತಿ ಧರ್ಮದ ಆಧಾರದ ಮೇಲೆ ಮತ ಕೇಳುವುದು ನೀತಿ ಸಂಹಿತೆ ಉಲ್ಲಂಘನೆ. ಈ ಆರೋಪದ ಅಡಿ ಅವರ ಮೇಲೆ ದೂರು ದಾಖಲಿಸಲಾಗಿದೆ

Seema.R | news18-kannada
Updated:December 2, 2019, 6:41 PM IST
ನೀತಿ ಸಂಹಿತೆ ಉಲ್ಲಂಘನೆ ಸಿಎಂ ಯಡಿಯೂರಪ್ಪ ಮೇಲೆ ದೂರು​ ದಾಖಲು; ಚುನಾವಣಾಧಿಕಾರಿ ಸಂಜೀವ್​ ಕುಮಾರ್​​
ಯಡಿಯೂರಪ್ಪ
  • Share this:
ಬೆಂಗಳೂರು (ಡಿ.02): ಉಪಚುನಾವಣೆ ವೇಳೆ ನೀತಿ ಸಂಹಿತೆ ಉಲ್ಲಂಘಿಸಿ ಮಾತನಾಡಿದ ಆರೋಪದ ಮೇಲೆ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಮೇಲೆ ದೂರು ದಾಖಲಿಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್​ ಕುಮಾರ್​ ತಿಳಿಸಿದ್ದಾರೆ. 

ಚುನಾವಣಾ ಪ್ರಚಾರದ ವೇಳೆ ಲಿಂಗಾಯತ ಮತ ಬಿಜೆಪಿಗೆ ಬರಬೇಕು ಎಂದು ಮತದಾರರಲ್ಲಿ ವಿನಂತಿ ಮಾಡಿದ್ದರು. ಈ ರೀತಿ ಧರ್ಮದ ಆಧಾರದ ಮೇಲೆ ಮತ ಕೇಳುವುದು ನೀತಿ ಸಂಹಿತೆ ಉಲ್ಲಂಘನೆ. ಈ ಆರೋಪದ ಅಡಿ ಅವರ ಮೇಲೆ ದೂರು ದಾಖಲಿಸಲಾಗಿದೆ ಎಂದರು.

ಇನ್ನು ಚುನಾವಣೆ ವೇಳೆ ಅನರ್ಹರನ್ನು ತಮ್ಮ ಪಕ್ಷದ ಅಭ್ಯರ್ಥಿಯನ್ನಾಗಿ ಮಾಡಿರುವ ಅವರು ಮಂತ್ರಿ ಮಾಡುತ್ತೇವೆ ಎಂದು ಕೂಡ ಹೇಳಿದ್ದಾರೆ. ಹೀಗೆ ಹೇಳೋದು ನೀತಿ ಸಂಹಿತೆ ಉಲ್ಲಂಘನೆಯಲ್ಲ. ಹಾಗನ್ನೋದು ಸರಿಯೋ ತಪ್ಪೋ ಎಂಬುದನ್ನು ಮಾಧ್ಯಮಗಳೇ ಚರ್ಚೆ ನಡೆಸಿ ನಿರ್ಧರಿಸಬೇಕು. ನಾವು ಏನು ಮಾಡಲು ಸಾಧ್ಯವಿಲ್ಲ ಎಂದು ಕೂಡ ತಿಳಿಸಿದರು.

ಇದನ್ನು ಓದಿ: ಕಾಂಗ್ರೆಸ್​ನಿಂದ ಬಿಜೆಪಿಗೆ ಬಂದ ಕೆ.ಸಿ. ರಾಮಮೂರ್ತಿ ರಾಜ್ಯಸಭೆಗೆ ಅವಿರೋಧ ಆಯ್ಕೆ ಖಚಿತ?

ಲಿಂಗಾಯತ ಮತಗಳ ವಿಚಾರವಾಗಿ ನೀತಿ ಸಂಹಿತೆ ಆಧಾರದ ಮೇಲೆ ದೂರು ಬಂದಿತ್ತು. ಇದರ ಆಧಾರದ ಮೇಲೆ ಎಫ್​ಐಆರ್​ ದಾಖಲಿಸಲಾಗಿದೆ ಎಂದರು.
First published:December 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ