ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಗಂಡನಿಂದ ಒತ್ತಾಯ; ಪೊಲೀಸರ ಬಳಿ ದೂರು ದಾಖಲಿಸಿದ ಹೆಂಡತಿ

ಲತೀರ್ ರೆಹಮಾನ್​ ಅಶ್ಲೀಲ ವಿಡಿಯೋ ನೋಡುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ. ಪತಿ ಕಿರುಕುಳ ತಾಳಲಾರದೆ ಸಂತ್ರಸ್ತೆ ಬಸವನಗುಡಿಯ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ.

news18-kannada
Updated:October 22, 2020, 11:52 AM IST
ಬೆಂಗಳೂರು: ಅಶ್ಲೀಲ ವಿಡಿಯೋ ನೋಡುವಂತೆ ಗಂಡನಿಂದ ಒತ್ತಾಯ; ಪೊಲೀಸರ ಬಳಿ ದೂರು ದಾಖಲಿಸಿದ ಹೆಂಡತಿ
ಸಾಂದರ್ಭಿಕ ಚಿತ್ರ
  • Share this:
ಗಂಡ ಕಿರುಕುಳ ನೀಡುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಅದರಲ್ಲೂ ಇತ್ತೀಚೆಗೆ ವರದಕ್ಷಿಣೆಗಾಗಿ, ಆಸ್ತಿ ವಿಚಾರಕ್ಕೆ, ಕುಡಿದು ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈಗ ಬೆಂಗಳೂರಿನಲ್ಲಿ ಗಂಡನ ವಿರುದ್ಧ ಹೆಂಡತಿ ಹೊಸದಾದ ಆರೋಪವೊಂದನ್ನು ಮಾಡಿದ್ದಾಳೆ. ಅಶ್ಲೀಲ ವಿಡಿಯೋ ನೋಡುವಂತೆ ಪತಿ ತನ್ನನ್ನು ಪೀಡಿಸುತ್ತಾನೆ ಎಂದು ಪತ್ನಿ ಆರೋಪಿಸಿದ್ದಾಳೆ.

ಲತೀರ್ ರೆಹಮಾನ್​ ಅಶ್ಲೀಲ ವಿಡಿಯೋ ನೋಡುವಂತೆ ಹೆಂಡತಿಯನ್ನು ಪೀಡಿಸುತ್ತಿದ್ದ. ಪತಿ ಕಿರುಕುಳ ತಾಳಲಾರದೆ ಸಂತ್ರಸ್ತೆ ಬಸವನಗುಡಿಯ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ಈ ಕಾರಣಕ್ಕೆ ಲತೀರ್​ ವಿರುದ್ದ ಎಫ್ಐಆರ್​ ದಾಖಲಾಗಿದೆ.

ಸಂತ್ರಸ್ತೆ ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. 2019ರ ಜೂನ್​ನಲ್ಲಿ ಖಾಸಗಿ ಕಂಪನಿ ಉದ್ಯೋಗಿ ಲತೀರ್ ರೆಹಮಾನ್ ಜೊತೆ ಈಕೆ ವಿವಾಹ ಆಗಿದ್ದಳು. ವಿವಾಹ ಬಳಿಕ ವರದಕ್ಷಿಣೆಗಾಗಿ ಲತೀರ್ ರೆಹಮಾನ್ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆಗಾಗಿ ಮನೆಯವರು ಸಂತ್ರಸ್ತೆಯ ಚಿನ್ನಾಭರಣ ಕಸಿದು ಹೊರದಬ್ಬಿದ ಆರೋಪ ಕೂಡ ಇದೆ. ಇದರ ಜೊತೆ ನಿತ್ಯವೂ ಈತ ಹೆಂಡತಿ ಬಳಿ ಬಂದು ಅಶ್ಲೀಲ ವಿಡಿಯೋ ನೋಡುವಂತೆ ಕೇಳುತ್ತಿದ್ದ. ಆಕೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರೂ ಆತ ಅದನ್ನು ನಿಲ್ಲಿಸುತ್ತಿರಲಿಲ್ಲ.

ಕೊನೆಗೆ ಆಕೆ ಬೇರೆ ದಾರಿ ಕಾಣದೆ ಆರೋಪಿ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು.
Published by: Rajesh Duggumane
First published: October 22, 2020, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading