ಸಾಲಿಗ್ರಾಮದಲ್ಲಿ ಗುಂಪು ಘರ್ಷಣೆ; ಮಾಜಿ ಸಚಿವ ಸಾ.ರಾ.ಮಹೇಶ್ ಇಬ್ಬರು ಸಹೋದರರ ಮೇಲೆ ಎಫ್​ಐಆರ್ ದಾಖಲು

ಸಾಲಿಗ್ರಾಮದಲ್ಲಿ ನೆನ್ನೆ ಆಕಸ್ಮಿಕವಾಗಿ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಬೈಕ್​ ಗುದ್ದಿದ ಪ್ರಕರಣವನ್ನು ಪೊಲೀಸರು ರಾಜೀ ಮೂಲಕ ಸಂಧಾನ ಮಾಡಿದ್ದರು. ಆ ಬಳಿಕ ಮತ್ತೊಂದು ಗುಂಪು ಬೈಕ್​ನಲ್ಲಿ ಗುದ್ದಿದವರ ಬಡಾವಣೆಗೆ ನುಗ್ಗಿ ಕಲ್ಲು ತೂರಾಟ ಮಾಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ. 

HR Ramesh | news18-kannada
Updated:December 13, 2019, 8:48 PM IST
ಸಾಲಿಗ್ರಾಮದಲ್ಲಿ ಗುಂಪು ಘರ್ಷಣೆ; ಮಾಜಿ ಸಚಿವ ಸಾ.ರಾ.ಮಹೇಶ್ ಇಬ್ಬರು ಸಹೋದರರ ಮೇಲೆ ಎಫ್​ಐಆರ್ ದಾಖಲು
ಸಾ. ರಾ. ಮಹೇಶ್​
  • Share this:
ಮೈಸೂರು: ಕೆ.ಆರ್.ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಗುಂಪು ಘರ್ಷಣೆ ಪ್ರಕರಣ ಸಂಬಂಧ ಮಾಜಿ ಸಚಿವ ಸಾ.ರಾ.ಮಹೇಶ್ ಅವರ ಇಬ್ಬರು ಸಹೋದರರ ಮೇಲೆ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. 

ಘಟನೆ ಸಂಬಂಧ 17 ಮಂದಿ ಮೇಲೆ ಎಫ್​ಐಆರ್ ದಾಖಲಿಸಲಾಗಿದ್ದು, ಸಾ.ರಾ.ಮಹೇಶ್ ಅವರ ಇಬ್ಬರು ಸಹೋದರರಾದ ಸಾ.ರಾ.ರವೀಶ್ (ರಘು) ಮೊದಲ ಆರೋಪಿಯಾಗಿದ್ದರೆ, ಸಾ.ರಾ.ಸತೀಶ್ ಎರಡನೇ ಆರೋಪಿಯಾಗಿದ್ದಾರೆ.

ಜಾತಿ ನಿಂದನೆ, ಧಮ್ಕಿ, ಹಲ್ಲೆ ಆರೋಪ ಹಾಗೂ ದಲಿತದ ಮೇಲೆ ಸವರ್ಣಿಯರಿಂದ ಹಲ್ಲೆ ಆರೋಪದಡಿ ದೂರು ದಾಖಲಿಸಲಾಗಿದೆ. ಘರ್ಷಣೆಗೆ ಸಾ.ರಾ.ಮಹೇಶ್ ಸೋದರರೇ ಕಾರಣ ಎಂದು ದೂರಿನಲ್ಲಿ ಆರೋಪ ಮಾಡಲಾಗಿದೆ.

ಸಾಲಿಗ್ರಾಮದಲ್ಲಿ ನೆನ್ನೆ ಆಕಸ್ಮಿಕವಾಗಿ ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದ ಕಾರಣಕ್ಕೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಬೈಕ್​ ಗುದ್ದಿದ ಪ್ರಕರಣವನ್ನು ಪೊಲೀಸರು ರಾಜೀ ಮೂಲಕ ಸಂಧಾನ ಮಾಡಿದ್ದರು. ಆ ಬಳಿಕ ಮತ್ತೊಂದು ಗುಂಪು ಬೈಕ್​ನಲ್ಲಿ ಗುದ್ದಿದವರ ಬಡಾವಣೆಗೆ ನುಗ್ಗಿ ಕಲ್ಲು ತೂರಾಟ ಮಾಡಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ಇದನ್ನು ಓದಿ: ಇನ್‍ಪುಟ್ ಸಬ್ಸಿಡಿ, ಬೆಳೆ ವಿಮೆ ಪರಿಹಾರವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸಿಎಂ ಕಟ್ಟುನಿಟ್ಟಿನ ಸೂಚನೆ
First published:December 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ