ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗೆ ಮಲ್ಲು ಆಲೂರು ಅಲಿಯಾಸ್ ಮಲ್ಲಿಕಾರ್ಜುನ್ ಸ್ವಾಮಿ (Mallu Aluru) ಅವರಿಗೆ ನಾಮಪತ್ರ ಹಿಂಪಡೆಯಲು ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ವೈರಲ್ (Somanna Audio Clip Viral) ಆಗಿತ್ತು. ಈ ಆಡಿಯೋ ಕ್ಲಿಪ್ ಸಂಬಂಧ ಚಾಮರಾಜನಗರ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ (BJP Candidate V Somanna) ವಿರುದ್ಧ ಎಫ್ಐಆರ್ (FIR) ದಾಖಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಚಾಮರಾಜನಗರ (Chamarajanagar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆ ವಿ ಸೋಮಣ್ಣ ಅವರಿಗೆ ಸಂಕಷ್ಟ ಎದುರಾಗಿದೆ.
ಭ್ರಷ್ಟ ಆಚರಣೆಗಳ ಕಾರಣಕ್ಕೆ ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಸನ್ 124ಅಡಿ ಈ ಕ್ಷೇತ್ರದ ಚುನಾವಣೆಯನ್ನು ರದ್ದುಗೊಳಿಸಬಹುದು ಅಥವಾ ಕಾಯ್ದೆಯ ಸೆಕ್ಸನ್ 8(1)(ಎ) ಅಡಿಯಲ್ಲಿ ಅಭ್ಯರ್ಥಿಯನ್ನು ಚುನಾವಣೆಯಿಂದ ಅನರ್ಹಗೊಳಿಸುವ ಸಾಧ್ಯತೆ ಇದೆ.
ವೈರಲ್ ಆದ ಆಡಿಯೋದಲ್ಲಿ ಏನಿದೆ?
ಆಲೂರು ಮಲ್ಲು - ಅಣ್ಣಾ...ನಮಸ್ಕಾರ
ಸೋಮಣ್ಣ - ಮೊದಲು ತಕೊಳ್ಳಯ್ಯ, ಆಮೇಲೆ ಏನು ಬೇಕಾದ್ರು ಮಾಡ್ತೀನಿ.
ಆಲೂರು ಮಲ್ಲು - ಅಣ್ಣಾ ತೆಗೆಯೋಕೆ ಆಗೋದಿಲ್ಲ ಅಣ್ಣಾ, ನೀವು ಹೇಳಿದಂಗೆ ನಾನು ಇರ್ತೀನಿ
ಸೋಮಣ್ಣ - ಇದೆಲ್ಲಾ ಕಥೆ ಬೇಡ.. ಹೇಳೋ ತನಕ ಕೇಳು.. ನಾನು ಮಾತಾಡೋದನ್ನ ಕೇಳು ಇಲ್ಲಿ
ಆಲೂರು ಮಲ್ಲು - ಅಣ್ಣಾ...
ಸೋಮಣ್ಣ - ನೀನು ನನಗೊಬ್ಬ ಹಳೇ ಸ್ನೇಹಿತ.. ಅವನ್ಯಾವನೋ ತೊಟ್ಟಿ ನನ್ ಮಗನ್ ಮಾತು ಕೇಳೋದಕ್ಕೆ ಹೋಗಬೇಡ.
ಆಲೂರು ಮಲ್ಲು - ಇಲ್ಲಣ್ಣ ಇಲ್ಲಣ್ಣ..
ಸೋಮಣ್ಣ - ನಾನು ಹೇಳೋ ತನಕ ಕೇಳೋ ಇಲ್ಲಿ.. ನಿನಗೆ ಬದುಕೋದಕ್ಕೆ ಏನೆಲ್ಲಾ ಬೇಕು ಎಲ್ಲ ಮಾಡ್ತೀನಿ.. ಅಣ್ಣ ಇದ್ದಾರೆ.. ಮೊದಲು ವಾಪಾಸ್ ತಕೋ ಆಮೇಲೆ ನಾನು ಮಾತಾಡ್ತೀನಿ.. ಮೊದಲು ವಾಪಾಸ್ ತೊಕೋ ನನ್ ಮಾತು ಕೇಳು.. ನಿನ್ನ ಹಿತ ಕಾಪಾಡೋದು ನನ್ ಜವಾಬ್ದಾರಿ.. ಮರಂಕಲ್ಲು.. ನಾನು.. ಸುದೀಪಣ್ಣ ಮೂರು ಜನ ಇರ್ತೀವಿ.. ನಿನ್ನ ತಕ್ಕೊಂಡು ಎಲ್ಲಿ ಬಿಡಬೇಕೋ.. ಮದರ್ ಪ್ರಾಮಿಸ್... ದೇವಸ್ಥಾನದಲ್ಲಿ ಇದ್ದೀನಿ.. ಉಪ್ಪಾರ ದೇವಸ್ಥಾನದಲ್ಲಿ ಇದ್ದೀನಿ... ಮೊದಲು ನಾನು ಹೇಳೋ ಮಾಡು.. ನಿನ್ ಕೈ ಮುಗೀತೀನಿ..
ಆಲೂರು ಮಲ್ಲು - ಸರಿ ಅಣ್ಣಾ.. ಸರಿ ಅಣ್ಣಾ... ಮಾತಾಡ್ತೀನಿ ಬಿಡಣ್ಣ.. ಮಾತಾಡ್ತೀನಿ...
ಸೋಮಣ್ಣ - ಇರೋದು ಇನ್ನು ಒಂದು ಗಂಟೆ... ಅದ್ಯಾವನೋ ಪೋಲಿ ನನ್ನ ಮಗನ ಮಾತು ಕೇಳಿಕೊಂಡು..
ಆಲೂರು ಮಲ್ಲು - ಯಾರ ಮಾತು ಕೇಳಿಲ್ಲ ಅಣ್ಣ... ನೀವು ಮುಖ್ಯಮಂತ್ರಿ ಆಗಬೇಕು ಅಂತ ನಾನು...
ಸೋಮಣ್ಣ - ಸರ್ಕಾರ ಬರುತ್ತೆ... ಒಂದು ಗೂಟದ ಕಾರು ಬೇಕು... ಮುಚ್ಕೊಂಡು ವಾಪಾಸ್ ತಕೋ.. ನಾನು ದೇವರ ಮುಂದೆ ನಿಂತ್ಕೊಂಡಿದ್ದೀನಿ...
ಆಲೂರು ಮಲ್ಲು - ಆಯ್ತಣ್ಣ... ಆಯ್ತಣ್ಣ...
ಸೋಮಣ್ಣ - ಉಪ್ಪಾರ ದೇವರ ಮುಂದೆ ನಿಂತಿದ್ದೀನಿ... ತಕೋ ಮೊದಲು... ಯಾರನ್ನೂ ಕೇಳೋದಕ್ಕೆ ಹೋಗಬೇಡ.. ನಾನು ಜಿ.ಟಿ. ದೇವೇಗೌಡ ನಾನು ಫ್ರೆಂಡ್ಸ್... ನೀನು ವಾಪಾಸ್ ತಕೋ...
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ