Savarkar ಫೋಟೋಗೆ ಬೆಂಕಿ, ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ಐ​ಆರ್; ಗಣೇಶೋತ್ಸವದಲ್ಲಿ ಸಾವರ್ಕರ್ ವಿಡಿಯೋ?

ಗಣೇಶನ ಪೆಂಡಾಲ್​​ಗಳಲ್ಲಿ ಸಾರ್ವಕರ್ ಸಾಧನೆಯ ವಿಡಿಯೋ ಡಿಸ್​​ಪ್ಲೇ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಈಗಾಗಲೇ ಈ ಹೊಸ ಅಭಿಯಾನಕ್ಕೆ ಹಲವು ಹಿಂದೂ ಚಿಂತಕರು ಮತ್ತು ಹೋರಾಟಗಾರರು ರೂಪುರೇಷ ಸಿದ್ಧಪಡಿಸಿದ್ದಾರೆ.

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪ್ರತಿಭಟನೆ

  • Share this:
ಧಾರವಾಡ: ಶುಕ್ರವಾರ ಪ್ರತಿಭಟನೆ (Protest) ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು (Congress Activist) ವೀರ ಸಾವರ್ಕರ್ ಫೋಟೋಗೆ (Veer Savarkar) ಬೆಂಕಿ ಹಾಕಿದ್ರು. ಈ ಸಂಬಂಧ  ಧಾರವಾಡ (Dharwad) ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ (FIR) ದಾಖಲಾಗಿದೆ. ಭಜರಂಗ ದಳ ಮುಖಂಡ ಶಿವಾನಂದ್ ಸತ್ತಿಗೇರಿ  ಅವರು ನೀಡಿದ ದೂರು ಆಧರಿಸಿ ಫೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಾಂಗ್ರೆಸ್ ಮಹಾನಗರ, ಗ್ರಾಮೀಣ ಜಿಲ್ಲಾಧ್ಯಕ್ಷ ಸೇರಿ 12 ಜನರ ಹೆಸರು ಎಫ್​ಐಆರ್​ನಲ್ಲಿ ಉಲ್ಲೇಖವಾಗಿದೆ. ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಪಾಟೀಲ್, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ ಹೆಸರು ಎಫ್ಐಆರ್​ನಲ್ಲಿವೆ. ಈ ಎಲ್ಲಾ ಕಾಂಗ್ರೆಸ್ ನಾಯಕರು ಮಾಜಿ ಸಚಿವ ವಿನಯ್ ಕುಲಕರ್ಣಿ (Former Minister Vinay Kulakarni) ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಶುಕ್ರವಾರ ಮಧ್ಯಾಹ್ನ ಜಿಲ್ಲಾಧಿಕಾರಿ‌ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕೃತಿ ಮತ್ತು ಸಾವರ್ಕರ್ ಫೋಟೋಗೆ ಬೆಂಕಿ ಹಚ್ಚಿದ್ದರು. ಎಫ್‌ಐಆರ್‌‌ನಲ್ಲಿ ಅರವಿಂದ್ ಏಗನಗೌಡರ್ ಆರೋಪಿ ನಂ. 1 ಆಗಿದ್ದಾರೆ. ಅರವಿಂದ್ ಏಗನಗೌಡರ್ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:  Belagavi Politics: ಖಾನಾಪುರ ಕ್ಷೇತ್ರದಲ್ಲಿ ಕಮಲ ಕಲಿಗಳ ಮಧ್ಯೆ ಕ್ರೆಡಿಟ್ ವಾರ್; ಬೆಳಗಾವಿ ಬಿಜೆಪಿಯಲ್ಲಿ ಕಿಚ್ಚು ಹಚ್ಚಿದ ಮಾಜಿ ಶಾಸಕನ ಆಡಿಯೋ

ಮತ್ತೊಂದು ಧರ್ಮ ದಂಗಲ್‌ಗೆ ಮುಂದಾಯ್ತಾ ಸಾವರ್ಕರ್ ವಿಚಾರ?

ಒಂದು ಫ್ಲೆಕ್ಸ್ ಗಲಾಟೆ ಈಗ ಸಾವಿರಾರು ಸಾವರ್ಕರ್ ಫ್ಲೆಕ್ಸ್ ಹುಟ್ಟಿಗೆ ಕಾರಣವಾಗುತ್ತಾ ಅನ್ನೋ ಅನುಮಾನ ಉಂಟಾಗಿದೆ. ಈ ಬಾರಿಯ ಗಣೇಶ ಉತ್ಸವದ ಜೊತೆಗೆ ಸಾರ್ವಕರ್ ಉತ್ಸವ ನಡೆಯುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಈ ಬಾರಿಯ ಗಣೇಶೋತ್ಸವದಲ್ಲಿ ಸಾರ್ವಕರ್ ಫೋಟೋ ಹಾಕಲು ಹಿಂದೂ ಸಂಘಟನೆಗಳು ಮುಂದಾಗ್ತಿವೆ ಎನ್ನಲಾಗಿದೆ.

FIR Filed against congress Activsit who set fire savarkar photo mrq
ಕಾಂಗ್ರೆಸ್ ಪ್ರತಿಭಟನೆ


ಹಿಂದೂ ಪರ ಚಿಂತಕ ಚಕ್ರವರ್ತಿ ಸೂಲಿಬೆಲೆಯಿಂದ ಸಾವರ್ಕರ್ ಫ್ಲೆಕ್ಸ್ ಅಳವಡಿಸೋದಾಗಿ ಹೇಳಿಕೆ ನೀಡಿದ್ದಾರೆ. ಬರೊಬ್ಬರಿ ಹತ್ತು ಸಾವಿರ ಸಾರ್ವಜನಿಕ ಗಣೇಶ ಉತ್ಸವಗಳ ಪೆಂಡಾಲ್​ ಗಳಲ್ಲಿ ಸಾವರ್ಕರ್ ಫೋಟೋ ಹಾಕುವ ಕುರಿತು ಚಿಂತನೆಗಳು ನಡೆದಿವೆಯಂತೆ.

ಪೆಂಡಾಲ್​​ಗಳಲ್ಲಿ ಸಾರ್ವಕರ ಸಾಧನೆಯ ವಿಡಿಯೋ

ವೀರ ಸಾವರ್ಕರ್ ಫೋಟೋ ಜೊತೆ ಬಾಲಗಂಗಾಧರ ತಿಲಕ್ ಅವರ ಫೋಟೋ ಹಾಕುವ ಮೂಲಕ ಹೊಸ ಅಭಿಯಾನ ಆರಂಭಿಸುವ ಕುರಿತು ಹಿಂದೂ ಚಿಂತಕರು ಮತ್ತು ಹೋರಾಟಗಾರರು ಚಿಂತನೆ ನಡೆಸಿದ್ದಾರೆ. ಗಣೇಶನ ಪೆಂಡಾಲ್​​ಗಳಲ್ಲಿ ಸಾರ್ವಕರ್ ಸಾಧನೆಯ ವಿಡಿಯೋ ಡಿಸ್​​ಪ್ಲೇ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ.

ಈಗಾಗಲೇ ಈ ಹೊಸ ಅಭಿಯಾನಕ್ಕೆ ಹಲವು ಹಿಂದೂ ಚಿಂತಕರು ಮತ್ತು ಹೋರಾಟಗಾರರು ರೂಪುರೇಷ ಸಿದ್ಧಪಡಿಸಿದ್ದಾರೆ. ಈ ಹೊಸ ಅಭಿಯಾನ ಮತ್ಯಾವ ಗಲಾಟೆಗಳಿಗೆ ಕಾರಣವಾಗುತ್ತೆ ಅನ್ನೋ ಅತಂಕ ಸಾರ್ವಜನಿಕರಲ್ಲಿ ಮನೆ ಮಾಡಿದೆ.

ಕೊಲೆಗೆ ಸಂಚು ಅನ್ನೋದು ತಪ್ಪು

ಕೆಲ ವ್ಯಕ್ತಿಗಳು ಮೊಟ್ಟೆ (Egg) ಎಸೆದಿರೋದನ್ನು ನಾವು ಈಗಾಗಲೇ ಖಂಡಿಸಿದ್ದೇವೆ. ಇದನ್ನು ಯಾರೂ ಒಪ್ಪಿಕೊಳ್ಳಲು ಆಗಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿ ಮಾಡೋದು ತಪ್ಪು. ಹಾಗಂತ ಕೊಲೆಗೆ ಸಂಚು ರೂಪಿಸಿದ್ದರು ಅನ್ನೋದು ತಪ್ಪು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

FIR Filed against congress Activsit who set fire savarkar photo mrq
ಪ್ರತಿಕೃತಿ ದಹನ


ಇದನ್ನೂ ಓದಿ:  Viral Video: ಉಡುಪಿಯಲ್ಲಿ ಹುಲಿವೇಷದಾರಿಯೊಂದಿಗೆ ಹೆಜ್ಜೆ ಹಾಕಿದ ಪುಟ್ಟ ಬಾಲಕಿ! ವೈರಲ್​ ವಿಡಿಯೋ ಇಲ್ಲಿದೆ ನೋಡಿ

ಚಿಲ್ಲರೆ ರಾಜಕಾರಣ ಮಾಡೋದು ಬಿಡಲಿ

ಮೊಟ್ಟೆ ಎಸೆತ ಪ್ರಕರಣ ಸರ್ಕಾರಿ ಪ್ರಾಯೋಜಿತ ಅಂತ ಹೇಳೋದ್ರಲ್ಲಿ ಅರ್ಥವಿಲ್ಲ. ಸಿದ್ದರಾಮಯ್ಯನವರು ಈ ರೀತಿ ಚಿಲ್ಲರೆ ರಾಜಕಾರಣ ಮಾಡೋದು ಬಿಡಲಿ. ಮಾಡಿದ್ದು ತಪ್ಪು ಅಂತ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಮತ್ತಿತರ ನಾಯಕರು ಹೇಳಿದ್ದಾರೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ರಾಜಕೀಯವಾಗಿ ವಿರೋಧ ಮಾಡಬೇಕು. ಸಿದ್ದರಾಮಯ್ಯ ಅವರು ಸಾವರ್ಕರ್ ವಿಚಾರದಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡುತ್ತಿರುವುದು ಖಂಡನೀಯ ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
Published by:Mahmadrafik K
First published: