ಅಮೃತಹಳ್ಳಿ ಪೊಲೀಸ್ ಠಾಣೆಯಿಂದ ದಿಗ್ವಿಜಯ್ ಸಿಂಗ್ ಮತ್ತಿತರರು ಬಿಡುಗಡೆ; ಎಫ್ಐಆರ್ ದಾಖಲು

ರಮಡ ಹೋಟೆಲ್​ನಲ್ಲಿರುವ ತಮ್ಮ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿಯೇ ತೀರಲು ದಿಗ್ವಿಜಯ್ ಸಿಂಗ್ ನಿರ್ಧರಿಸಿದ್ಧಾರೆ. ಪೊಲೀಸ್ ವಶದಿಂದ ಬಿಡುಗಡೆಯಾದ ಅವರು ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಅವರನ್ನು ಭೇಟಿಯಾಗಿ ಮಾತನಾಡುವ ನಿರೀಕ್ಷೆ ಇದೆ.

ದಿಗ್ವಿಜಯ ಸಿಂಗ್

ದಿಗ್ವಿಜಯ ಸಿಂಗ್

  • News18
  • Last Updated :
  • Share this:
ಬೆಂಗಳೂರು(ಮಾ. 18): ಮಧ್ಯ ಪ್ರದೇಶದ ಕೆಲ ಕಾಂಗ್ರೆಸ್ ಶಾಸಕರು ಉಳಿದುಕೊಂಡಿರುವ ರಮಡ ಹೋಟೆಲ್​ನಲ್ಲಿ ಅನುಮತಿ ಇಲ್ಲದೇ ಬೆಳ್ಳಂಬೆಳಗ್ಗೆ ಪ್ರತಿಭಟನೆ ನಡೆಸಿದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಕೆಪಿ ಕಾಯ್ದೆ 71ರ ಅಡಿಯಲ್ಲಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಿಗ್ವಿಜಯ್ ಸಿಂಗ್ ಹಾಗೂ ಇತರ ಕೆಲ ಕಾಂಗ್ರೆಸ್ ನಾಯಕರ ವಿರುದ್ಧ ಕೇಸ್ ದಾಖಲಿಸಲಾಗಿದೆ.

ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪೊಲೀಸರ ವಶದಲ್ಲಿರುವ ದಿಗ್ವಿಜಯ್ ಸಿಂಗ್ ಮತ್ತಿತರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ದಿಗ್ವಿಜಯ್ ಸಿಂಗ್ ಜೊತೆ ಕರ್ನಾಟಕದ ಕಾಂಗ್ರೆಸ್ ನಾಯಕರಾದ ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ಕೃಷ್ಣ ಭೈರೇಗೌಡ ಮೊದಲಾದವರು ಇದ್ದಾರೆ.

ಈ ವೇಳೆ, ರಮಡ ಹೋಟೆಲ್​ನಲ್ಲಿರುವ ತಮ್ಮ ರಾಜ್ಯದ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿಯೇ ತೀರಲು ದಿಗ್ವಿಜಯ್ ಸಿಂಗ್ ನಿರ್ಧರಿಸಿದ್ಧಾರೆ. ಪೊಲೀಸ್ ವಶದಿಂದ ಬಿಡುಗಡೆಯಾದ ಅವರು ಬೆಂಗಳೂರು ಕಮಿಷನರ್ ಭಾಸ್ಕರ್ ರಾವ್ ಅವರನ್ನು ಭೇಟಿಯಾಗಿ ಮಾತನಾಡುವ ನಿರೀಕ್ಷೆ ಇದೆ.

ಇದನ್ನೂ ಓದಿ: ಬೆಂಗಳೂರಿನ ರೆಸಾರ್ಟ್​ ಬಳಿ ಪ್ರತಿಭಟನೆ; ದಿಗ್ವಿಜಯ್​ ಸಿಂಗ್ ಸೇರಿ ಅನೇಕ ಕಾಂಗ್ರೆಸ್​ ನಾಯಕರು ವಶಕ್ಕೆ

ಇತ್ತ, ಮಧ್ಯಪ್ರದೇಶ ಕಾಂಗ್ರೆಸ್ ಶಾಸಕರ ವಾಸ್ತವ್ಯ ಹಾಗೂ ದಿಗ್ವಿಜಯ್ ಸಿಂಗ್ ಅವರ ಪ್ರತಿಭಟನೆ ವಿಚಾರವಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಚರ್ಚೆ ನಡೆಸಿದ್ದಾರೆ.

ಮಧ್ಯಪ್ರದೇಶದ 21 ಕಾಂಗ್ರೆಸ್ ಶಾಸಕರು ಬಳ್ಳಾರಿ ರಸ್ತೆಯಲ್ಲಿರುವ ರಮಡ ಹೋಟೆಲ್​ನಲ್ಲಿದ್ದಾರೆ. ನಿನ್ನೆ ಇವರೆಲ್ಲರೂ ಪತ್ರಿಕಾಗೋಷ್ಠಿ ಕೂಡ ನಡೆಸಿ ತಮ್ಮ ಮುನಿಸಿಗೆ ಕಾರಣವನ್ನೂ ತಿಳಿಸಿದ್ದಾರೆ. ಕಾಂಗ್ರೆಸ್​ಗೆ ರಾಜೀನಾಮೆ ನೀಡಿರುವ  ಜ್ಯೋತಿರಾದಿತ್ಯ ಸಿಂದ್ಯ ಅವರಿಗೆ ಇವರೆಲ್ಲರೂ ಬೆಂಬಲವಾಗಿ ನಿಂತಿದ್ದಾರೆ. ಇನ್ನು, ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ದಿಗ್ವಿಜಯ್ ಸಿಂಗ್ ಅವರು ತಮ್ಮ ಪರವಾಗಿ ಮತ ಕೇಳಲು ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಲು ಬಂದಿರುವುದಾಗಿ ಹೇಳಿದ್ದಾರೆ. ಮತ ಯಾಚನೆಗೆ ಅವಕಾಶ ಕೊಡಿ ಎಂಬುದು ಅವರ ಮನವಿ.

ನಿನ್ನೆ ತಡರಾತ್ರಿ ಮಧ್ಯಪ್ರದೇಶದಿಂದ ದಿಗ್ವಿಜಯ್ ಸಿಂಗ್ ಮತ್ತಿತರರು ನಗರಕ್ಕೆ ಆಗಮಿಸಿದ್ದರು. ಇವತ್ತು ಬೆಳ್ಳಂಬೆಳಗ್ಗೆ ದಿಗ್ವಿಜಯ್ ಸಿಂಗ್ ಹಾಗೂ ಕರ್ನಾಟಕದ ಕೆಲ ಕಾಂಗ್ರೆಸ್ ನಾಯಕರು ಸೇರಿದಂತೆ ಸುಮಾರು 500 ಮಂದಿ ರಮಡಾ ಹೋಟೆಲ್ ಮುಂದೆ ಧರಣಿ ನಡೆಸಿದ್ದರು. ಈ ವೇಳೆ, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ದಿಗ್ವಿಜಯ್ ಸಿಂಗ್ ಮತ್ತಿತರರನ್ನು ವಶಕ್ಕೆ ಪಡೆದಿದ್ದರು.

First published: