• Home
  • »
  • News
  • »
  • state
  • »
  • Zameer Ahmed: ಜಮೀರ್ ಅಹ್ಮದ್ ವಿರುದ್ಧ ಎಸಿಬಿ ಎಫ್​​ಐಆರ್, ಶಾಸಕರಿಗೆ ಉರುಳಾಯ್ತಾ ಅಕ್ರಮ ಆಸ್ತಿ ಪ್ರಕರಣ?

Zameer Ahmed: ಜಮೀರ್ ಅಹ್ಮದ್ ವಿರುದ್ಧ ಎಸಿಬಿ ಎಫ್​​ಐಆರ್, ಶಾಸಕರಿಗೆ ಉರುಳಾಯ್ತಾ ಅಕ್ರಮ ಆಸ್ತಿ ಪ್ರಕರಣ?

ದಾಳಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿಯೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

ದಾಳಿ ವೇಳೆ ಶಾಸಕ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿಯೇ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ

FIR Against MLA: ಈ ಎಫ್​ಐಆರ್​ನಲ್ಲಿ  ಜಮೀರ್ ಅಹ್ಮದ್ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5 2021 ರ ಅವಧಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.

  • Share this:

ಮಾಜಿ ಸಚಿವ (Ex Minister), ಬೆಂಗಳೂರು (Bengaluru)ಚಾಮರಾಜಪೇಟೆಯ ಹಾಲಿ ಶಾಸಕ (Chamarajpet MLA) ಬಿ.ಝಡ್. ಜಮೀರ್ ಅಹ್ಮದ್ ಖಾನ್​  (BZ Zameer Ahmed Khan) ಅವರು ಅಕ್ರಮ ಆಸ್ತಿ ಹೊಂದಿರುವುದು ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ. ಕೋಟಿ ಕೋಟಿ ಅಕ್ರಮ ಆಸ್ತಿ ಗಳಿಕೆ ಮಾಡಿರೋದು ನಡೆದ ಎಸಿಬಿ ದಾಳಿ ವೇಳೆ ಪತ್ತೆಯಾಗಿದೆ ಎನ್ನಲಾಗಿದೆ. ಜಮೀರ್ ಅಹ್ಮದ್ ಖಾನ್ ಅವರ ನಿವಾಸ ಹಾಗೂ ಕಚೇರಿಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಜಮೀರ್ ಅಹ್ಮದ್ ಅವರ ಮನೆಯಲ್ಲಿ ಸಿಕ್ಕ ಹಲವು ಪ್ರಮುಖ ಕಡತಗಳ ಪರಿಶೀಲನೆ ನಡೆಸಲಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಎಸಿಬಿ ಜಮೀರ್ ಅಹ್ಮದ್​ ವಿರುದ್ದ ಎಫ್​ಐಆರ್​ ದಾಖಲಿಸಿದ್ದು, ಶಾಸಕ ಜಮೀರ್ ಅಹ್ಮದ್​ ಅವರ ಆದಾಯ ಎಷ್ಟು? ಎಫ್ಐಆರ್ ನಲ್ಲಿ ಎಸಿಬಿ ದಾಖಲಿಸಿದ ಪ್ರಮುಖ ಅಂಶಗಳು ಏನು ಎಂಬುದು ಇಲ್ಲಿದೆ.


ಜಮೀರ್ ಅಹ್ಮದ್​  ಮೇಲೆ ದಾಖಲಾದ ಎಫ್ಐಆರ್ ಪ್ರತಿ ನ್ಯೂಸ್ 18 ಗೆ ಲಭ್ಯವಾಗಿದ್ದು, ಎಸಿಬಿ ಡಿವೈಎಸ್ ಪಿ ಬಸವರಾಜ ಮಗದುಮ್ ಜಮೀರ್ ಅಹ್ಮದ್​ ಖಾನ್  ವಿರುದ್ದ  ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಎಫ್​ಐಆರ್​ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988 ಕಲಂ 13(1)(b)r/w13(2) ಅಡಿಯಲ್ಲಿ ಎಫ್ಐಆರ್ ದಾಖಲಾಗಿದ್ದು, ಮೇ 5ರಂದೇ ಎಫ್​ಐಆರ್​ ದಾಖಲಾಗಿದೆ ಎಂಬ ಮಾಹಿತಿ ಇದೆ.


ಇದನ್ನೂ ಓದಿ: ರಾತ್ರಿ ಮಕ್ಕಳ ಮುಂದೆಯೇ ಪತ್ನಿಯ ಕತ್ತು ಹಿಸುಕಿ ಕೊಲೆ!? ಬೆಳಗಾಗುತ್ತಿದ್ದಂತೆ ಮನೆಯವರೆಲ್ಲಾ ಎಸ್ಕೇಪ್


ಎಫ್​ಐಆರ್​ನಲ್ಲಿ  ಜಮೀರ್ ಅಹ್ಮದ್​ ಸಾರ್ವಜನಿಕ ಸೇವಕರಾಗಿದ್ದು, 2005 ರಿಂದ ಆಗಸ್ಟ್ 5 2021 ರ ಅವಧಿಯಲ್ಲಿ ತನ್ನ ಅಧಿಕಾರವನ್ನ ದುರುಪಯೋಗ ಪಡಿಸಿಕೊಂಡು ಅಪಾರ ಪ್ರಮಾಣದ ಆಸ್ತಿ ಗಳಿಸಿದ್ದಾರೆ ಎಂದು ಉಲ್ಲೇಖ ಮಾಡಲಾಗಿದೆ.


ಇನ್ನು  ಜಾರಿ ನಿರ್ದೇಶನಾಲಯ ನೀಡಿದ ಮಾಹಿತಿಯ ದಾಖಲೆ ಪ್ರಕಾರ ಒಟ್ಟು ಆಸ್ತಿ-73,94,36,027, ಆದಾಯ-4,30,48,790, ವೆಚ್ಚ-17,80,18,000 ಹಾಗೂ ಆದಾಯಕ್ಕಿಂತ 87,44,05,057 ಹೆಚ್ಚಿನ ಆಸ್ತಿ ಗಳಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಮಾಹಿತಿ ನೀಡಲಾಗಿದೆ.


ಎನಿದು ಪ್ರಕರಣ?


ದಿನಾಂಕ 05.07.2022 ರಂದು ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಒಟ್ಟು 85 ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ 5 ವಿವಿಧ ತಂಡಗಳಿಂದ ಜಮೀರ್ ಅಹಮ್ಮದ್ ಅವರ ತಮ್ಮ ಬಲ್ಲ ಮೂಲಗಳಿಗಿಂತ ಅಕ್ರಮ ಆಸ್ತಿ-ಪಾಸ್ತಿಗಳನ್ನು ಹೊಂದಿರುವ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ದಾಖಲಾತಿಗಳನ್ನು ಆಧರಿಸಿ ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳನ್ನು ದಾಖಲಿಸಿ ಅವರಿಗೆ ಸಂಬಂಧಿಸಿದ 4 ಸ್ಥಳಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆಸಲಾಗಿತ್ತು.  ಶೇ. 2031ರಷ್ಟು ಅಕ್ರಮ ಆಸ್ತಿ ಬಗ್ಗೆ ವರದಿ ಮಾಡಿದ್ದ  ಜಾರಿ ನಿರ್ದೇಶನಾಲಯದ ವರದಿಯಲ್ಲಿ ಶಾಸಕರು ರೂ.87,44,05,057/- ರಷ್ಟು ಅಂದರೆ ಶೇಕಡಾ 2031ರಷ್ಟು ಅಕ್ರಮ ಆಸ್ತಿ ಹೊಂದಿರುವ ಬಗ್ಗೆ ವರದಿ ಇದ್ದು, ಆ ವರದಿಯನ್ನು ಪರಿಗಣಿಸಿ ತನಿಖೆಯನ್ನು ಕೈಗೊಳ್ಳಲಾಗಿದೆ. ಆ ವರದಿ ಮೇರೆಗೆ ಹಾಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆಗೆ ಒಳಪಡಿಸಲಾಗಿತ್ತು.


ಇದನ್ನೂ ಓದಿ: ಕೊಲೆ ನಡೆದಿದ್ದ ಹೋಟೆಲ್​ಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ, ಸಿಬ್ಬಂದಿಗೆ ಫುಲ್ ಕ್ಲಾಸ್


87.44 ಲಕ್ಷ ಕೋಟಿ ಅಕ್ರಮ ಆಸ್ತಿ ಬಗ್ಗೆ ವರದಿ


ಎಸಿಬಿ ತನಿಖೆ ವೇಳೆ ಜಮೀರ್ ಅಹ್ಮದ್ ಅವರು 87 ಕೋಟಿ 44 ಲಕ್ಷ 05 ಸಾವಿರದ 057 ಮೌಲ್ಯದ ಅಕ್ರಮ ಆಸ್ತಿ ಹೊಂದಿರೋದು ಎಬಿಸಿ ತನಿಖೆ ವೇಳೆ ಬೆಳಕಿಗೆ ಬಂದಿದೆ. ಈ ಹಿಂದೆ ದಾಳಿ‌ ನಡೆಸಿ ಆಸ್ತಿ ಬಗ್ಗೆ ಇಡಿ ವರದಿ ನೀಡಿತ್ತು. ಇ.ಡಿ ಅಧಿಕಾರಿಗಳ ರೆಫೆರೆನ್ಸ್ ನಲ್ಲಿ ಎಸಿಬಿ ಅಧಿಕಾರಿಗಳು ಇತ್ತೀಚೆಗೆ  ದಾಳಿ ನಡೆಸಿದ್ದರು. 85 ಅಧಿಕಾರಿಗಳ 5 ತಂಡಗಳಿಂದ ದಾಳಿ ನಡೆದಿದ್ದು, ಜಮೀರ್ ಮನೆ, ಕಚೇರಿ ಸೇರಿ ನಾಲ್ಕು ಕಡೆ ಅಮೂಲ್ಯ ಕಡತಗಳ ಪರಿಶೀಲನೆ‌‌ ನಡೆಸಲಾಗಿತ್ತು. ಈ ವೇಳೆ ಆಸ್ತಿ ಗಳಿಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು ಪತ್ತೆಯಾಗಿತ್ತು.

Published by:Sandhya M
First published: