ಕೋಲಾರ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷಗಳನ್ನು ನೀಡಿ ತಮ್ಮತ್ತ ಸೆಳೆಯುವ ಕಾರ್ಯಗಳನ್ನು ಅಭ್ಯರ್ಥಿಗಳು (Candidate) ಮಾಡಿದ್ದಾರೆ. ಈಗಾಗಲೇ ಹಲವು ಕ್ಷೇತ್ರದಲ್ಲಿ ಮತದಾರರಿಗೆ (Voters) ಹಬ್ಬದ ಹೆಸರಿನಲ್ಲಿ, ಪೂಜಾ ಕಾರ್ಯಕ್ರಮದ ಹೆಸರಿನಲ್ಲಿ ವಿವಿಧ ರೀತಿಯ ಆಮಿಷಗಳನ್ನು ನೀಡಲಾಗಿದೆ. ಕೆಲವು ಕಡೆ ಕುಕ್ಕರ್ (Cooker) ಹಂಚಿಕೆ ಮಾಡಿದರೆ, ಕೆಲವು ಕಡೆ ಹಾಟ್ಬಾಕ್ಸ್ (Hot Boxe), ಮತ್ತೆ ಕೆಲವು ಕ್ಷೇತ್ರದಲ್ಲಿ ಬೆಳ್ಳಿಯ ದೇವರ ಮೂರ್ತಿಗಳನ್ನು ಕೂಡ ಹಂಚಿಕೆ ಮಾಡಿರುವ ಬಗ್ಗೆ ವರದಿಗಳಾಗಿದೆ. ಈ ನಡುವೆ ಕೋಲಾರ (Kolar) ಜಿಲ್ಲೆಯ ಬ್ಯಾಲಹಳ್ಳಿ ಗ್ರಾಮದ ಗೋದಾಮು ಮೇಲೆ ಆಹಾರ ಇಲಾಖೆ ಅಧಿಕಾರಿಗಳು (Food Department Officials) ದಾಳಿ ಮಾಡಿ, ಮತದಾರರಿಗೆ ಹಂಚಿಕೆ ಮಾಡಲು ಸಂಗ್ರಹಿಸಿದ್ದಾರೆ ಎನ್ನಲಾದ ಆಹಾರ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬ್ಯಾಲಹಳ್ಳಿಯ ಶ್ರೀನಾಥ್ ಗೆ ಸೇರಿದ ಗೋದಾಮಿನ ಮೇಲೆ ಅಧಿಕಾರಿಗಳು ದಾಳಿ ಮಾಡಿ ವಸ್ತುಗಳನ್ನು ಸೀಜ್ ಮಾಡಿದ್ದು, ಕೆಜಿಎಫ್ ಶಾಸಕಿ (KGF MLA) ರೂಪಾ ಶಶಿಧರ್ (Roopa Shashidhar) ವಿರುದ್ಧವೂ ಎಫ್ಐಆರ್ ದಾಖಲು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಸರ್ಕಾರ ಅನುಮತಿ ಇಲ್ಲದೇ ಭಾರೀ ಪ್ರಮಾಣದಲ್ಲಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿದ ಆರೋಪದ ಮೇರೆಗೆ ಆಹಾರ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 32 ಲಕ್ಷ ಮೌಲ್ಯದ ಅಕ್ಕಿ, ಎಣ್ಣೆ, ಬೆಲ್ಲ, ಮೈದಾ, ತೊಗರಿ ಸೇರಿದಂತೆ ವಿವಿಧ ದಿನಸಿ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಕುರಿತಂತೆ ಎಫ್ಐಆರ್ ದಾಖಲು ಮಾಡಲಾಗಿದೆ.
ಶಾಸಕಿ ರೂಪಾ ಶಶಿಧರ್ ಅವರ ಫೋಟೋ ಇರುವ ಕಿಟ್ಬ್ಯಾಗ್ಗಳು ಪತ್ತೆ
ಯುಗಾದಿ ಹಬ್ಬದ ಪ್ರಯುಕ್ತ ಕೆಜಿಎಫ್ನಲ್ಲಿ ಉಚಿತ ಕಿಟ್ ಹಂಚಲು ದಿನಸಿ ಕಿಟ್ ತಯಾರಿಕೆಗೆ ದಿನಸಿ ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ. ಸೂಕ್ತ ದಾಖಲೆಗಳು ನೀಡದ ಹಿನ್ನಲೆಯಲ್ಲಿ ದಿನಸಿ ದಾಸ್ತಾನು ಸೀಜ್ ಮಾಡಿದ್ದಾರೆ.
ವಸ್ತುಗಳು ಪತ್ತೆಯಾಗಿರುವ ಗೋದಾಮು ಮಾಲೀಕ ಶ್ರೀನಾಥ್ ಅವರಿಗೆ ಸೇರಿದೆ, ಸ್ಥಳದಲ್ಲಿ ಕೆಜಿಎಫ್ ಶಾಸಕಿ ರೂಪಾ ಶಶಿಧರ್ ಅವರ ಫೋಟೋ ಇರುವ ಕಿಟ್ಬ್ಯಾಗ್ಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧವೂ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಈ ಬಗ್ಗೆ ಕೋಲಾರ ಆಹಾರ ಇಲಾಖೆ ಉಪನಿರ್ದೇಶಕಿ ಎಂಕೆ ಶೃತಿ ಮಾಹಿತಿ ನೀಡಿದ್ದಾರೆ.
ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗೆ ಸೇರಿದ ತೋಟದ ಮನೆ
ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ ತೋಟದ ಮನೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮಾಡಿದ್ದರು. ಆಹಾರ ಇಲಾಖೆ ಡಿ.ಡಿ ಎಂಕೆ ಶೃತಿ ನೇತೃತ್ವದಲ್ಲಿ ತಡರಾತ್ರಿ ದಾಳಿ ನಡೆಸಲಾಗಿತ್ತು. ಇನ್ನು ಗೋವಿಂದಗೌಡ ಅವರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
ಇದನ್ನೂ ಓದಿ: Ramesh Jarkiholi: ಚುನಾವಣೆಗೆ ನಿಲ್ಲಲ್ಲ ಅಂತ ಗೋಕಾಕ್ ಸಾಹುಕಾರ್ ಬಾಂಬ್! ಅತ್ತ ಬಿಜೆಪಿ ಪ್ರಚಾರ ಸಮಿತಿಯಿಂದ ಸೋಮಣ್ಣಗೆ ಕೊಕ್!
ಗೋವಿಂದಗೌಡ ತೋಟದ ಮನೆ ಮೇಲೆ ಆಹಾರ ಇಲಾಖೆ ಅಧಿಕಾರಿಗಳ ದಾಳಿ ಮಾಡಿದ ಸಂದರ್ಭದಲ್ಲಿ ಕೆಜಿಎಫ್ ಕಾಂಗ್ರೆಸ್ ಶಾಸಕಿ ರೂಪಾ ಶಶಿಧರ್ ಹೆಸರಲ್ಲಿ ದಿನಸಿ ಪ್ಯಾಕೆಟ್ ಪತ್ತೆಯಾಗಿತ್ತು. 2023 ರ ವಿಧಾನಸಭೆ ಚುನಾವಣೆ ಹಿನ್ನಲೆ ಉಚಿತ ಹಬ್ಬದ ಕಿಟ್ ನೀಡಲು ಪ್ಲಾನ್ ಮಾಡಲಾಗಿತ್ತು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ