Fingerprint Scanner: ಅಪರಾಧ ಪತ್ತೆಹಚ್ಚಲು ಬಂದಿದೆ ಹೊಸ ತಂತ್ರಜ್ಞಾನ, ಬೆಂಗಳೂರಲ್ಲಿ ಜಾರಿಯಾಯ್ತು ಈ ವಿಧಾನ!

Fingerprint Scanner : ಬೆಂಗಳೂರು ಪೊಲೀಸರು ಈಗ ಯಾರ ಕ್ರಿಮಿನಲ್ ದಾಖಲೆಗಳನ್ನು ಬೇಕಾದರೂ ಪರಿಶೀಲಿಸಬಹುದು. ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ಬಳಸಿ ಅಪರಾಧಿಗಳನ್ನು ಪತ್ತೆ ಹಚ್ಚಲು ಬಂದಿದೆ ಹೊಸ ತಂತ್ರಜ್ಞಾನ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜನಸಂಖ್ಯೆ ಹೆಚ್ಚಿದಷ್ಟು ಅಪರಾಧಗಳ ಸಂಖ್ಯೆಯೂ ಬೆಂಗಳೂರಿನಲ್ಲಿ ಹೆಚ್ಚುತ್ತಿದೆ. ಅಪರಾಧಗಳ ಸಂಖ್ಯೆ ತಗ್ಗಿಸಲು ಹಲವಾರು ರೀತಿಯಲ್ಲಿ ಪ್ರಯತ್ನಗಳು ನಡೆಯುತ್ತಿದೆ. ಇದೀಗ ಅಪರಾಧಿಗಳನ್ನು(Criminals) ಸುಲಭವಾಗಿ ಪತ್ತೆ ಹಚ್ಚಲು ಪೊಲೀಸರಿಗೆ ನೆರವಾಗಲಿ ಎಂದು ಹೊಸ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸಲಾಗಿದೆ (Development). ಬೆಂಗಳೂರು ಪೊಲೀಸರು (Police)  ಇನ್ನು ಮುಂದೆ ರಸ್ತೆಗಳಲ್ಲಿ ಗಸ್ತು ತಿರುಗುವಾಗ ತಮ್ಮ ಮೊಬೈಲ್ ಮೂಲಕವೇ ಕ್ರಿಮಿನಲ್ ಟ್ರ್ಯಾಕಿಂಗ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಈ ತಂತ್ರಜ್ಞಾನ (Technology) ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಈ ಆರ್ಟಿಕಲ್​​ಅನ್ನು ಪೂರ್ತಿಯಾಗಿ ಓದಿ.

ಫಿಂಗರ್‌ಪ್ರಿಂಟ್ ಸ್ಕ್ಯಾನಿಂಗ್:

ಬೆಂಗಳೂರು ಪೊಲೀಸರು ಈಗ ಯಾರ ಕ್ರಿಮಿನಲ್ ದಾಖಲೆಗಳನ್ನು ಬೇಕಾದರೂ ಪರಿಶೀಲಿಸಬಹುದು. ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ನೆಟ್‌ವರ್ಕ್ ಮತ್ತು ಸಿಸ್ಟಮ್ಸ್ (CCTNS) ಅಡಿಯಲ್ಲಿ ಗೃಹ ಸಚಿವಾಲಯದಿಂದ ಈ ಸೌಲಭ್ಯ ಕಲ್ಪಸಲಾಗಿದೆ. ಪೊಲೀಸರು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ಬಳಸಿ ಅಪರಾಧಿಗಳನ್ನು ಪತ್ತೆ ಹಚ್ಚಲು ಇದು ಸಹಾಯಕವಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎ ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಅಪರಾಧಿಗಳನ್ನು ಪತ್ತೆ ಹಚ್ಚುವುದು ಹೇಗೆ?

ಪೊಲೀಸ್ ಸಿಬ್ಬಂದಿಗಳು ತಮ್ಮ ಮೊಬೈಲ್ ಫೋನ್​​ಗಳಲ್ಲಿ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಂಡರೆ ಸಾಕು. ಅನುಮಾನಾಸ್ಪದ ವ್ಯಕ್ತಿಗಳ ಫಿಂಗರ್‌ಪ್ರಿಂಟ್ ಸಂಗ್ರಹಿಸಿ ಟ್ರ್ಯಾಕ್ ಮಾಡಬಹುದು. ಫಿಂಗರ್‌ಪ್ರಿಂಟ್ ಡೇಟಾಬೇಸ್‌ನೊಂದಿಗೆ ಕ್ರಾಸ್-ಚೆಕ್ ಮಾಡಲು ಪೊಲೀಸರು ಸ್ಕ್ಯಾನರ್‌ಗಳನ್ನೂ ಸಹ ಬಳಸಬಹುದು.
ಬೆಂಗಳೂರಿನ 111 ಕಾನೂನು ಮತ್ತು ಸುವ್ಯವಸ್ಥೆ ಪೊಲೀಸ್ ಠಾಣೆಗಳಿಗೆ ತಲಾ ಐದು ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ನೀಡಲಾಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ರಮಣ್ ಗುಪ್ತಾ ತಿಳಿಸಿದ್ದಾರೆ.

ಇದನ್ನೂ ಓದಿ : ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ದಲಿತ ಸಹೋದರಿಯರ ಮೃತದೇಹ ಪತ್ತೆ; ಊರಿಗೆ ಊರೇ ತಲ್ಲಣ

ಬೆರಳಚ್ಚು ನೀಡುವಾಗ ಭಯ ಬೇಡ:

ಇದರ ಬಳಕೆ ಸುಲಭವಾಗಿದ್ದು ಮೂರು ತಿಂಗಳ ಪ್ರಾಯೋಗಿಕ ಪರೀಕ್ಷೆಗಾಗಿ ಇದರ ಬಳಕೆ ನಡೆಯುತ್ತಿದೆ. ಇನ್ನು ಮುಂದಿನ ದಿನಗಳಲ್ಲಿ ಇದರ ಪ್ರಯೋಜನಗಳು ಹೆಚ್ಚಿದರೆ ಇನ್ನು ಹೆಚ್ಚಿನ ಫಿಂಗರ್‌ಪ್ರಿಂಟ್ ಸ್ಕ್ಯಾನರ್‌ಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಕಳ್ಳರಿಂದ ಶಾಸಕರ ತಾಯಿ ಕಿವಿ ಕಟ್, ಮೊಬೈಲ್‌ ಸ್ಫೋಟಕ್ಕೆ ಮಗು ಬಲಿ! ಇಂದಿನ ಟಾಪ್-5 ನ್ಯೂಸ್‌ಗಳು ಇಲ್ಲಿವೆ

ಸಾವಿನ ಸಂಖ್ಯೆಗಳ ಡೇಟಾ ಲಭ್ಯ

ಫಿಂಗರ್ ಪ್ರಿಂಟ್ ಸ್ಕ್ಯಾನರ್ ಫಾಕೆಟ್ ಸ್ನೇಹಿಯಾಗಿದ್ದು ಬಳಕೆಗೆ ಯೋಗ್ಯ ಮತ್ತು ಸುಲಭವಾಗಿದೆ. ಇದು ಪೊಲೀಸರ ದಕ್ಷತೆಯನ್ನು ಹೆಚ್ಚಿಸುತ್ತದೆ. ಕಾಣೆಯಾದ ವ್ಯಕ್ತಿಗಳ ಮತ್ತು ಅಸ್ಬಾಭಾವಿಕ ಸಾವುಗಳ ಡೇಟಾ ಸಹ ಅಪ್ಲಿಕೇಕ್ಷನ್​​ನಲ್ಲಿ ಲಭ್ಯವಿದೆ. ಸಾವಿನ ಸಂದರ್ಭದಲ್ಲಿ ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ವ್ಯಕ್ತಿಗಳ ಫೋಟೋ ಅಥವಾ ದೇಹದ ಗುರುತು, ಎತ್ತರ, ತೂಕ ಮತ್ತು ಬಟ್ಟೆ ಇವುಗಳ ಮೂಲಕ ವ್ಯಕ್ತಿಗಳನ್ನು ಕ್ರಾಸ್ ಚೆಕ್ ಮಾಡಬಹುದು.

ವಾಹನಗಳ ದಾಖಲೆ ಲಭ್ಯ

ಅಪರಾಧಿಗಳು ಬಳಸಿದ ವಾಹನಗಳ ಡೇಟಾ ಇದರಲ್ಲಿ ಸಿಗುತ್ತದೆ. ಯಾವ ನಂಬರ್ ಮತ್ತು ಯಾವ ಬಣ್ಣದ ವಾಹನವನ್ನು ಬಳಸಿದ್ದರು ಎಂಬುದು ಸಹ ಇದರಲ್ಲಿ ಕಂಡುಹಿಡಿಯಬಹುದು. ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದರೆ ಸಾಕು ಎಲ್ಲಾ ಮಾಹಿತಿಗಳು ಸಹ ಲಭ್ಯವಾಗುತ್ತದೆ. ವಾಹನದ ಮಾಲಿಕತ್ವ ಹೊಂದಿರುವವರ ಡೇಟಾವನ್ನು ಈಗಾಗಲೇ ಅಳವಡಿಸಲಾಗಿದೆ.

ಆಸ್ತಿ ಸಂಬಂಧಿತ ಅಪರಾಧ ದಾಖಲೆ

ಆಸ್ತಿ ಸಂಬಂಧಿತ ಯಾವುದಾದರು ಕೇಸ್​​ಗಳಿದ್ದರೆ ಅಪರಾಧಿಗಳ ಇತಿಹಾಸವನ್ನು ಹುಡುಕಲು ಇದು ನೆರವಾಗುತ್ತದೆ. ಪೊಲೀಸರು ತಕ್ಷಣ ಅಂತಹ ವ್ಯಕ್ತಗಳನ್ನು ಗುರುತಿಸಿ ವಿಚಾರಣೆ ಮಾಡಲು ನೆರವಾಗುತ್ತದೆ.  ಅವರು ಯಾವ ಪ್ರದೇಶದಲ್ಲಿದ್ದಾರೆ? ಅವರ ಪ್ರಸ್ತುತ ಚಟುವಟಿಕೆಗಳೇಣು? ಪ್ರಸ್ತುತ ಎಲ್ಲಿದ್ದಾರೆ ಎಂಬೆಲ್ಲ ಮಾಹಿತಿ ಇದರಲ್ಲಿ ದೊರೆಯುತ್ತದೆ.
First published: