Multispeciality Hospital: ಉತ್ತರ ಕನ್ನಡದ ಮಲ್ಪಿ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆಗೆ ಎಳ್ಳುನೀರು! ಅನುಮೋದನೆಯನ್ನೇ ನೀಡದ ಆರ್ಥಿಕ ಇಲಾಖೆ!

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರವನ್ನು ಕಾರವಾರ ಶಾಸಕಿ ರೂಪಾಲಿ ನಾಯಕ್ ಇಂದು ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ. ಚರ್ಚೆ ವೇಳೆ ವಿಚಾರ ಪ್ರಸ್ತಾಪಿಸಿದ ರೂಪಾಲಿ ನಾಯ್ಕ್, ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ಸದನದಲ್ಲೇ ಪಟ್ಟು ಹಿಡಿದರು.

ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು

ಉತ್ತರ ಕನ್ನಡಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂಬ ಕೂಗು

  • Share this:
ವಿಧಾನಸಭೆ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಜನರ ಬಹುದಿನಗಳ ಕೂಗಿಗೆ ಮತ್ತೆ ರಾಜ್ಯ ಸರ್ಕಾರ (State Government) ಸ್ಪಂದನೆ ನೀಡದೇ ನಿರ್ಲಕ್ಷ್ಯ ತೋರಿದೆ. ಶೇಕಡಾ 70ರಷ್ಟು ಅರಣ್ಯ ಪ್ರದೇಶ (Forest Area) ಹೊಂದಿರುವ ಹಾಗೂ ವಿಸ್ತೀರ್ಣದಲ್ಲಿ ಅತೀ ದೊಡ್ಡದಾದ ಉತ್ತರ ಕನ್ನಡ ಜಿಲ್ಲೆಗೆ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ (Super Speciality Hospital) ಬೇಕು ಅಂತ ಈ ಹಿಂದಿನಿಂದಲೂ ಜನರು ಬೇಡಿಕೆ ಇಟ್ಟಿದ್ದರು. ಈ ಹಿಂದೆ ಹಲವಾರು ಭಾರೀ ಸಾಮಾಜಿಕ ಜಾಲತಾಣಗಳಲ್ಲೂ (Social Media) ಭಾರೀ ದೊಡ್ಡ ಮಟ್ಟದಲ್ಲಿ ಅಭಿಯಾನ (Campaign) ಶುರುವಾಗಿತ್ತು. ಉತ್ತರ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಸಂಸದರು, ಶಾಸಕರು, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲೆಯವರೇ ಆದ ವಿಧಾನಸಭಾ ಸ್ಪೀಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಜನರ ಆಕ್ರೋಶಕ್ಕೆ ಮಣಿದ ಜನಪ್ರತಿನಿಧಿಗಳು ಆಸ್ಪತ್ರೆ ಕಟ್ಟಿಸಿಕೊಡುವ ಭರವಸೆ ನೀಡಿದ್ರು. ಆದರೆ ಜನ ಪ್ರತಿನಿಧಿಗಳು ನೀಡಿದ್ದ ಭರವಸೆ ಇದೀಗ ಹುಸಿಯಾಗಿದೆ.

ಅನುಮೋದನೆ ನೀಡದ ಆರ್ಥಿಕ ಇಲಾಖೆ


ವಿಧಾನಸಭಾ ಕಲಾಪದಲ್ಲಿ ದನಿಯೆತ್ತಿದ ರೂಪಾಲಿ ನಾಯ್ಕ್

ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರವನ್ನು ಕಾರವಾರ ಶಾಸಕಿ ರೂಪಾಲಿ ನಾಯಕ್ ಇಂದು ವಿಧಾನಸಭಾ ಕಲಾಪದಲ್ಲಿ ಪ್ರಸ್ತಾಪಿಸಿದ್ದಾರೆ. ಚರ್ಚೆ ವೇಳೆ ವಿಚಾರ ಪ್ರಸ್ತಾಪಿಸಿದ ರೂಪಾಲಿ ನಾಯ್ಕ್, ಉತ್ತರ ಕನ್ನಡಕ್ಕೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಅಂತ ಸದನದಲ್ಲೇ ಪಟ್ಟು ಹಿಡಿದರು.

ಸದನದಲ್ಲಿ ಪ್ರಸ್ತಾಪಿಸಿದ ಶಾಸಕಿ ರೂಪಾಲಿ ನಾಯ್ಕ್


 ಆರೋಗ್ಯ ಸಚಿವರಿಂದ ಉತ್ತರ ಕೊಡಿಸೋದಾಗಿ ಹೇಳಿದ ಸ್ಪೀಕರ್

ಇದಕ್ಕೆ ದನಿಗೂಡಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಇವತ್ತು ಆರೋಗ್ಯ ಸಚಿವರಿಗೆ ಆರೋಗ್ಯ ಸರಿ ಇಲ್ಲದೇ ಆಸ್ಪತ್ರೆಯಲ್ಲಿದ್ದಾರೆ. ನಾನು ಕೂಡ ಆ ಭಾಗದ ಜಿಲ್ಲೆಯವನೇ, ಹೀಗಾಗಿ ನಾನು ನಿಮ್ಮ ಮಾತಿಗೆ ಧ್ವನಿ ಗೂಡಿಸುತ್ತೇನೆ. ಬರುವ ವಾರ ಆರೋಗ್ಯ ಸಚಿವರಿಂದ ಉತ್ತರ ಕೊಡಿಸ್ತೀನಿ ಇರೀ ಅಂತ ಸಮಾಧಾನಿಸುವ ಯತ್ನ ಮಾಡಿದ್ರು.

ಜಿಲ್ಲೆಯ ಜನಪ್ರತಿನಿಧಿಗಳು


ಇದನ್ನೂ ಓದಿ: Uttara Kannada: ನಿಧಾನಕ್ಕೆ ಚಲಿಸಿ, ಇಲ್ಲಿ ಆಸ್ಪತ್ರೆಗಳಿಲ್ಲ! ಅಪಘಾತವಾದರೆ ಮಣಿಪಾಲಕ್ಕೆ ಹೋಗಬೇಕಾಗಬಹುದು!

 ಸದನದಲ್ಲಿ ಪಟ್ಟು ಹಿಡಿದ ರೂಪಾಲಿ ನಾಯ್ಕ್

 ಸ್ಪೀಕರ್ ಮಾತಿಗೆ ಒಪ್ಪದ ರೂಪಾಲಿ ನಾಯ್ಕ್, ಈಗ ಆರೋಗ್ಯ ಸಚಿವರಿಗೆ ಆರೋಗ್ಯ ಸರಿ ಇಲ್ಲದೇ ಆಸ್ಪತ್ರೆ ಯಲ್ಲಿದ್ದಾರೆ ಸರಿ, ಆದರೆ ಬರುವ ವಾರ ನಮಗೂ ಆರೋಗ್ಯ ಸರಿ ಇಲ್ಲದೇ ಸದನಕ್ಕೆ ಬರದೆ ಇರಬಹುದು ಅಲ್ಲವೇ? ಅದಕ್ಕಾಗಿ ನಮಗೆ ಈವಾಗ್ಲೇ ಉತ್ತರ ಕೊಡಿಸಿ ಎಂದು ಪಟ್ಟು ಹಿಡಿದರು. ಬಳಿಕ ಬೇರೊಬ್ಬರ ಸಚಿವರಿಂದ ಉತ್ತರ ಕೊಡಿಸ್ರೀನಿ ಇರೀ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಮಾಧಾನ ಪಡಿಸಿದರು.

ಆಸ್ಪತ್ರೆ ಭರವಸೆ ನೀಡಿದ್ದ ಕೋಟ ಶ್ರೀನಿವಾಸ ಪೂಜಾರಿ


ಜಿಲ್ಲೆಯ ಜನರ ಬೇಡಿಕೆ ಸರ್ಕಾರದಿಂದ ಎಳ್ಳು ನೀರು!

ಈ ನಡುವೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು‌ ಮಾಡಲು ಇನ್ನೂ ರಾಜ್ಯ ಸರ್ಕಾರದ ಆರ್ಥಿಕ ಇಲಾಖೆ ಒಪ್ಪಿಗೆಯನ್ನೇ ನೀಡಿಲ್ಲವಂತೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ, ಸಿಬ್ಬಂದಿ, ಉಪಕರಣ ಹಾಗೂ ಹಣಕಾಸು ವೆಚ್ಚದ ಬಗ್ಗೆ ಸಲ್ಲಿಸಿದ್ದ ಪ್ರಸ್ತಾವನೆಯನ್ನೇ ಆರ್ಥಿಕ ಇಲಾಖೆ ರಿಜೆಕ್ಟ್ ಮಾಡಿದೆ. ಹೀಗಾಗಿ ಮತ್ತೊಮ್ಮೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಆರೋಗ್ಯ ಇಲಾಖೆ‌ ನಿರ್ಧಾರಿಸಿದೆ.

ಜಿಲ್ಲೆಯ ಜನರ ಕನಸು ಸದ್ಯಕ್ಕಿಲ್ಲ ನನಸು

ವಿಧಾನಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಆರೋಗ್ಯ ಇಲಾಖೆಯಿಂದ ಉತ್ತರ ನೀಡಲಾಗಿದೆ. ಆಸ್ಪತ್ರೆಗೆ ಆರ್ಥಿಕ ಇಲಾಖೆ ಒಪ್ಪಿಗೆ ಸಿಕ್ಕಿಲ್ಲ, ಮತ್ತೆ ಪ್ರಸ್ತಾವನೆ ಸಲ್ಲಿಸೋದಾಗಿ ಆರೋಗ್ಯ ಇಲಾಖೆ ಉತ್ತರಿಸಿದೆ. ವಿಪರ್ಯಾಸ ಅಂದ್ರೆ ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕಿದರೆ ಮಾತ್ರ ಜಿಲ್ಲೆಗೆ ಆಸ್ಪತ್ರೆ ಮಂಜೂರು ಮಾಡಲಾಗುತ್ತದೆ. ಹೀಗಾಗಿ ಸದ್ಯಕ್ಕಂತೂ ಜಿಲ್ಲೆಯ ಜನರ ಕನಸು ನನಸಾಗುವ ಲಕ್ಷಣಗಳಿಲ್ಲ.

ಇದನ್ನೂ ಓದಿ: Uttara Kannada: ಭಾರತ vs ಶ್ರೀಲಂಕಾ ಮ್ಯಾಚ್​​ಲ್ಲಿ ಉತ್ತರ ಕನ್ನಡಿಗರ ಹೋರಾಟ!

ಜಿಲ್ಲೆಯಲ್ಲಿ ಮತ್ತೆ ಭುಗಿಲೆದ್ದ ಆಕ್ರೋಶ

ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮಂಜೂರು ಮಾಡಲು ಮೀನಾಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಜಿಲ್ಲೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದೆ. ಜಿಲ್ಲೆಯವರೇ ಆದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಆರ್‌ವಿ ದೇಶಪಾಂಡೆ, ಸಂಸದ ಅನಂತಕುಮಾರ್ ಹೆಗಡೆ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಳ ವಿರುದ್ಧ ಮತ್ತೆ ಜನರು ಆಕ್ರೋಶ ಹೊರಹಾಕಿದ್ದಾರೆ.
Published by:Annappa Achari
First published: