Cheating: ಸುಲಭ ಸಾಲದ ಆಮಿಷ; ಗ್ರಾಹಕರಿಗೆ ಲಕ್ಷಾಂತರ ರೂ ವಂಚನೆ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ ಫೈನಾನ್ಸ್ ಕಂಪನಿ ಮಾಲೀಕ ಒಂಬೈನೂರಕ್ಕು ಹೆಚ್ಚು ಜನರಿಂದ ಡೆಪಾಸಿಟ್ ರೂಪದಲ್ಲಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು, ಮೋಸ ಹೋದ ಜನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ

  • Share this:

ಚಾಮರಾಜನಗರ (ಅ: 13) : ಮೋಸ ಹೋಗುವವರೆಗೂ ವಂಚನೆ ತಪ್ಪಿದ್ದಲ್ಲ ಎಂಬ ಮಾತಿದೆ. ಅದೇ ರೀತಿ ಚಿಟ್​ ಫಂಡ್​, ಫೈನಾನ್ಸ್​ ಕಂಪನಿಗಳು ಜನರ ಈ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮೋಸ ಮಾಡುತ್ತಿರುತ್ತವೆ. ಈ ಬಗ್ಗೆ ಎಷ್ಟೇ ವರದಿ, ಮುನ್ನೆಚ್ಚರಿಕೆ ನೀಡಿದರೂ ಜನ ಮಾತ್ರ ಹಣದ ಆಸೆಗಾಗಿ ಮೋಸ ಹೋಗುತ್ತಿರುವುದು ನಿಂತಿಲ್ಲ. ಸುಲಭ ಸಾಲದ ಸಿಗುತ್ತದೆ ಎಂದು ಹೋದ ಜನ ಆಮೇಲೆ ಗೋಳಾಡುವುದು ತಪ್ಪುವುದಿಲ್ಲ. ಅದೇ ರೀತಿಯ ಮತ್ತೊಂದು ಘಟನೆ ಗುಂಡ್ಲುಪೇಟೆಯಲ್ಲಿ ನಡೆದಿದೆ.   ಸಾಲ ಕೊಡಿಸುವುದಾಗಿ ಆಮಿಷ ಒಡ್ಡಿದ ಫೈನಾನ್ಸ್ ಕಂಪನಿ ಮಾಲೀಕ ಒಂಬೈನೂರಕ್ಕು ಹೆಚ್ಚು ಜನರಿಂದ ಡೆಪಾಸಿಟ್ ರೂಪದಲ್ಲಿ  ಲಕ್ಷಾಂತರ ರೂಪಾಯಿ ವಸೂಲಿ ಮಾಡಿದ್ದು ಮೋಸ ಹೋದ ಜನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ


ಜಿಲ್ಲೆಯ ಗುಂಡ್ಲುಪೇಟೆ, ನಂಜನಗೂಡಿನಲ್ಲಿ  ಎಸ್.ವಿ.ಎಸ್. ಎಂಬ ಹೆಸರಿನ ಖಾಸಗಿ ಫೈನಾನ್ಸ್ ಲಿಮಿಟೆಡ್ ಎಂಬ ಕಂಪನಿ ಮೂರು ಬ್ರ್ಯಾಂಚ್ ತೆರೆದು ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸುವುದಾಗಿ ಜನರನ್ನು ನಂಬಿಸಿ ವಂಚಿಸಿದೆ.


ಇದನ್ನು ಓದಿ: ವರುಣನ ಅಬ್ಬರಕ್ಕೆ ಸಾವಿನ ಮನೆಯಾದ ಕಲಬುರ್ಗಿ ; ಕೆಲವೇ ದಿನಗಳ ಅಂತರದಲ್ಲಿ 10 ಸಾವು


ಅಗತ್ಯ ದಾಖಲೆ ಇದ್ದರೂ ಬ್ಯಾಂಕ್ ಗಳಲ್ಲಿ ಸಾಲ ಸಿಗುವುದು ಕಷ್ಟ, ಆದರೆ ಸುಲಭವಾಗಿ ಸಾಲ ನೀಡುತ್ತೇವೆ. ನಮ್ಮ ಫೈನಾನ್ಸ್ ಕಂಪನಿಯಲ್ಲಿ ಒಂದು ಖಾತೆ ತೆರಿಯಿರಿ ಅಂತಾ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕನೆಂದು ಹೇಳಿಕೊಂಡ ಶಿವರಾಜು ಎಂಬ ವ್ಯಕ್ತಿ ಜನರಿಗೆ ನಂಬಿಸಿದ್ದಾನೆ. 900 ಕ್ಕು ಹೆಚ್ಚು ಮಂದಿಯಿಂದ ತಲಾ 2300 ರೂ ವಸೂಲಿ ಮಾಡಿದ್ದಾನೆ. ತದನಂತರ ಒಂದು ಲಕ್ಷ ರೂಪಾಯಿ ಸಾಲಬೇಕಾದರೆ 10 ಸಾವಿರ ರೂಪಾಯಿ  ಡೆಪಾಸಿಟ್ ಕಟ್ಟಬೇಕು ಎರಡು ಲಕ್ಷ ರೂಪಾಯಿ ಸಾಲ ಬೇಕಾದ್ರೆ 20 ಸಾವಿರ  ರೂಪಾಯಿ ಡೆಪಾಸಿಟ್ ಕಟ್ಟಬೇಕು ಅಂತ ಹೇಳಿ ಲಕ್ಷಾಂತರ ರೂಪಾಯಿ ಹಣವನ್ನು  ವಸೂಲಿ ಮಾಡಿದ್ದಾನೆ.


ಆರು ತಿಂಗಳಾದರೂ ಸಾಲ ನೀಡದಿದ್ದಾಗ ಬ್ಯಾಂಕ್​ನ  ಬ್ಯಾಂಕ್​ ಮೋಸ ಬಯಲಾಗಿದೆ. ಬಳಿಕ  ಗ್ರಾಹಕರು ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವ್ಯಾಪಾರ ಮಾಡಲು ಸಾಲ ಸಿಗುತ್ತೆ  ಎಂದು ಹಣ ಕಟ್ಟಿದ್ದೇವು. ಆರು ತಿಂಗಳಾದರೂ ನಮಗೆ ಯಾವ ಸಾಲವನ್ನು ಕೊಡಿಸಲಿಲ್ಲ. ಕೇಳಿದರೆ ಇಂದು ನಾಳೆ ಎನ್ನುತ್ತಾ ದಿನ ಸಬೂಬು ಹೇಳುತ್ತಿದ್ದಾರೆ. ಒಂದು ಕಡೆ ನಮಗೆ ಸಾಲವನ್ನೂ  ಕೊಡಿಸಲಿಲ್ಲ ನಾವು ಕಟ್ಟಿರುವ  ಹಣ ವಾಪಸ್ ಕೊಡಿ ಎಂದರೂ ಕೊಡುತ್ತಿಲ್ಲ  ಎಂದು ಮೋಸ ಹೋದ ಭಾಗ್ಯ ಎಂಬ ಮಹಿಳೆ ತಿಳಿಸಿದ್ದಾರೆ.


ತಾವು ಮೋಸ ಹೋಗಿದ್ದೇವೆ ಎಂದು ಅರಿತ ನೂರಾರು ಜನ ರೊಚ್ಚಿಗೆದ್ದು  ಫೈನಾನ್ಸ್  ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈ ನಡುವೆ ವ್ಯವಸ್ಥಾಪಕ ನಿರ್ದೇಶಕ ಕರೆ ಮಾಡಿದರೆ ಮೊಬೈಲ್ ಸ್ವಿಚ್ ಆಫ್ ಎಂದು ಬರುತ್ತಿದೆ.


ಪ್ರಕರಣ ದಾಖಲಿಸಿಕೊಂಡಿರುವ ಗುಂಡ್ಲುಪೇಟೆ ಪೊಲೀಸರು, ಫೈನಾನ್ಸ್ ಕಚೇರಿಯಲ್ಲಿದ್ದ ಕಡತಗಳನ್ನು ಸೀಜ್ ಮಾಡಿ ವ್ಯವಸ್ಥಾಪಕ ನಿರ್ದೇಶಕ ಶಿವರಾಜು ವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಗುರಿಪಡಿಸಿದ್ದಾರೆ. ಇನ್ನೊಂದೆಡೆ ತಮ್ಮ ಹಣ ವಾಪಸ್ ಬರುತ್ತಾ ಇಲ್ವಾ ಅಂತಾ ಜನರು ಪೊಲೀಸ್ ಠಾಣೆಯ ಮುಂದೆ ಜಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ.

Published by:Seema R
First published: