10 ವರ್ಷದ ಮಂಗಳೂರು ಪಂಪ್ವೆಲ್​ ಮೇಲ್ಸೇತುವೆಗೆ ಕೊನೆಗೂ ಸಿಕ್ತು ಮುಕ್ತಿ; ಇಂದು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್

2010ರಲ್ಲಿ ಆರಂಭವಾಗಿದ್ದ ಈ ಮೇಲ್ಸೇತುವೆಯ ಕಾಮಗಾರಿ ಗುತ್ತಿಗೆ ಕಂಪೆನಿ ನವಯುಗದಿಂದ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷವಾದರೂ ಪೂರ್ಣಗೊಳ್ಳದೆ ಆರೇಳು ಡೆಡ್ ಲೈನ್ಗಳನ್ನು ಕಂಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಬಳಿ ನಿರ್ಮಾಣವಾಗಿರುವ ಈ ಮೇಲ್ಸೇತುವೆ ಬಗ್ಗೆ ಹುಟ್ಟಿಕೊಂಡಿರುವ ಟ್ರೋಲ್ಗಳಿಗೆ ಲೆಕ್ಕವಿಲ್ಲ!

ಮಂಗಳೂರು ಪಂಪ್ವೆಲ್ ಮೇಲ್ಸೇತುವೆ.

ಮಂಗಳೂರು ಪಂಪ್ವೆಲ್ ಮೇಲ್ಸೇತುವೆ.

  • Share this:
ಮಂಗಳೂರು (ಜ. 29): ಕರಾವಳಿಯಲ್ಲಿ ಅತಿಹೆಚ್ಚು ಬಾರಿ ಟ್ರೋಲ್ಗೊಳಗಾಗಿದ್ದ ಪಂಪ್ವೆಲ್ ಮೇಲ್ಸೇತುವೆ ಬರೋಬ್ಬರಿ 10 ವರ್ಷಗಳ ನಂತರ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ. ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಸಂಸದ ಹಾಗೂ ಬಿಜೆಪಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಳ್ ಇಂದು ಉದ್ಘಾಟಿಸಿದ್ದಾರೆ.

ಮಂಗಳೂರಿನ ಹೃದಯಭಾಗದಲ್ಲಿರುವ ಈ ಫ್ಲೈಓವರ್ ಕಾಮಗಾರಿ 10 ವರ್ಷಗಳ ಹಿಂದೆ ಆರಂಭವಾಗಿತ್ತು. 2010ರಿಂದ ಇದುವರೆಗೂ ಆರೇಳು ಬಾರಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ವಿಸ್ತರಣೆಯಾಗಿತ್ತು. ಇದೀಗ 600 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಡಾಂಬರೀಕರಣವೂ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿದೆ.

2010ರಲ್ಲಿ ಆರಂಭವಾಗಿದ್ದ ಈ ಮೇಲ್ಸೇತುವೆಯ ಕಾಮಗಾರಿ ಗುತ್ತಿಗೆ ಕಂಪೆನಿ ನವಯುಗದಿಂದ 2013ಕ್ಕೆ ಪೂರ್ಣಗೊಳ್ಳಬೇಕಿತ್ತು. ಆದರೆ, 10 ವರ್ಷವಾದರೂ ಪೂರ್ಣಗೊಳ್ಳದೆ ಆರೇಳು ಡೆಡ್ ಲೈನ್ಗಳನ್ನು ಕಂಡಿತ್ತು. ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಬಳಿ ನಿರ್ಮಾಣವಾಗಿರುವ ಈ ಮೇಲ್ಸೇತುವೆ ಬಗ್ಗೆ ಹುಟ್ಟಿಕೊಂಡಿರುವ ಟ್ರೋಲ್ಗಳಿಗೆ ಲೆಕ್ಕವಿಲ್ಲ!

1 ದಶಕ ಕಳೆದರೂ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಮಂಗಳೂರಿಗರು ಆಕ್ರೋಶ ಹೊರಹಾಕಿದ್ದರು. 10 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಮಂಗಳೂರಿನ ಪಂಪ್ವೆಲ್ ಫ್ಲೈಓವರ್ ಕಾಮಗಾರಿ 2019ರ ಡಿಸೆಂಬರ್ ವೇಳೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ, ಆ ಭರವಸೆಯೂ ಹುಸಿಯಾಗಿದ್ದಾಗ ಕರಾವಳಿಜ ಜನ ಅಕ್ಷರಶಃ ಕೆಂಡಾಮಂಡಲವಾಗಿದ್ದರು. ಕೊನೆಗೂ ಇಂದು ಈ ಫ್ಲೈ ಓವರ್​ ಉದ್ಘಾಟನೆಯಾಗುವ ಮೂಲಕ ಕೊನೆಗೂ ಜನರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.

ಇದನ್ನೂ ಓದಿ : ಪೋಸ್ಟ್​ಕಾರ್ಡ್​ ಸಂಪಾದಕ ಮಹೇಶ್​ ವಿಕ್ರಂ ಹೆಗ್ಡೆಗೆ ದೇಶಪ್ರೇಮದ ಪಾಠ: ಒಂದೇ ಮಾತರಂ ಹೇಳುವಂತೆ ಯುವತಿಯರ ಸವಾಲು
First published: