ನ್ಯೂಸ್18 ಕನ್ನಡ ಇಂಪ್ಯಾಕ್ಟ್: 10 ವರ್ಷಗಳ ಬಳಿಕ ಕಡೆಗೂ ವಿದ್ಯುತ್ ಬೆಳಕು​ ಕಂಡ ಗ್ರಾಮಸ್ಥರು

ನ್ಯೂಸ್​ 18  ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಹೆಸ್ಕಾಂ ಅಧಿಕಾರಿಗಳು ವಿದ್ಯುತ್​ ಕಂಬ ಅಳವಡಿಸಿ, ಸಂಪರ್ಕ ಮನೆಗಳಿಗೆ ವಿದ್ಯುತ್​ ಸಂಪರ್ಕ ನೀಡಿದ್ದಾರೆ. ಈಗಾಗಲೇ ಶೇ 80 ರಷ್ಟು ಕಾರ್ಯ ಮುಗಿದಿದ್ದು, ಇನ್ನುಳಿದ ಕೆಲಸವನ್ನು ಅತಿ ಶೀಘ್ರದಲ್ಲಿಯೇ ಮುಗಿಸುವ ಭರವಸೆಯನ್ನು ನೀಡಿದ್ದಾರೆ.

Seema.R | news18-kannada
Updated:January 6, 2020, 5:45 PM IST
ನ್ಯೂಸ್18 ಕನ್ನಡ ಇಂಪ್ಯಾಕ್ಟ್: 10 ವರ್ಷಗಳ ಬಳಿಕ ಕಡೆಗೂ ವಿದ್ಯುತ್ ಬೆಳಕು​ ಕಂಡ ಗ್ರಾಮಸ್ಥರು
ವಿದ್ಯುತ್​ ಸಂಪರ್ಕ ಪಡೆದುಕೊಂಡ ಮನೆ
  • Share this:
ಚಿಕ್ಕೋಡಿ (ಜ.06): ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಹತ್ತು ವರ್ಷಗಳಿಂದ ಕಗ್ಗತ್ತಲ್ಲಲ್ಲೇ ಜೀವನ ಕಳೆಯುತ್ತಿದ್ದ ಸುಮಾರು 50 ಕುಟುಂಬ ನ್ಯೂಸ್​ 18 ಸುದ್ದಿ ಪ್ರಸಾರದಿಂದ ಕಡೆಗೂ ವಿದ್ಯುತ್​ ಸಂಪರ್ಕ ಪಡೆದುಕೊಳ್ಳುವಂತೆ ಆಗಿದೆ.

ಇಲ್ಲಿನ ರಾಯಭಾಗ ತಾಲೂಕಿನ ಮೇಖಳಿ ಗ್ರಾಮದ ಬಟನೊರೆ ತೋಟದ ವಸತಿ ಪ್ರದೇಶದ ಸುಮಾರು 50 ಕುಟುಂಬಗಳು ಕಳೆದ 10 ವರ್ಷಗಳಿಂದ ವಿದ್ಯುತ್​ ಸಂಪರ್ಕದಿಂದ ವಂಚಿತವಾಗಿದ್ದವು. 2007-08ರಲ್ಲಿ ಭಾಗ್ಯ ಜ್ಯೋತಿ ಯೋಜನೆಯಡಿ ಈ ಮನೆಗಳಿಗೆ ವಿದ್ಯುತ್​ ಸಂಪರ್ಕ ಕಲ್ಪಿಸಲು ಸರ್ಕಾರ ಆದೇಶ ನೀಡಿದರು. ಕೆಲಸದ ಗುತ್ತಿಗೆಗಾರನ ಎಡವಟ್ಟಿನಿಂದ ಕೆಲಸ ಅರ್ಥಕ್ಕೆ ನೆನೆಗುದಿಗೆ ಬಿದ್ದಿತು.ಇನ್ನು ಈ ಬಗ್ಗೆ ಇಲ್ಲಿನ ಜನರು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ದೇವರು ಕೊಟ್ಟರು ಪೂಜಾರಿ ಕೊಡಲಿಲ್ಲ ಎಂಬಂತೆ ಇಲ್ಲಿನ ಜನರು ಕತ್ತಲಲ್ಲಿಯೇ 10 ವರ್ಷ ಕಳೆದಿದ್ದಾರೆ. ಈ ಕುರಿತು ನ್ಯೂಸ್​ 18 ಕನ್ನಡ ಸಮಗ್ರ ವರದಿ ಬಿತ್ತರಿಸಿತು.

ಇದನ್ನು ಓದಿ: ಈ ಗ್ರಾಮದಲ್ಲಿ ವಿದ್ಯುತ್​ ಕಂಬಗಳಿವೆ ಆದರೆ, ಕರೆಂಟ್​ ಇಲ್ಲವಷ್ಟೇ; ಪ್ರಕಾಶಿಸುವ ಭಾರತದಲ್ಲಿ 10 ವರ್ಷದಿಂದ ಕತ್ತಲಲ್ಲೇ ಬದುಕು!

ನ್ಯೂಸ್​ 18  ಸುದ್ದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಹೆಸ್ಕಾಂ ಅಧಿಕಾರಿಗಳು ವಿದ್ಯುತ್​ ಕಂಬ ಅಳವಡಿಸಿ, ಸಂಪರ್ಕ ಮನೆಗಳಿಗೆ ವಿದ್ಯುತ್​ ಸಂಪರ್ಕ ನೀಡಿದ್ದಾರೆ. ಈಗಾಗಲೇ ಶೇ 80 ರಷ್ಟು ಕಾರ್ಯ ಮುಗಿದಿದ್ದು, ಇನ್ನುಳಿದ ಕೆಲಸವನ್ನು ಅತಿ ಶೀಘ್ರದಲ್ಲಿಯೇ ಮುಗಿಸುವ ಭರವಸೆಯನ್ನು ನೀಡಿದ್ದಾರೆ.

(ವರದಿ: ಲೋಹಿತ್ ಶಿರೋಳ)​​
First published:January 6, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ