ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಪಟ್ಟಿ


Updated:July 31, 2018, 8:46 PM IST
ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ: ಇಲ್ಲಿದೆ ಪಟ್ಟಿ

Updated: July 31, 2018, 8:46 PM IST
ನ್ಯೂಸ್​-18 ಕನ್ನಡ

ಬೆಂಗಳೂರು(ಜುಲೈ.31): ಸಿಎಂ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್​-ಕಾಂಗ್ರೆಸ್​ ಸರ್ಕಾರದಲ್ಲಿ ಹಲವು ಕತೂಹಲಗಳನ್ನು ಮೂಡಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕಾತಿ ಮಾಡಲಾಗಿದೆ. ಖಾತೆ ಹಂಚಿಕೆ, ಸಚಿವರಿಗೆ ಆಡಳಿತ ಕೇಂದ್ರ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಕಾರ್ಯ ಪೂರ್ಣಗೊಳಿಸಿರುವ ಸಿಎಂ ಕುಮಾರಸ್ವಾಮಿ ಅವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದ್ಧಾರೆ.
ಸಿಎಂ ಕುಮಾರಸ್ವಾಮಿ ಸಚಿವ ಸಂಪುಟದ 26 ಸಚಿವರುಗಳಿಗೆ ರಾಜ್ಯದ 30 ಜಿಲ್ಲೆಗಳ ಉಸ್ತುವಾರಿಯನ್ನು ವಹಿಸಲಾಗಿದೆ. ಸಚಿವ ಡಿ.ಕೆ ಶಿವಕುಮಾರ್​ ಅವರಿಗೆ ರಾಮನಗರ ಮತ್ತು ಬಳ್ಳಾರಿ, ಎಚ್​ಡಿ ರೇವಣ್ಣ ಅವರಿಗೆ ಹಾಸನ ಮತ್ತು ಕೆ. ಜಾರ್ಜ್​ಗೆ ಚಿಕ್ಕಮಗಳೂರು ಸೇರಿದಂತೆ ಹಲವರಿಗೆ ಬೇರೆ ಬೇರೆ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು . ಈ ಹಿನ್ನಲೆಯಲ್ಲಿ ಸಾಕಷ್ಟು ಅಳೆದು ತೂಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಂಪುಟದ ಸಚಿವರಿಗೆ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ವಹಿಸಲಾಗಿದೆ.

ಇದರಂತೆ ಜೆಡಿಎಸ್​ 9 ಜಿಲ್ಲೆ , ಕಾಂಗ್ರೆಸ್​ 20 ಜಿಲ್ಲೆಗಳ ಜವಾಬ್ದಾರಿಯನ್ನು ಹಂಚಿಕೊಂಡಿವೆ. ಇನ್ನು ಈ ಬಗ್ಗೆ ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಂಚಿಕೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಜಿಲ್ಲಾ ಉಸ್ತುವಾರಿ ಸಚಿವರು :
Loading...


 • ಡಾ. ಜಿ ಪರಮೇಶ್ವರ್‌ – ಬೆಂಗಳೂರು ನಗರ ಮತ್ತು ತುಮಕೂರು.

 • ಆರ್‌. ವಿ ದೇಶಪಾಂಡೆ – ಉತ್ತರ ಕನ್ನಡ ಮತ್ತು ಧಾರವಾಡ

 • ಡಿ.ಕೆ ಶಿವಕುಮಾರ್‌ – ರಾಮನಗರ ಮತ್ತು ಬಳ್ಳಾರಿ

 • ಕೆ.ಜೆ ಜಾರ್ಜ್ – ಚಿಕ್ಕಮಗಳೂರು

 • ರಮೇಶ್‌ ಜಾರಕೀಹೊಳಿ –  ಬೆಳಗಾವಿ

 • ಶಿವಾನಂದ ಪಾಟೀಲ್ – ಬಾಗಲಕೋಟೆ

 • ಪ್ರಿಯಾಂಕ್‌ ಖರ್ಗೆ – ಕಲಬುರಗಿ

 • ರಾಜಶೇಖರ ಬ. ಪಾಟೀಲ್ – ಯಾದಗಿರಿ

 • ವೆಂಕಟರಮಣಪ್ಪ – ಚಿತ್ರದುರ್ಗ

 • ಎನ್.ಎಚ್‌ ಶಿವಶಂಕರರೆಡ್ಡಿ – ಚಿಕ್ಕಬಳ್ಳಾಪುರ

 • ಕೃಷ್ಣೇಭೈರೇಗೌಡ – ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ

 • ಯು.ಟಿ ಖಾದರ್‌ – ದಕ್ಷಿಣ ಕನ್ನಡ

 • ಸಿ. ಪುಟ್ಟರಂಗಶೆಟ್ಟಿ – ಚಾಮರಾಜನಗರ

 • ಜಮೀರ್‌ ಅಹ್ಮದ್‌ – ಹಾವೇರಿ

 • ಜಯಮಾಲ – ಉಡುಪಿ

 • ಆರ್‌. ಶಂಕರ್‌ – ಕೊಪ್ಪಳ

 • ಎನ್‌. ಮಹೇಶ್‌ – ಗದಗ

 • ವೆಂಕಟರಾವ್‌ ನಾಡಗೌಡ – ರಾಯಚೂರು

 • ವಾಸು ಶ್ರೀನಿವಾಸ್‌ – ದಾವಣಗೆರೆ

 • ಸಿ.ಎಸ್‌ ಪುಟ್ಟರಾಜು – ಮಂಡ್ಯ

 • ಸಾ.ರಾ ಮಹೇಶ್ – ಕೊಡಗು

 • ಬಂಡೆಪ್ಪ ಕಾಶೆಂಪುರ್‌- ಬೀದರ್‌

 • ಎಚ್‌.ಡಿ ರೇವಣ್ಣ – ಹಾಸನ

 • ಡಿ.ಸಿ ತಮ್ಮಣ್ಣ – ಶಿವಮೊಗ್ಗ

 • ಎಂ.ಸಿ ಮನಗೂಳಿ – ಬಿಜಾಪುರ

 • ಜಿ.ಟಿ ದೇವೇಗೌಡ – ಮೈಸೂರು

First published:July 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...