ಕೊನೆಗೂ ಸಂಸತ್‌ ಪ್ರವೇಶಿಸಿದ ಮಲ್ಲಿಕಾರ್ಜುನ ಖರ್ಗೆ; ಮೋದಿಗೆ ಕೊಡ್ತಾರಾ ಮಾಸ್ಟರ್‌ ಸ್ಟ್ರೋಕ್?

ರಾಜ್ಯದ ಈ ಇಬ್ಬರು ಘಟಾನುಘಟಿ ರಾಜಕೀಯ ಮುತ್ಸದ್ದಿಗಳು ರಾಜ್ಯಸಭೆಗೆ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಪ್ರವೇಶದ ಮೂಲಕ ರಾಜ್ಯಸಭೆಯಲ್ಲಿ ವಿರೋಧ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎನ್ನಲಾಗುತ್ತಿದೆ.

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

  • Share this:
ಕಳೆದ ಲೋಕಸಭೆಯಲ್ಲಿ ಇಡೀ ಸದನದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅಬ್ಬರಿಸಿ ಬೊಬ್ಬಿರಿದು ದಕ್ಷಿಣ ಭಾರತದವರಿಗೂ ಕೆಪಾಸಿಟಿ ಇದೆ ಎಂದು ತೋರಿಸಿ ಕೊಟ್ಟವರು ಮಲ್ಲಿಕಾರ್ಜುನ ಖರ್ಗೆ. ಲೊಕಸಭೆಯ ವಿರೋಧ ಪಕ್ಷದ ಕಾಂಗ್ರೆಸ್ ನಾಯಕನಾಗಿ ಕೊಟ್ಟ ಜಬಾಬ್ದಾರಿ ಯನ್ನು ಯಶಸ್ವಿಯಾಗಿ ನಿರ್ವಹಿಸಿ ಅಧಿನಾಯಕಿ ಸೋನಿಯಾ ಗಾಂಧಿ ಸೇರಿದಂತೆ ಕೈ ಪಡೆಯಿಂದ ಶಹಬ್ಬಾಷ್‌ಗಿರಿ ಪಡೆದಿದ್ದರು ಖರ್ಗೆ.

ಕಳೆದ ಲೋಕಸಭೆಯ ಅಧಿವೇಶನದಲ್ಲಿ ಖರ್ಗೆಗೆ ಇದು ಲೋಕಸಭೆ ಎಂದು ಎದುರೇಟು ಕೊಟ್ಟು ಖರ್ಗೆ ಎದುರು ಅವರ ಶಿಷ್ಯ ಉಮೇಶ್ ಜಾಧವ್ ರನ್ನು ಬಿಜೆಪಿಗೆ ಕರೆತಂದು ಸೋಲಿಲ್ಲದ ಸರದಾರ ಖರ್ಗೆಯನ್ನೇ ಸೋಲಿಸಿ ಮಾತು ಉಳಿಸಿಕೊಂಡು ತಾಕತ್ತು ಏನೆಂದು ಕಾಂಗ್ರೆಸ್ ಪಕ್ಷಕ್ಕೆ ತೋರಿಸಿ ಕೊಟ್ಟಿದ್ದರು ಪಿಎಂ ಮೋದಿ.

ಲೋಕಸಭೆ ಸೋಲಿನ ಬಳಿಕ ಖರ್ಗೆ ಕೂಡ ಹತಾಶರಾಗಿದ್ದರು. ಸೋಲು ಬರ ಸಿಡಿಲಿನಂತಾಗಿತ್ತು. ಖರ್ಗೆ ರಾಜಕೀಯ ಜೀವನಕ್ಕೆ ಏಟು ಕೊಟ್ಟಿತು ಎನ್ನುವಷ್ಟರಲ್ಲಿ ಖರ್ಗೆಯವರ ಪಕ್ಷ ನಿಷ್ಠೆ ರಾಜ್ಯಸಭೆಗೆ ಪ್ರವೇಶ ಮಾಡುವಂತೆ ಮಾಡಿದೆ. ಅಲ್ಲದೆ ಸೋಲಿಲ್ಲದ ಸರದಾರ ಖರ್ಗೆ ಅನಿವಾರ್ಯವಾಗಿ ಹಿಂಬಾಗಿಲ ಅಧಿಕಾರ ಪಡೆದಿದ್ದಾರೆ. ಆದರೆ, ಖರ್ಗೆ ಮಾತ್ರ ರಾಜ್ಯಸಭೆಯಲ್ಲಿ ಸೋಲನ್ನು ಮರೆಸುವಂತೆ ಬಿಜೆಪಿ ಸರ್ಕಾರದ ವಿರುದ್ಧ ಅಬ್ಬರಿಸಲು ಅಣಿಯಾಗುತ್ತಿದ್ದಾರೆ.

ಇನ್ನು ಹಿಂಬಾಗಿಲ ರಾಜಕೀಯ ಮಾಡುವುದಿಲ್ಲ ಎಂದೇಳುತ್ತಲೇ ಅನಿವಾರ್ಯವಾಗಿ ರಾಜ್ಯಸಭೆಗೆ ಎಂಟ್ರಿ ಕೊಟ್ಟಿದ್ದಾರೆ ಮಾಜಿ ಪಿಎಂ ಹೆಚ್.ಡಿ ದೇವೆಗೌಡ. ಮಣ್ಣಿನ ಮಗ ದೇವೇಗೌಡರು ರಾಜ್ಯಸಭೆಯಲ್ಲಿ ರಾಜ್ಯದ ರೈತರ ಧ್ವನಿಯಾಗಲಿದ್ದಾರೆ ಎನ್ನಲಾಗುತ್ತಿದೆ‌. ಅಸ್ತಿತ್ವಕ್ಕಾದರೂ ಬಿಜೆಪಿ ಸರಕಾರದ ವಿರುದ್ಧ ರಾಜ್ಯಸಭೆಯಲ್ಲಿ ಹೋರಾಟ ಮಾಡಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Karnataka CoronaVirus; ಕಲಬುರ್ಗಿಯಲ್ಲಿ ನಿಲ್ಲದ ಕೊರೋನಾ ಮರಣ ಮೃದಂಗ; ಒಂದೇ ದಿನ ಇಬ್ಬರ ಬಲಿ!

ರಾಜ್ಯದ ಈ ಇಬ್ಬರು ಘಟಾನುಘಟಿ ರಾಜಕೀಯ ಮುತ್ಸದ್ದಿಗಳು ರಾಜ್ಯಸಭೆಗೆ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರ ಪ್ರವೇಶದ ಮೂಲಕ ರಾಜ್ಯಸಭೆಯಲ್ಲಿ ವಿರೋಧ ಪಕ್ಷಕ್ಕೆ ಮತ್ತಷ್ಟು ಬಲ ಬರಲಿದೆ ಎನ್ನಲಾಗುತ್ತಿದೆ. ಆದರೆ, ಈ ಇಬ್ಬರೂ ನಾಯಕರು ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಹೇಗೆ ಅಬ್ಬರಿಸಲಿದ್ದಾರೆ, ಮೋದಿಗೆ ಹೇಗೆ ಮಾಸ್ಟರ್‌ ಸ್ಟ್ರೋಕ್‌ ಕೊಡಲಿದ್ದಾರೆ? ಎಂಬುದನ್ನು ಕಾದು ನೋಡಬೇಕಿದೆ.
First published: