Shooting Ban- ವಿಲನ್​ಗಳಾದ ತಮಿಳು, ತೆಲುಗು ಚಿತ್ರತಂಡಗಳು; ಮೇಲುಕೋಟೆಯಲ್ಲಿ ಚಿತ್ರೀಕರಣ ನಿಷೇಧ ಸಾಧ್ಯತೆ

Melkote Temple Properties Allegedly Damaged: ತಮಿಳು ಮತ್ತು ತೆಲುಗಿನ ಚಿತ್ರತಂಡಗಳು ಮೇಲುಕೋಟೆ ದೇವಸ್ಥಾನದ ಸ್ಥಳದಲ್ಲಿ ಹಾನಿ ಮಾಡಿದ ಆರೋಪ ಇದೆ. ಈ ಕಾರಣಕ್ಕೆ ಮೇಲುಕೋಟೆಯಲ್ಲಿ ಯಾವುದೇ ಸಿನಿಮಾ ಶೂಟಿಂಗ್ಗೆ ಅವಕಾಶ ಕೊಡದಂತೆ ನಿರ್ಬಂಧ ಹೇರುವ ಸಾಧ್ಯತೆ ಇದೆ.

ಮೇಲುಕೋಟೆಯಲ್ಲಿ ಸಿನಿಮಾ ಶೂಟಿಂಗ್ ತಂಡಗಳ ಅವಾಂತರ

ಮೇಲುಕೋಟೆಯಲ್ಲಿ ಸಿನಿಮಾ ಶೂಟಿಂಗ್ ತಂಡಗಳ ಅವಾಂತರ

 • Share this:
  ಮಂಡ್ಯ ಜಿಲ್ಲೆಯ ಐತಿಹಾಸಿಕ ಪುರಾಣ ಪ್ರಸಿದ್ದ ಸ್ಥಳವಾದ ಮೇಲುಕೋಟೆ ಕ್ಷೇತ್ರ (Melkote temple in Mandya) ಇತ್ತೀಚೆಗೆ ಸುದ್ದಿಯಲ್ಲಿದೆ ಇದಕ್ಕೆ ಕಾರಣ ತಮಿಳು ಹಾಗೂ ತೆಲಗು ಚಿತ್ರ ತಂಡಗಳು. ತಮಿಳು ಚಿತ್ರ ತಂಡದಿಂದ ತಂಗಿ ಕೊಳ ಕಲುಷಿತ ಮಾಡಿದ ಆರೋಪ ಇದ್ರೆ, ತೆಲಗು ಚಿತ್ರ ತಂಡ ಅಷ್ಟತೀರ್ಥೋತ್ಸವದಂದು ಉತ್ಸವಕ್ಕೆ ಅಡ್ಡಿಟುಂಟು ಮಾಡಿದೆ. ಅಲ್ಲದೇ, ಸುಧಾ ಮೂರ್ತಿಯವರ (Sudha Murthy) ಶ್ರಮದಿಂದ ಜೀರ್ಣೋದ್ಧಾರ ಮಾಡಿದ್ದ ಕಲ್ಯಾಣಿ ಬಳಿಯ ಸ್ಥಳಗಳಿಗೆ ಧಕ್ಕೆಯುಂಟು ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.

  ತಮಿಳು ಹಾಗೂ ತೆಲುಗು ಚಿತ್ರ ತಂಡಗಳ ಅವಾಂತರ:

  ಮಂಡ್ಯ ಜಿಲ್ಲೆಯ ಮೇಲುಕೋಟೆ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾಗಿದೆ. ಇಲ್ಲಿನ ಪ್ರತಿ ಸ್ಥಳಗಳು ಪುರಾತನ ಇತಿಹಾಸವನ್ನ ಸಾರುವ ಪವಿತ್ರ ಸ್ಥಳವಾಗಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ದೇಶದ ವಿವಿಧ ಭಾಷೆಗಳ ಚಿತ್ರೀಕರಣ ಸೇರಿದಂತೆ ಹಾಲಿವುಡ್ ನಂತಹ ದೊಡ್ಡಮಟ್ಟದ ಸಿನಿಮಾಗಳ ಚಿತ್ರೀಕರಣವನ್ನ ಕೂಡ ಮಾಡಲಾಗಿದೆ. ಆದ್ರೆ ಈಗ ತಮಿಳು ಹಾಗೂ ತೆಲಗು ಚಿತ್ರರಂಗದ ಕೆಲ ಸಿನಿಮಾ ತಂಡದವ್ರು ಮಾಡಿದ ಎಡವಟ್ಟಿನಿಂದ ಈಗ ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ ಬ್ರೇಕ್ ಬೀಳುವ ಚೆರ್ಚೆಗಳು ಆರಂಭವಾಗಿವೆ.

  ಕಳೆದ ತಿಂಗಳು ತಂಗಿ ಕೊಳದ ಬಳಿ ನಡೆದಿದ್ದ ತಮಿಳು ಸಿನಿಮಾ ಶೂಟಿಂಗ್...

  ಕಳೆದ ತಿಂಗಳು ಮೇಲುಕೋಟೆಯ ಪವಿತ್ರ ತಂಗಿ ಕೊಳದ ಬಳಿ ತಮಿಳು ಸಿನಿಮಾವೊಂದರ ಶೂಟಿಂಗ್ ಮಾಡಲಾಗಿತ್ತು. ಈ ಸಂದರ್ಭ ಚಿತ್ರ ತಂಡ ವಿಶುವಲ್ಸ್ ರಿಚ್‌ನೆಸ್ ಗಾಗಿ ತಂಗಿ ಕೊಳಕ್ಕೆ ಕೆಮಿಕಲ್ ಯುಕ್ತ ಬಣ್ಣ ಹಾಗೂ ಹೂವಿನ ಅಲಂಕಾರಗಳನ್ನ ಮಾಡಲಾಗಿತ್ತು ಅಂತ ಹೇಳಲಾಗ್ತಿದೆ. ಹಿಗಾಗಿ ಪವಿತ್ರವಾಗಿದ್ದ ತಂಗಿ ಕೊಳದ ನೀರು ಕಲುಷಿತವಾಗಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆದಿದ್ದು, ತಂಗಿ ಕೊಳದ ನೀರು ಕುಡಿಯಲು ಯೋಗ್ಯವಿಲ್ಲ ಅಂತ ಲ್ಯಾಬ್ ರಿಪೋರ್ಟ್ ಕೂಡ ಬಂದಿದೆ. ಆದ್ರೆ ಹಿಂದಿನಿಂದಲೂ ತಂಗಿ ಕೊಳದ ನೀರು ಪವಿತ್ರ ನೀರು ಅನ್ನೋ ಪ್ರತೀತಿ ಇದೆ. ಹೀಗಾಗೆ ಶ್ರೀ ಚಲುವನಾರಾಯಣಸ್ವಾಮಿ ಅಭಿಷೇಕಕ್ಕೆ ಹಾಗೂ ಭಕ್ತರಿಗೆ ಇದೇ ನೀರನ್ನ ತೀರ್ಥವಾಗಿ ನೀಡಲಾಗ್ತಿತ್ತು. ಆದ್ರೆ ಸದ್ಯ ತಂಗಿ ಕೊಳದ ನೀರು ಕುಡಿಯಲು ಯೋಗ್ಯವಿಲ್ಲ ಅನ್ನೋ ವಿಚಾರ ತಿಳಿಯುತ್ತಿದ್ದಂತೆ ಭಕ್ತ ವಲಯದಲ್ಲಿ ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

  ತಮಿಳು ಚಿತ್ರ ತಂಡದ ಬೆನ್ನಲ್ಲೇ ತೆಲಗು ಸಿನಿಮಾ ಚಿತ್ರ ತಂಡದಿಂದ ಸ್ಮಾರಕಕ್ಕೆ ಧಕ್ಕೆ....

  ಕಳೆದ ಎರಡು ದಿನಗಳಿಂದ ಮೇಲುಕೋಟೆಯ ಸುತ್ತಮುತ್ತಲ ಪ್ರದೇಶದಲ್ಲಿ ತೆಲುಗಿನ ಸಿನಿಮಾ ‘ಬಂಗಾರರಾಜು ಭಾಗ-2’ ಶೂಟಿಂಗ್ ನಡಿತಿದೆ. ಅದರಂತೆ ಮೇಲುಕೋಟೆ ಕಲ್ಯಾಣಿ ಬಳಿ ಸಿನಿಮಾ ತಂಡ ಸೆಟ್ ಕೂಡ ನಿರ್ಮಿಸಿದೆ. ಆದ್ರೆ ಮೇಲುಕೋಟೆಯಲ್ಲಿ ಅಷ್ಠತೀರ್ಥೋತ್ಸವ ನಡೆಯುತ್ತಿದ್ದು, ಕಲ್ಯಾಣಿ ಬಳಿ ಸಂಪ್ರದಾಯದಂತೆ ಉತ್ಸವ ಮೂರ್ತಿಯನ್ನ ಕೊಂಡೊಯ್ಯಲಾಗಿದೆ. ಆದ್ರೆ ಈ ಸಂದರ್ಭ ತೆಲಗು ಸಿನಿಮಾ ತಂಡ ತಾವು ಅನುಮತಿ ಪಡೆದು ಶೂಟಿಂಗ್ ಮಾಡ್ತಿದ್ದೀವಿ ಅಂತ ಉತ್ಸವಕ್ಕೆ ಅಡಚಣೆ ಉಂಟುಮಾಡಿದ್ದಾರೆ. ಇದು ಭಕ್ತರು ಹಾಗೂ ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆದ್ರೆ ಇದಕ್ಕೆ ಮುಂದುವರೆದ ಭಾಗವಾಗಿ ಇಂದು ಮತ್ತೊಂದು ಅವಾಂತರ ನಡೆದಿದ್ದು, ಕಲ್ಯಾಣಿ ಬಳಿಯ ಧಾರ ಮಂಟಪದ ಬಳಿ ಬಳಸಿದ ಕ್ರೇನ್​ನಿಂದ ಸ್ಮಾರಕಗಳಿಗೆ ಧಕ್ಕೆಯುಂಟಾಗಿದೆ.

  ಇದನ್ನೂ ಓದಿ: Jothe Jotheyali: ಅನು ಸಿರಿಮನೆ ಪಾತ್ರಧಾರಿ ಚೇಂಜ್? ಸೀರಿಯಲ್ ಬಿಟ್ಟು ಸಿನಿಮಾ ಕಡೆ ಹೊರಟಿದ್ರಂತೆ ಮೇಘಾ ಶೆಟ್ಟಿ!

  ಸುಧಾಮೂರ್ತಿ ಅವರು ಜೀರ್ಣೋದ್ಧಾರ ಮಾಡಿದ್ದ ಸ್ಥಳಕ್ಕೆ ಧಕ್ಕೆ....

  ಇನ್​ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಮೇಲುಕೋಟೆಯ ಕಲ್ಯಾಣಿ ಬಳಿಯ ಪ್ರದೇಶವನ್ನ ಸಾಕಷ್ಟು ಹಣ ಖರ್ಚು ಮಾಡಿ ಜೀರ್ಣೋದ್ಧಾರ ಮಾಡಿದ್ದರು. ಅದರಂತೆ ಧಾರ ಮಂಟಪದ ಬಳಿ ಗಾರ್ಡನ್ ಗಾಗಿ ಸ್ಥಳವನ್ನ ಮೀಸಲಿಟ್ಟಿದ್ದರು. ಆದರೆ ತೆಲಗು ಸಿನಿಮಾ ತಂಡ ಇಂದು ಆ ಸ್ಥಳದಲ್ಲಿ ಚಿತ್ರೀಕರಣ ನಡೆಸಲು ಕ್ರೇನ್ ಬಳಸಿದೆ.‌ ಇದರಿಂದ ಆ ಸ್ಥಳ ಗುಂಡಿ ಬಿದ್ದಿದ್ದು, ಧಕ್ಕೆಯುಂಟಾಗಿದೆ. ಇದ್ರಿಂದ ಸ್ಥಳೀಯರು ಹಾಗೂ ಭಕ್ತರು ಈಗ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.

  ಚಿತ್ರೀಕರಣಕ್ಕೆ ಫುಲ್​ಸ್ಟಾಪ್ ಇಡಲು ಅಧಿಕಾರಿಗಳ ವಲಯದಲ್ಲಿ ಚರ್ಚೆ:

  ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತರಾದ ಪೂರ್ಣಿಮಾ ಅವರು ಚಿತ್ರೀಕರಣ ತಂಡಗಳು ಮಾಡಿದ ಅವಾಂತರಗಳ ವರದಿ ಪಡೆದುಕೊಂಡಿದ್ದು, ಘಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಮಂಡ್ಯ ಡಿಸಿ ಅಶ್ವಥಿ ಕೂಡ ಘಟನೆಯ ವರದಿಗಳನ್ನ ತರಿಸಿಕೊಂಡಿದ್ದು, ಇನ್ಮುಂದೆ ಸಿನಿಮಾ ತಂಡಗಳಿಗೆ ಮೇಲುಕೋಟೆಯಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡಬೇಕೋ ಅಥವಾ ಬೇಡವೊ ಎಂಬ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

  ವರದಿ: ಸುನೀಲ್ ಗೌಡ
  Published by:Vijayasarthy SN
  First published: