HOME » NEWS » State » FILE SEDITION CASE AGAINST WHO CELEBRATE BLACK DAY ON KANNADA RAJYOTSAVA SAYS JUDGE KL MANJUNATH

ಕನ್ನಡ ರಾಜ್ಯೋತ್ಸವ ವಿರೋಧಿಸುವ ನಾಡದ್ರೋಹಿಗಳ ವಿರುದ್ಧ ದೇಶದ್ರೋಹ ಕೇಸ್​ ದಾಖಲಿಸಬೇಕು: ನ್ಯಾ. ಮಂಜುನಾಥ್​​

ನಂತರ ಸಭೆಯನ್ನುದ್ದೇಶಿಸಿ ಮಾತಾಡಿದ  ನ್ಯಾ.  ಕೆ.ಎಲ್​​ ಮಂಜುನಾಥ, ರಾಜ್ಯೋತ್ಸವಕ್ಕೆ ವಿರುದ್ಧ ಕರಾಳ ದಿನಾಆಚರಣೆ ಮಾಡುವುದು ಕಾನೂನಿಗೆ ವಿರುದ್ಧ. ಇಂತಹರ ವಿರುದ್ಧ ಸರ್ಕಾರ ದೇಶದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದರು.

news18-kannada
Updated:February 3, 2020, 5:54 PM IST
ಕನ್ನಡ ರಾಜ್ಯೋತ್ಸವ ವಿರೋಧಿಸುವ ನಾಡದ್ರೋಹಿಗಳ ವಿರುದ್ಧ ದೇಶದ್ರೋಹ ಕೇಸ್​ ದಾಖಲಿಸಬೇಕು: ನ್ಯಾ. ಮಂಜುನಾಥ್​​
ಕನ್ನಡ ಬಾವುಟ
  • Share this:
ಬೆಳಗಾವಿ(ಫೆ.03): ನವೆಂಬರ್​ 1 ಕರ್ನಾಟಕ ಏಕೀಕರಣವಾದ ದಿನ. ಹೀಗಾಗಿ ಅಂದು ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ, ಬೆಳಗಾವಿಯಲ್ಲಿ ಮಾತ್ರ ಕನ್ನಡ ರಾಜ್ಯೋತ್ಸವದಂದೇ ಕರಾಳ ದಿನಾಚರಣೆ ಆಚರಣೆ ಮಾಡಲಾಗುತ್ತದೆ. ಮಹಾರಾಷ್ಟ್ರ ಏಕೀಕರಣ ಸಮಿತಿಯೇ ಈ ಕರಾಳ ದಿನಾಚರಣೆ ನೇತೃತ್ವವಹಿಸುತ್ತದೆ. ಹೀಗೆ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಕರಾಳ ದಿನಾಚರಣೆ ಮಾಡುವ ನಾಡದ್ರೋಹಿಗಳ ವಿರುದ್ಧ ದೇಶದ್ರೋಹದ ಕೇಸ್ ದಾಖಲಿಸಬೇಕು ಎಂದು ಬೆಳಗಾವಿ ಗಡಿ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾ. ಕೆ. ಎಲ್ ಮಂಜುನಾಥ್ ಅಭಿಪ್ರಾಯಪಟ್ಟಿದ್ಧಾರೆ.

ಇಂದು ಬೆಳಗಾವಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗಡಿ ವಿವಾದ ಪ್ರಕರಣ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ನೀಡಲು ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಆಯೋಗದ ಅಧ್ಯಕ್ಷ ನ್ಯಾ. ಕೆ ಎಲ್ ಮಂಜುನಾಥ್, ಬೆಳಗಾವಿ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಲೋಕೇಶ್​​ ಕುಮಾರ್, ಎಸ್​​ಪಿ ಲಕ್ಷ್ಮಣ ನಿಂಬುರ್ಗಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.

ಸಭೆಗೆ ಆಗಮಿಸಿದ್ದ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಬೆಳಗಾವಿ ಗಡಿ ವಿವಾದದ ಬಗ್ಗೆ ರಕ್ತದಲ್ಲಿ ಬರೆದ ಪತ್ರವನ್ನು ತಂದಿದ್ದರು. ಗಡಿಯಲ್ಲಿ ಕ್ಯಾತೆ ತೆಗೆಯುವ ಎಂಎಎಸ್​​ ಮತ್ತು ಶಿವಸೇನೆ ನಿಷೇಧಿಸಬೇಕು. ಹಾಗೆಯೇ ಗಡಿ ಹಾಗೂ ಜಲ ಆಯೋಗ ಬೇರ್ಪಡಿಸಬೇಕು ಎಂದು ಆಗ್ರಹಿಸಿದ್ದರು. ಈ ವೇಳೆ ಗಡಿ ವಿಚಾರ ಸಂಬಂಧ ಆಯೋಗ ಏನು ಹೋರಾಟ ಮಾಡಿದೆ? ಸುಪ್ರೀಂಕೋರ್ಟ್​ನಲ್ಲಿ ದಾಖಲಾಗಿರುವ ಕೇಸ್ ಯಾವ ಹಂತದಲ್ಲಿದೆ? ಮುಂದಿನ ನಡೆಯೇನು ಎಂಬುದರ ಕುರಿತಾದ ಮಾಹಿತಿಯನ್ನು ಕರ್ನಾಟಕ ನವನಿರ್ಮಾಣ ಸೇನೆ ಗಮನಕ್ಕೆ ಆಯೋಗದ ಸದಸ್ಯರು ತಂದರು.

ನಂತರ ಸಭೆಯನ್ನುದ್ದೇಶಿಸಿ ಮಾತಾಡಿದ  ನ್ಯಾ.  ಕೆ.ಎಲ್​​ ಮಂಜುನಾಥ, ರಾಜ್ಯೋತ್ಸವಕ್ಕೆ ವಿರುದ್ಧ ಕರಾಳ ದಿನಾಆಚರಣೆ ಮಾಡುವುದು ಕಾನೂನಿಗೆ ವಿರುದ್ಧ. ಇಂತಹರ ವಿರುದ್ಧ ಸರ್ಕಾರ ದೇಶದ್ರೋಹದ ಅಡಿಯಲ್ಲಿ ಕೇಸ್ ದಾಖಲಿಸಬೇಕು ಎಂದರು.

ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಬೆಂಗಳೂರಿನಲ್ಲಿ ಬಿಸಿಯೂಟ ಕಾರ್ಯಕರ್ತೆಯರು; ಅಹೋರಾತ್ರಿ ಧರಣಿಗೆ ನಿರ್ಧಾರ

ಇನ್ನು, ನಾಲ್ಕು ಜನ ರಾಜ್ಯೋತ್ಸವ ನಿಲ್ಲಿಸಲು ಆಗಲ್ಲ. 1956ರ ನಂತರ ಕರ್ನಾಟಕದಲ್ಲಿ ಯಾರೆಲ್ಲ ಹುಟ್ಟಿದ್ದಾರೋ ಎಲ್ಲರೂ ಕನ್ನಡಿಗರೇ. ಅವರ ಮಾತ್ರ ಭಾಷೆ ಮರಾಠಿ, ಉರ್ದು ಇರಬಹುದು. ಆದರೆ, ಕಾನೂನು ಪ್ರಕಾರ ಕರ್ನಾಟಕದವರೇ ಎಂದು ಹೇಳಿದರು.

ಆಯೋಗದ ಅಧ್ಯಕ್ಷರ ನಂತರ ಮಾತಾಡಿದ ಕನ್ನಡಪರ ಹೋರಾಟಗಾರ ಅಶೋಕ್​​ ಚಂದರಗಿ, ಸಭೆಯೂ ನಮ್ಮ ನಿರೀಕ್ಷೆಯಂತೆ ಆಗಿಲ್ಲ. ಗಡಿ ಸಂರಕ್ಷಣಾ ಆಯೋಗ ವ್ಯಾಪ್ತಿಗೆ ಗಡಿಗೆ ಸಂಬಂಧಿಸಿದ ಎಲ್ಲಾ ವಿಚಾರಗಳು ಬರಲಿವೆ ಎಂದು ದಿ. ನಿವೃತ್ತ ನ್ಯಾ. ಮಳಿಮಠ ಹೇಳಿದ್ದರು. ಆದರೆ ಇದನ್ನು ಈಗಿನ ಅಧ್ಯಕ್ಷರು ನಿರಾಕರಣೆ ಮಾಡಿದ್ದಾರೆ. ಬೆಳಗಾವಿಯ ಕನ್ನಡ ಸಮಸ್ಯೆ ಮತ್ತು ಎಂಇಎಸ್​​​​​ ವಿಚಾರ ಆಯೋಗ ವ್ಯಾಪ್ತಿಗೆ ಬರಲ್ಲ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ. ಆಯೋಗ ಪುನರ್ ರಚನೆ ಮಾಡಬೇಕು. ಅದಕ್ಕೆ ಉತ್ತರ ಕರ್ನಾಟಕದ ನ್ಯಾಯಾಧೀಶರ ನೇಮಕ ಮಾಡಬೇಕು. ಬೆಂಗಳೂರಿನಲ್ಲಿರುವ ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಧಿಕಾರದ ಕಚೇರಿ  ಬೆಳಗಾವಿಗೆ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.
First published: February 3, 2020, 5:51 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading