• Home
  • »
  • News
  • »
  • state
  • »
  • Tushar Girinath: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ, 48 ಗಂಟೆಯೊಳಗೆ ಮಾಹಿತಿ ನೀಡಲು ಸೂಚನೆ- ತುಷಾರ್ ಗಿರಿನಾಥ್

Tushar Girinath: ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಆರೋಪ, 48 ಗಂಟೆಯೊಳಗೆ ಮಾಹಿತಿ ನೀಡಲು ಸೂಚನೆ- ತುಷಾರ್ ಗಿರಿನಾಥ್

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್

ಬಿಎಲ್ ಓ, ಬಿಎಲ್​ಸಿ ಎಂದು ನಕಲಿ ಐಡಿ ಕಾರ್ಡ್ ಮಾಡಿದವರ ವಿರುದ್ದ ಪೊಲೀಸ್ ಕಂಪ್ಲೇಟ್ ನೀಡಲಾಗಿದೆ. ಚಿಲುಮೆ ಸಂಸ್ಥೆ ಮೇಲೆ ಸಹ ದೂರು ದಾಖಲಾಗಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್​ ಗಿರಿನಾಥ್ ಹೇಳಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.18): 2018ನೇ ಇಸವಿಯಿಂದ ಮತದಾರರ ಪಟ್ಟಿ (Voters List) ಪರಿಷ್ಕರಣೆ ಹಾಗೂ ಜಾಗೃತಿ ಬೇರೆ ಬೇರೆ ವಿಚಾರಗಳಿಗೆ ಚಿಲುಮೆ ಸಂಸ್ಥೆಗೆ ನೀಡುತ್ತಾ ಬಂದಿದ್ದೇವೆ. ಕೆಲವು ಕಾರ್ಯಾಚರಣೆಯಲ್ಲಿ ಹಣವನ್ನು ಸಹ ನೀಡಿದ್ದೇವೆ. ಕೆಲವು ಜಾಗೃತಿ ಕಾರ್ಯಕ್ರಮಗಳನ್ನು ಉಚಿತವಾಗಿ ಮಾಡಿದ್ದಾರೆ ಎಂದು ಹೇಳಿದ್ದಾರೆ.  ಈ ವರ್ಷವೂ ಸಹ ಜಾಗೃತಿ ಕಾರ್ಯಕ್ರಮಕ್ಕೆ ಸಹ ಕೆಲವು ನಿರ್ಬಂಧನೆಯೊಂದಿಗೆ ಒಪ್ಪಿಗೆ ಸೂಚಿಸಲಾಗಿತ್ತು.  ಇದೀಗ ಅಕ್ರಮ ನಡೆದಿದೆ ಎನ್ನಲಾಗ್ತಿದ್ದು, ಇದೀಗ ಚಿಲುಮೆ ಸಂಸ್ಥೆ (Chilume Institute) ವಿರುದ್ಧ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ (BBMP Chief Commissioner Tushar Girinath) ಹೇಳಿದ್ದಾರೆ.


ಜಾಗೃತಿ ಮೂಡಿಸುವ ಹೊಣೆ ಚಿಲುಮೆಗೆ ನೀಡಿದ್ರು


ಈ ವರ್ಷ ಎಲೆಕ್ಷನ್ ಇಯರ್ ಆಗಿದೆ. ಆ ಬಗ್ಗೆ ಜಾಗೃತಿ ಮೂಡಿಸೋ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಬಗ್ಗೆ ಸಹ ಜಾಗೃತಿ ಮೂಡಿಸುವ ಹೊಣೆ ಚಿಲುಮೆಗೆ ನೀಡಲಾಗಿತ್ತು. ಜೊತೆಗೆ ವಿಹೆಚ್ ಎ ಆ್ಯಪ್ ಡೌನ್ ಲೋಡ್ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು. ಇದನ್ನು ನಮ್ಮ‌ ಬಿಬಿಎಂಪಿ ಅಧಿಕಾರಿಗಳ ಮೇಲ್ ಉಸ್ತುವಾರಿಯಲ್ಲಿ ಮಾಡುವ ಜವಾಬ್ದಾರಿ ನೀಡಲಾಗಿತ್ತು ಎಂದ್ರು.


ಚಿಲುಮೆ ಸಂಸ್ಥೆ ಮೇಲೆ ಒಂದು ಕಂಪ್ಲೇಟ್


ಆದ್ರೆ ಚಿಲುಮೆ ಸಂಸ್ಥೆ ಮೇಲೆ ಒಂದು ಕಂಪ್ಲೇಟ್ ಬಂದಿದ್ದು ಅದನ್ನು ತನಿಖೆ ಮಾಡಲಾಗಿದೆ. ಚಿಲುಮೆ ಅವ್ರು ಬಿಎಲ್ ಓ ಅನ್ನೋದಾಗಿ ನಮೋದಿಸಿರುವ ಐಡಿ ಕಾರ್ಡ್ ದುರುಪಯೋಗ ಮಾಡಿರೋದು ತಿಳಿದು ಬಂದಿದೆ. ಹಾಗಾಗಿ ನಾನು ನವೆಂಬರ್ ಎರಡರಕ್ಕೆ ಅವರಿಗೆ ನೀಡಲಾಗಿದ್ದು, ಈಗ ಅನುಮೋದನೆಯನ್ನು ಕ್ಯಾನ್ಸಲ್ ಮಾಡಿದ್ದೇವೆ.


ಬಿಬಿಎಂಪಿ ಸಿಇಓ ಆಫೀಸ್​


ಜೊತೆಗೆ ಬಿಬಿಎಂಪಿ ಸಿಇಓ ಆಫೀಸ್​ಗೆ ಈ ದುರುಪಯೋಗದ ಬಗ್ಗೆ ತಿಳಿಸಿದ್ದೇವೆ. ಯಾರ್ಯಾರು ಬಿಎಲ್ ಓ, ಬಿಎಲ್ ಸಿ ಎಂದು ನಕಲಿ ಐಡಿ ಕಾರ್ಡ್ ಮಾಡಿದವರ ವಿರುದ್ದ ಪೊಲೀಸ್ ಕಂಪ್ಲೇಟ್ ನೀಡಲಾಗಿದೆ.
ಚಿಲುಮೆ ಸಂಸ್ಥೆ ಮೇಲೆ ಸಹ ದೂರು ದಾಖಲಾಗಿವೆ. ಚಿಲುಮೆ ಸಂಸ್ಥೆ ಮತದಾರರ ಖಾಸಗಿ ಡೇಟಾ ಕಲೆಕ್ಟ್ ಮಾಡಿರುವ ಬಗ್ಗೆ ಸಹ ಮಾಧ್ಯಮಗಳಲ್ಲಿ ಬಿತ್ತರವಾಗ್ತಿದೆ.


ಖಾಸಗಿ ಮಾಹಿತಿ ಕಲೆಕ್ಟ್ ಮಾಡಿದ್ರೆ ಅಪರಾಧ 


ಈ ಬಗ್ಗೆ ಸಹ ತನಿಖೆ ನಡೆಯುತ್ತಿದೆ ಚಿಲುಮೆ ಸಂಸ್ಥೆ ಏನಾದ್ರು ವ್ಯಕ್ತಿಗಳ ಖಾಸಗಿ ಮಾಹಿತಿ ಕಲೆಕ್ಟ್ ಮಾಡಿದ್ರೆ ಅದು ಅಪರಾಧ ಎಂದು ಹೇಳಿದ್ರು. ಈಗಾಗ್ಲೇ ರಾಜ್ಯ ಚುನಾವಣಾ ಆಯೋಗ ಸಹ ಪ್ರಾದೇಶಿಕ ಆಯುಕ್ತರಿಗೆ ವರದಿ ನೀಡುವಂತೆ ಸೂಚನೆ ನೀಡಿದೆ. ನಾವು ಸಹ ಆಂತರಿಕವಾಗಿ ಎಲ್ಲಾ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ
ಚಿಲುಮೆ ಸಂಸ್ಥೆಯ ಮೇಲೆ ಹಿಂದಿನಿಂದ ಯಾವುದೆ ಆರೋಪಗಳಿಲ್ಲ ಹಾಗಾಗಿ ನಾವು ಅವರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ವಿ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.


ಇದನ್ನೂ ಓದಿ: Congress: ಸರ್ಕಾರ, ಬಿಬಿಎಂಪಿಯಿಂದ ಮತದಾರರ ಮಾಹಿತಿ ಕಳ್ಳತನ; ಕಾಂಗ್ರೆಸ್ ಆರೋಪ


ಮತದಾರರ ಪಟ್ಟಿಯಲ್ಲಿ ಡಿಲೀಟ್ ವಿಚಾರ


ಐಡಿ ಕಾರ್ಡ್ ತಗೆದುಕೊಂಡಿರುವವರು ಹಾಗೂ ವಿಚಾರ ಹರಡಿದವರ ಮೇಲೂ ಪೊಲೀಸ್ ತನಿಖೆ ನಡೆಯುತ್ತಿದೆ. ತಪ್ಪು ಅಧಿಕಾರಿಗಳಿಂದ ಆಗಿದ್ರೆ ಅವರ ಮೇಲೆ ಕ್ರಮ ಖಂಡಿತ ತೆಗೆದುಕೊಳ್ತೀವಿ. 6 ಲಕ್ಷ ಮತದಾರರ ಹೆಸ್ರು ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಚಿಲುಮೆ ಸಂಸ್ಥೆಯ ವಿಚಾರಕ್ಕೂ, ಮತದಾರರ ಹೆಸರು ಡಿಲೀಟ್​ಗೂ ಸಂಬಂಧವಿಲ್ಲ ಚಿಲುಮೆ ಸಂಸ್ಥೆಗೆ ನಾವು ಜಾಗೃತಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವ ಮೊದಲೇ ಡಿಲೀಟ್ ಮಾಡಲಾಗಿದೆ ಎಂದು ಹೇಳಿದ್ರು. ಹಾಗೇನಾದ್ರು ಸಂಬಂಧ ಇದ್ರೆ ಆ ಬಗ್ಗೆ ಸಹ ತನಿಖೆ ನಡೆಸುತ್ತೇವೆ. ಚಿಲುಮೆ ಸಂಸ್ಥೆಗೆ ಈ ಅಧಿಕಾರ ನೀಡಲು ಯಾರಾದೇ ಒತ್ತಡ ಇರಲಿಲ್ಲ ಎಂದು ತುಷಾರ್ ಗಿರಿನಾಥ್​ ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: