ಬಳ್ಳಾರಿ ಆಣೆ-ಪ್ರಮಾಣ ರಾಜಕೀಯ; ಶಾಸಕ ನಾಗೇಂದ್ರ ಸಿಗದೆ ಕೂಡ್ಲಿಗಿ ಪ.ಪಂ ಅಧ್ಯಕ್ಷ ಅಧಿಕಾರಕ್ಕಾಗಿ ಕಿತ್ತಾಟ

ಕೂಡ್ಲಗಿ ಪಟ್ಟಣಪಂಚಾಯತ್ ಒಟ್ಟು 20 ಸದಸ್ಯರನ್ನೊಳಗೊಂಡಿದೆ. ಆರು ಕಾಂಗ್ರೆಸ್, ಒಂದು ಜೆಡಿಎಸ್ ಹೊರತುಪಡಿಸಿದರೆ ಉಳಿದ ಸದಸ್ಯರೆಲ್ಲ ಪಕ್ಷೇತರರೇ ಇರುವುದು. ಪಕ್ಷೇತರ ಬೆಂಬಲ ಪಡೆದು ಶಾಸಕ ನಾಗೇಂದ್ರ ಸಮ್ಮುಖದಲ್ಲಿ ರಜನಿಕಾಂತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

G Hareeshkumar | news18-kannada
Updated:September 15, 2019, 7:51 AM IST
ಬಳ್ಳಾರಿ ಆಣೆ-ಪ್ರಮಾಣ ರಾಜಕೀಯ; ಶಾಸಕ ನಾಗೇಂದ್ರ ಸಿಗದೆ ಕೂಡ್ಲಿಗಿ ಪ.ಪಂ ಅಧ್ಯಕ್ಷ ಅಧಿಕಾರಕ್ಕಾಗಿ ಕಿತ್ತಾಟ
ಕೂಡ್ಲಿಗಿ ಪಟ್ಟಣ ಪಂಚಾಯತ್ ಹಾಗೂ ಅಧ್ಯಕ್ಷ ರಜನಿಕಾಂತ್
  • Share this:
ಬಳ್ಳಾರಿ(ಸೆ.15): ರಾಜ್ಯ ರಾಜಕಾರಣದಲ್ಲಿ ಆಣೆ-ಪ್ರಮಾಣದ ಸದ್ದು ಯಾವಾಗಲೂ ಜೋರಾಗಿಯೇ ಇದೆ. ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಹೆಸರೇಳಿ ಆಣೆ ಪ್ರಮಾಣ ಮಾಡಲು ಸಿಎಂ, ಮಾಜಿ ಸಿಎಂ ಹಾದಿಯಾಗಿ ದಿಗ್ಗಜರೇ ಮುಂದಾಗಿದ್ದರು. ಇದೀಗ ಬಳ್ಳಾರಿಯಲ್ಲಿ ಶ್ರೀ ತಿರುಪತಿ ವೆಂಕಟರಮಣ ದೇವರ ಮೇಲಾಣೆ ಪಾಲಿಟಿಕ್ಸ್ ಶುರುವಾಗಿದೆ. ಕೂಡ್ಲಿಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಸ್ಥಾನ ಕೊಡಿಸುವುದಾಗಿ ಕೈ ಶಾಸಕ ನಾಗೇಂದ್ರ ಭರವಸೆ ನೀಡಿದ್ದರು.

ಆಣೆ ಪ್ರಮಾಣ ಪಾಲಿಟಿಕ್ಸ್ ಸಿಎಂ, ಸಚಿವರು, ಶಾಸಕರು ಮಾತ್ರವಲ್ಲ. ಅದು ಪಟ್ಟಣ ಪಂಚಾಯತ್ ಅಧ್ಯಕ್ಷ ಹುದ್ದೆವರೆಗೂ ಬಂದುಬಿಟ್ಟಿದೆ. ನಿಯಮಿತವಾಗಿ ದೊರೆಯುವ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷ ಹುದ್ದೆಗೆ ಪ್ರತಿನಿಧಿಗಳು ತಮ್ಮದೇ ಕಾಲಮಿತಿಯಲ್ಲಿ ಅಧಿಕಾರ ಬದಲಾವಣೆ ಮಾಡಿಕೊಳ್ಳುವ ಪದ್ಧತಿಯಿದೆ. ಇದು ಆಯಾ ಶಾಸಕರು, ಸಚಿವರ ಸಮ್ಮುಖದಲ್ಲಿ ಹೊಂದಾಣಿಕೆಯೂ ಆಗುತ್ತದೆ.

ಇದೇ ರೀತಿ ಬಳ್ಳಾರಿಯ ಕೂಡ್ಲಿಗಿ ಪಟ್ಟಣ ಪಂಚಾಯತ್ ಸದಸ್ಯರಿಗೆ ಕೊಟ್ಟ ಮಾತಿನಂತೆ ಕಾಂಗ್ರೆಸ್ ಶಾಸಕ ನಾಗೇಂದ್ರ ಮಾತು ತಪ್ಪಿದ್ದಾರೆ ಎಂದು ಅಧ್ಯಕ್ಷ ಸ್ಥಾನ ವಂಚಿತ ಪ.ಪಂ ಸದಸ್ಯ ಬಶೀರ್ ಅಹ್ಮದ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ಕಳೆದ ಎರಡುವರೆ ವರುಷದ ಹಿಂದೆ ಹಾಲಿ ಅಧ್ಯಕ್ಷ ರಜನೀಕಾಂತ್ ಕೂಡ್ಲಿಗಿ ಶಾಸಕರಾಗಿದ್ದ ನಾಗೇಂದ್ರ ಸಮ್ಮುಖದಲ್ಲಿ ಸಾರ್ವಜನಿಕರ ಸಭೆಯಲ್ಲಿ ಒಂದು ವರ್ಷದ ನಂತರ ತಮ್ಮ ಸ್ಥಾನಕ್ಕೆ ರಾಜೀನಾಮೆ ಬೇರೆಯವರಿಗೆ ಅವಕಾಶ ಮಾಡಿಕೊಡುವುದಾಗಿ ಪ್ರಮಾಣ ಮಾಡಿದ್ದರು.

ಇದನ್ನೂ ಓದಿ : ಆರ್ಥಿಕ ಹಿಂಜರಿತ ಮರೆಮಾಚಲು ಮಾಜಿ ಸಚಿವ ಡಿಕೆ ಶಿವಕುಮಾರ್ ಬಲಿ ; ಮಾಜಿ ಸಂಸದ ಉಗ್ರಪ್ಪ ಕಿಡಿ

ಇದುವರೆಗೂ ರಜನಿಕಾಂತ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅಧಿಕಾರಕ್ಕೇರುವ ಸಂದರ್ಭದಲ್ಲಿ ಪಕ್ಷೇತರ ಸದಸ್ಯ ರಶೀದ್ ಬೆಂಬಲ ಪಡೆದಿದ್ದರು. ಅವರಿಗೆ ಮುಂದೆ ಅಧ್ಯಕ್ಷ ಸ್ಥಾನ ಅವಕಾಶ ಮಾಡಿಕೊಡಲಾಗುವುದೆಂದು ಶಾಸಕ ನಾಗೇಂದ್ರ ತಿರುಪತಿ ಶ್ರೀ ವೆಂಕಟೇಶ್ವರನ ಮೇಲೆ ಆಣೆ ಪ್ರಮಾಣ ಮಾಡಿ ಭರವಸೆ ನೀಡಿದ್ದರು ಎಂದು ಕೂಡ್ಲಿಗಿ ಪ.ಪಂ ಸದಸ್ಯ ರಶೀದ್ ಆರೋಪಿಸುತ್ತಾರೆ.

ಕೂಡ್ಲಗಿ ಪಟ್ಟಣ ಪಂಚಾಯತ್ ಒಟ್ಟು 20 ಸದಸ್ಯರನ್ನೊಳಗೊಂಡಿದೆ. ಆರು ಕಾಂಗ್ರೆಸ್, ಒಂದು ಜೆಡಿಎಸ್ ಹೊರತುಪಡಿಸಿದರೆ ಉಳಿದ ಸದಸ್ಯರೆಲ್ಲ ಪಕ್ಷೇತರರೇ ಇರುವುದು. ಪಕ್ಷೇತರ ಬೆಂಬಲ ಪಡೆದು ಶಾಸಕ ನಾಗೇಂದ್ರ ಸಮ್ಮುಖದಲ್ಲಿ ರಜನಿಕಾಂತ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಮೂರು ವರುಷ ಅಧಿಕಾರಾವಧಿಯಲ್ಲಿ ವರುಷಕ್ಕೊಬ್ಬರು ಎಂಬಂತೆ ಮೂವರು ಸದಸ್ಯರು ಅಧ್ಯಕ್ಷರಾಗಬೇಕೆಂದು ಮಾತಾಡಿಕೊಂಡಿದ್ದರಂತೆ. ಅದರಂತೆ ಅಧಿಕಾರ ಹಸ್ತಾಂತರವಾಗದೆ ಎರಡುವರೆ ವರ್ಷ ಕಳೆದರೂ ರಜನಿಕಾಂತ್ ಹೇಳಿದಂತೆ ರಾಜೀನಾಮೆ ನೀಡಿಲ್ಲ.

ಕಳೆದ ತಿಂಗಳು ಶಾಸಕರಿಗೆ ರಾಜೀನಾಮೆ ನೀಡಿದರೇ ಹೊರತು ಅಧಿಕೃತವಾಗಿ ಜಿಲ್ಲಾಡಳಿತಕ್ಕೆ ರಾಜೀನಾಮೆ ನೀಡಲೇ ಇಲ್ಲ. ಇನ್ನು ಮೂರು ತಿಂಗಳಿನಲ್ಲಿ ಅಧಿಕಾರವೇ ಮುಗಿಯುವುದರಿಂದ ಉಳಿದ ಜಿಪಂ ಸದಸ್ಯರು ರಾಜೀನಾಮೆ ನೀಡಬೇಡಿ. ಕೆಲ ತಿಂಗಳಿಗೆ ಮತ್ತೊಬ್ಬ ಅಧ್ಯಕ್ಷ ಅವಶ್ಯಕತೆಯಿಲ್ಲ. ಇದು ಅಭಿವೃದ್ಧಿ ಕಾರ್ಯಗಳಿಗೆ ತೊಂದರೆಯಾಗುತ್ತದೆಯೆಂದು ತಡೆದಿದ್ದರಿಂದ ನಾನು ಸುಮ್ಮನಾದೆ. ಇದೆಲ್ಲ ಶಾಸಕರ ಗಮನಕ್ಕೆ ತಂದಿದ್ದೇನೆ ಎಂದು ಕೂಡ್ಲಿಗಿ ಪಪಂ ಅಧ್ಯಕ್ಷ ರಜನಿಕಾಂತ್ ಪ್ರತಿಕ್ರಿಯೆ ನೀಡಿದ್ದಾರೆ.ಇದನ್ನೂ ಓದಿ : ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವಲ್ಲಿ ರಾಜ್ಯದ ಸಂಸದರು ವಿಫಲ: ಸತೀಶ್ ಜಾರಕಿಹೊಳಿ

ಕಳೆದ ಎರಡುವರೆ ವರ್ಷದ ಹಿಂದೆ ಅಧಿಕಾರಕ್ಕೇರುವ ಸಂದರ್ಭದಲ್ಲಿ ಪಕ್ಷೇತರ ಬೆಂಬಲ ಪಡೆದು ಇದೀಗ ಅಧ್ಯಕ್ಷ ಸ್ಥಾನಕ್ಕೇರಿದ ರಜನಿಕಾಂತ್ ನಡೆ ಬಗ್ಗೆ ಸದಸ್ಯ ಬಷೀರ್ ಚಕಾರವೆತ್ತುತ್ತಿದ್ದಾರೆ. ಆದರೆ ಶಾಸಕ ನಾಗೇಂದ್ರ ತಿರುಪತಿ ತಿಮ್ಮಪ್ಪನ ಮೇಲೆ ಆಣೆ ಮಾಡಿ ನನಗೆ ಅಧಿಕಾರದ ಆಸೆ ತೋರಿಸಿದರು ಎಂದು ಹೇಳಿಕೊಂಡು ಬಷೀರ್ ಓಡಾಡುತ್ತಿದ್ದಾರೆ. ಇದರ ಬಗ್ಗೆ ಶಾಸಕ ನಾಗೇಂದ್ರ ಪ್ರತಿಕ್ರಿಯೆ ನೀಡಬೇಕಾಗಿದೆ.

ವರದಿ : ಶರಣು ಹಂಪಿ

First published:September 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ