Udupi Student: ಕಡು ಬಡತನವಿದ್ದರೂ ಈ ಯುವಕನ ಸಾಧನೆ ನೋಡಿ; ನಿಜವಾಗಲೂ ಮೆಚ್ಚಲೇಬೇಕು

ಕಡು ಬಡತನದಲ್ಲಿಯೂ, ಓದು ಬರಹ ಕಲಿತು, ಜೀವನದಲ್ಲಿ ಉನ್ನತ ಸಾಧನೆ ಮಾಡಿದ ಸಾಕಷ್ಟು ಭಾರತೀಯರ ಉದಾಹರಣೆಗಳ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ ಮತ್ತು ನೋಡಿದ್ದೇವೆ ಕೂಡ. ಅಂತಹ ಸಾಧಕರ ಪಟ್ಟಿಗೆ ಮತ್ತೊಂದು ಸೇರ್ಪಡೆ ರಮೇಶ್ ನಾಯ್ಕ.

ರಮೇಶ್ ನಾಯ್ಕ

ರಮೇಶ್ ನಾಯ್ಕ

  • Share this:
ಕುಂದಾಪುರ : ಕಡು ಬಡತನದಲ್ಲಿಯೂ (Poverty), ಓದು ಬರಹ ಕಲಿತು, ಜೀವನದಲ್ಲಿ ಉನ್ನತ ಸಾಧನೆ ಮಾಡಿದ ಸಾಕಷ್ಟು ಭಾರತೀಯರ (Indian) ಉದಾಹರಣೆಗಳ ಬಗ್ಗೆ ನಾವು ಕೇಳಿದ್ದೇವೆ, ಓದಿದ್ದೇವೆ ಮತ್ತು ನೋಡಿದ್ದೇವೆ ಕೂಡ. ಅಂತಹ ಸಾಧಕರ ಪಟ್ಟಿಗೆ ಮತ್ತೊಂದು ಸೇರ್ಪಡೆ ರಮೇಶ್ ನಾಯ್ಕ (Ramesh Naik). ಹೌದು, ಕಡು ಬಡತನವಿದ್ದರೂ, ಹೆತ್ತವರ (Parents) ಬೆಂಬಲದಿಂದ ಶಿಕ್ಷಣದ ಹಾದಿಯಲ್ಲಿ ನಡೆದು, ಇದೀಗ ಹಾರ್ವರ್ಡ್ ವಿಶ್ವ ವಿದ್ಯಾನಿಲಯದ (Harvard University) ಸಂಶೋಧನಾ ವಿದ್ಯಾರ್ಥಿಗಳಿಗೆ ಉಪನ್ಯಾಸಕನಾಗಿ ಹುದ್ದೆಯನ್ನು ಸ್ವೀಕರಿಸಿರುವ ಸಾಧನೆ ಅವರದ್ದು. ಮುಂಬೈನ ಪ್ರತಿಷ್ಠಿತ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‍ನ ಸಂಶೋಧನೆ ಮತ್ತು ಅಂತಿಮ ವರ್ಷದ ಪಿಹೆಚ್‍ಡಿ (PhD ವಿದ್ಯಾರ್ಥಿ ಆಗಿರುವ ರಮೇಶ್ ಅವರದ್ದು ಅಪರೂಪದ ಸಾಧನೆ ಎಂದರೆ ತಪ್ಪಿಲ್ಲ.

ಏಕೆಂದರೆ, ಅವರು ಕುಡುಬಿ ಸಮುದಾಯದಲ್ಲಿ, ಪಿಹೆಚ್‍ಡಿ ಪಡೆಯಲಿರುವ ಮೊತ್ತ ಮೊದಲ ಯುವಕ. ಅವರು ಔರಂಗಬಾದ್‍ನ ವಾಟರ್ ಪಾಲಿಸಿ ಸೆಂಟರಿನಲ್ಲಿ ವಿಸಿಟಿಂಗ್ ಫೆಲೋ ಆಗಿ ಕೆಲಸ ಮಾಡುತ್ತಿದ್ದಾರೆ.

ಪ್ರಿನ್ಸಿಪಲ್ ಟೈಟಲ್ ನೀಡಿದ ಹಾರ್ವರ್ಡ್ ಯುನಿವರ್ಸಿಟಿ

“ನಾನು ಕೃಷಿ ಬರ ಪರಿಸ್ಥಿತಿಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದೇನೆ. ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿರುವುದು ನನ್ನ ಜೀವನದ ಸಂತೋಷದ ಕ್ಷಣವಾಗಿದೆ. ನಾನು ವಾರದಲ್ಲಿ ಒಂದು ದಿನ ಎಂಟು ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿ ತೆಗೆದುಕೊಳ್ಳುತ್ತಿದ್ದೆನೆ.

ನನಗೆ ಪಾಠ ಮಾಡಲು ಕೊಟ್ಟ ವಿಷಯ ‘ಯುವಜನತೆ ಮತ್ತು ನಿರಾಶ್ರಿತತೆ’. ಹಾರ್ವರ್ಡ್ ಯುನಿವರ್ಸಿಟಿ ನನಗೆ ಪ್ರಿನ್ಸಿಪಲ್ ಟೈಟಲ್ ಅನ್ನು ನೀಡಿದೆ. ನಾನು ಪೋಸ್ಟ್ ಡಾಕ್ಟೋರಲ್ ಫೆಲೋಶಿಪ್ ಅನ್ನು ಪಡೆಯುವ ಮತ್ತು ವಿದ್ಯಾಭ್ಯಾಸವನ್ನು ಮುಂದುವರೆಸುವ ಗುರಿಯನ್ನು ಹೊಂದಿದ್ದೇನೆ” ಎಂದು ರಮೇಶ್ ನಾಯ್ಕ ಹೇಳಿದ್ದಾರೆ.

ಬಡತನವಿದ್ರೂ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಹೆತ್ತವರು

ರಮೇಶ್ ನಾಯ್ಕ ಅವರು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಊರಾದ ತಂತ್ರಾಡಿಯಲ್ಲಿ ಮುಗಿಸಿದರು. ಬಳಿಕ ಬ್ರಹ್ಮಾವರದ ಡಾ. ಎವಿ ಬಾಳಿಗ ಕಾಲೇಜಿನಲ್ಲಿ ಬಿಎಸ್‍ಡಬ್ಲ್ಯೂ ಡಿಗ್ರಿ ಪಡೆದರು. ಹೆತ್ತವರಾದ ಮಂದರ್ತಿ ಪುಟ್ಟಯ್ಯ ನಾಯ್ಕ ಮತ್ತು ಗಿರಿಜಾ ಅವರು ಬೇರೆಯವರ ಹೊಲದಲ್ಲಿ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದು, ಮಗನಿಗೆ ವಿದ್ಯಾಭ್ಯಾಸ ಮುಂದುವರೆಸಲು ಸದಾ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.

ಇದನ್ನೂ ಓದಿ: Karnataka Textbook Row: ಕುವೆಂಪು ಅವರಿಗೆ ಅವಮಾನವಾದ್ರೆ ಅದು ಬರಗೂರು ರಾಮಚಂದ್ರಪ್ಪರಿಗೆ ಸೇರುತ್ತೆ: BC Nagesh

ಮೈಸೂರಿನ ವಿವೇಕಾನಂದ ಇನ್‍ಸ್ಟಿಟ್ಯೂಟ್ ಫಾರ್ ಲೀಡರ್ಶಿಪ್ ಡೆವೆಲೆಪ್‍ಮೆಂಟ್ ಸಂಸ್ಥೆಯಲ್ಲಿ, ಡೆವೆಲೆಪ್‍ಮೆಂಟ್ ಮ್ಯಾನೆಜ್‍ಮೆಂಟ್ ಕೋರ್ಸ್‍ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಅವರಿಗೆ ಧಾರವಾಡದ ಸ್ಕೋಪ್ ಇನ್‍ಸ್ಟಿಟ್ಯೂಟ್‍ನಲ್ಲಿ ಫೆಲೋಶಿಪ್ ದೊರಕಿತು.

ಅವರು ಆರು ತಿಂಗಳ ಕಾಲ ದೇಶದಾದ್ಯಂತ ತರಬೇತಿ ಪಡೆದು, ಬಳಿಕ ಧಾರಾವಾಡದ ಹಾರೋಬೆಳವಡಿ ಗ್ರಾಮದ ಸಮುದಾಯದ ಜೊತೆ ನೀರು ಮತ್ತು ಸ್ವಚ್ಛತೆ, ಬಾವಿಗಳ ಪುನರುಜ್ಜೀವನದ ಬಗ್ಗೆ ಕೆಲಸ ಮಾಡಿದರು.

ಥೈಲ್ಯಾಂಡ್ ಸಮ್ಮರ್ ಸ್ಕೂಲ್ ಸೆಮಿನಾರಿಗೆ ಆಯ್ಕೆ

2016- 17 ರಲ್ಲಿ ಅವರು ಎಂಫಿಲ್ ಮುಗಿಸಿದ್ದಾರೆ. 2018 ರಲ್ಲಿ ಅವರು, 17 ರಾಷ್ಟ್ರಗಳು ಭಾಗಿಯಾಗಿದ್ದ ಥೈಲ್ಯಾಂಡ್ ಸಮ್ಮರ್ ಸ್ಕೂಲ್ ಸೆಮಿನಾರಿಗೆ ಆಯ್ಕೆಯಾಗಿದ್ದರು. ಅದರಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಇಬ್ಬರು ವ್ಯಕ್ತಿಗಳಲ್ಲಿ ಅವರು ಒಬ್ಬರಾಗಿದ್ದರು. 2019 ರಲ್ಲಿ ಸ್ವೀಡನ್, ಇಂಡೋನೇಶಿಯಾ ಮತ್ತು ಶ್ರೀಲಂಕಾಗಳಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಅವರು ಪ್ರಬಂಧವನ್ನು ಮಂಡಿಸಿದ್ದಾರೆ.

ಯುವಕನ ಬೆನ್ನೆಲುಬಾಗಿ ನಿಂತ ವಿಶ್ವ ಕೊಂಕಣಿ ಕೇಂದ್ರ

“ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ವಿಶ್ವ ಕೊಂಕಣಿ ಕೇಂದ್ರ ನನ್ನ ಪಾಲಿಗೆ ಎರಡನೇ ಮನೆ ಇದ್ದಂತೆ. ಕಳೆದ 10 ವರ್ಷಗಳಲ್ಲಿ ಅದು ನನ್ನ ಶಿಕ್ಷಣದಲ್ಲಿ ಮಾರ್ಗರ್ಶನ ನೀಡಿದೆ ಮತ್ತು ಆರ್ಥಿಕ ಸಹಾಯವನ್ನು ಒದಗಿಸುತ್ತಿದೆ. ಈ ಕೇಂದ್ರದ ಕಾರಣದಿಂದಲೇ ನಾನು ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‍ನಲ್ಲಿ ಪಿಹೆಚ್‍ಡಿ ಮಾಡುತ್ತಿದ್ದೇನೆ. ಮೋಹನ್ ದಾಸ್ ಪೈ ನನಗೆ ಸ್ಪೂರ್ತಿ” ಎಂದು ಹೇಳುತ್ತಾರೆ ರಮೇಶ್ ನಾಯ್ಕ.

ಇದನ್ನೂ ಓದಿ:  Text Book Row: ಸಂಶೋಧಕನಿಗೆ ಸತ್ಯವೇ ಮುಖ್ಯ, ನನ್ನದು ಎರಡೂ ಕಡೆಗೂ ಒಪ್ಪಿಗೆಯಾದ ಪಂಥವಿರಬೇಕು; ರೋಹಿತ್ ಚಕ್ರತೀರ್ಥ

ರಮೇಶ್ ನಾಯ್ಕ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಕಂಡು ಬರುವ ಹಿಂದುಳಿದ ಕುಡುಬಿ ಸಮುದಾಯಕ್ಕೆ ಸೇರಿದವರು. ಆ ಜನಾಂಗದ ಶೇಕಡಾ 75 ರಷ್ಟು ಜನರು ಬಡತನದ ರೇಖೆಗಿಂತ ಕೆಳಗಿದ್ದಾರೆ. ಶೇಕಡಾ 80 ರಷ್ಟು ಜನರ ಜೀವನ ದಿನಗೂಲಿಯನ್ನು ಅವಲಂಬಿಸಿದೆ. ರಮೇಶ್ ನಾಯ್ಕ ಅವರು ತಮ್ಮ ಸಮುದಾಯದ ಅಭಿವೃದ್ಧಿಗೆ ಕೆಲಸ ಮಾಡುವ ಆಶಯವನ್ನು ಹೊಂದಿದ್ದಾರೆ.
Published by:Ashwini Prabhu
First published: