ಜಾರಕಿಹೊಳಿ ಸಹೋದರರು- ಹೆಬ್ಬಾಳ್ಕರ್ ನಡುವೆ ನೇರಾನೇರ ಫೈಟ್ ಆರಂಭ..!

news18
Updated:August 28, 2018, 1:45 PM IST
ಜಾರಕಿಹೊಳಿ ಸಹೋದರರು- ಹೆಬ್ಬಾಳ್ಕರ್ ನಡುವೆ ನೇರಾನೇರ ಫೈಟ್ ಆರಂಭ..!
news18
Updated: August 28, 2018, 1:45 PM IST
-ಚಂದ್ರಕಾಂತ್​ ಸುಗಂಧಿ, ನ್ಯೂಸ್​ 18 ಕನ್ನಡ

ಬೆಳಗಾವಿ,(28): ಗಡಿ ಜಿಲ್ಲೆಯ ಬೆಳಗಾವಿ ಭಿನ್ನ- ವಿಭಿನ್ನ ರಾಜಕೀಯ ಲೆಕ್ಕಚಾರಕ್ಕೆ ಹೆಸರಾಗಿದೆ. ಇಲ್ಲಿ ಪಕ್ಷಕ್ಕಿಂತಲೂ ವೈಯಕ್ತಿಯ ವರ್ಚಸ್ಸು, ವ್ಯಕ್ತಿಗಳೇ ಮುಖ್ಯವಾಗುತ್ತಾರೆ. ಜಿಲ್ಲೆಯ ಪ್ರತಿಷ್ಠಿತ ರಾಜಕೀಯ ಮುಸುಗಿನ ಗುದ್ದಾಟ ಇದೀಗ ಬಯಲಾಗಿದೆ. ಈಗ ಕಾಂಗ್ರೆಸ್- ಬಿಜೆಪಿ ಬದಲಾಗಿ ಜಾರಕಿಹೊಳಿ ಸಹೋದರರು V/S ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ನೇರಾ ನೇರಾ ಫೈಟ್ ಆರಂಭವಾಗಿದೆ.

ಚುನಾವಣೆ ಮೊದಲು ಸಚಿವ ರಮೇಶ ಜಾರಕಿಹೊಳಿ ಗುಂಪುನಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಇದೀಗ ಅಲ್ಲಿಂದ ಸಂಪೂರ್ಣವಾಗಿ ಹೊರ ಬಂದಿದ್ದಾರೆ. ಈಗ ಜಾರಕಿಹೊಳಿ ಸಹೋದರರಿಗೆ ಬಹಿರಂಗವಾಗಿ ಸೆಡ್ಡು ಹೊಡೆಯುವಷ್ಟು ರಾಜಕೀಯ ಬಿರುಕು ಕಾರಣಿಸಿಕೊಂಡಿದೆ. ಜಾರಕಿಹೊಳಿ ಸಹೋದರರು- ಹೆಬ್ಬಾಳ್ಕರ್ ನಡುವಿನ ಫೈಟ್ ವೇದಿಕೆಯಾಗಿದ್ದ ಬೆಳಗಾವಿ ತಾಲೂಕಿನ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ.

ಪಿಎಲ್ ಡಿ ಬ್ಯಾಂಕ್ ಚುನಾವಣೆಗೆ ಯಾಕಿಷ್ಟು ಮಹತ್ವ...!

ರಾಜ್ಯದ ಅನೇಕ ಕಡೆಗಳಲ್ಲಿ ನಿನ್ನೆ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆದಿದೆ. ಆದರೇ ಎಲ್ಲಿಯೂ ಇಷ್ಟೋಂದು ಪ್ರತಿಷ್ಠೆ, ಧ್ವೇಷ ವಾತಾವರಣ ಹೊರ ಬಿದ್ದಿಲ್ಲ. ಆದರೇ ಬೆಳಗಾವಿ ತಾಲೂಕಿನ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಇಬ್ಬರು ಪ್ರಮುಖ ರಾಜಕಾರಣಿಗಳ ನಡುವೆ ಕದನಕ್ಕೆ ಆರಂಭವಾಗಿದೆ. 16 ನಿರ್ದೇಶಕರ ಬ್ಯಾಂಕ್ ನ ಆಡಳಿತ ಮಂಡಳಿಯಲ್ಲಿ 9 ಜನ ಲಕ್ಷ್ಮೀ ಹೆಬ್ಬಾಳ್ಕರ್ ಜತೆಗೆ ಗುರುತಿಸಿಕೊಂಡಿದ್ದರು. ಇನ್ನುಳಿದ 6 ಜನ ಜಾರಕಿಹೊಳಿ ಸಹೋದರರ ಜತೆಗೆ ಇದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ಏಕಾಏಕಿ ಚುನಾವಣೆಯನ್ನು ಮುಂದೂಡಿ ತಹಶೀಲ್ದಾರ ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. ಇದು ಲಕ್ಷ್ಮೀ ಹೆಬ್ಬಾಳ್ಕರ್​​ಗೆ ತೀವ್ರ ಹಿನ್ನೆಡೆಯಾಗುವ ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ರಾತ್ರೋರಾತ್ರಿ ಪ್ರತಿಭಟನೆ ಮುಂದಾಗಿದ್ದರು. ಬಹಿರಂಗವಾಗಿಯೆ ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ್ ಜಾರಕಿಹೊಳಿ ವಿರುದ್ಧ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಭಟನೆ ನಡೆಸಿ ರಾಜಕೀಯ ಸಮರ ಆರಂಭಿಸಿದ್ದಾರೆ.

ಲಕ್ಷ್ಮೀ ಹೆಬ್ಬಾಳ್ಕರ್ ಮಣಿಸಲು ಜಾರಕಿಹೊಳಿ ಸಹೋದರರು ಒಗ್ಗಟ್ಟು...!

ಸಚಿವ ರಮೇಶ ಜಾರಕಿಹೊಳಿ, ಶಾಸಕ ಸತೀಶ್ ಜಾರಕಿಹೊಳಿ ನಡುವೆ ಕಳೆದ ಅನೇಕ ವರ್ಷಗಳಿಂದ ರಾಜಕೀಯ ಭಿನ್ನಾಭಿಪ್ರಾಯವಿತ್ತು. ಈ ಭಾರೀ ಸಂಪುಟದಲ್ಲಿ ಸತೀಶ್ ಜಾರಕಿಹೊಳಿಗೆ ಸ್ಥಾನ ಕಾಯಂ ಎನ್ನಲಾಗುತ್ತಿತ್ತು. ಆದರೇ ಸತೀಶ್ ಜಾರಕಿಹೊಳಿಗೆ ಕೈಕೊಟ್ಟು ರಮೇಶ ಜಾರಕಿಹೊಳಿಯನ್ನು ಕಾಂಗ್ರೆಸ್ ಹೈಕಮಾಂಡ್ ಮಂತ್ರಿ ಮಾಡಿತ್ತು. ಇದಾದ ಬಳಿಕ ಇಬ್ಬರು ಕೇಲ ಸಂದರ್ಭದಲ್ಲಿ ಬಹಿರಂಗವಾಗಿಯೇ ಆರೋಪ, ಪ್ರತ್ಯಾರೋಪ ಮಾಡಿದ್ದರು. ಆದರೇ ಕೆಲ ದಿನಗಳ ಹಿಂದಿನಿಂದ ಇಬ್ಬರ ನಡುವೆ ರಾಜಕೀಯ ಒಮ್ಮತ ಮೂಡಿದೆ ಎನ್ನಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬತ್ತೆ ನಿನ್ನೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಭಟನೆ ಸಂದರ್ಭದಲ್ಲಿ ಸತೀಶ್ ಜಾರಕಿಹೊಳಿ ಬೆಂಬೆಲಿಗರ ಧರಣಿ ನಡೆಸಿದ್ದರು. ನಿಜವಾಗಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ರಮೇಶ ಜಾರಕಿಹೊಳಿ ನಡುವೆ ಪೈಪೋಟಿ ಇತ್ತು. ಆದರೇ ಇಲ್ಲಿ ರಮೇಶ ಪರವಾಗಿ ಸತೀಶ್ ಜಾರಕಿಹೊಳಿ ಬೆಂಬಲಿಗರ ಧರಣಿ ನಡೆಸಿದರು.
Loading...

ರಮೇಶ ಜಾರಕಿಹೊಳಿ ಜತೆಗೆ ಹದಗೆಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ಸಂಬಂಧ...!

ವಿಧಾನಸಭೆ ಚುನಾವಣೆಗು ಮೊದಲು ರಮೇಶ ಜಾರಕಿಹೊಳಿ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತಿದ್ದ ಲಕ್ಷ್ಮೀ ಹೆಬ್ಬಾಳ್ಕರ್ ಗೆದ್ದ ನಂತರ ದಿಢೀರ್​​ ಪ್ರತ್ಯೇಕವಾಗಿ ಗುರುತಿಸಿಕೊಳ್ಳಲು ಆರಂಭಿಸಿದ್ದರು. ಬೆಳಗಾವಿ ಜಿಲ್ಲೆಯಲ್ಲಿ ಸಚಿವ ಸಂಪುಟ ಸೇರಲು ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಪೈಪೋಟಿ ನಡೆಸುತ್ತಿದ್ದರು. ತಾನು ಸಹ ಲಿಂಗಾಯತ ಕೋಟಾದ ಅಡಿಯಲ್ಲಿ ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್ ಮುಂದೆ ಬೇಡಿಕೆ ಇಟ್ಟಿದ್ದರು. ಆಗಲೇ ರಮೇಶ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ರಾಜಕೀಯ ಸಂಬಂಧಕ್ಕೆ ಧಕ್ಕೆ ಬಂದಿತ್ತು. ಇನ್ನೂ ಸಚಿವರ ರಮೇಶ ಜಾರಕಿಹೊಳಿ ಸಚಿವರಾದ ಬಳಿಕವೂ ಅಧಿಕಾರಿಗಳ ವರ್ಗಾವಣೆ ಮತ್ತಿತ್ತರ ವಿಷಯದಲ್ಲಿ ಭಿನ್ನಾಪ್ರಾಯ ಕೇಳಿ ಬಂದಿದ್ದವು. ಎಲ್ಲಾ ಭಿನ್ನಾಭಿಪ್ರಾಯಗಳು ಇದೀಗ ಬಹಿರಂವಾಗಿದ್ದು, ನೇರಾನೇರ ಫೈಟ್ ಆರಂಭವಾಗಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ