ಬೆಳಗಾವಿಯಲ್ಲಿ ಮತ್ತೆ ಶುರುವಾಯ್ತಾ ಜಾರಕಿಹೊಳಿ‌, ಹೆಬ್ಬಾಳ್ಕರ್​ ಮಧ್ಯೆ ಫೈಟ್ !

news18
Updated:September 27, 2018, 11:16 PM IST
ಬೆಳಗಾವಿಯಲ್ಲಿ ಮತ್ತೆ ಶುರುವಾಯ್ತಾ ಜಾರಕಿಹೊಳಿ‌, ಹೆಬ್ಬಾಳ್ಕರ್​ ಮಧ್ಯೆ ಫೈಟ್ !
news18
Updated: September 27, 2018, 11:16 PM IST
- ಚಂದ್ರಕಾಂತ್ ಸುಗಂಧಿ, ನ್ಯೂಸ್ 18 ಕನ್ನಡ 

 ಬೆಳಗಾವಿ ( ಸೆ. 27) :  ಕಾಂಗ್ರೆಸ್​ನ ಪ್ರಬಲ ನಾಯಕರ ಎದುರು ಧ್ವನಿಯೆತ್ತಿದ್ದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೆ ಗುಡುಗಿದ್ದಾರೆ. ಇಂದು ಶಾಸಕ ಸತೀಶ್ ಜಾರಕಿಹೋಳಿ ಬೆಂಬಲಿಗನ ಮೇಲೆ  ಹೆಬ್ಬಾಳ್ಕರ್ ಬೆಂಬಲಿಗನಿಂದ ಚಾಕು ಇರಿದ್ದಾನೆ . ಶಾಂತವಾಗಿದ್ದ ಜಾರಕಿಹೋಳಿ ಸಹೋದರರು ಹಾಗೂ ಹೆಬ್ಬಾಳ್ಕರ್ ನಡುವೆ ಫೈಟ್ ಮತ್ತೆ ಆರಂಭವಾಗುವ ಮೂನ್ಸೂಚನೆ ಕಾಣುತ್ತಿದೆ. 

ಶಾಸಕ ಸತೀಶ್ ಜಾರಕಿಹೊಳಿ‌ ಬೆಂಬಲಿಗ ಆಸಿಫ್ ಮುಲ್ಲಾ ಎಂಬುವವರ ಮೇಲೆ  ಹತ್ಯೆಗೆ ಯತ್ನ ನಡೆದಿದೆ. ಗಾಯಾಳು ಆಸಿಫ್ ಮುಲ್ಲಾಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹೆಬ್ಬಾಳ್ಕರ್ ಬೆಂಬಲಿಗ ತೌಶಿಫ್ ಫಣಿ ಎಂಬಾತನಿಂದ ಕೃತ್ಯ ಶಂಕೆ ವ್ಯಕ್ತಪಡಿಸಲಾಗಿದೆ. ತೌಶೀಫ್ ಫಣಿಬಂದ ಮಾರಿಹಾಳ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ನಾಗಿದ್ದಾನೆ .

ಆಸ್ಪತ್ರೆಗೆ  ಶಾಸಕ ಸತೀಶ ಜಾರಕಿಹೊಳಿ‌ ಭೇಟಿ ತಮ್ಮ ಬೆಂಬಲಿ ಆಸಿಫ್ ಮುಲ್ಲಾ ಆರೋಗ್ಯ ವಿಚಾರಿಸಿದ್ದು, ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ. ಇನ್ನೂ ಆರೋಪಿ ತೌಶೀಪ್ ಫಣಿಬಂದ್ ಬಂಧನಕ್ಕೆ ಪೊಲೀಸರು ಬಲೆಯನ್ನು ಬೀಸಿದ್ದಾರೆ. ಈ ಬಗ್ಗೆ  ಬೆಳಗಾವಿಯ ಮಾರಿಹಾಳ ಠಾಣಾಯಲ್ಲಿ ಪ್ರಕಣ ದಾಖಲಾಗಿದೆ. 

 
First published:September 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...