• Home
  • »
  • News
  • »
  • state
  • »
  • Kolara: ಕಾಂಗ್ರೆಸ್ ಕಿತ್ತಾಟ, ವಿಡಿಯೋ ಶೂಟ್ ಮಾಡಿದ ಪತ್ರಕರ್ತನ ಮೇಲೆ ಮಾಜಿ ಸ್ಪೀಕರ್ ಹಲ್ಲೆ

Kolara: ಕಾಂಗ್ರೆಸ್ ಕಿತ್ತಾಟ, ವಿಡಿಯೋ ಶೂಟ್ ಮಾಡಿದ ಪತ್ರಕರ್ತನ ಮೇಲೆ ಮಾಜಿ ಸ್ಪೀಕರ್ ಹಲ್ಲೆ

ರಮೇಶ್​ ಕುಮಾರ್​

ರಮೇಶ್​ ಕುಮಾರ್​

ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಿತ್ತಾಟದ ಚಿತ್ರೀಕರಣ ಮಾಡಲು ಹೋದ ಇಬ್ಬರು  ಪತ್ರಕರ್ತರ ಮೇಲೆ,  ಮಾಜಿ ಸ್ಪೀಕರ್ ರಮೇಶ್  ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಸ್ಕಂದಕುಮಾರ್ ಅಮರೇಶ್ ಎನ್ನುವರು ವರದಿ ಮಾಡಲು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವ ವೇಳೆ  ಹಲ್ಲೆ ನಡೆದಿದೆ.

ಮುಂದೆ ಓದಿ ...
  • Share this:

ಕೋಲಾರ(ಜು.30): ಜಿಲ್ಲಾ ಕಾಂಗ್ರೆಸ್ ನಲ್ಲಿನ(Congress) ಭಿನ್ನಮತ ಇತ್ತೀಚೆಗೆ ಬಹಿರಂಗವಾಗಿತ್ತು. ಇದೀಗ ಕೈ ಕಿತ್ತಾಟ ಬೀದಿಗೆ ಬಂದಿದ್ದು, ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದಿದೆ. ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಸಿದ್ದರಾಮಯ್ಯ  (Siddaramaiah) ಅವರ ಹುಟ್ಟು ಹಬ್ಬ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮ ಪ್ರಯುಕ್ತ,  ಜಿಲ್ಲಾ ನಾಯಕರ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ (Former Speaker Ramesh Kumar), ಶಾಸಕರಾದ ನಂಜೇಗೌಡ, ಅನಿಲ್  ಕುಮಾರ್  ನಸೀರ್ ಅಹಮದ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ನಿಸಾರ್ ಅಹಮದ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು (Congress Leaders) ಭಾಗಿಯಾಗಿದ್ದರು.


ಸಭೆಯ ಮೊದಲೇ ಕಿತ್ತಾಟ


ಇನ್ನು ಸಭೆ ಆರಂಭಕ್ಕು ಮುನ್ನವೇ ಕೈ ನಾಯಕರ ಕಿತ್ತಾಟ ನಡೆಯಿತು. ಕೈ ಕಚೇರಿಯಲ್ಲಿ ಮಾಜಿ ಸಂಸದ ಕೆಎಚ್ ಮುನಿಯಪ್ಪ ಹಾಗು ರಮೇಶ್ ಕುಮಾರ್ ಬಣದ ಮುಖಂಡರ ಮಧ್ಯೆ ವಾಗ್ವಾದ ನಡೆಯಿತು. ಜೊತೆಗೆ  ಕಾಂಗ್ರೆಸ್ ಕಚೇರಿಯಲ್ಲೆ ಪರಸ್ವರ ಕೈ ಕೈ ಮಿಲಾಯಿಸಲು ಎರಡು ಬಣದ ಮುಖಂಡರು ಮುಂದಾದರು.


ಫೋಟೊ ಕೈ ಬಿಟ್ಟಿದ್ದಕ್ಕೆ ವಾಗ್ವಾದ


ರಮೇಶ್ ಕುಮಾರ್ ಬಣದ ಮುಖಂಡ ಶ್ರೀನಿವಾಸ್ ಹಾಗು ಮುನಿಯಪ್ಪ ಬಣದ  ವೆಂಕಟೇಶ್ ಎನ್ನುವರ ಮಧ್ಯೆ ಕಿತ್ತಾಟ ನಡೆಯಿತು. ಈ ವೇಳೆ  ಎರಡೂ ಬಣದ ಮುಖಂಡರನ್ನ ಸಮಾಧಾನ ಪಡಿಸಲು ಇತರ ನಾಯಕರು ಹರಸಾಹಸ ಪಟ್ಟರು. ಕೆಎಚ್ ಮುನಿಯಪ್ಪ ರನ್ನ ಕಡೆಗಣಿಸಿ ಪೂರ್ವಭಾವಿ ಸಭೆ ಆಯೋಜನೆ ಹಾಗು ಕಾಂಗ್ರೆಸ್ ಬ್ಯಾನರ್ ನಲ್ಲಿ ಕೆಎಚ್ ಮುನಿಯಪ್ಪ  ಪೋಟೊ ಕೈ ಬಿಟ್ಟಿದ್ದಕ್ಕೆ ವಾಗ್ವಾದ ನಡೆದು ಗಲಾಟೆಗೆ ಕಾರಣವಾಯಿತು.


Kolara Congress Turns two teams while Protest Against ED Inquiry For Sonia Gandhi
ರಮೇಶ್ ಕುಮಾರ್


ಇದನ್ನೂ ಓದಿ: Karnataka Weather: ಇಂದು ಗುಡುಗು ಸಹಿತ ಮಳೆ; ಈ ಜಲ್ಲೆಗಳಲ್ಲಿ ಆರೆಂಜ್ ಅಲರ್ಟ್


ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು ನೀವೆಂದು  ಶ್ರೀನಿವಾಸ್ ಎಚ್ಚರಿಕೆ ನೀಡಿದ್ದು ಪೂರ್ವಭಾವಿ ಸಭೆಯೇ ಗೊಂದಲದ ಗೂಡಾಗಿತ್ತು. ಪಕ್ಷದ ಮುಖಂಡರ ವಾಗ್ವಾದದಿಂದ ಸಭೆ ಅರ್ಧ ಗಂಟೆಗು  ಹೆಚ್ಚುಕಾಲ ಸ್ಥಗಿತಗೊಂಡಿತ್ತು. ಬಳಿಕ ಎದ್ದು ನಿಂತು ಮಾತನಾಡಿದ ಮಾಜಿ ಸ್ಪೀಕರ್ ರಮೇಶ್ ಕುಮಾರ್,‌ ಅಗಸ್ಟ್ 3 ರಂದು ನಡೆಯಲಿರುವ ಸಿದ್ದರಾಮಯ್ಯ ಅವರ ಹುಟ್ಟು ಹಬ್ಬ ಪ್ರಯುಕ್ತ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಎಲ್ಲರು ಆಗಮಿಸಿ, ಕಾರ್ಯಕರ್ತರನ್ನ ಕರೆತನ್ನಿ ಎಂದು ಕರೆನೀಡಿದರು.


ಗಲಾಟೆಯಿಂದ ಸಂಯಮ ಕಳೆದುಕೊಂಡು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ ರಮೇಶ್‌ಕುಮಾರ್


ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಿತ್ತಾಟದ ಚಿತ್ರೀಕರಣ ಮಾಡಲು ಹೋದ ಇಬ್ಬರು  ಪತ್ರಕರ್ತರ ಮೇಲೆ,  ಮಾಜಿ ಸ್ಪೀಕರ್ ರಮೇಶ್  ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಸ್ಕಂದಕುಮಾರ್ ಅಮರೇಶ್ ಎನ್ನುವರು ವರದಿ ಮಾಡಲು ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡುವ ವೇಳೆ  ಹಲ್ಲೆ ನಡೆದಿದೆ.


ಇದನ್ನೂ ಓದಿ: Hubballi: ತಾರಿಹಾಳ ಕಾರ್ಖಾನೆ ಬ್ಲಾಸ್ಟ್ ಪ್ರಕರಣ; ಸಾವಿನ ಸಂಖ್ಯೆ ನಾಲ್ಕಕ್ಕೆ ಏರಿಕೆ


ಪತ್ರಕರ್ತರಿಗೆ ಥಳಿಸುವ ವಿಡಿಯೊ ಮೊಬೈಲ್ ನಲ್ಲಿ ಸೆರೆಯಾಗಿದೆ. ರಮೇಶ್ ಕುಮಾರ್ ವರ್ತನೆಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವೂ ಖಂಡಿಸಿದ್ದು ಕಾಂಗ್ರೆಸ್ ಕಚೇರಿ ಎದುರು  ಮೌನ ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕೆ ಉಸ್ತುವಾರಿ ನಾರಾಯಣಸ್ವಾಮಿ, ಎಮ್.ಎಲ್.ಸಿ ನಾರಾಯಣಸ್ವಾಮಿ ಹಾಗು ಅನಿಲ್ ಕುಮಾರ್ ಹಾಗು ನಂಜೇಗೌಡ,  ರಮೇಶ್ ಕುಮಾರ್ ಪರವಾಗಿ ಕ್ಷಮೆ ಯಾಚನೆ ಮಾಡಿದರು.

Published by:Divya D
First published: