Family Dispute: ಆಸ್ತಿ ವಿಚಾರಕ್ಕೆ ಬಡಿದಾಡಿಕೊಂಡ ಜನರು! ಹೊಡೆದಾಟ ಬಿಡಿಸಲು ಬಂದ ಪೊಲೀಸರು ಸುಸ್ತೋ ಸುಸ್ತು!

ಆಸ್ತಿ ಮುಂದೆ ಸಂಬಂಧಗಳು ಲೆಕ್ಕಕ್ಕಿಲ್ಲ ಎನ್ನುವುದಕ್ಕೆ ಘಟನೆ ಸಾಕ್ಷಿಯಾಗಿದೆ. ಸಹೋದರ ಸಂಬಂಧಿಗಳ ಬಳಿ ಆಸ್ತಿ ಪಾಲು ವಿಭಾಗ ಮಾಡಿಕೊಡುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಮಹಿಳೆಯರು, ಪುರುಷರು ಎನ್ನದೇ ಪರಸ್ಪರ ಬಡಿದಾಡಿಕೊಂಡಿದ್ದಾರೆ.

ಎರಡು ಕುಟುಂಬಗಳ ನಡುವೆ ಗಲಾಟೆ

ಎರಡು ಕುಟುಂಬಗಳ ನಡುವೆ ಗಲಾಟೆ

  • Share this:
ಚಿತ್ರದುರ್ಗ:  ತಂದೆಯ (Father) ಆಸ್ತಿ (Property) ಪಾಲು ವಿಭಾಗ ಮಾಡಿಕೊಳ್ಳೋ ವಿಚಾರಕ್ಕೆ ಎರಡು ಗುಂಪುಗಳ‌ (Two Group) ನಡುವೆ ಮಾರಾಮಾರಿ (Clash) ನಡೆದು ಹಲವರಿಗೆ ಗಾಯಗಳಾಗಿ ಆಸ್ಪತ್ರೆಗೆ (Hospital) ಸೇರಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆಯರೂ (Ladies) ಸೇರಿದಂತೆ ದೊಣ್ಣೆಗಳಿಂದ ಹೊಡೆದಾಡಿರುವ ವೀಡಿಯೋ (Vidoe) ಮೊಬೈಲ್‌ನಲ್ಲಿ (Mobile) ಸೆರೆ ಆಗಿದ್ದು, ಗಲಾಟೆ ಬಿಡಿಸಲು ಪೊಲೀಸರು (Police) ಹರ ಸಾಹಸ ಪಟ್ಟಿದ್ದಾರೆ. ಇಂಥ ಚಿತ್ರದುರ್ಗ ಜಿಲ್ಲೆ, ಹಿರಿಯೂರು (Hiriyur) ತಾಲ್ಲೂಕಿನ ದುಗ್ಗಾಣಿಹಟ್ಟಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕುಂಟಪ್ಪ, ಜಯ್ಯಣ್ಣ, ಬಸವರಾಜ್, ರೇವಣ್ಣ ಎಂಬುವರು ಸಹೋದರ ಸಂಬಂಧಿಗಳ ಬಳಿ ಆಸ್ತಿ ಪಾಲು ವಿಭಾಗ ಮಾಡಿಕೊಡುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಜಗಳದಲ್ಲಿ ಕವಿತಾ, ಚಿತ್ರಲಿಂಗಪ್ಪ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಗಾಯಾಾಳುಗಳು ಇದೀಗ ಆಸ್ಪತ್ರೆಗೆ ಸೇರಿದ್ದು, ಚಿಕಿತ್ಸೆ (Treatment) ಪಡೆಯುತ್ತಾ ಇದ್ದಾರೆ.

ಆಸ್ತಿ ಹಂಚಿಕೆ ವಿಚಾರಕ್ಕೆ ಮಾರಾಮಾರಿ

ಬರೋ ಒಂದು ಗುಂಟೆ ಜಮೀನಾಗಲಿ, ಒಂದೇ ಒಂದು ಅಡಿ ನಿವೇಶ, ಅಥವಾ ಮನೆಯಾಗಲಿ ಕಡಿಮೆ ಬರುತ್ತೆ, ಅಣ್ಣನಿಗೋ ತಮ್ಮನಿಗೋ ಜಾಸ್ತಿ ಹೋಗುತ್ತದೆ ಅಂದ್ರೆ  ಇಡೀ ಕುಟುಂಬ ಛಿದ್ರವಾದ್ರು ಬಿಡದೆ ಆಸ್ತಿಯನ್ನ ತನ್ನಂತೆ ಪಡೆಯಬೇಕು ಅನ್ನೋ ಹಟಕ್ಕೆ ಬಿದ್ದು ದಾಯಾದಿಗಳಾಗಿ ಮಾರ್ಪಾಡಾಗಿ ಬಿಡುತ್ತಾರೆ. ಅಲ್ಲಿಂದ ಶುರುವಾಗುವ ಆಸ್ತಿ ಜಗಳಗಳು ಕೋರ್ಟು ಕಚೇರಿಗೆ ಹಾಕಿ ಅದರ ತೀರ್ಮಾನಕ್ಕಾಗಿ ಅಲೆದೂ ಅಲೆದು ಹೈರಾಣಾಗಿರೋ ಹಲವು ನಿದರ್ಶನಗಳಿವೆ. ಅದರಲ್ಲೂ ಮಾರಾಮಾರಿ ಹೊಡೆದಾಡಿ ಕೈ ಕಾಲು ಮುರಿದುಕೊಂಡು, ಪ್ರಾಣಾಪಾಯ ಆಗುವಂತೆ ಮಚ್ಚು ಚಾಕು, ಕೊಡಲಿ ಹಿಡಿದು ಹೊಡೆದಾಡಿ ಜೈಲು ಸೇರಿರೊ ಉದಾಹಾರಣೆಗಳೂ ಇವೆ. ಅಂಥದ್ದೇ ಒಂದು ನಿದರ್ಶನ ಈ ಘಟನೆಯಾಗಿದೆ.

ಕುಟುಂಬಸ್ಥರ ನಡುವೆಯೇ ಗಲಾಟೆ

ಹಿರಿಯೂರು ತಾಲ್ಲೂಕಿನ ದುಗ್ಗಾಣಿಹಟ್ಟಿ ಗ್ರಾಮದ ಕುಂಟಪ್ಪ, ಜಯ್ಯಣ್ಣ, ಬಸವರಾಜ್, ರೇವಣ್ಣ ಎಂಬುವರು ಸಹೋದರ ಸಂಬಂಧಿಗಳ ಬಳಿ ಆಸ್ತಿ ಪಾಲು ವಿಭಾಗ ಮಾಡಿಕೊಡುವ ವಿಚಾರಕ್ಕೆ ಜಗಳ ಮಾಡಿಕೊಂಡಿದ್ದಾರೆ. ಜಗಳದಲ್ಲಿ ಕವಿತಾ, ಚಿತ್ರಲಿಂಗಪ್ಪ ಸೇರಿದಂತೆ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: Chikkamagaluru: ಹಬ್ಬದ ದಿನದಂದೇ ವರದಕ್ಷಿಣೆ ಕಿರುಕುಳಕ್ಕೆ ನವವಿವಾಹಿತೆ ಬಲಿ: ಇಲಿ ಪಾಷಾಣ ನೀಡಿ ಕೊಲೆಯ ಶಂಕೆ!

ದೊಣ್ಣೆ ಹಿಡಿದು ಬಡಿದಾಡಿಕೊಂಡ ಸಹೋದರರು

ಆಸ್ತಿ ವಿಚಾರಕ್ಕೆ ಅಣ್ಣ, ತಮ್ಮ ಎನ್ನುವುದನ್ನೂ ಮರೆತು ಪರಸ್ಪರ ಹೊಡೆದಾಡಿದ್ದಾರೆ. ಘಟನೆ ವೇಳೆ ಮಹಿಳೆಯರೂ ಸೇರಿ ಅಣ್ಣ  ತಮ್ಮಂದಿರು ದೊಣ್ಣೆಗಳನ್ಮ, ಬಡಿಗೆಗಳನ್ನ ಹಿಡಿದು ಒಬ್ಬರಿಗೊಬ್ಬರು ಬಡಿದಾಡಿಕೊಂಡಿದ್ದಾರೆ. ರಕ್ತ ಸೋರುವಂತೆ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ.

ಜಗಳ ಬಿಡಿಸಲು ಬಂದ ಪೊಲೀಸರೇ ಸುಸ್ತೋ ಸುಸ್ತು!

ಘಟನೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಆದರೆ ಪೊಲೀಸರ ಮುಂದೆಯೂ ಈ ಎರಡು ಗುಂಪುಗಳು ಬಡಿದಾಡಿಕೊಂಡಿವೆ. ಜಗಳ ಬಿಡಿಸೋಕೆ ಆಗದೇ ಪೊಲೀಸರೇ ಪರಡಾಡಿದ್ದಾರೆ. ಕೊನೆಗೆ ಹರ ಸಾಹಸ ಮಾಡಿ ಜಗಳ ಬಿಡಿಸಿದ್ದಾರೆ.

ಮೊಬೈಲ್‌ನಲ್ಲಿ ಸೆರೆಯಾಯ್ತು 2 ಗುಂಪುಗಳ ಮಾರಾಮಾರಿ

ಇನ್ನು ಎರಡು ಗುಂಪುಗಳ ಪುರುಷರು, ಮಹಿಳೆಯರು ಹೊಡೆದಾಟ ಮಾಡಿಕೊಳ್ಳುವ ದೃಶ್ಯ ಇದೀಗ ವೈರಲ್ ಆಗಿದೆ. ಅಕ್ಕಪಕ್ಕದ ಜನರು, ಜಗಳ ನೋಡಲು ಬಂದವರು ತಮ್ಮ ಮೊಬೈಲ್‌ನಲ್ಲಿ ಜಗಳದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಇದೀಗ ಎಲ್ಲೆಡೆ ವೈರಲ್ ಆಗಿದೆ.

ಇದನ್ನೂ ಓದಿ: NIA First Report: ಶಿವಮೊಗ್ಗ ಹರ್ಷ ಕೊಲೆಗೆ ವೈಯಕ್ತಿಕ ದ್ವೇಷ ಕಾರಣವಲ್ಲ, ಕೋಮುಗಲಭೆ ಸೃಷ್ಟಿಸೋದೆ ಆರೋಪಿಗಳ ಉದ್ದೇಶ

ಪೊಲೀಸರಿಂದ ಮುಂದುವರೆದ ತನಿಖೆ

ಆಸ್ತಿ ವಿಚಾರಕ್ಕೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಹೊಡೆತ ತಿಂದ ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿ ಚಿಕೊತ್ಸೆ ಪಡೆಯುತ್ತಿದ್ದಾರೆ.
Published by:Annappa Achari
First published: