ಕೋಲಾರ ನಗರಸಭೆಯಲ್ಲಿ 'ಕೈ'ಗೆ ತಿರುಗುಬಾಣ; ಕಾಂಗ್ರೆಸ್​ ವಿರುದ್ಧ ತೋಡಿರುವ ಖೆಡ್ಡಾಕ್ಕೆ ಸ್ವಪಕ್ಷೀಯರೇ ಬೆಂಬಲ!

news18
Updated:September 4, 2018, 12:02 PM IST
ಕೋಲಾರ ನಗರಸಭೆಯಲ್ಲಿ 'ಕೈ'ಗೆ ತಿರುಗುಬಾಣ; ಕಾಂಗ್ರೆಸ್​ ವಿರುದ್ಧ ತೋಡಿರುವ ಖೆಡ್ಡಾಕ್ಕೆ ಸ್ವಪಕ್ಷೀಯರೇ ಬೆಂಬಲ!
news18
Updated: September 4, 2018, 12:02 PM IST
-ರಘುರಾಜ್, ನ್ಯೂಸ್ 18 ಕನ್ನಡ

ಕೋಲಾರ,(ಸೆ.04): ಸಮ್ಮಿಶ್ರ ಸರ್ಕಾರದಲ್ಲಿ  ಕಾಂಗ್ರೆಸ್​ ಹಾಗೂ ಜೆಡಿಎಸ್​ ಪಕ್ಷದವರು ಅಧಿಕಾರಕ್ಕಾಗಿ ಇನ್ನಿಲ್ಲದ ಕಸರತ್ತಿಗೆ ಮುಂದಾಗಿದ್ದಾರೆ. ಕೋಲಾರ ನಗರಸಭೆ ಅಧ್ಯಕ್ಷ್ಯೆ ಮಹಾಲಕ್ಷ್ಮೀ ಪದಚ್ಯುತಿಗೆ ಕಾಂಗ್ರೆಸ್ ಸದಸ್ಯರೇ ಖೆಡ್ಡಾ ತೋಡಿದ್ದಾರೆ. ಕಾಂಗ್ರೆಸ್ ಅಧ್ಯಕ್ಷ್ಯರ ವಿರುದ್ದವೇ ಅವಿಶ್ವಾಸ ಮಂಡನೆಗೆ ಮುಂದಾಗಿರುವ ಸ್ವಪಕ್ಷೀಯರು, ಜೆಡಿಎಸ್‍ನೊಂದಿಗೆ ಸೇರಿ ಅವಿಶ್ವಾಸ ನಿರ್ಣಯ ಮಂಡನೆಗೆ ತೀರ್ಮಾನಿಸಿದ್ದಾರೆ.

ರಾಜ್ಯದಲ್ಲಿ ನಿನ್ನೆಯಷ್ಟೆ ಕೆಲ ಜಿಲ್ಲೆಗಳಲ್ಲಿ ಸ್ಥಳೀಯ ನಗರಸಭೆ, ಪುರಸಭೆ ಹಾಗೂ ಮಹಾ ನಗರ ಪಾಲಿಕೆ ಚುನಾವಣೆಗಳ ಫಲಿತಾಂಶ ಹೊರಬಿದ್ದಿದೆ. ಈ ಮಧ್ಯೆ ಚಿನ್ನದನಾಡು ಕೋಲಾರ ನಗರಸಭೆಯಲ್ಲಿ ಪಕ್ಷೇತರರ ಸಹಾಯದಿಂದ ಅಧಿಕಾರದ ಗದ್ದುಗೆಯೇರಿದ್ದ ಕಾಂಗ್ರೆಸ್‍ಗೆ ಚುನಾವಣೆಗೆ ಇನ್ನೂ 6 ತಿಂಗಳ ಇರುವಾಗಲೇ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ.  ಜೆಡಿಎಸ್, ಬಿಜೆಪಿ, ಹಾಗೂ ಪಕ್ಷೇತರರು ಸೇರಿದಂತೆ, ಸ್ವಯಂ ಕೈ ಪಡೆ ಸದಸ್ಯರ ಭಿನ್ನಮತದಿಂದ ಅಧ್ಯಕ್ಷ್ಯರನ್ನೇ ಕೆಳಗಿಳಿಸಲು ವೇದಿಕೆ ಸಜ್ಜಾಗಿದೆ. ನಗರಸಭೆ ಅಧ್ಯಕ್ಷ್ಯೆ ಮಹಾಲಕ್ಷ್ಮಿಯನ್ನು ಕೆಳಗಿಳಿಸಲು ಕಾಂಗ್ರೆಸ್ ಭಿನ್ನಮತೀಯರು, ಜೆಡಿಎಸ್ ಮತ್ತು ಪಕ್ಷೇತರರು ಸೇರಿ 29 ಮಂದಿ ಅವಿಶ್ವಾಸ ನಿರ್ಣಯ ಮಂಡನೆಗೆ ಮುಂದಾಗಿದ್ದಾರೆ.

ಅವಿಶ್ವಾಸ ನಿರ್ಣಯ ಮಂಡನೆ ಹೊಣೆ ಹೊತ್ತಿರುವ ಜೆಡಿಎಸ್ ಮುಖಂಡ ಹಾಗೂ  ಮಾಜಿ ನಗರಸಭೆ ಅಧ್ಯಕ್ಷ್ಯ ಮುಬಾರಕ್ ಖಾಸಗಿ ಹೊಟೆಲ್‍ನಲ್ಲಿ ಸಭೆ ಸೇರಿ, ಎಲ್ಲಾ ಸದಸ್ಯರಿಗೂ ಔತಣಕೂಟ ಆಯೋಜಿಸಿ, ಅವಿಶ್ವಾಸ ನಿರ್ಣಯ ಮಂಡನೆಗೆ ಪ್ಲಾನ್ ಮಾಡಿದ್ದಾರೆ.  ಕೋಲಾರ ಹೊರವಲಯದ ಖಾಸಗಿ ಹೊಟೆಲ್‍ನಲ್ಲಿ ಸಭೆ ಸೇರಿದ ನಂತರ ಮಾತನಾಡಿದ ಜೆಡಿಎಸ್ ಸದಸ್ಯ ಮುಬಾರಕ್ ಆಡಳಿತ ಹಿತದೃಷ್ಟಿಯಿಂದ ಅಧ್ಯಕ್ಷ್ಯರ ವಿರುದ್ದ ಅವಿಶ್ವಾಸ ನಿರ್ಣಯ ಮಂಡಿಸಲಿದ್ದೇವೆ ಎಂದು ತಿಳಿಸಿದರು.

35 ಮಂದಿ ಸದಸ್ಯರಿರುವ ಕೋಲಾರ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷ 11, ಜೆಡಿಎಸ್ 17, ಪಕ್ಷೇತರರು 6, ಹಾಗು ಸಿಪಿಎಂ ಪಕ್ಷದ ಓರ್ವ ಸದಸ್ಯರು ಇದ್ದಾರೆ. ಈ ಹಿಂದೆ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರ ಗಿಟ್ಟಿಸಿಕೊಂಡಿದ್ದ ಕೋಲಾರ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು ಪತ್ನಿ ಮಹಾಲಕ್ಷ್ಮಿಯನ್ನ ಅಧ್ಯಕ್ಷ್ಯರನ್ನಾಗಿಸಿ ತಾವು ಸದಸ್ಯರಾಗಿದ್ದು ಇಷ್ಟು ದಿನ ಅಧಿಕಾರಿ ನಡೆಸಿದರು.  ಜೆಡಿಎಸ್ ಅವಿಶ್ವಾಸ ನಿರ್ಣಯಕ್ಕೆ ಪ್ರತಿಕ್ರಿಯೆ ನೀಡಿರುವ  ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿಶ್ವಾಸ ನಿರ್ಣಯ ಸೋಲಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇನ್ನು ಕಾಂಗ್ರೆಸ್ ವಿರುದ್ದ ಜೆಡಿಎಸ್ ತೋಡಿರುವ ಅವಿಶ್ವಾಸ ನಿರ್ಣಯ ಖೆಡ್ಡಕ್ಕೆ ಸ್ವಯಂ ಐವರು ಕಾಂಗ್ರೆಸ್ ನಗರಸಭೆ ಸದಸ್ಯರೇ ಕೈಜೋಡಿಸಿದ್ದಾರೆ. ಈಗಾಗಲೇ 29 ಮಂದಿ ಸದಸ್ಯರ ಸಹಿಗಳನ್ನ ಪಡೆದಿರುವ ಜೆಡಿಎಸ್‍ನ ಮುಬಾರಕ್ ಇಂದು ಅವಿಶ್ವಾಸ ನಿರ್ಣಯ ಮಂಡಿಸಲಿದ್ದಾರೆ.  ಪಕ್ಷೇತರರ ಸದಸ್ಯರು ಜೆಡಿಎಸ್‍ಗೆ ಬೆಂಬಲಿಸಿದ್ದು ಬಹುತೇಕ ಕೋಲಾರ ನಗರಸಭೆಯಲ್ಲಿ ಜೆಡಿಎಸ್ ಗೆಲ್ಲುತ್ತೆ ಎಂದು ಪಕ್ಷೇತರರು ತಿಳಿಸಿದ್ದಾರೆ.

ಕೋಲಾರ ನಗರಸಭೆ ಚುನಾವಣೆಗೆ ಇನ್ನೇನು 6 ತಿಂಗಳಷ್ಟೇ ಬಾಕಿಯಿದೆ. ಮೊದಲ 30 ತಿಂಗಳ ಅವಧಿಯಲ್ಲಿ ಭರ್ಜರಿಯಾಗಿ ಅಧಿಕಾರ ನಡೆಸಿದ್ದ ಜೆಡಿಎಸ್, ನಂತರ ಪಕ್ಷದಲ್ಲಿನ ಗುಂಪುಗಾರಿಕೆಯಿಂದ ಅಧಿಕಾರ ಕೈತಪ್ಪಿತ್ತು. ಇದೀಗ ಕಾಂಗ್ರೆಸ್ ಸದಸ್ಯರು ಸೇರಿದಂತೆ ಪಕ್ಷೇತರರು ಜೆಡಿಎಸ್‍ಗೆ ಬೆಂಬಲಿಸಿದ್ದು ಕೋಲಾರ ನಗರಸಭೆಯಲ್ಲಿ ಕೈಗೆ ತಿರುಗುಬಾಣವಾಗಲಿದೆ. ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ವಿರುದ್ದ ಮಣ್ಣು ಮುಕ್ಕಿರುವ ಕೈ ಪಡೆ, ನಗರಸಭೆ ಅಧಿಕಾರ ಕೈ ತಪ್ಪಿದರೆ ಭಾರೀ ಮುಖಭಂಗ ಅನುಭವಿಸುವುದರಲ್ಲಿ ಎರಡು ಮಾತಿಲ್ಲ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ