Chitradurga: ಜಮೀನಿಗೆ ಹೋಗಲು ದಾರಿ ಬಿಡದೆ ಒಂಟಿ ಮಹಿಳೆಯ ಬರ್ಬರ ಹತ್ಯೆ!

ಬೋರ್ವೆಲ್ ಸ್ಟಾರ್ಟ್ ಮಾಡಲು ಹೋಗಿದ್ದ ಅಮಾಯಕ ಮಹಿಳೆ (Woman) ಬೆಳ್ಳಂಬೆಳ್ಳಗೆ ಪಕ್ಕದ ಜಮೀನಿನ ದಾಯಾದಿಗಳು ಹೊಡೆದ ಏಟಿಗೆ ಹೆಣವಾಗಿ ಬಿದ್ದಿದ್ದಾಳೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಚಿತ್ರದುರ್ಗ(ಜೂ.03) : ಜಮೀನಿಗೆ ಓಡಾಡೋ ದಾರಿಗಾಗಿ ಶುರುವಾದ ದಾಯಾದಿಗಳ ಜಗಳ ನೆತ್ತರು ಹರಿಸಿ ಕೊಲೆಯಲ್ಲಿ (Murder) ಅಂತ್ಯವಾಗಿದೆ. ಕಷ್ಟಪಟ್ಟು ಬಿತ್ತಿದ ಬೆಳೆ ನೀರಿಲ್ಲದೆ ಒಣಗುತ್ತಲ್ಲಾ ಅನ್ನೋ ಕಿಚ್ಚಿಗೆ ಬೋರ್ವೆಲ್ ಸ್ಟಾರ್ಟ್ ಮಾಡಲು ಹೋಗಿದ್ದ ಅಮಾಯಕ ಮಹಿಳೆ (Woman) ಬೆಳ್ಳಂಬೆಳ್ಳಗೆ ಪಕ್ಕದ ಜಮೀನಿನ ದಾಯಾದಿಗಳು ಹೊಡೆದ ಏಟಿಗೆ ಹೆಣವಾಗಿ ಬಿದ್ದಿದ್ದಾಳೆ. ಇದು ಹಳೆ ವೈಶ್ಯಮ್ಯದ ರಿವೇಜ್ ಕಂ ಮರ್ಡರ್ ಅಂತ ಮೇಲ್ನೊಟಕ್ಕೆ ಸಾಬೀತಾಗಿದೆ. ಚಿತ್ರದುರ್ಗದ ಕೂಗಳತೆ ದೂರದಲ್ಲಿ ಈ ಕೊಲೆಯಾಗಿದ್ದು. ಜಮಿನಿನ ಅಳತೆ ವಿಚಾರಕ್ಕೆ ಒಂದು ಕುಟುಂಬವೇ ಸೇರಿ ದೊಣ್ಣೆ ಕೊಡಲಿ ಸೇರಿದ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಜಮೀನಿಗೆ ಬಂದಿದ್ದ ಮಹಿಳೆಗೆ  ದೊಣ್ಣೆ, ಕುಡುಗೋಲು, ಕೊಡಲಿಯಿಂದ ಹೊಡೆದ್ದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ತಾಲ್ಲೂಕಿನ ಕೆಳಗಳ ಹಟ್ಟಿ ಗ್ರಾಮದ ಜಮೀನಿನಲ್ಲಿ ನಡೆದುಹೋಗಿದೆ. 55 ವರ್ಷದ ಭಾಗ್ಯಮ್ಮ ಬರ್ಬರವಾಗಿ ಕೊಲೆಯಾದ ಮಹಿಳೆ.

ಜಮೀನು ವಿಚಾರದಲ್ಲಿ ಜಗಳ

ಜಮೀನು ಅಳತೆ ವಿಚಾರದಲ್ಲಿ ಪಕ್ಕದ ಜಮೀನಿನ ಮಾಲೀಕರೊಂದಿಗೆ ಗಲಾಟೆ ನಡೆಯುತ್ತಲೆ ಇತ್ತು. ಈ ಕುರಿತು ಗ್ರಾಮದಲ್ಲಿ ಸಾಕಷ್ಟು ಬಾರಿ ರಾಜಿ ಪಂಚಾಯಿತಿಗಳು ನಡೆದಿದ್ದವು. ಅಷ್ಟೇಲ್ಲದೇ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಅಕ್ಕಪಕ್ಕದ ಜಮೀನಿನವರಾದರೂ ಕೊಲೆಯಾದ ಭಾಗ್ಯಮ್ಮರನ್ನ  ಪತಿ ವಿಶ್ವನಾಥ್ ಹಾಗೂ ಕೊಲೆ ಆರೋಪಿ ಪುರುಷೋತ್ತಮ ರೆಡ್ಡಿ ಇಬ್ಬರು ದಾಯಾದಿ ಅಣ್ಣ ತಮ್ಮಂದಿರುಗಳು. ಭಾಗ್ಯಮ್ಮನ ಪತಿ ಸರ್ಕಾರಿ ನೌಕರಿಯಲ್ಲಿದ್ದವರು.

ಭೂಮಿಗಾಗಿ ಜಗಳ

ವಿಶ್ವನಾಥ್ ರೆಡ್ಡಿ ನಿವೃತ್ತಿ ಹೊಂದಿದ ಮೇಲೆ ತನ್ನ ಜಮೀನು ಅಭಿವೃದ್ದಿ ಮಾಡಬೇಕು, ಏನಾದರು ಬೆಳೆದು ನೆಮ್ಮದಿಯ ಜೀವನ ಸಾಗಿಸಬೇಕು ಅಂದುಕೊಂಡಿದ್ದರು. ಅದರಂತೆ, ಸದ್ಯ ಇದೀಗ ತನ್ನ ಪಾಲಿನ ಜಮೀನಿನಲ್ಲಿ ಮೆಕ್ಕೆಜೋಳ ಮತ್ತು ಸೇವಂತಿಗೆ ಹೂ ಬೆಳೆ ಬೆಳೆಯುತ್ತಿದ್ದರು. ಆದರೇ ಇವರು ಜಮೀನಲ್ಲಿ ಬೆಳೆ ಬೆಳೆಯೋಕೆ ಪ್ರಾರಂಭ ಮಾಡಿದ್ದೇ ತಡ ಪಕ್ಕದ ಜಮೀನು ಮಾಲೀಕರು ಓಡಾಡೋ ರಸ್ತೆಗೆ ಅಡ್ಡ ಹಾಕಿ ಕಿರಿಕ್ ಮಾಡಿದ್ದರು.

ಠಾಣೆಗೆ ದೂರು ಕೊಟ್ರೂ  ಪ್ರಯೋಜನವಿಲ್ಲ

ಈ ಕುರಿತ ಹಲವು ಭಾರಿ ಇಬ್ಬರ ನಡುವೆ ಜಗಳಗಳೂ ನಡೆದಿದ್ದವಂತೆ. ಇದರಿಂದ ಬೇಸತ್ತ ವಿಶ್ವನಾಥ ರೆಡ್ಡಿ, ಈ ಕುರಿತು ಠಾಣೆಗೆ ದೂರು ನೀಡಿ, ನ್ಯಾಯಾಲಯದ ಮೆಟ್ಟಿಲೇರಿದ್ದ. ಅದು ಇತ್ಯರ್ಥ ಆಗುವ ಮೊದಲೇ ಮತ್ತೆ ಪುರುಷೋತ್ತಮ ರೆಡ್ಡಿ ವಿಶ್ವನಾಥ್ ರೆಡ್ಡಿ ಜಮೀನಿಗೆ ಹೋಗಲು ಬಿಡದೆ, ಮರ,ಕಲ್ಲು ದುಂಡಿ ಅಡ್ಡ ಹಾಕಿ ನಿರ್ಭಂಧ ಹೇರಿದ್ದ. ವಿಶ್ವನಾಥ್ ರೆಡ್ಡಿ ಮತ್ತೆ ಜಗಳ  ಮಾಡಿ ವಾಪಾಸ್ ಕಳಿಸಿದ್ದ. ಇದರಿಂದ ವಿಶ್ವನಾಥ್ ಜಮೀನಲ್ಲಿದ್ದ ಹೂವಿನ ಬೆಳೆ ಹಾಳಾಗಿ, ಹೋಗುತ್ತದೆ ಅನ್ನೋ ಚಡಪಡಿಕೆ ಭಾಗ್ಯಮ್ಮಗೆ ಶುರುವಾಗಿತ್ತು.

ಇದನ್ನೂ ಓದಿ: Kalaburagi: ಗೂಡ್ಸ್ ವಾಹನಕ್ಕೆ ಡಿಕ್ಕಿಯಾಗಿ ಸೇತುವೆ ಮೇಲಿಂದ ಬಿದ್ದು ಹೊತ್ತಿ ಉರಿದ 30 ಪ್ರಯಾಣಿಕರಿದ್ದ ಬಸ್

ಗಂಡುಮಕ್ಕಳು ಹೋದ್ರೆ ಜಗಳ ಮಾಡುತ್ತಾರೆ ನಾನು ಮಹಿಳೆ ನನ್ನ ಮೇಲೆ ಇನ್ಯಾರು ಜಗಳ ಮಾಡುತ್ತಾರೆ ಎಂದು ತಿಳಿದ ಭಾಗ್ಯಮ್ಮ ಅಂದು ಬೋರ್ವೆಲ್ ಆನ್ ಮಾಡೋಕೆ ಜಮೀನಿಗೆ ತೆರಳಿದ್ದರು. ಅಷ್ಟೋತ್ತಿಗಾಗಲೇ ಪುರುಷೋತ್ತಮ ರೆಡ್ಡಿ ಮತ್ತು ಇಬ್ಬರು ಮಕ್ಕಳು ಜಮೀನಲ್ಲಿದ್ದ ಕಟ್ಟಿಗೆ ಕಡಿಯುತ್ತಿದ್ದರಂತೆ.

ಇದನ್ನ ನೋಡಿದ ಭಾಗ್ಯಮ್ಮ ತನ್ನ ಮಗಳು ಅನುಷಾಗೆ ಫೋನ್ ಮಾಡಿ ಇಲ್ಲಿ ಪುರುಷೋತ್ತಮ ರೆಡ್ಡಿ, ಸಂತೋಷ್, ಆಶ್ವತ್ ರೆಡ್ಡಿ ಇದ್ದಾರೆ. ನನ್ನ ನೋಡೆ ನನ್ನ ಕಡೆಯೇ ಬರುತ್ತಿದ್ದಾರೆ ಅಂತ ಹೇಳುತ್ತಲೇ ಮುಂದೆ ಸಾಗಿದ್ರಂತೆ. ಅಷ್ಟರಲ್ಲಿ  ಆ ಮೂವರು ಮಹಿಳೆ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಭಾಗ್ಯಮ್ಮ ಅಮ್ಮಾ ಅಂತ ಚೀರಿದ್ದರಂತೆ. ಇತ್ತ ಫೋನ್ ಕಾಲ್ ಮೂಲಕ ತನ್ನ ತಾಯಿ ಜೊತೆ ಮಾತನಾಡುತ್ತಿದ್ದ ಅನುಷ ಅಮ್ಮಾ, ಅಮ್ಮಾ ಅಂತ ಕೂಗಾಡಿದ್ರು ಅತ್ಲಿಂದ ಭಾಗ್ಯಮ್ಮ‌ಮಾತಾಡ್ಲೇ ಇಲ್ಲವಂತೆ. ಇದರಿಂದ ಬೆಚ್ಚಿಬಿದ್ದ ಅನುಷಾ ರಾಮಜೋಗಿಹಳ್ಳಿಯಿಂದ ಕೆಳಗಳಹಟ್ಟಿ ಗ್ರಾಮದ ಜಮೀನಿಗೆ ದೌಡಾಯಿಸಿದ್ದರು.

ಇದನ್ನೂ ಓದಿ: Daughter Kidnap: ತಂದೆಯಿಂದಲೇ ಮಗಳ ಅಪಹರಣ ಪ್ರಕರಣಕ್ಕೆ ರೋಚಕ ಟ್ವಿಸ್ಟ್

ಆದರೇ ಅಷ್ಟೊತ್ತಿಗೆ ತಾಯಿ ಭಾಗ್ಯಮ್ಮ ರಕ್ತದ ಮಡುವಿನಲ್ಲಿ ಬಿದ್ದು ಜೀವ ಬಿಡುವ ಹಂತಕ್ಕೆ ತಲುಪಿದ್ದರು. ಆಗ  ಹತ್ಯೆ ಮಾಡಿದ್ದ  ಪುರುಷೋತ್ತಮ ರೆಡ್ಡಿ, ಮತ್ತವರ ಇಬ್ಬರು‌ಮಕ್ಕಳು ಅಲ್ಲಿಂದ ಟವಲ್ ಕೊಡವಿ ದರ್ಪದಿಂದ ಹೋಗಿದ್ದರು. ಇತ್ತ ಜೀವ ಬಿಡುತ್ತಿರುವ ತಾಯಿ ನೋಡುತ್ತಾ, ಅಂಬುಲೆನ್ಸ್ ಕರೆ ಮಾಡಿ ಆಸ್ಪತ್ರೆ ಹೋಗೋ ತವಕದಲ್ಲಿದ್ದರು ಅನುಷ. ಆದರೇ ಅಂಬುಲೆನ್ಸ್ ಬರುವಷ್ಟರಲ್ಲಿ ಭಾಗ್ಯಮ್ಮ ಜೀವ ಬಿಟ್ಟಿದ್ದರು. ಸಂಬಂಧಿಕರು ಮತ್ತು ಗ್ರಾಮದವರು ಎಷ್ಟು ಸರಿ ರಾಜಿ ಪಂಚಾಯಿತಿ ಮಾಡಿದ್ರೂ ಬದಲಾಗದ ಎರಡು ಮನೆಯವರ ದ್ವೇಷ ಇದೀಗ ಕೊಲೆಯಲ್ಲಿ ಅಂತ್ಯವಾಗಿದೆ. ಇತ್ತ ಕೊಲೆ ಆರೋಪಿ ಪುರುಷೋತ್ತಮನನ್ನ ಬಂಧಿಸಿ ಜೈಲಿಗೆ ಕಳಿಸಿದ್ದು, ಇನ್ನೂ ಇಬ್ಬರಿಗಾಗಿ ಪೋಲೀಸರು ಬಲೆ ಬೀಸಿದ್ದಾರೆ.
Published by:Divya D
First published: