ಬಾಗಲಕೋಟೆ (ಜ30): ಬಾಗಲಕೋಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಉಪನಿರ್ದೇಶಕ ಹುದ್ದೆಯ ಕುರ್ಚಿಗೆ ಜಟಾಪಟಿ ಏರ್ಪಟ್ಟಿದ್ದು, ಸರ್ಕಾರದ ಆದೇಶ ನೀಡಿದರೂ ಪ್ರಭಾರಿ ಉಪನಿರ್ದೇಶಕ ಹುದ್ದೆಯಲ್ಲಿರುವ ಅಧಿಕಾರಿ ಮಹಿಳಾ ಅಧಿಕಾರಿಗೆ ಅಧಿಕಾರ ಬಿಟ್ಟುಕೊಡುತ್ತಿಲ್ಲ. ಇದೀಗ ಮಹಿಳಾ ಅಧಿಕಾರಿಯೊಬ್ಬರು ಅತಂತ್ರರಾಗಿದ್ದಾರೆ.
ಮಹಿಳಾ ಅಧಿಕಾರಿಗೆ ಉಪನಿರ್ದೇಶಕ ಹುದ್ದೆ ಬಿಟ್ಟುಕೊಡಲು ಮೀನಾಮೇಷ!?
ಬಾಗಲಕೋಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹುದ್ದೆಯಲ್ಲಿ ಶಿಕ್ಷಣ ಇಲಾಖೆಯ ಅಶೋಕ್ ಬಸನ್ನವರ ಪ್ರಭಾರಿ ಹುದ್ದೆ ವಹಿಸಿಕೊಂಡಿದ್ದಾರೆ. ತಿಂಗಳ ಹಿಂದೆ ಉಪನಿರ್ದೇಶಕ ಹುದ್ದೆಯಿಂದ ಶಿವಲಿಂಗಪ್ಪ ಬಿ ಸಿ ನಿವೃತ್ತಿ ಹೊಂದಿದ ಬಳಿಕ ಶಿಕ್ಷಣ ಇಲಾಖೆಯ ಅಶೋಕ್ ಬಸನ್ನವರ ಪ್ರಭಾವ ಬಳಸಿ ಪ್ರಭಾರಿ ಉಪನಿರ್ದೇಶಕ ಹುದ್ದೆ ಗಿಟ್ಟಿಸಿಕೊಂಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹುದ್ದೆಯಲ್ಲಿ ಪ್ರಭಾರಿಗಳೇ ಕಾರುಬಾರು ಮಾಡಿದ್ದು ಹೆಚ್ಚು.
ಇದೀಗ ವಿಕಲಚೇತನ,ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಅಧಿಕಾರಿ ಸವಿತಾ ಕಾಳೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹುದ್ದೆವಹಿಸಿಕೊಳ್ಳುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಜಿ ಎಚ್ ಸರೋಜಮ್ಮ ,ಸಚಿವರ ಅನುಮೋದನೆಯೊಂದಿಗೆ ಆದೇಶ ಹೊರಡಿಸಿದ್ದಾರೆ.
ಜನವರಿ 27ರಿಂದ ಮುಂದಿನ ಆದೇಶದವರೆಗೆ ಉಪನಿರ್ದೇಶಕ ಹುದ್ದೆ ಪ್ರಭಾರದಲ್ಲಿರಿಸಿ ಆದೇಶವಿದ್ದರೂ, ಪ್ರಭಾರಿ ಉಪನಿರ್ದೇಶಕ ಹುದ್ದೆಯಲ್ಲಿರುವ ಅಶೋಕ್ ಬಸನ್ನವರ ಕುರ್ಚಿ ಬಿಟ್ಟುಕೊಡುತ್ತಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಮಹಿಳಾ ಅಧಿಕಾರಿಗೆ ಉಪನಿರ್ದೇಶಕ ಹುದ್ದೆ ನೀಡಲು ಮೇಲಾಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆ.
ವೃತ್ತಿಪರ ಕೌಶಲ್ಯಕ್ಕೆ ಉತ್ತೇಜನ: ಬಿಎಲ್ಡಿಇ ಸಂಸ್ಥೆ ಜೊತೆ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ಮಹತ್ವದ ಒಪ್ಪಂದ
ಹುದ್ದೆ ಜವಾಬ್ದಾರಿ ವಹಿಸಿಕೊಳ್ಳೋಕೆ ಡಿಸಿಎಂ ಅಪ್ಪಣೆಬೇಕಂತೆ!?
ಡಿಸಿಎಂ ಗೋವಿಂದ ಕಾರಜೋಳ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಮಟ್ಟದ ಅಧಿಕಾರಿಗಳ ವರ್ಗಾವಣೆ,ಹುದ್ದೆ ಜವಾಬ್ದಾರಿ ತೆಗೆದುಕೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವರ ಅಪ್ಪಣೆ ಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾಮಟ್ಟದ ಅಧಿಕಾರಗಳನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಹೊಸದೇನು ಅಲ್ಲ. ಆದರಿಲ್ಲಿ ಸರ್ಕಾರದ ಆದೇಶ ಪಾಲಿಸುತ್ತಿಲ್ಲ. ಉಪನಿರ್ದೇಶಕ ಹುದ್ದೆ ಅಧಿಕಾರವಹಿಸಿಕೊಳ್ಳದಂತೆ ಮಹಿಳಾ ಅಧಿಕಾರಿಗೆ ಮೇಲಾಧಿಕಾರಿಗಳು ಮಾನಸಿಕ ಕಿರುಕುಳ, ಒತ್ತಡ ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ವೃತ್ತಿಪರ ಕೌಶಲ್ಯಕ್ಕೆ ಉತ್ತೇಜನ: ಬಿಎಲ್ಡಿಇ ಸಂಸ್ಥೆ ಜೊತೆ ಹುಬ್ಬಳ್ಳಿ ದೇಶಪಾಂಡೆ ಫೌಂಡೇಶನ್ ಮಹತ್ವದ ಒಪ್ಪಂದ
ಸರ್ಕಾರದ ಆದೇಶ ಪಾಲಿಸದೇ ರಾಜಕೀಯ ಒತ್ತಡಕ್ಕೆ ಮೇಲಾಧಿಕಾರಿಗಳು ಮಣಿಯುತ್ತಿದ್ದಾರೆ.ಇನ್ನು ಡಿಸಿಎಂ ಗೋವಿಂದ ಕಾರಜೋಳ ಕೃಪಾಕಟಾಕ್ಷದಿಂದ ಶಿಕ್ಷಣ ಇಲಾಖೆಯ ಅಶೋಕ್ ಬಸನ್ನವರ ಪ್ರಭಾರಿ ಉಪನಿರ್ದೇಶಕ ಹುದ್ದೆ ಗಿಟ್ಟಿಸಿಕೊಂಡು,ಬೇರೆ ಇಲಾಖೆಯಿಂದ ಬಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಹುದ್ದೆ ಕುರ್ಚಿ ಬಿಟ್ಟುಕೊಡುತ್ತಿಲ್ಲ ಎನ್ನಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯಾಗಿರುವ ಸವಿತಾ ಕಾಳೆ ಓರ್ವ ಮಹಿಳಾ ಅಧಿಕಾರಿಯಾಗಿದ್ದು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹುದ್ದೆ ಜವಾಬ್ದಾರಿವಹಿಸಿಕೊಳ್ಳಲು ರಾಜಕೀಯ ಮೇಲಾಟ ದಿನದಿಂದ ಬ್ರೇಕ್ ಬಿದ್ದಿದೆ.
ನನಗೆ ಮಾತೃ ಇಲಾಖೆಯಿಂದ ಉಪನಿರ್ದೇಶಕ ಹುದ್ದೆಗೆ ವಹಿಸಿಕೊಳ್ಳುವಂತೆ ಆದೇಶ ಬಂದಿದೆ.ಜನೇವರಿ 28ರಂದು ಅಧಿಕಾರ ವಹಿಸಿಕೊಂಡಿದ್ದೆ.ಆದರೆ ಹಿಂದೆ ಪ್ರಭಾರಿಯಲ್ಲಿದ್ದವರು ಅಧಿಕಾರ ಬಿಟ್ಟುಕೊಟ್ಟಿಲ್ಲ, ಕೇಂದ್ರ ಕಚೇರಿ ಆದೇಶ ಪಾಲಿಸಿದ್ದರೂ, ಜಿಲ್ಲಾಮಟ್ಟದಲ್ಲಿ ಅಧಿಕಾರವಹಿಸಿಕೊಳ್ಳಲು ತಡೆಯಿರಿ ಎನ್ನುತ್ತಿದ್ದಾರೆ. ಹೀಗಾಗಿ ಮಾನಸಿಕ ನೆಮ್ಮದಿ ಇಲ್ಲಂದತಾಗಿದೆ.ಜಿಲ್ಲಾಧಿಕಾರಿಗಳು,ಸಿಇಓ ಅವರು ಮುಂದಿನ ಆದೇಶಕ್ಕೆ ಕಾಯುತ್ತಿದ್ದೇನೆ ಎನ್ನುತ್ತಾರೆ ನೊಂದ ಮಹಿಳಾ ಅಧಿಕಾರಿ ಸವಿತಾ ಕಾಳೆ.ಇನ್ನು ಅಧಿಕಾರ ಬಿಟ್ಟುಕೊಡದ ಅಧಿಕಾರಿ ಅಶೋಕ್ ಬಸನ್ನವರ್ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಈ ಬಗ್ಗೆ ನ್ಯೂಸ್ 18 ಜಿಪಂ ಸಿಇಒ ಟಿ ಭೂಬಾಲನ್ ದೂರವಾಣಿ ಮೂಲಕ ಸಂಪರ್ಕಿಸಿದಾಗ ನಾನು ರಜೆ ಮೇಲಿದ್ದೇನೆ ಎಂದು, ಕುರ್ಚಿ ಜಟಾಪಟಿ ಬಗ್ಗೆ ಪ್ರತಿಕ್ರಿಯಿಸಲಿಲ್ಲ. ಇನ್ಮೇಲಾದರೂ ಮೇಲಾಧಿಕಾರಿಗಳು ಒತ್ತಡಕ್ಕೆ ಮಣಿಯದೇ ಸರ್ಕಾರದ ಆದೇಶದಂತೆ ಉಪನಿರ್ದೇಶಕ ಹುದ್ದೆ ಮಹಿಳಾ ಅಧಿಕಾರಿಗೆ ಹುದ್ದೆ ಜವಾಬ್ದಾರಿ ವಹಿಸಿಕೊಳ್ಳಲು ಅವಕಾಶ ಕಲ್ಪಿಸುತ್ತಾರಾ ಎಂದು ಕಾದುನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ