• Home
  • »
  • News
  • »
  • state
  • »
  • Raichur: ಹರಿದ 20 ರೂ ನೋಟಿಗಾಗಿ ಮಹಿಳೆಯರಿಬ್ಬರ ಜಗಳ; ಸಣ್ಣ ಮ್ಯಾಟರ್ ದುರಂತದಲ್ಲಿ ಅಂತ್ಯ

Raichur: ಹರಿದ 20 ರೂ ನೋಟಿಗಾಗಿ ಮಹಿಳೆಯರಿಬ್ಬರ ಜಗಳ; ಸಣ್ಣ ಮ್ಯಾಟರ್ ದುರಂತದಲ್ಲಿ ಅಂತ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಅಕ್ಟೋಬರ್ 22ರಂದು ರುಕ್ಕಮ್ಮ ಅವರ ಮಗಳು ಅನಿತಾ ಮಲ್ಲಮ್ಮ ಅಂಗಡಿಯಿಂದ ದಿನಸಿ ಖರೀದಿಸಿ, ಚಿಲ್ಲರೆ ಹಣ ಪಡೆದು ಮನೆಗೆ ಹಿಂದಿರುಗಿದ್ದಳು. ಆದ್ರೆ ಚಿಲ್ಲರೆ ಹಣದಲ್ಲಿದ್ದ 20 ರೂಪಾಯಿ ನೋಟು ಹರಿದಿದೆ ಎಂದು ಮಗಳ ರುಕ್ಕಮ್ಮ ಅಂಗಡಿಗೆ ಬಂದಿದ್ದರು.

  • News18 Kannada
  • Last Updated :
  • Raichur, India
  • Share this:

ಹರಿದ 20 ರೂಪಾಯಿ (20 Rupees Note) ನೋಟಿಗಾಗಿ ನಡೆದ ಮಹಿಳೆಯರಿಬ್ಬರ ಜಗಳ (Woman Quarrel) ದುರಂತ ಅಂತ್ಯ ಕಂಡಿದೆ. ರಾಯಚೂರು ಜಿಲ್ಲೆಯ ಸಿಂಧನೂರು ಕ್ಯಾಂಪ್​ನಲ್ಲಿ (Sindhanuru Camp, Raichur) ಸೋಮವಾರ ಈ ಘಟನೆ ನಡೆದಿದೆ. ಮಹಿಳೆಯರಿಬ್ಬರು ಪರಸ್ಪರ ಜಗಳ ಆಡುತ್ತಿರುವ ವೇಳೆ ಬೆಂಕಿ (Fire) ತಗುಲಿದೆ. ಪರಿಣಾಮ ಒಬ್ಬರು ಸಾವನ್ನಪ್ಪಿದ್ದು, ಮತ್ತೋರ್ವ ಮಹಿಳೆ ಗಾಯಗೊಂಡಿದ್ದು ಬಳ್ಳಾರಿಯ ವಿಮ್ಸ್​ ಆಸ್ಪತ್ರೆಯಲ್ಲಿ (VIMS Hospital, Ballary) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರುಕ್ಕಮ್ಮ ಮೌನೇಶ್ ಲಂಬಾಣಿ (40) ಮೃತ ಮಹಿಳೆ. ಮಲ್ಲಮ್ಮ ಗಾಯಗೊಂಡ ಮಹಿಳೆ. ಅಕ್ಟೋಬರ್ 22ರಂದು ಈ ಘಟನೆ ನಡೆದಿದೆ.


ಏನಿದು ಪ್ರಕರಣ?


ಗಾಯಾಳು ಮಲ್ಲಮ್ಮ ಸಿಂಧನೂರು ಕ್ಯಾಂಪ್​ನಲ್ಲಿ ಅಂಗಡಿ ಹೊಂದಿದ್ದಾರೆ. ಅಕ್ಟೋಬರ್ 22ರಂದು ರುಕ್ಕಮ್ಮ ಅವರ ಮಗಳು ಅನಿತಾ ಮಲ್ಲಮ್ಮ ಅಂಗಡಿಯಿಂದ ದಿನಸಿ ಖರೀದಿಸಿ, ಚಿಲ್ಲರೆ ಹಣ ಪಡೆದು ಮನೆಗೆ ಹಿಂದಿರುಗಿದ್ದಳು. ಆದ್ರೆ ಚಿಲ್ಲರೆ ಹಣದಲ್ಲಿದ್ದ 20 ರೂಪಾಯಿ ನೋಟು ಹರಿದಿದೆ ಎಂದು ಮಗಳ ಜೊತೆ ರುಕ್ಕಮ್ಮ ಅಂಗಡಿಗೆ ಬಂದಿದ್ದರು.


ನಿಮ್ಮ ಮಗಳು ನಮ್ಮ ಅಂಗಡಿಗೆ ಬಂದು ದಿನಸಿ ಖರೀದಿ ಮಾಡಿಲ್ಲ. ಹಾಗಾಗಿ ನೋಟುಬ ಬದಲಿಸಿ ಕೊಡಲ್ಲ ಎಂದು ಮಲ್ಲಮ್ಮ ಹೇಳಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ದೀರ್ಘಕಾಲದವರೆಗೆ ಜಗಳ ನಡೆದಿದೆ.  ಈ ವೇಳೆ ಅಂಗಡಿಯಲ್ಲಿ ಮಾರಾಟಕ್ಕೆ ಇರಿಸಿದ್ದ ಪೆಟ್ರೋಲ್ ಬಾಟೆಲ್ ನಿಂದ ಹೊಡೆದಿದ್ದಾರೆ.


ರುಕ್ಕಮ್ಮ


ಪೆಟ್ರೋಲ್ ಬಾಟೆಲ್​ನಿಂದ ಹಲ್ಲೆ


ಈ ವೇಳೆ ಅಂಗಡಿಯಲ್ಲಿ ದೇವರ ಫೋಟೋ ಮುಂದೆ ಇರಿಸಿದ್ದ ದೀಪದ ಮೇಲೆ ಪೆಟ್ರೋಲ್ ಬಿದ್ದ ಪರಿಣಾಮ ಇಬ್ಬರಿಗೂ ಬೆಂಕಿ ತಗುಲಿದೆ. ಕೂಡಲೇ ಸ್ಥಳೀಯರು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರುಕ್ಕಮ್ಮ ಅವರನ್ನು ಬಳ್ಳಾರಿಯ ವಿಮ್ಸ್​ ಮತ್ತು ಮಲ್ಲಮ್ಮ ಅವರನ್ನು ರಾಯಚೂರಿನ ರಿಮ್ಸ್​​ಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾದೇ ರುಕ್ಕಮ್ಮ ಮೃತರಾಗಿದ್ದಾರೆ.


ಪೊಲೀಸ್ ಭದ್ರತೆಯಲ್ಲಿ ಮಹಿಳೆಯ ಅಂತ್ಯಕ್ರಿಯೆ


ಘಟನೆ ಬಳಿಕ ಗ್ರಾಮದಲ್ಲಿ ಬೂದಿಮುಚ್ಚಿದ ಕೆಂಡದ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆ ಪೊಲೀಸ್​ ಇನ್​ಸ್ಪೆಕ್ಟರ್​ ರವಿಕುಮಾರ್ ಕಪ್ಪತ್​ನವರ್, ಪಿಎಸ್​ಐ ಯರಿಯಪ್ಪ , ಚಂದ್ರಪ್ಪ ನೇತೃತ್ವದಲ್ಲಿ ಎರಡು ಡಿಆರ್ ತುಕಡಿ ಹಾಗೂ ಹೆಚ್ಚಿನ ಸಂಖ್ಯೆಯ ಪೊಲೀಸರ ಭದ್ರತೆಯಲ್ಲಿ ರುಕ್ಕಮ್ಮ ಅವರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ:  Bengaluru Crime News: ಅಂದು ಬಿಕ್ಕಿ ಬಿಕ್ಕಿ ಅತ್ತಿದ್ದವಳೇ ಗಂಡನನ್ನ ಕೊಂದಿದ್ಲು: ತಲೆ, ಮರ್ಮಾಂಗಕ್ಕೆ ಇರಿದು ಹತ್ಯೆ


ಶಿವಮೊಗ್ಗ ಗಲಭೆ, ಮೂವರ ಬಂಧನ


ಶಿವಮೊಗ್ಗದ ಸೀಗೆಹಟ್ಟಿ (Seegehatti, Shivamogga), ಭರ್ಮಪ್ಪ ನಗರದಲ್ಲಿ ಕಲ್ಲು ತೂರಾಟ (Stone Pelting) ಗಲಭೆ ಪ್ರಕರಣ ಸಂಬಂಧ ಪೊಲೀಸರು (Police) ಅಲರ್ಟ್ ಆಗಿದ್ದಾರೆ. ಸೋಮವಾರ ಗಲಾಟೆ ಮಾಡಿದ್ದ ಮೂವರನ್ನ ಶಿವಮೊಗ್ಗ ಪೊಲೀಸರು (Shivamogga Police) ಬಂಧಿಸಿದ್ದಾರೆ. 22 ವರ್ಷದ ಮಾರ್ಕೆಟ್ ಫೌಜಾನ್, 21 ವರ್ಷದ ಅಜ್ಹರ್ ಅಲಿಯಾಸ್ ಅಜ್ಜು, ಫರಾಜ್ ಬಂಧಿತ ಆರೋಪಿಗಳು. ಸೋಮವಾರ ರಾತ್ರಿ 2 ಬೈಕ್​ಗಳಲ್ಲಿ (Bike) ಬಂದು ದಾಂಧಲೆ ಮಾಡಿದ್ದರು ಎನ್ನಲಾಗಿದೆ.


fight for 20rs note ended in lady death
ಸಾಂದರ್ಭಿಕ ಚಿತ್ರ


ಈ ಮೂವರ ವಿರುದ್ಧ ಈ ಹಿಂದೆ ಅನೇಕ ಪ್ರಕರಣಗಳು ದಾಖಲು ಆಗಿದ್ದವು. ಗಲಾಟೆಯಿಂದ ಶಿವಮೊಗ್ಗ ನಗರ ಬೂದಿ ಮುಚ್ಚಿದ ಕೆಂಡದಂತಿದೆ. ಈ ಹಿನ್ನೆಲೆ ಪೊಲೀಸರು ರೂಟ್ ಮಾರ್ಚ್ ಮಾಡಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಶಿವಮೊಗ್ಗದಲ್ಲಿ ಬಿಗಿಬಂದೋಬಸ್ತ್ ಮಾಡಲಾಗಿದೆ.


ಇದನ್ನೂ ಓದಿ:  Bengaluru: ಪಟಾಕಿ ಹಚ್ಚಿ ಜನರ ಮೇಲೆಸೆದು ಪುಂಡಾಟ; ಪ್ರಶ್ನಿಸಿದ್ದಕ್ಕೆ ಕುತ್ತಿಗೆ ಮೂಳೆ ಮುರಿಯೋ ಹಾಗೆ ಹೊಡೆದ್ರು

 ರೂಟ್ ಮಾರ್ಚ್​​


ಗಾಂಧಿ ಬಜಾರ್, ಬಿಎಚ್ ರಸ್ತೆ, ಸೀಗೆ ಹಟ್ಟಿ ಹಾಗೂ ಹಳೆ ಶಿವಮೊಗ್ಗ ಪ್ರದೇಶಗಳಲ್ಲಿ ರೂಟ್ ಮಾರ್ಚ್ ಮಾಡಲಾಗಿದೆ. ರಾಮಣ ಶೆಟ್ಟಿ ಪಾರ್ಕ್, ಗಾಂಧಿ ಬಜಾರ್ ಹಾಗೂ ಓಟಿ ರಸ್ತೆಯಲ್ಲಿ ಡಿಎಆರ್ ತುಕಡಿಗಳು ಹಾಗೂ ಕೆಎಸ್ಆರ್​​ಪಿ ತುಕಡಿಯ 1000ಕ್ಕೂ ಹೆಚ್ಚು ಪೊಲೀಸರು ಭಾಗಿಯಾಗಿದ್ದರು.

Published by:Mahmadrafik K
First published: